- 1 ಅದೇ ರೀತಿಯಾಗಿ ಸ್ತ್ರೀಯರೇ, ನಿಮ್ಮ ಗಂಡಂದಿರಿಗೆ ಅಧೀನರಾಗಿರ್ರಿ. ಯಾರಾದರೂ ವಾಕ್ಯಕ್ಕೆ ಅವಿಧೇಯರಾಗಿದ್ದರೂ ಹೆಂಡತಿಯರ ನಡತೆಯಿಂದ ವಾಕ್ಯವಿಲ್ಲದೆ ಅವರನ್ನು ಗೆಲ್ಲುವಂತೆ
- 2 ನಿಮ್ಮ ನಿರ್ಮಲವಾದ ಮತ್ತು ಭಯಭರಿತವಾದ ನಡತೆಯನ್ನು ಅವರು ನೋಡಲಿ.
- 3 ಜಡೆ ಹೆಣೆದುಕೊ ಳ್ಳುವದೂ ಚಿನ್ನದ ಒಡವೆಗಳನ್ನು ಇಟ್ಟುಕೊಳ್ಳುವದೂ ಇಲ್ಲವೆ ಉಡಿಗೆಗಳನ್ನು ಧರಿಸಿಕೊಳ್ಳುವದೂ ಈ ಹೊರ ಗಣ ಅಲಂಕಾರವು ಬೇಡ.
- 4 ಆದರೆ ಸಾತ್ವಿಕವಾದ ಶಾಂತ ಮನಸ್ಸು ಎಂಬ ಹೃದಯದ ಮರೆಯಾದ ಮನುಷ್ಯನ ಅಲಂಕಾರವೇ ನಿಮಗಿರಲಿ. ಇದು ಅಕ್ಷಯ ವಾಗಿದ್ದು ದೇವರ ದೃಷ್ಟಿಗೆ ಬಹು ಬೆಲೆಯುಳ್ಳದ್ದಾಗಿದೆ.
- 5 ಪೂರ್ವಕಾಲದಲ್ಲಿ ದೇವರ ಮೇಲೆ ನಂಬಿಕೆಯಿಟ್ಟ ಪರಿಶುದ್ಧ ಸ್ತ್ರೀಯರು ಸಹ ಹೀಗೆಯೇ ತಮ್ಮನ್ನು ಆಲಂಕರಿಸಿಕೊಂಡರು; ಅವರು ತಮ್ಮ ತಮ್ಮ ಗಂಡಂ ದಿರಿಗೆ ಅಧೀನರಾಗಿದ್ದರು.
- 6 ಹಾಗೆಯೇ ಸಾರಳು ಅಬ್ರಹಾಮನಿಗೆ ವಿಧೇಯಳಾಗಿದ್ದು ಅವನನ್ನು ಯಜಮಾನ ಎಂದು ಕರೆದಳು. ನೀವು ಸಾರಳ ಕುಮಾರ್ತೆಗಳಾಗಿದ್ದೀರಲ್ಲಾ; ನೀವು ಒಳ್ಳೇದನ್ನು ಮಾಡುವದಾದರೆ ಯಾವ ಭೀತಿಗೂ ಗಾಬರಿ ಪಡುವದಿಲ್ಲ.
- 7 ಅದೇ ರೀತಿಯಾಗಿ ಪುರಷರೇ, ಸ್ತ್ರೀಯು ಬಲಹೀನ ಳೆಂಬದನ್ನು ತಿಳಿದು ನಿಮ್ಮ ಹೆಂಡತಿಯರ ಸಂಗಡ ವಿವೇಕದಿಂದ ಇರ್ರಿ. ಅವರು ಜೀವದ ಕೃಪೆಯಲ್ಲಿ ನಿಮ್ಮೊಂದಿಗೆ ಬಾಧ್ಯರಾಗಿದ್ದಾರೆಂದು ತಿಳಿದು ಅವರಿಗೆ ಮಾನವನ್ನು ಸಲ್ಲಿಸಿರಿ. ಹೀಗೆ ನಡೆದರೆ ನಿಮ್ಮ ಪ್ರಾರ್ಥನೆಗಳಿಗೆ ಅಡ್ಡಿಯಿರುವದಿಲ್ಲ.
