wheel

AJC Publications and Media Portal

 

But the Comforter, which is the Holy Ghost, whom the Father will send in my name, he shall teach you all things,
and bring all things to your remembrance, whatsoever I have said unto you. John 14:26


2 ಕೊರಿಂಥದವರಿಗೆ ಅಧ್ಯಾಯ 13
  • 1 ನಾನು ನಿಮ್ಮ ಬಳಿಗೆ ಬರುವದು ಇದು ಮೂರನೆಯ ಸಾರಿ. ಇಬ್ಬರು ಮೂವರ ಸಾಕ್ಷಿಗಳ ಬಾಯಿಂದ ಪ್ರತಿಯೊಂದು ಮಾತೂ ಸ್ಥಾಪಿತವಾಗಬೇಕು.
  • 2 ನಾನು ಎರಡನೆಯ ಸಾರಿ ನಿಮ್ಮಲ್ಲಿದ್ದಾಗ--ನಾನು ತಿರಿಗಿ ಬಂದರೆ ನಿಮ್ಮನ್ನು ಶಿಕ್ಷಿಸದೆ ಬಿಡುವದಿಲ್ಲವೆಂದು ಹೇಗೆ ಹೇಳಿದೆನೋ ಹಾಗೆಯೇ ಈಗಲೂ ಪೂರ್ವ ಪಾಪಕೃತ್ಯಗಳನ್ನು ಇನ್ನೂ ನಡಿಸುತ್ತಿರುವವರಿಗೂ ಮಿಕ್ಕಾದವರೆಲ್ಲರಿಗೂ ನಾನು ಬರೆಯುತ್ತೇನೆ.
  • 3 ಕ್ರಿಸ್ತನು ನನ್ನಲಿದ್ದುಕೊಂಡು ಮಾತನಾಡುತ್ತಾನೆಂಬದಕ್ಕೆ ನೀವು ಪ್ರಮಾಣವನ್ನು ಹುಡುಕುತ್ತೀರಾದದರಿಂದ ಆತನು ನಿಮ್ಮ ವಿಷಯದಲ್ಲಿ ಬಲಹೀನನಾಗಿರದೆ ನಿಮ್ಮಲ್ಲಿ ಬಲಿಷ್ಠನಾಗಿದ್ದಾನೆ.
  • 4 ಬಲಹೀನತೆಯ ಮೂಲಕ ಆತನು ಶಿಲುಬೆಗೆ ಹಾಕಲ್ಪಟ್ಟಿದ್ದಾಗ್ಯೂ ದೇವರ ಬಲದಿಂದ ಇನ್ನೂ ಬದುಕುತ್ತಾನೆ; ನಾವು ಸಹ ಆತನಲ್ಲಿ ಬಲಹೀನ ರಾಗಿದ್ದೇವೆ, ಆದರೂ ನಾವು ನಿಮಗೋಸ್ಕರವಾಗಿ ದೇವರ ಬಲದಿಂದ ಆತನೊಂದಿಗೆ ಬದುಕುವೆವು.
  • 5 ನಂಬಿಕೆಯಲ್ಲಿ ನೀವು ಇದ್ದೀರೋ ಏನೋ ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿರಿ; ನಿಮ್ಮನ್ನು ನೀವೇ ಪರಿಶೋಧಿ ಸಿಕೊಳ್ಳಿರಿ; ನೀವು ಭ್ರಷ್ಠರಲ್ಲದಿದ್ದರೆ ಯೇಸು ಕ್ರಿಸ್ತನು ನಿಮ್ಮಲ್ಲಿದ್ದಾನೆಂದು ನಿಮ್ಮಷ್ಟಕ್ಕೆ ನೀವೇ ತಿಳಿದುಕೊಳ್ಳು ವದಿಲ್ಲವೋ?
