- 1 ಆದದರಿಂದ ದೇವರ ಮುಂದೆಯೂ ಆತನ ಬರೋಣದಲ್ಲಿ ಮತ್ತು ಆತನ ರಾಜ್ಯ ದಲ್ಲಿ ಜೀವಿಸುವವರಿಗೂ ಸತ್ತವರಿಗೂ ನ್ಯಾಯತೀರಿಸುವ ಕರ್ತನಾದ ಯೇಸು ಕ್ರಿಸ್ತನ ಮುಂದೆಯೂ ನಾನು ನಿನಗೆ ಖಂಡಿತವಾಗಿ ಹೇಳುವದೇನಂದರೆ--
- 2 ವಾಕ್ಯವನ್ನು ಸಾರು, ಅನುಕೂಲವಾದ ಕಾಲದಲ್ಲಿಯೂ ಅನುಕೂಲವಿಲ್ಲದ ಕಾಲದಲ್ಲಿಯೂ ಅದರಲ್ಲಿ ಆಸಕ್ತ ನಾಗಿರು; ಪೂರ್ಣದೀರ್ಘಶಾಂತಿಯಿಂದಲೂ ಉಪ ದೇಶದಿಂದಲೂ ಖಂಡಿಸು, ಗದರಿಸು, ಎಚ್ಚರಿಸು.
- 3 ಯಾಕಂದರೆ ಜನರು ಸ್ವಸ್ಥಬೋಧನೆಯನ್ನು ಸಹಿಸ ಲಾರದ ಕಾಲವು ಬರುತ್ತದೆ; ಅದರಲ್ಲಿ ಅವರು ತೀಟೇ ಕಿವಿಯುಳ್ಳವರಾಗಿ ತಮ್ಮ ದುರಾಶೆಗಳಿಗೆ ಅನುಕೂಲ ವಾದ ಉಪದೇಶಕರನ್ನು ಇಟ್ಟುಕೊಳ್ಳುವರು.
- 4 ಅವರು ಸತ್ಯಕ್ಕೆ ಕಿವಿಗೊಡದೆ ಕಲ್ಪನಾಕಥೆಗಳನ್ನು ಕೇಳುವದಕ್ಕೆ ತಿರುಗಿಕೊಳ್ಳುವರು.
- 5 ಆದರೆ ನೀನು ಎಲ್ಲಾ ವಿಷಯ ಗಳಲ್ಲಿ ಎಚ್ಚರವಾಗಿರು, ಶ್ರಮೆಗಳನ್ನು ತಾಳಿಕೋ, ಸುವಾರ್ತಿಕನ ಕೆಲಸವನ್ನು ಮಾಡು, ನಿನ್ನ ಸೇವೆಯನ್ನು ಸಂಪೂರ್ಣ ಮಾಡು.
- 6 ನಾನು ಈಗ ಅರ್ಪಿತನಾಗು ವದಕ್ಕೆ ಸಿದ್ಧನಿದ್ದೇನೆ; ನಾನು ಹೊರಟು ಹೋಗಬೇಕಾದ ಸಮಯವು ಸವಿಾಪವಾಗಿದೆ.
- 7 ನಾನು ಒಳ್ಳೇ ಹೋರಾಟವನ್ನು ಹೋರಾಡಿದ್ದೇನೆ, ನಾನು ನನ್ನ ಓಟ ವನ್ನು ಮುಗಿಸಿದ್ದೇನೆ, ನಾನು ನಂಬಿಕೆಯನ್ನು ಕಾಪಾಡಿ ದ್ದೇನೆ.
- 8 ಇನ್ನು ಮುಂದೆ ನನಗೋಸ್ಕರ ನೀತಿಯ ಕಿರೀಟವು ಇಡಲ್ಪಟ್ಟಿದೆ; ಅದನ್ನು ನೀತಿಯುಳ್ಳ ನ್ಯಾಯಾ ಧಿಪತಿಯಾದ ಕರ್ತನು ಆ ದಿನದಲ್ಲಿ ನನಗೆ ಕೊಡು ವನು; ನನಗೆ ಮಾತ್ರವಲ್ಲದೆ ಆತನ ಬರೋಣವನ್ನು ಪ್ರೀತಿಸುವವರೆಲ್ಲರಿಗೆ ಸಹ ಕೊಡುವನು.
- 9 ನನ್ನ ಬಳಿಗೆ ಬೇಗ ಬರುವದಕ್ಕೆ ನೀನು ಪ್ರಯತ್ನ ಮಾಡು;
- 10 ಯಾಕಂದರೆ ದೇಮನು ಇಹಲೋಕವನ್ನು ಪ್ರೀತಿಸಿ ನನ್ನನ್ನು ತೊರೆದುಬಿಟ್ಟು ಥೆಸಲೋನಿಕಕ್ಕೆ ಹೋದನು; ಕ್ರೆಸ್ಕನು ಗಲಾತ್ಯಕ್ಕೂ ತೀತನು ದಲ್ಮಾತ್ಯಕ್ಕೂ ಹೋದರು;
- 11 ಲೂಕನು ಮಾತ್ರ ನನ್ನ ಜೊತೆಯಲ್ಲಿ ದ್ದಾನೆ. ಮಾರ್ಕನನ್ನು ಸಂಗಡ ಕರಕೊಂಡು ಬಾ, ಅವನು ಸೇವೆಗಾಗಿ ನನಗೆ ಉಪಯುಕ್ತನಾಗಿದ್ದಾನೆ.
