- 1 ನಿಮಗೋಸ್ಕರವೂ ಲವೊದಿಕೀಯದವರಿ ಗೋಸ್ಕರವೂ ನನ್ನನ್ನು ಕಣ್ಣಾರೆ ಕಾಣದಿರು ವವರೆಲ್ಲರಿಗೋಸ್ಕರವೂ ನನಗೆ ಬಹಳ ಹೋರಾಟ ಉಂಟೆಂಬದು ನಿಮಗೆ ತಿಳಿದಿರಬೇಕೆಂದು ನಾನು ಅಪೇಕ್ಷಿಸುತ್ತೇನೆ.
- 2 ಹೇಗಂದರೆ, ಅವರ ಹೃದಯಗಳು ಪ್ರೀತಿಯಲ್ಲಿ ಹೊಂದಿಕೊಂಡು ಆದರಣೆ ಹೊಂದಿ ಸಂಪೂರ್ಣ ನಿಶ್ಚಯವೆಂಬ ಭಾಗ್ಯವನ್ನು ಪಡೆದು ತಂದೆಯಾದ ದೇವರ ಮತ್ತು ಕ್ರಿಸ್ತನ ಮರ್ಮವನ್ನು ತಿಳಿಯುವದೇ;
- 3 ಆತನಲ್ಲಿ (ಕ್ರಿಸ್ತನಲ್ಲಿ) ಜ್ಞಾನ ತಿಳುವಳಿಕೆಯ ಎಲ್ಲಾ ನಿಕ್ಷೇಪಗಳು ಅಡಕವಾಗಿವೆ.
- 4 ಯಾರಾದರೂ ರಂಜನೆಯಾದ ಮಾತುಗಳಿಂದ ನಿಮ್ಮನ್ನು ಮೋಸಗೊಳಿಸಿಯಾರೆಂದು ನಾನು ಇದನ್ನು ಹೇಳುತ್ತೇನೆ.
- 5 ನಾನು ಶರೀರದಿಂದ ನಿಮ್ಮ ಬಳಿಯಲ್ಲಿ ಇಲ್ಲದಿದ್ದರೂ ಆತ್ಮದಿಂದ ನಿಮ್ಮೊಂದಿಗಿದ್ದು ನೀವು ಕ್ರಮ ವಾಗಿ ನಡೆಯುವದನ್ನೂ ಕ್ರಿಸ್ತ ನಂಬಿಕೆಯಲ್ಲಿ ದೃಢವಾಗಿ ನಿಂತಿರುವದನ್ನೂ ನೋಡಿ ಸಂತೋಷಪಡುತ್ತೇನೆ.
- 6 ಆದದರಿಂದ ನೀವು ಕರ್ತನಾದ ಕ್ರಿಸ್ತ ಯೇಸುವನ್ನು ಅಂಗೀಕರಿಸಿದಂತೆಯೇ ಆತನಲ್ಲಿದ್ದವರಾಗಿ ನಡೆದು ಕೊಳ್ಳಿರಿ.
- 7 ಆತನಲ್ಲಿ ಬೇರೂರಿಕೊಂಡು ದೃಢವಾಗಿ ನಿಮಗೆ ಕಲಿಸಿದ ಪ್ರಕಾರವೇ ನಂಬಿಕೆಯಲ್ಲಿ ನೆಲೆಗೊಂಡು ಕೃತಜ್ಞತೆಯಿಂದೊಡಗೂಡಿ ಅದರಲ್ಲಿ ಅಭಿವೃದ್ದಿ ಹೊಂದಿರಿ.
- 8 ಕ್ರಿಸ್ತನನ್ನು ಅನುಸರಿಸದೆ ಮನುಷ್ಯರ ಸಂಪ್ರದಾಯಗಳನ್ನೂ ಪ್ರಾಪಂಚಿಕ ಬಾಲಬೋಧೆಯನ್ನೂ ಅನುಸರಿಸುವವರು ನಿಮ್ಮಲ್ಲಿ ಬಂದು ಮೋಸವಾದ ನಿರರ್ಥಕ ತತ್ವಜ್ಞಾನ ಬೋಧನೆ ಯಿಂದ ನಿಮ್ಮನ್ನು ಕೆಡಿಸಿಬಿಟ್ಟಾರು, ಎಚ್ಚರಿಕೆಯಾಗಿರ್ರಿ.