  • 6 ಆದರೆ ನಾವಂತೂ ಭ್ರಷ್ಠರಲ್ಲವೆಂದು ನಿಮಗೆ ಗೊತ್ತಾಗುವದೆಂದು ನಾನು ಭರವಸವುಳ್ಳ ವನಾಗಿದ್ದೇನೆ.
  • 7 ನೀವು ಕೆಟ್ಟದ್ದೇನೂ ಮಾಡಬಾರದೆಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ; ಇದರಲ್ಲಿ ನಾವೇ ಯೋಗ್ಯರಾಗಿ ತೋರಿಬರಬೇಕೆಂದಲ್ಲ, ನಾವು ಭ್ರಷ್ಠರೆನಿಸಿಕೊಂಡರೂ ನೀವು ಒಳ್ಳೇದನ್ನು ಮಾಡುವವ ರಾಗ ಬೇಕೆಂಬದೇ.
  • 8 ಸತ್ಯಕ್ಕೆ ವಿರುದ್ಧವಾಗಿ ನಾವೇನು ಮಾಡದೆ ಸತ್ಯಕ್ಕಾಗಿಯೇ ಮಾಡುತ್ತೇವೆ.
  • 9 ನಾವು ಬಲಹೀನರಾಗಿದ್ದರೂ ನೀವು ಬಲಿಷ್ಠರಾಗಿದ್ದ ಪಕ್ಷಕ್ಕೆ ಸಂತೋಷಪಡುತ್ತೇವೆ. ಇದಲ್ಲದೆ ನೀವು ಪರಿ ಪೂರ್ಣತೆಗೆ ಬರಬೇಕೆಂಬದೇ ನಮ್ಮ ಇಷ್ಟ.
  • 10 ಇದಕ್ಕಾಗಿಯೇ ನಾನು ನಿಮ್ಮಲ್ಲಿ ಇಲ್ಲದಿರುವಾಗ ಈ ಮಾತುಗಳನ್ನು ಬರೆದಿದ್ದೇನೆ; ನಿಮ್ಮನ್ನು ಕೆಡವಿ ಹಾಕುವದಕ್ಕಲ್ಲ, ಕಟ್ಟುವದಕ್ಕಾಗಿ ಕರ್ತನು ನನಗೆ ಕೊಟ್ಟಿರುವ ಅಧಿಕಾರದ ಪ್ರಯೋಗದಲ್ಲಿ ನಿಮ್ಮ ಬಳಿಗೆ ಬಂದಾಗ ಕಾಠಿಣ್ಯವನ್ನು ತೋರಿಸುವದಕ್ಕೆ ಅವಕಾಶವಿರ ಬಾರದೆಂದು ಅಪೇಕ್ಷಿಸುತ್ತೇನೆ.
  • 11 ಕಡೇ ಮಾತೇನಂದರೆ ಸಹೋದರರೇ, ನಿಮಗೆ ಶುಭವಾಗಲಿ. ಸಂಪೂರ್ಣರಾಗಿರ್ರಿ; ಆದರಣೆ ಹೊಂದಿದವರಾಗಿರ್ರಿ, ಒಂದೇ ಮನಸ್ಸುಳ್ಳವರಾಗಿರ್ರಿ, ಸಮಾಧಾನದಲ್ಲಿ ಜೀವಿಸಿರಿ; ಆಗ ಪ್ರೀತಿಯುಳ್ಳ ಶಾಂತಿಯ ದೇವರು ನಿಮ್ಮ ಸಂಗಡ ಇರುವನು.
  • 12 ಪವಿತ್ರವಾದ ಮುದ್ದಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ.
  • 13 ಪರಿಶುದ್ಧರೆಲ್ಲರೂ ನಿಮಗೆ ವಂದನೆ ಹೇಳುತ್ತಾರೆ.
  • 14 ಕರ್ತನಾದ ಯೇಸುಕ್ರಿಸ್ತನ ಕೃಪೆಯೂ ದೇವರ ಪ್ರೀತಿಯೂ ಪವಿತ್ರಾತ್ಮನ ಅನ್ಯೋನ್ಯತೆಯೂ ನಿಮ್ಮೆಲ್ಲರ ಸಂಗಡವಿರಲಿ. ಆಮೆನ್‌.