- 1 ಈ ಕಾರಣದಿಂದ ಅನ್ಯಜನರಾಗಿರುವ ನಿಮ್ಮ ನಿಮಿತ್ತ ಯೇಸು ಕ್ರಿಸ್ತನ ಸೆರೆಯವನಾದ ಪೌಲನೆಂಬ ನಾನು
- 2 ನಿಮಗೋಸ್ಕರ ವಾಗಿ ನನಗೆ ಕೊಡಲ್ಪಟ್ಟ ದೇವರ ಕೃಪಾಯುಗದ ವಿಷಯದಲ್ಲಿ ನೀವು ಕೇಳಿರುವದಾದರೆ
- 3 ಇದುವರೆಗೆ ಗುಪ್ತವಾಗಿದ್ದದನ್ನು ಆತನು ಪ್ರಕಟನೆಯಿಂದ ನನಗೆ ಹೇಗೆ ತಿಳಿಸಿದನೆಂಬದನ್ನು ಮೊದಲು ನಾನು ನಿಮಗೆ ಸಂಕ್ಷೇಪವಾಗಿ ಬರೆದೆನು;
- 4 (ಬರೆದದ್ದನ್ನು ನೀವು ಓದಿ ನೋಡಿದರೆ ಕ್ರಿಸ್ತನ ವಿಷಯವಾದ ಮರ್ಮವನ್ನು ಕುರಿತು ನನಗಿರುವ ಗ್ರಹಿಕೆಯನ್ನು ನೀವು ತಿಳುಕೊಳ್ಳ ಬಹುದು.)
- 5 ಆ ಮರ್ಮವು ಈ ಕಾಲದಲ್ಲಿ ದೇವರ ಪರಿಶುದ್ಧ ಅಪೊಸ್ತಲರಿಗೂ ಪ್ರವಾದಿಗಳಿಗೂ ಆತ್ಮನಿಂದ ತಿಳಿಸಲ್ಪಟ್ಟಂತೆ ಬೇರೆ ಕಾಲಗಳಲ್ಲಿ ಮನುಷ್ಯ ಪುತ್ರರಿಗೆ ತಿಳಿಸಲ್ಪಡಲಿಲ್ಲ.
- 6 ಅದೇನಂದರೆ, ಅನ್ಯಜನರು (ಯೆಹೂದ್ಯರೊಂದಿಗೆ) ಸಹ ಬಾಧ್ಯರೂ ಒಂದೇ ದೇಹದವರೂ ಸುವಾರ್ತೆಯಿಂದ ಕ್ರಿಸ್ತನ ಮೂಲಕ ಆತನ ವಾಗ್ದಾನದಲ್ಲಿ ಪಾಲುಗಾರರೂ ಆಗಿರಬೇಕೆಂ ಬದೇ.
- 7 ದೇವರು ತನ್ನ ಶಕ್ತಿಯ ಪ್ರಯೋಗದಲ್ಲಿ ನನಗೆ ಅನುಗ್ರಹಿಸಿದ ಕೃಪಾದಾನಕ್ಕನುಸಾರವಾಗಿ ನಾನು ಈ ಸುವಾರ್ತೆಗೆ ಸೇವಕನಾದೆನು.
- 8 ಕ್ರಿಸ್ತನ ಶೋಧಿಸಲ ಶಕ್ಯವಾದ ಐಶ್ವರ್ಯದ ವಿಷಯವಾಗಿ ಅನ್ಯಜನರಿಗೆ ನಾನು ಸಾರುವ ಹಾಗೆ ಪರಿಶುದ್ಧರೊಳಗೆ ಅತ್ಯಲ್ಪ ನಾದ ನನಗೆ ಅನುಗ್ರಹಿಸೋಣವಾಯಿತು.
- 9 ಸಮಸ್ತ ವನ್ನು ಯೇಸು ಕ್ರಿಸ್ತನಿಂದ ಸೃಷ್ಟಿಸಿದ ದೇವರಲ್ಲಿ ಲೋಕಾದಿ ಯಿಂದ ಮರೆಯಾಗಿದ್ದ ಮರ್ಮದ ಅನ್ಯೋನ್ಯತೆಯು ಎಲ್ಲರಿಗೂ ತೋರುವಂತೆ ಮಾಡುವ ಹಾಗೆಯೂ
- 10 ನಾನಾ ವಿಧವಾದ ದೇವರ ಜ್ಞಾನವು ಪರಲೋಕದಲ್ಲಿ ಈಗ ರಾಜತ್ವಗಳಿಗೂ ಅಧಿಕಾರಗಳಿಗೂ ಸಭೆಯ ಮೂಲಕ ಗೊತ್ತಾಗಬೇಕೆಂಬದಾಗಿಯೂ ಆತನು ಉದ್ದೇಶಿಸಿದ್ದನು.
