- 1 ಹೀಗಿರಲಾಗಿ ಆತನ ವಿಶ್ರಾಂತಿಯಲ್ಲಿ ಸೇರುವೆವೆಂಬ ವಾಗ್ದಾನವು ಇನ್ನೂ ಇರು ವಲ್ಲಿ ನಿಮ್ಮೊಳಗೆ ಯಾವನಾದರೂ ಆದರಿಂದ ತಪ್ಪುವವನಾದಾನೋ ಎಂದು ನಾವು ಭಯಪಡೋಣ.
- 2 ಅವರಿಗೆ ಸುವಾರ್ತೆಯು ಸಾರೋಣವಾದಂತೆಯೇ ನಮಗೂ ಸಾರೋಣವಾಯಿತು; ಆದರೆ ಕೇಳಿದವರು ನಂಬಲಿಲ್ಲವಾದ ಕಾರಣ ಸಾರಿದ ಆ ವಾಕ್ಯದಿಂದ ಅವರಿಗೆ ಪ್ರಯೋಜನವಾಗಲಿಲ್ಲ.
- 3 ಲೋಕದ ಅಸ್ತಿ ವಾರದೊಡನೆ (ಆತನ) ಕೆಲಸಗಳು ಮುಗಿದಿದ್ದರೂ ಆತನು--ಅವರು ನನ್ನ ವಿಶ್ರಾಂತಿಯಲ್ಲಿ ಸೇರುವದೇ ಇಲ್ಲವೆಂದು ನಾನು ಕೋಪದಿಂದ ಪ್ರಮಾಣಮಾಡಿ ದೆನು ಎಂದು ಹೇಳಿದನು. ನಂಬಿರುವ ನಾವೇ ಆ ವಿಶ್ರಾಂತಿಯಲ್ಲಿ ಪ್ರವೇಶಿಸುತ್ತೇವೆ.
- 4 ಒಂದು ಸ್ಥಳದಲ್ಲಿ ಏಳನೆಯ ದಿವಸವನ್ನು ಕುರಿತು--ದೇವರು ತನ್ನ ಕಾರ್ಯಗಳನ್ನೆಲ್ಲಾ ಮುಗಿಸಿಬಿಟ್ಟು ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡನೆಂತಲೂ
- 5 ಈ ಸ್ಥಳದಲ್ಲಿ--ಇವರು ನನ್ನ ವಿಶ್ರಾಂತಿಯಲ್ಲಿ ಸೇರುವದಿಲ್ಲ ಎಂತಲೂ ಆತನು ಹೇಳಿದ್ದಾನೆ.
- 6 ಆದದರಿಂದ ಕೆಲವರು ಅದರಲ್ಲಿ ಪ್ರವೇಶಿ ಸಲೇಬೇಕೆಂಬದು ಇನ್ನೂ ಇರುವದರಿಂದ ಯಾರಿಗೆ ಮೊದಲು ಅದು ಸಾರಲ್ಪಟ್ಟಿತೋ ಅವರು ಅಪ ನಂಬಿಕೆಯ ನಿಮಿತ್ತ ಒಳಗೆ ಪ್ರವೇಶಿಸಲಿಲ್ಲ.
- 7 ತಿರಿಗಿ ಬಹುಕಾಲ ಹೋದನಂತರ ಆತನು ದಾವೀದನ ಬಾಯಿಂದ ಮಾತನಾಡಿ--ಈ ಹೊತ್ತೇ ಎಂದು ಒಂದಾ ನೊಂದು ದಿವಸವನ್ನು ಗೊತ್ತುಮಾಡುತ್ತಾನೆ; ಹೇಗೆಂದರೆ--ನೀವು ಈ ಹೊತ್ತು ಆತನ ಧ್ವನಿಗೆ ಕಿವಿಗೊಟ್ಟರೆ ನಿಮ್ಮ ಹೃದಯಗಳನ್ನು ಕಠಿಣ ಮಾಡಿಕೊಳ್ಳಬೇಡಿರಿ ಎಂದು ಹೇಳುತ್ತಾನಷ್ಟೆ.
- 8 ಯೆಹೋಶುವನು ಅವರನ್ನು ಆ ವಿಶ್ರಾಂತಿಯಲ್ಲಿ ಸೇರಿಸಿದ್ದಾದರೆ ತರುವಾಯ ಮತ್ತೊಂದು ದಿವಸವನ್ನು ಕುರಿತು ಹೇಳೋಣವಾಗುತ್ತಿರಲಿಲ್ಲ.
