- 1 ನೀವು ನನಗೆ ಬರೆದವುಗಳ ವಿಷಯ ವಾಗಿ--ಸ್ತ್ರೀಯನ್ನು ಮುಟ್ಟದಿರುವದು ಮನುಷ್ಯನಿಗೆ ಒಳ್ಳೇದು.
- 2 ಆದಾಗ್ಯೂ ಜಾರತ್ವಕ್ಕೆ ದೂರವಿರುವಂತೆ ಪ್ರತಿ ಮನುಷ್ಯನಿಗೆ ಅವನ ಸ್ವಂತ ಹೆಂಡತಿಯೂ ಪ್ರತಿ ಸ್ತ್ರೀಗೆ ಅವಳ ಸ್ವಂತ ಗಂಡನೂ ಇರಲಿ.
- 3 ಗಂಡನು ಹೆಂಡತಿಗೆ ಸಲ್ಲತಕ್ಕದ್ದನ್ನು ಸಲ್ಲಿಸಲಿ, ಹಾಗೆಯೇ ಹೆಂಡತಿಯು ಗಂಡನಿಗೆ ಸಲ್ಲಿಸಲಿ.
- 4 ಹೆಂಡತಿಗೆ ತನ್ನ ಸ್ವಂತ ದೇಹದ ಮೇಲೆ ಅಧಿಕಾರ ವಿಲ್ಲ; ಆದರೆ ಗಂಡನಿಗುಂಟು. ಹಾಗೆಯೇ ಪುರುಷನಿಗೆ ಸ್ವಂತ ದೇಹದ ಮೇಲೆ ಅಧಿಕಾರವಿಲ್ಲ; ಆದರೆ ಹೆಂಡತಿಗುಂಟು.
- 5 ಉಪವಾಸ ಮತ್ತು ಪ್ರಾರ್ಥನೆಗೆ ಮನಸ್ಸು ಕೊಡುವದಕ್ಕಾಗಿ ನೀವು ಪರಸ್ಪರ ಸಮ್ಮತಿ ಯಿಂದ ಸ್ವಲ್ಪಕಾಲ ಆಗಲಿರಬಹುದೇ ಹೊರತು ನಿಮಗೆ ದಮೆಯಿಲ್ಲದಿರುವದನ್ನು ನೋಡಿ ಸೈತಾನನು ನಿಮ್ಮನು ಶೋಧಿಸದಂತೆ ತಿರಿಗಿ ಕೂಡಿಕೊಳ್ಳಿರಿ.
- 6 ಹೀಗೆ ನಾನು ಅನುಮತಿಯಿಂದಲೇ ಮಾತನಾಡುತ್ತೇನೆ, ಆದರೆ ಆಜ್ಞೆಯಲ್ಲ.
- 7 ನಾನು ಇದ್ದಂತೆಯೇ ಎಲ್ಲರೂ ಇರ ಬೇಕೆಂದು ಇಚ್ಛಿಸುತ್ತೇನೆ. ಆದರೆ ಒಬ್ಬನು ಒಂದು ವಿಧದಲ್ಲಿ ಮತ್ತೊಬ್ಬನು ಇನ್ನೊಂದು ವಿಧದಲ್ಲಿ ಹೀಗೆ ಪ್ರತಿಯೊಬ್ಬನು ದೇವರಿಂದ ಅವನಿಗೆ ತಕ್ಕ ವರವನ್ನು ಹೊಂದಿದವನಾಗಿದ್ದಾನೆ.
- 8 ಮದುವೆಯಿಲ್ಲದವರನ್ನೂ ವಿಧವೆಯರನ್ನೂ ಕುರಿತು ನಾನು ಹೇಳುವದೇ ನಂದರೆ--ನಾನಿರುವಂತೆಯೇ ಇರುವದು ಅವರಿಗೆ ಒಳ್ಳೇದು;
- 9 ಅವರು ದಮೆಯಿಲ್ಲದವರಾದರೆ ಮದುವೆ ಮಾಡಿಕೊಳ್ಳಲಿ; ತಾಪಪಡುವದಕ್ಕಿಂತ ಮದುವೆಮಾಡಿ ಕೊಳ್ಳುವದು ಉತ್ತಮ.