- 8 ಕಡೆಗೆ ನೀವೆಲ್ಲರೂ ಏಕ ಮನಸ್ಸುಳ್ಳವರಾಗಿರ್ರಿ; ಒಬ್ಬರಿಗೊಬ್ಬರು ಕರುಣೆಯುಳ್ಳವರಾಗಿದ್ದು ಸಹೋದರ ರಂತೆ ಪ್ರೀತಿಸಿರಿ; ಕನಿಕರವೂ ದೀನ ಭಾವವೂ ಉಳ್ಳವರಾಗಿರ್ರಿ.
- 9 ಅಪಕಾರಕ್ಕೆ ಅಪಕಾರವನ್ನೂ ನಿಂದೆಗೆ ನಿಂದೆಯನ್ನು ಮಾಡದೆ ಆಶೀರ್ವದಿಸಿರಿ. ಇದಕ್ಕಾಗಿ ದೇವರು ನಿಮ್ಮನ್ನು ಕರೆದನಲ್ಲಾ; ಹೀಗೆ ಮಾಡುವವರಾದ ನೀವು ಆಶೀರ್ವಾದವನ್ನು ಬಾಧ್ಯವಾಗಿ ಹೊಂದುವಿ ರೆಂದು ನಿಮಗೆ ತಿಳಿದದೆಯಲ್ಲಾ.
- 10 ಜೀವವನ್ನು ಪ್ರೀತಿಸಿ ಸುದಿನಗಳನ್ನು ನೋಡುವದಕ್ಕೆ ಇಷ್ಟವುಳ್ಳವನು ಕೆಟ್ಟ ದ್ದನ್ನು ನುಡಿಯದಂತೆ ತನ್ನ ನಾಲಿಗೆಯನ್ನೂ ವಂಚನೆಯ ಮಾತುಗಳನ್ನಾಡದ ಹಾಗೆ ತನ್ನ ತುಟಿಗಳನ್ನೂ ಬಿಗಿ ಹಿಡಿಯಲಿ.
- 11 ಅವನು ಕೆಟ್ಟದ್ದನ್ನು ಬಿಟ್ಟು ಒಳ್ಳೇದನ್ನು ಮಾಡಲಿ; ಸಮಾಧಾನವನ್ನು ಹುಡುಕಿ ಅದಕ್ಕೋಸ್ಕರ ಪ್ರಯತ್ನಪಡಲಿ.
- 12 ಕರ್ತನ ದೃಷ್ಟಿ ನೀತಿವಂತರ ಮೇಲಿದೆ. ಆತನು ಅವರ ಪ್ರಾರ್ಥನೆಗಳಿಗೆ ಕಿವಿ ಗೊಡುತ್ತಾನೆ; ಕೆಟ್ಟದ್ದನ್ನು ಮಾಡುವವರಿಗೆ ಕರ್ತನ ಮುಖವು ವಿರೋಧವಾಗಿದೆ.
- 13 ನೀವು ಒಳ್ಳೇದನ್ನು ಅನುಸರಿಸುವವರಾಗಿದ್ದರೆ ನಿಮಗೆ ಕೇಡು ಮಾಡುವವರು ಯಾರಿದ್ದಾರೆ?
- 14 ನೀವು ನೀತಿಯ ನಿಮಿತ್ತವೇ ಬಾಧೆಪಟ್ಟರೆ ಸಂತೋಷವುಳ್ಳವರು. ಅವರ ಬೆದರಿಸುವಿಕೆಗೆ ಹೆದರಬೇಡಿರಿ ಮತ್ತು ಕಳವಳ ಪಡಬೇಡಿರಿ.
- 15 ಆದರೆ ದೇವರಾದ ಕರ್ತನನ್ನು ನಿಮ್ಮ ಹೃದಯಗಳಲ್ಲಿ ಪ್ರತಿಷ್ಠೆಪಡಿಸಿರಿ. ನಿಮ್ಮಲ್ಲಿರುವ ನಿರೀಕ್ಷೆಗೆ ಆಧಾರವೇನೆಂದು ಕೇಳುವವರೆಲ್ಲರಿಗೆ ಸಾತ್ವಿಕತ್ವ ದಿಂದಲೂ ಭಯದಿಂದಲೂ ಉತ್ತರ ಹೇಳುವದಕ್ಕೆ ಯಾವಾಗಲೂ ಸಿದ್ಧವಾಗಿರ್ರಿ;
- 16 ಒಳ್ಳೇಮನಸ್ಸಾಕ್ಷಿ ಯುಳ್ಳವರಾಗಿರ್ರಿ; ಆಗ ನೀವು ಕೆಟ್ಟದ್ದನ್ನು ಮಾಡುವವ ರೆಂದು ನಿಮ್ಮ ವಿಷಯವಾಗಿ ಕೆಟ್ಟದ್ದಾಗಿ ಮಾತನಾಡಿ ಕ್ರಿಸ್ತನಲ್ಲಿರುವ ನಿಮ್ಮ ಒಳ್ಳೇ ನಡವಳಿಕೆಯ ವಿಷಯವಾಗಿ ಸುಳ್ಳಾಗಿ ದೂರು ಹೇಳುವವರು ನಾಚಿಕೆಪಡುವವರು.