- 11 ನಮ್ಮ ಕರ್ತನಾದ ಕ್ರಿಸ್ತ ಯೇಸು ವಿನಲ್ಲಿ ಆತನು ಸಂಕಲ್ಪಿಸಿದ ಶಾಶ್ವತವಾದ ಸಂಕಲ್ಪದಂತೆ ಇದಾಯಿತು.
- 12 ಆತನಿಂದಾದ ನಂಬಿಕೆಯ ಮೂಲಕ ನಮಗೆ ಧೈರ್ಯವೂ ಭರವಸವುಳ್ಳ ಪ್ರವೇಶವೂ ಉಂಟಾಯಿತು.
- 13 ಆದದರಿಂದ ನಿಮ್ಮ ನಿಮಿತ್ತ ನನ ಗುಂಟಾದ ಕಷ್ಟಗಳಿಗಾಗಿ ನೀವು ಧೈರ್ಯಗೆಡಬಾರ ದೆಂದು ನಾನು ಅಪೇಕ್ಷಿಸುತ್ತೇನೆ. ಅವು ನಿಮ್ಮ ಗೌರವವಾಗಿವೆ.
- 14 ಈ ಕಾರಣದಿಂದ ನಾನು ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯ ಮುಂದೆ ನನ್ನ ಮೊಣ ಕಾಲೂರಿ
- 15 ಯಾವ ತಂದೆಯ ಹೆಸರನ್ನು ಪರಲೋಕ ಭೂಲೋಕಗಳಲ್ಲಿರುವ ಕುಟುಂಬವೆಲ್ಲಾ ತೆಗೆದುಕೊಳ್ಳು ತ್ತದೋ, ಆ ತಂದೆಯು
- 16 ನಿಮಗೆ ತನ್ನ ಮಹಿಮೆಯ ಐಶ್ವರ್ಯಕ್ಕನುಸಾರವಾಗಿ ಆತನ ಆತ್ಮನ ಮೂಲಕ ಆಂತರ್ಯದಲ್ಲಿ ವಿಶೇಷ ಬಲವನ್ನು ಅನುಗ್ರಹಿಸುವ ಹಾಗೆಯೂ
- 17 ಕ್ರಿಸ್ತನು ನಿಮ್ಮ ಹೃದಯಗಳಲ್ಲಿ ನಂಬಿಕೆಯ ಮೂಲಕ ವಾಸಿಸುವಂತೆಯೂ ನೀವು ಪ್ರೀತಿಯಲಿ ಬೇರೂರಿ ನೆಲೆಗೊಂಡು ನಿಂತು
- 18 ಪರಿಶುದ್ಧರೆಲ್ಲ ರೊಂದಿಗೆ ಅದರ ಅಗಲ ಉದ್ದ ಆಳ ಮತ್ತು ಎತ್ತರವನ್ನು ಗ್ರಹಿಸುವಂತೆಯೂ
- 19 ಜ್ಞಾನಕ್ಕೆ ವಿಾರುವ ಕ್ರಿಸ್ತನ ಪ್ರೀತಿ ಯನ್ನು ತಿಳಿದುಕೊಂಡು ದೇವರ ಸಂಪೂರ್ಣತೆಯ ಮಟ್ಟಿಗೂ ಪರಿಪೂರ್ಣರಾಗುವ ಹಾಗೆಯೂ ನಿಮಗೆ ದಯ ಪಾಲಿಸಲಿ ಎಂದು ಆತನನ್ನು ಬೇಡಿಕೊಳ್ಳುತ್ತೇನೆ.
- 20 ನಮ್ಮಲ್ಲಿ ಕಾರ್ಯಸಾಧಿಸುವ ತನ್ನ ಶಕ್ತಿಯ ಪ್ರಕಾರ ನಾವು ಬೇಡುವದಕ್ಕಿಂತಲೂ ಯೋಚಿಸುವದಕ್ಕಿಂತಲೂ ಅತ್ಯಧಿಕವಾದದ್ದನ್ನು ಮಾಡಲು ಶಕ್ತನಾದಾತನಿಗೆ
- 21 ಸಭೆಯಲ್ಲಿ ಕ್ರಿಸ್ತ ಯೇಸುವಿನ ಮೂಲಕ ತಲತಲಾಂತ ರಕ್ಕೂ ಯುಗಯುಗಾಂತರಕ್ಕೂ ಮಹಿಮೆಯುಂಟಾಗಲಿ. ಆಮೆನ್.
Ephesians 03
- Details
- Parent Category: New Testament
- Category: Ephesians
ಎಫೆಸದವರಿಗೆ ಅಧ್ಯಾಯ 3