- 10 ಮದುವೆ ಮಾಡಿಕೊಂಡಿರು ವವರಿಗೆ ನನ್ನ ಅಪ್ಪಣೆ ಮಾತ್ರವಲ್ಲದೆ ಕರ್ತನ ಅಪ್ಪಣೆ ಏನಂದರೆ--ಹೆಂಡತಿಯು ಗಂಡನನ್ನು ಬಿಟ್ಟು ಅಗಲ ಬಾರದು.
- 11 ಒಂದು ವೇಳೆ ಅಗಲಿದರೂ ಮದುವೆ ಯಿಲ್ಲದೆ ಇರಬೇಕು, ಇಲ್ಲವೆ ಗಂಡನ ಸಂಗಡ ಸಮಾ ಧಾನವಾಗಬೇಕು; ಗಂಡನು ಹೆಂಡತಿಯನ್ನು ಬಿಡ ಬಾರದು.
- 12 ಮಿಕ್ಕಾದವರ ವಿಷಯದಲ್ಲಿ ಕರ್ತನ ಮಾತು ಇಲ್ಲವಾದರೂ ನಾನು ಹೇಳುವದೇನಂದರೆ--ಒಬ್ಬ ಸಹೋದರನಿಗೆ ನಂಬಿಕೆಯಿಲ್ಲದ ಹೆಂಡತಿಯಿರಲಾಗಿ ಆಕೆಯು ಅವನೊಂದಿಗೆ ಇರುವದಕ್ಕೆ ಸಮ್ಮತಿಸದರೆ ಅವನು ಆಕೆಯನ್ನು ಬಿಡಬಾರದು.
- 13 ಒಬ್ಬ ಸ್ತ್ರೀಗೆ ನಂಬಿಕೆಯಿಲ್ಲದ ಗಂಡನಿರಲಾಗಿ ಅವನು ಆಕೆಯೊಂದಿಗೆ ಇರುವದಕ್ಕೆ ಸಮ್ಮತಿಸಿದರೆ ಆಕೆಯು ಅವನನ್ನು ಬಿಡ ಬಾರದು.
- 14 ಯಾಕಂದರೆ ನಂಬಿಕೆಯಿಲ್ಲದ ಗಂಡನು ತನ್ನ ಹೆಂಡತಿಯಲ್ಲಿ ಶುದ್ಧನಾಗಿದ್ದಾನೆ; ನಂಬಿಕೆಯಿಲ್ಲದ ಹೆಂಡತಿಯು ತನ್ನ ಗಂಡನಲ್ಲಿ ಶುದ್ಧಳಾಗಿದ್ದಾಳೆ. ಹಾಗಲ್ಲ ದಿದ್ದರೆ ನಿಮ್ಮ ಮಕ್ಕಳು ಅಪವಿತ್ರರಾಗುತ್ತಿದ್ದರು; ಈಗಲಾದರೋ ಅವರು ಪವಿತ್ರರಾಗಿದ್ದಾರೆ.
- 15 ಆದರೆ ನಂಬಿಕೆಯಿಲ್ಲದವನು ಅಗಲಬೇಕೆಂದಿದ್ದರೆ ಅಗಲಿ ಹೋಗಲಿ; ಇಂಥಾ ಸಂದರ್ಭಗಳಲ್ಲಿ ಸಹೋದರ ನಾಗಲಿ ಸಹೋದರಿಯಾಗಲಿ ಬದ್ಧರಲ್ಲ, ಸಮಾಧಾನ ದಲ್ಲಿರಬೇಕೆಂದು ದೇವರು ನಮ್ಮನ್ನು ಕರೆದಿದ್ದಾನೆ.
- 16 ಓ ಹೆಂಡತಿಯೇ, ನಿನ್ನ ಗಂಡನನ್ನು ರಕ್ಷಿಸುವಿಯೋ ಏನೋ ನಿನಗೇನು ಗೊತ್ತು? ಓ ಗಂಡನೇ, ನಿನ್ನ ಹೆಂಡತಿಯನ್ನು ರಕ್ಷಿಸುವಿಯೋ ಏನೋ ನಿನಗೇನು ಗೊತ್ತು?
- 17 ದೇವರು ಒಬ್ಬೊಬ್ಬನಿಗೆ ಹೇಗೆ ಹಂಚಿಕೊಟ್ಟನೋ ಮತ್ತು ಕರ್ತನು ಒಬ್ಬೊಬ್ಬನನ್ನು ಹೇಗೆ ಕರೆದನೋ ಅದಕ್ಕೆ ತಕ್ಕಂತೆ ನಡೆಯಲಿ; ಹೀಗೆ ನಾನು ಎಲ್ಲಾ ಸಭೆಗಳಲ್ಲಿಯೂ ನೇಮಕಮಾಡುತ್ತೇನೆ.