- 17 ಕೆಟ್ಟ ನಡತೆಯುಳ್ಳವರಾಗಿ ಬಾಧೆಪಡುವದಕ್ಕಿಂತ ಒಳ್ಳೇನಡತೆಯುಳ್ಳವರಾಗಿಯೇ ದೇವರ ಚಿತ್ತವಿದ್ದರೆ ಬಾಧೆಪಡುವದು ಲೇಸು.
- 18 ಕ್ರಿಸ್ತನು ಸಹ ನೀತಿವಂತ ನಾಗಿದ್ದು ಅನೀತಿವಂತರಾದ ನಮ್ಮನ್ನು ದೇವರ ಬಳಿಗೆ ತರುವದಕ್ಕಾಗಿ ಪಾಪನಿವಾರಣೆಗೋಸ್ಕರ ಒಂದೇ ಸಾರಿ ಬಾಧೆಪಟ್ಟು ಶರೀರದಲ್ಲಿ ಕೊಲ್ಲಲ್ಪಟ್ಟನು, ಆತ್ಮನಿಂದ ಬದುಕುವವನಾದನು.
- 19 ಆತನು ಆತ್ಮನಿಂದಲೇ ಸೆರೆಯಲ್ಲಿದ್ದ ಆತ್ಮಗಳಿಗೆ ಹೋಗಿ ಸಾರಿದನು;
- 20 ಆದರೆ ನೋಹನ ದಿನಗಳಲ್ಲಿ ನಾವೆಯನ್ನು ಕಟ್ಟುತ್ತಿರಲು ದೇವರ ದೀರ್ಘಶಾಂತಿಯು ಒಂದು ಸಾರಿ ಕಾದಿದ್ದಾಗ ಆತನಿಗೆ ಅವಿಧೇಯರಾ ಗಿದ್ದವರ ಬಳಿಗೆ ಹೋಗಿ ಆತನು ಸಾರಿದನು. ಆ ನಾವೆಯೊಳಗೆ ಕೆಲವರು ಅಂದರೆ ಎಂಟೇ ಜನರು ನೀರಿನ ಮೂಲಕ ರಕ್ಷಣೆ ಹೊಂದಿದರು.
- 21 ಆ ನೀರಿಗೆ ಅನುರೂಪವಾದ ಬಾಪ್ತಿಸ್ಮವು ಯೇಸು ಕ್ರಿಸ್ತನ ಪುನರುತ್ಥಾನದ ಮೂಲಕ ಈಗ ನಮ್ಮನ್ನು ರಕ್ಷಿಸುತ್ತದೆ; (ಅದು ಮೈಕೊಳೆಯನ್ನು ಹೋಗಲಾಡಿ ಸುವಂಥದ್ದಲ್ಲ. ಆದರೆ ದೇವರ ಕಡೆಗಿರುವ ನಮ್ಮ ಒಳ್ಳೇ ಮನಸ್ಸಾಕ್ಷಿಯ ಉತ್ತರವಾಗಿದೆ).
- 22 ಆತನು ಪರಲೋಕಕ್ಕೆ ಹೋಗಿ ದೇವರ ಬಲಗಡೆಯಲ್ಲಿದ್ದಾನೆ; ದೂತರೂ ಪ್ರಭುತ್ವ ಗಳೂ ಅಧಿಕಾರಗಳೂ ಆತನಿಗೆ ಅಧೀನ ಮಾಡಲ್ಪಟ್ಟಿದ್ದಾರೆ.
1 Peter 03
- Details
- Parent Category: New Testament
- Category: 1 Peter
1 ಪೇತ್ರನು ಅಧ್ಯಾಯ 3