- 9 ಕ್ರಿಸ್ತನಲ್ಲಿಯೇ ದೈವತ್ವ ಸರ್ವಸಂಪೂರ್ಣತೆಯು ಶಾರೀ ರಕವಾಗಿ ವಾಸಮಾಡುತ್ತದೆ.
- 10 ನೀವು ಆತನಲ್ಲಿದ್ದು ಕೊಂಡೇ ಪರಿಪೂರ್ಣತೆಯನ್ನು ಹೊಂದಿದವರಾಗಿ ದ್ದೀರಿ. ಆತನು ಎಲ್ಲಾ ದೊರೆತನಕ್ಕೂ ಅಧಿಕಾರಕ್ಕೂ ಶಿರಸ್ಸಾಗಿದ್ದಾನೆ.
- 11 ನೀವು ಆತನಲ್ಲಿ ಸುನ್ನತಿಯನ್ನೂ ಹೊಂದಿದ್ದಿರಿ; ಆ ಸುನ್ನತಿಯು ಕೈಯಿಂದ ಮಾಡಿದ್ದಲ್ಲ; ಇದು ಕ್ರಿಸ್ತನಿಂದಾದ ಸುನ್ನತಿಯಾಗಿದ್ದು ಪಾಪದ ಶರೀರ ವನ್ನು ವಿಸರ್ಜಿಸುವದೇ.
- 12 ಾಪ್ತಿಸ್ಮದಲ್ಲಿ ಆತನೊಂದಿಗೆ ಹೂಣಲ್ಪಟ್ಟು ಆತನನ್ನು ಸತ್ತವರೊಳಗಿಂದ ಎಬ್ಬಿಸಿದ ದೇವರ ಕಾರ್ಯದಲ್ಲಿ ನಂಬಿಕೆಯಿಟ್ಟಿರುವದರಿಂದ ನೀವು ಸಹ ಅದರಲ್ಲಿ (ಬಾಪ್ತಿಸ್ಮದಲ್ಲಿ) ಎಬ್ಬಿಸಲ್ಪಟ್ಟಿದ್ದೀರಿ.
- 13 ನಿಮ್ಮ ಪಾಪಗಳಲ್ಲಿಯೂ ಸುನ್ನತಿಯಿಲ್ಲದ ಶರೀರ ಭಾವದಿಂದಲೂ ಸತ್ತವರಾಗಿದ್ದ ನಿಮ್ಮನ್ನು ದೇವರು ಆತನೊಂದಿಗೆ ಬದುಕಿಸಿ ನಿಮ್ಮ ಅಪರಾಧಗಳನ್ನೆಲ್ಲಾ ಕ್ಷಮಿಸಿದ್ದಾನೆ.
- 14 ನಮಗೆ ವಿರೋಧವಾಗಿಯೂ ಪ್ರತಿ ಕೂಲವಾಗಿಯೂ ಇದ್ದ ಕೈಬರಹದ ಶಾಸನಗಳನ್ನು ಅಳಿಸಿ ಅದನ್ನು ತನ್ನ ಶಿಲುಬೆಗೆ ಜಡಿದು ಇಲ್ಲದಂತಾಗ ಮಾಡಿದನು.
- 15 ಆತನು ದೊರೆತನಗಳನ್ನೂ ಅಧಿಕಾರ ಗಳನ್ನೂ ಕೆಡಿಸಿ ಶಿಲುಬೆಯಲ್ಲಿ ಅವುಗಳ ಮೇಲೆ ವಿಜಯ ಗೊಂಡು ಅವುಗಳನ್ನು ಬಹಿರಂಗವಾಗಿ ತೋರಿಸಿದನು.
- 16 ಹೀಗಿರುವದರಿಂದ ಅನ್ನಪಾನಗಳ ವಿಷಯದಲ್ಲಿ ಯೂ ಪವಿತ್ರ ದಿನ ಅಮಾವಾಸ್ಯೆ ಸಬ್ಬತ್ತು ಎಂಬಿವುಗಳ ವಿಷಯದಲ್ಲಿಯೂ ನಿಮಗೆ ಯಾರೂ ತೀರ್ಪು ಮಾಡ ದಿರಲಿ.