- 18 ಸುನ್ನತಿ ಯಲ್ಲಿದ್ದು ಕರೆಯಲ್ಪಟ್ಟವನು ಯಾವನಾದರೂ ಇದ್ದಾನೋ? ಅವನು ಸುನ್ನತಿ ಇಲ್ಲದವನಂತಾಗ ಬಾರದು; ಸುನ್ನತಿ ಇಲ್ಲದೆ ಕರೆಯಲ್ಪಟ್ಟವನು ಯಾವ ನಾದರೂ ಇದ್ದಾನೋ? ಅವನು ಸುನ್ನತಿ ಮಾಡಿಸಿ ಕೊಳ್ಳಬಾರದು.
- 19 ಸುನ್ನತಿಯಾದರೂ ಏನೂ ಇಲ್ಲ, ಸುನ್ನತಿಯಾಗದ್ದಿದರೂ ಏನೂ ಇಲ್ಲ; ಆದರೆ ದೇವರ ಆಜ್ಞೆಗಳನ್ನು ಅನುಸರಿಸಿ ನಡೆಯುವದೇ ಆಗಿದೆ.
- 20 ದೇವರು ಕರೆದಾಗ ಪ್ರತಿಯೊಬ್ಬನು ಯಾವ ಸ್ಥಿತಿಯಲ್ಲಿದ್ದನೋ ಆ ಸ್ಥಿತಿಯಲ್ಲಿಯೇ ಇರಬೇಕು.
- 21 ಕರೆಯಲ್ಪಟ್ಟಾಗ ನೀನು ದಾಸನಾಗಿದ್ದೀಯೋ? ಅದಕ್ಕೆ ಚಿಂತಿಸಬೇಡ. ಆದರೆ ನೀನು ಸ್ವತಂತ್ರ ನಾಗುವದಾದರೆ ಅದು ಉತ್ತಮ.
- 22 ಯಾವನು ದಾಸನಾಗಿದ್ದು ಕರ್ತನಿಂದ ಕರೆಯಲ್ಪಟ್ಟಿರುವನೋ ಅವನು ಕರ್ತನಿಂದ ಸ್ವತಂತ್ರನು; ಅದೇ ಪ್ರಕಾರ ಯಾವನು ಸ್ವತಂತ್ರನಾಗಿದ್ದು ಕರೆಯಲ್ಪಟ್ಟಿರುವನೋ ಅವನು ಕ್ರಿಸ್ತನಿಗೆ ದಾಸನು.
- 23 ನೀವು ಕ್ರಯಕ್ಕೆ ಕೊಳ್ಳಲ್ಪಟ್ಟವರು, ಮನುಷ್ಯರಿಗೆ ದಾಸರಾಗಬೇಡಿರಿ.
- 24 ಸಹೋದರರೇ, ಪ್ರತಿಯೊಬ್ಬನು ಕರೆಯಲ್ಪಟ್ಟಾಗ ಯಾವ ಸ್ಥಿತಿಯಲ್ಲಿದ್ದನೋ ಅದೇ ಸ್ಥಿತಿಯಲ್ಲಿ ದೇವರೊಂದಿಗೆ ಇದ್ದುಕೊಂಡಿರಲಿ.
- 25 ಕನ್ನಿಕೆಯರನ್ನು ಕುರಿತು ನನಗೆ ಕರ್ತನಿಂದ ಯಾವ ಆಜ್ಞೆಯೂ ಇಲ್ಲ; ಆದರೆ ನಂಬಿಗಸ್ತನಾಗಿರುವದಕ್ಕೆ ಕರ್ತನಿಂದ ಕರುಣೆಯನ್ನು ಹೊಂದಿದವನಾಗಿ ನನ್ನ ನಿರ್ಣಯವನ್ನು ಹೇಳುತ್ತೇನೆ.
- 26 ಈಗಿನ ಕಷ್ಟದ ನಿಮಿತ್ತ ಹಾಗೆಯೇ ಇರುವದು ಒಳ್ಳೇದು; ಒಬ್ಬ ಮನುಷ್ಯನು ಇದ್ದ ಹಾಗೆಯೇ ಇರುವದು ಉತ್ತಮವೆಂದು ನಾನು ಭಾವಿಸುತ್ತೇನೆ.