- 12 ತುಖಿಕನನ್ನು ಎಫೆಸಕ್ಕೆ ಕಳುಹಿಸಿದೆನು.
- 13 ತ್ರೋವ ದಲ್ಲಿ ನಾನು ಕರ್ಪನ ಬಳಿಯಲ್ಲಿ ಬಿಟ್ಟುಬಂದ ಮೇಲಂಗಿ ಯನ್ನೂ ಪುಸ್ತಕಗಳನ್ನೂ ಮುಖ್ಯವಾಗಿ ಚರ್ಮದ ಕಾಗದ ಗಳನ್ನೂ ನೀನು ಬರುವಾಗ ತೆಗೆದುಕೊಂಡು ಬಾ.
- 14 ಕಂಚುಗಾರನಾದ ಅಲೆಕ್ಸಾಂದ್ರನು ನನಗೆ ಬಹಳ ಕೇಡುಮಾಡಿದನು; ಕರ್ತನು ಅವನ ಕೃತ್ಯಗಳಿಗೆ ಸರಿ ಯಾಗಿ ಅವನಿಗೆ ಪ್ರತಿಫಲವನ್ನು ಕೊಡುವನು.
- 15 ನೀನು ಸಹ ಅವನ ವಿಷಯದಲ್ಲಿ ಎಚ್ಚರಿಕೆಯಾಗಿರು; ಯಾಕಂದರೆ ಅವನು ನಮ್ಮ ಮಾತುಗಳನ್ನು ಬಹಳ ವಾಗಿ ಎದುರಿಸಿದನು.
- 16 ನಾನು ಮೊದಲನೆಯ ಸಾರಿ ಪ್ರತಿವಾದ ಮಾಡಿದಾಗ ಯಾರೂ ನನ್ನೊಂದಿಗೆ ನಿಲ್ಲಲಿಲ್ಲ. ಎಲ್ಲರೂ ನನ್ನನ್ನು ತೊರೆದುಬಿಟ್ಟರು; ಇದು ಅವರ ಲೆಕ್ಕಕ್ಕೆ ಸೇರಿಸಲ್ಪಡದೆ ಇರಲಿ ಎಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ.
- 17 ಆದರೆ ಕರ್ತನು ನನ್ನ ಬಳಿಯಲ್ಲಿ ನಿಂತು ನನ್ನನ್ನು ಬಲಪಡಿಸಿ ನನ್ನ ಮೂಲಕ ಸಾರಲ್ಪಡುವದು ಸಂಪೂರ್ಣವಾಗಿ ಗ್ರಹಿಕೆ ಯಾಗುವಂತೆಯೂ ಅನ್ಯಜನರೆಲ್ಲರೂ ಅದನ್ನು ಕೇಳುವಂತೆಯೂ ಮಾಡಿದನು; ಇದಲ್ಲದೆ ಆತನು ನನ್ನನ್ನು ಸಿಂಹದ ಬಾಯೊಳಗಿಂದ ತಪ್ಪಿಸಿದನು.
- 18 ನನ್ನನ್ನು ಪ್ರತಿಯೊಂದು ದುಷ್ಕೃತ್ಯದಿಂದ ಕರ್ತನು ತಪ್ಪಿಸಿ ತನ್ನ ಪರಲೋಕರಾಜ್ಯಕ್ಕೆ ನನ್ನನ್ನು ಕಾಪಾಡು ವನು. ಯುಗಯುಗಾಂತರಗಳಲ್ಲಿಯೂ ಆತನಿಗೆ ಮಹಿಮೆ. ಆಮೆನ್.
- 19 ಪ್ರಿಸ್ಕಳಿಗೂ ಅಕ್ವಿಲ್ಲನಿಗೂ ಒನೆಸಿಫೊರನ ಮನೆಯ ವರಿಗೂ ವಂದನೆ.
- 20 ಎರಸ್ತನು ಕೊರಿಂಥದಲ್ಲಿ ನಿಂತನು. ಆದರೆ ತ್ರೊಫಿಮನು ಅಸೌಖ್ಯವಾಗಿದ್ದದರಿಂದ ಅವ ನನ್ನು ನಾನು ಮಿಲೇತದಲ್ಲಿ ಬಿಟ್ಟೆನು.
- 21 ಚಳಿಗಾಲಕ್ಕೆ ಮುಂಚೆಯೇ ಬರುವದಕ್ಕೆ ಪ್ರಯತ್ನ ಮಾಡು. ಯುಬೂ ಲನೂ ಪೂದೆಯನೂ ಲೀನನೂ ಕ್ಲೌದ್ಯಳೂ ಎಲ್ಲಾ ಸಹೋದರರೂ ನಿನಗೆ ವಂದನೆ ಹೇಳುತ್ತಾರೆ.
- 22 ಕರ್ತನಾದ ಯೇಸು ಕ್ರಿಸ್ತನು ನಿನ್ನ ಆತ್ಮದ ಸಂಗಡ ಇರಲಿ. ಕೃಪೆಯು ನಿಮ್ಮೊಂದಿಗಿರಲಿ. ಆಮೆನ್.
2 Timothy 04
- Details
- Parent Category: New Testament
- Category: 2 Timothy
2 ತಿಮೊಥೆಯನಿಗೆ ಅಧ್ಯಾಯ 4