- 9 ಆದದರಿಂದ ದೇವಜನರಿಗೆ ವಿಶ್ರಾಂತಿಯು ಇನ್ನೂ ಉಂಟು.
- 10 ಹೇಗಂದರೆ ದೇವರು ತನ್ನ ಕೆಲಸಗಳನ್ನು ಮುಗಿಸಿ ಹೇಗೆ ವಿಶ್ರಮಿಸಿಕೊಂಡನೊ ಹಾಗೆಯೇ ಆತನ ವಿಶ್ರಾಂತಿಯಲ್ಲಿ ಸೇರಿರುವವನು ಸಹ ತನ್ನ ಕೆಲಸಗಳನು ಮುಗಿಸಿ ವಿಶ್ರಮಿಸಿಕೊಂಡಿದ್ದಾನೆ.
- 11 ಆದದರಿಂದ ನಾವು ಅವರ ಅಪನಂಬಿಕೆಯನ್ನು ಅನುಸರಿಸುವವ ರಾಗದಂತೆ ಆ ವಿಶ್ರಾಂತಿಯಲ್ಲಿ ಸೇರುವದಕ್ಕೆ ಪ್ರಯಾಸ ಪಡೋಣ.
- 12 ಯಾಕಂದರೆ ದೇವರ ವಾಕ್ಯವು ಸಜೀವ ವಾದದ್ದು, ಶಕ್ತಿಯುಳ್ಳದ್ದು, ಯಾವ ಇಬ್ಬಾಯಿ ಕತ್ತಿ ಗಿಂತಲೂ ಹದವಾದದ್ದು, ಪ್ರಾಣ ಆತ್ಮಗಳನ್ನೂ ಕೀಲು ಮಜ್ಜೆಗಳನ್ನೂ ವಿಭಾಗಿಸುವಷ್ಟರ ಮಟ್ಟಿಗೆ ತೂರಿ ಹೋಗುವಂಥದ್ದೂ ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದ್ದೂ ಆಗಿದೆ.
- 13 ನಾವು ಯಾವಾತನಿಗೆ ಲೆಕ್ಕ ಒಪ್ಪಿಸಬೇಕಾಗಿದೆಯೋ ಆತನ ದೃಷ್ಟಿಗೆ ಸಮಸ್ತವೂ ಮುಚ್ಚುಮರೆಯಿಲ್ಲ ದ್ದಾಗಿಯೂ ಬೈಲಾದದ್ದಾಗಿಯೂ ಆದರೆ ಆತನ ಸನ್ನಿಧಿಯಲ್ಲಿ ಅಗೋಚರವಾಗಿರುವ ಸೃಷ್ಟಿಯು ಒಂದೂ ಇಲ್ಲ.
- 14 ಆಕಾಶಗಳನ್ನು ದಾಟಿಹೋದ ದೇವಕುಮಾರ ನಾದ ಯೇಸುವೆಂಬ ಶ್ರೇಷ್ಠ ಮಹಾಯಾಜಕನು ನಮಗಿರುವದರಿಂದ ನಾವು ಮಾಡಿರುವ ಅರಿಕೆಯನ್ನು ಬಿಗಿಯಾಗಿ ಹಿಡಿಯೋಣ.
- 15 ಯಾಕಂದರೆ ನಮಗಿ ರುವ ಮಹಾಯಾಜಕನು ನಮ್ಮ ನಿರ್ಬಲಾವಸ್ಥೆಯನ್ನು ಕುರಿತು ಅನುತಾಪವಿಲ್ಲದವನಲ್ಲ; ಆತನು ಸರ್ವ ವಿಷಯಗಳಲ್ಲಿ ನಮ್ಮ ಹಾಗೆ ಶೋಧನೆಗೆ ಗುರಿ ಯಾದರೂ ಪಾಪರಹಿತನಾಗಿದ್ದನು.
- 16 ಆದದರಿಂದ ನಾವು ಕರುಣೆಯನ್ನು ಹೊಂದುವಂತೆಯೂ ಆತನ ಕೃಪೆಯಿಂದ ಸಮಯೋಚಿತವಾದ ಸಹಾಯವು ನಮಗೆ ದೊರೆಯುವಂತೆಯೂ ಧೈರ್ಯದಿಂದ ಕೃಪಾ ಸಿಂಹಾಸನದ ಬಳಿಗೆ ಬರೋಣ.
Hebrews 04
- Details
- Parent Category: New Testament
- Category: Hebrews
ಇಬ್ರಿಯರಿಗೆ ಅಧ್ಯಾಯ 4