- 27 ಹೆಂಡತಿಯನ್ನು ಕಟ್ಟಿಕೊಂಡಿ ದ್ದೀಯೋ? ಬಿಡುಗಡೆಗಾಗಿ ಪ್ರಯತ್ನಿಸಬೇಡ; ಹೆಂಡತಿಯನ್ನು ಬಿಟ್ಟವನಾಗಿದ್ದೀಯೋ? ಹೆಂಡತಿಗಾಗಿ ಪ್ರಯತ್ನಿಸಬೇಡ.
- 28 ಒಂದು ವೇಳೆ ನೀನು ಮದುವೆ ಮಾಡಿಕೊಂಡರೂ ಪಾಪವಲ್ಲ. ಕನ್ನಿಕೆಯು ಮದುವೆ ಮಾಡಿಕೊಂಡರೂ ಪಾಪವಲ್ಲ. ಆದಾಗ್ಯೂ ಅಂಥ ವರಿಗೆ ಶರೀರಸಂಬಂಧವಾಗಿ ಕಷ್ಟ ಸಂಭವಿಸುವದು; ಇದು ನಿಮಗೆ ಉಂಟಾಗಬಾರದೆಂದು ನನ್ನ ಅಪೇಕ್ಷೆ.
- 29 ಆದರೆ ಸಹೋದರರೇ, ನಾನು ಹೇಳುವದೇ ನಂದರೆ--ಸಮಯವು ಸಂಕೋಚವಾದದ್ದರಿಂದ ಇನ್ನು ಮೇಲೆ ಹೆಂಡತಿಯುಳ್ಳವರು ಹೆಂಡತಿಯಿಲ್ಲದವ ರಂತೆಯೂ
- 30 ಅಳುವವರು ಅಳದವರಂತೆಯೂ ಸಂತೋಷಪಡುವವರು ಸಂತೋಷಪಡದವ ರಂತೆಯೂ ಕೊಂಡುಕೊಳ್ಳುವವರು ಇಲ್ಲದವ ರಂತೆಯೂ
- 31 ಲೋಕವನ್ನು ಅನುಭೋಗಿಸುವವರು ಅದನ್ನು ದುರುಪಯೋಗ ಮಾಡದವರಂತೆಯೂ ಇರಬೇಕು; ಯಾಕಂದರೆ ಈ ಲೋಕದ ಆಡಂಬರವು ಗತಿಸಿಹೋಗುತ್ತದೆ.
- 32 ಆದರೆ ನೀವು ಚಿಂತೆಯಿಲ್ಲದವರಾಗಿರಬೇಕೆಂಬದು ನನ್ನ ಇಷ್ಟ. ಮದುವೆಯಿಲ್ಲದವನು ತಾನು ಕರ್ತನನ್ನು ಹೇಗೆ ಮೆಚ್ಚಿಸಬೇಕೆಂದು ಕರ್ತನ ಕಾರ್ಯಗಳನ್ನು ಕುರಿತು ಚಿಂತಿಸುತ್ತಾನೆ.
- 33 ಮದುವೆ ಯಾದವನು ತನ್ನ ಹೆಂಡತಿಯನ್ನು ಹೇಗೆ ಮೆಚ್ಚಿಸ ಬೇಕೆಂದು ಪ್ರಪಂಚದವುಗಳನ್ನು ಕುರಿತು ಚಿಂತಿಸುತ್ತಾನೆ.
- 34 ಅದರಂತೆ ಮದುವೆಯಾದವಳಿಗೂ ಕನ್ನಿಕೆಗೂ ವ್ಯತ್ಯಾಸವುಂಟು; ಮದುವೆಯಾಗದವಳು ತಾನು ದೇಹಾತ್ಮಗಳಲ್ಲಿ ಪವಿತ್ರಳಾಗಿರಬೇಕೆಂದು ಕರ್ತನ ಕಾರ್ಯಗಳನ್ನು ಕುರಿತು ಚಿಂತಿಸುತ್ತಾಳೆ; ಮದುವೆ ಯಾದವಳು ತನ್ನ ಗಂಡನನ್ನು ಹೇಗೆ ಮೆಚ್ಚಿಸಬೇಕೆಂದು ಪ್ರಪಂಚದವುಗಳನ್ನು ಕುರಿತು
- 35 ನಾನು ನಿಮಗೆ ಉರ್ಲುಹಾಕುವದಕ್ಕಾಗಿ ಅಲ್ಲ; ಆದರೆ ಯೋಗ್ಯವಾದದ್ದಕ್ಕಾಗಿಯೂ ನೀವು ಕರ್ತನಿಗೆ ದೃಢ ನಿಷ್ಠೆಯುಳ್ಳವರಾಗಿಯೂ ಇರುವಂತೆ ನಿಮ್ಮ ಸ್ವಂತ ಹಿತಕ್ಕಾಗಿಯೇ ಹೇಳುತ್ತೇನೆ.