- 17 ಇವು ಬರಬೇಕಾಗಿದ್ದವುಗಳ ಛಾಯೆ ಯಾಗಿವೆ; ಆದರೆ ಶರೀರವು ಕ್ರಿಸ್ತನದೇ.
- 18 ಸ್ವಇಷ್ಟ ವಿನಯದಿಂದಲೂ ದೇವದೂತರ ಆರಾಧನೆ ಯಿಂದಲೂ ತನ್ನ ಶಾರೀರಕ ಮನಸ್ಸಿನಿಂದ ವ್ಯರ್ಥವಾಗಿ ಉಬ್ಬಿಕೊಂಡು ತಾನು ನೋಡದಿರುವವುಗಳಲ್ಲಿ ಬಲ ವಂತವಾಗಿ ನುಗ್ಗುವ ಯಾವನೂ ನಿಮ್ಮ ಬಹುಮಾನ ವನ್ನು ಮೋಸಗೊಳಿಸದಿರಲಿ.
- 19 ಇಂಥವನು (ಕ್ರಿಸ್ತನೆಂಬ) ಶಿರಸ್ಸಿನ ಹೊಂದಿಕೆಯನ್ನು ಬಿಟ್ಟವ ನಾಗಿದ್ದಾನೆ. ಆ ಶಿರಸ್ಸಿನಿಂದಲೇ ದೇಹವೆಲ್ಲಾ ಕೀಲು ನರಗಳ ಮೂಲಕ ಬೇಕಾದ ಸಹಾಯವನ್ನು ಹೊಂದಿ ಒಂದಾಗಿ ಜೋಡಿಸಲ್ಪಟ್ಟು ದೇವರು ಕೊಡುವ ವೃದ್ಧಿ ಯಿಂದ ಅಭಿವೃದ್ದಿಯಾಗುತ್ತಾ ಬರುತ್ತದೆ.
- 20 ಪ್ರಾಪಂಚಿಕ ಬಾಲಬೋಧೆಯ ಪಾಲಿಗೆ ನೀವು ಕ್ರಿಸ್ತನೊಂದಿಗೆ ಸತ್ತವರಾಗಿದ್ದ ಮೇಲೆ ಇನ್ನೂ ಪ್ರಾಪಂಚಿಕರಾಗಿ ಬದುಕು ವವರೋ ಎಂಬಂತೆ
- 21 ಮುಟ್ಟಬೇಡ, ರುಚಿನೋಡ ಬೇಡ, ಹಿಡಿಯಬೇಡ ಎನ್ನುವ ಮನುಷ್ಯ ಕಲ್ಪಿತ ಆಜ್ಞೆ ಗಳಿಗೂ ಬೋಧನೆಗಳಿಗೂ ನಿಮ್ಮನ್ನು ಒಳಗಾಗಮಾಡಿ ಕೊಳ್ಳುವದೇಕೆ?
- 22 (ಆ ಪದಾರ್ಥಗಳೆಲ್ಲವೂ ಬಳಸುವ ದರಲ್ಲಿ ನಾಶವಾಗುತ್ತವೆ);
- 23 ಅಂಥ ಉಪದೇಶಗಳು ಸ್ವೇಚ್ಛಾರಾಧನೆಯಲ್ಲಿಯೂ ವಿನಯದಲ್ಲಿಯೂ ದೇಹ ದಂಡನೆಯಲ್ಲಿಯೂ ಜ್ಞಾನವನ್ನು ತೋರಿಸುವಂಥವು ಗಳಾಗಿರುವದು ನಿಜವೇ. ಆದರೆ ಅವು ಶರೀರವನ್ನಲ್ಲದೆ ಯಾವ ವಿಧದಲ್ಲಿಯೂ ತೃಪ್ತಿ ಪಡಿಸಲಾರವು.
Colossians 02
- Details
- Parent Category: New Testament
- Category: Colossians
ಕೊಲೊಸ್ಸೆಯವರಿಗೆ ಅಧ್ಯಾಯ 2