- 36 ಒಬ್ಬನು ತನ್ನ ಕನ್ನಿಕೆಗೆ ಮದುವೆಯಿಲ್ಲದಿರುವದು ಮರ್ಯಾದೆಯಲ್ಲವೆಂದು ಭಾವಿಸಿದರೆ ಮತ್ತು ಆಕೆಗೆ ಪ್ರಾಯ ಕಳೆದುಹೋಗು ತ್ತದಲ್ಲಾ, ಮದುವೆಯಾಗುವದು ಅವಶ್ಯವೆಂದು ಅವನಿಗೆ ಕಂಡರೆ ತನ್ನಿಷ್ಟದಂತೆ ಮಾಡಲಿ, ಅವನು ಪಾಪಮಾಡುವದಿಲ್ಲ, ಅವರು ಮದುವೆಮಾಡಿ ಕೊಳ್ಳಲಿ.
- 37 ಆದರೆ ಒಬ್ಬನು ದೃಢಚಿತ್ತನಾಗಿದ್ದು ಬಲವಂತವೇನೂ ಇಲ್ಲದೆ ತನ್ನಿಷ್ಟವನ್ನು ನಡಿಸುವದಕ್ಕೆ ಹಕ್ಕುಳ್ಳವನಾಗಿ ತನ್ನ ಕನ್ನಿಕೆಯನ್ನು ಮದುವೆಮಾಡಿ ಕೊಡುವದಿಲ್ಲವೆಂದು ತನ್ನ ಹೃದಯದಲ್ಲಿ ನಿರ್ಣಯಿಸಿ ಕೊಂಡರೆ ಅವನು ಹಾಗೆ ಮಾಡುವದು ಒಳ್ಳೇದು.
- 38 ಹಾಗಾದರೆ ಆಕೆಯನ್ನು ಮದುವೆ ಮಾಡಿಕೊಡು ವವನು ಒಳ್ಳೇದನ್ನು ಮಾಡುತ್ತಾನೆ. ಮದುವೆಮಾಡಿ ಕೊಡದೆ ಇರುವವನು ಇನ್ನೂ ಒಳ್ಳೇದನ್ನು ಮಾಡುತ್ತಾನೆ.
- 39 ಮದುವೆಯಾದವಳು ತನ್ನ ಗಂಡನು ಜೀವದಿಂದಿ ರುವ ತನಕ ಅವನಿಗೆ ಬದ್ಧಳಾಗಿದ್ದಾಳೆ; ಗಂಡನು ಸತ್ತಿದ್ದರೆ ಆಕೆಯು ಬೇಕಾದವನನ್ನು ಮದುವೆ ಮಾಡಿಕೊಳ್ಳು ವದಕ್ಕೆ ಸ್ವತಂತ್ರಳಾಗಿದ್ದಾಳೆ; ಆದರೆ ಇದು ಕರ್ತನಲ್ಲಿ ಆಗತಕ್ಕದ್ದು.
- 40 ಆದರೂ ನನ್ನ ನಿರ್ಣಯಕ್ಕನುಸಾರ ಆಕೆಯು ಇದ್ದ ಹಾಗೆಯೇ ಇರುವದಾದರೆ ಆಕೆಯು ಭಾಗ್ಯವಂತಳು; ನನ್ನಲ್ಲಿ ದೇವರಾತ್ಮನು ಇದ್ದಾನೆಂದು ನಾನು ನೆನಸುತ್ತೇನೆ.
1 Corinthians 07
- Details
- Parent Category: New Testament
- Category: 1 Corinthians
1 ಕೊರಿಂಥದವರಿಗೆ ं ಅಧ್ಯಾಯ 7