- 1 ಇವುಗಳಾದ ಮೇಲೆ ಯೇಸು ತಿಬೇರಿಯ ಸಮುದ್ರದ ಬಳಿಯಲ್ಲಿ ಶಿಷ್ಯರಿಗೆ ತನ್ನನ್ನು ತಿರಿಗಿ ತೋರಿಸಿಕೊಂಡನು. ಆತನು ತನ್ನನ್ನು ತೋರಿಸಿ ಕೊಂಡ ರೀತಿ ಹೇಗಂದರೆ--
- 2 ಸೀಮೋನ ಪೇತ್ರನೂ ದಿದುಮನೆಂಬ ತೋಮನೂ ಗಲಿಲಾಯದ ಕಾನಾ ಊರಿನ ನತಾನಯೇಲನೂ ಜೆಬೆದಾಯನ ಮಕ್ಕಳೂ ಆತನ ಶಿಷ್ಯರಲ್ಲಿ ಇನ್ನಿಬ್ಬರೂ ಒಟ್ಟಾಗಿ ಕೂಡಿದ್ದರು.
- 3 ಆಗ ಸೀಮೋನ ಪೇತ್ರನು ಅವರಿಗೆ--ನಾನು ವಿಾನು ಹಿಡಿಯುವದಕ್ಕೆ ಹೋಗುತ್ತೇನೆ ಅನ್ನಲು ಅವರು ಅವನಿಗೆ--ನಾವು ಸಹ ನಿನ್ನ ಸಂಗಡ ಬರುತ್ತೇವೆ ಅಂದರು. ಅವರು ಹೊರಟುಹೋಗಿ ಕೂಡಲೆ ದೋಣಿಯನ್ನು ಹತ್ತಿದರು. ಆದರೆ ಆ ರಾತ್ರಿಯಲ್ಲಿ ಏನೂ ಹಿಡಿಯಲಿಲ್ಲ.
- 4 ಬೆಳಗಾದಾಗ ಯೇಸು ದಡದಲ್ಲಿ ನಿಂತಿದ್ದನು. ಆದರೆ ಆತನು ಯೇಸು ಎಂದು ಶಿಷ್ಯರು ತಿಳಿಯಲಿಲ್ಲ.
- 5 ಆಗ ಯೇಸು ಅವರಿಗೆ--ಮಕ್ಕಳಿರಾ, ನಿಮಗೆ ಊಟಕ್ಕೆ ಏನಾದರೂ ಇದೆಯೋ ಅನ್ನಲು ಅವರು ಆತನಿಗೆ--ಇಲ್ಲವೆಂದು ಉತ್ತರ ಕೊಟ್ಟರು.
- 6 ಆತನು ಅವರಿಗೆ--ದೋಣಿಯ ಬಲಗಡೆಯಲ್ಲಿ ಬಲೆಯನ್ನು ಬೀಸಿರಿ; ಆಗ ಸಿಕ್ಕುವದು ಅಂದನು. ಅವರು ಬೀಸಿದಾಗ ವಿಾನುಗಳ ರಾಶಿಯ ದೆಸೆಯಿಂದ ಅದನ್ನು ಎಳೆಯಲಾರದೆ ಇದ್ದರು.
- 7 ಆದದರಿಂದ ಯೇಸು ಪ್ರೀತಿಸಿದ ಆ ಶಿಷ್ಯನು ಪೇತ್ರನಿಗೆ--ಆತನು ಕರ್ತನು ಅಂದನು. ಆತನು ಕರ್ತನೆಂದು ಸೀಮೋನ ಪೇತ್ರನು ಕೇಳಿ ತನ್ನ ಬೆಸ್ತರ ಅಂಗಿಯನ್ನು ಸುತ್ತಿಕೊಂಡು ಸಮುದ್ರದೊಳಗೆ ದುಮುಕಿ ದನು (ಯಾಕಂದರೆ ಅವನು ಬೆತ್ತಲೆಯಾಗಿದ್ದನು).
- 8 ಉಳಿದ ಶಿಷ್ಯರು ವಿಾನುಗಳಿದ್ದ ಬಲೆಯನ್ನು ಎಳೆಯುತ್ತಾ ಒಂದು ಚಿಕ್ಕ ದೋಣಿಯಲ್ಲಿ ಬಂದರು; (ಯಾಕಂದರೆ ಅವರು ದಡದಿಂದ ದೂರವಿರಲಿಲ್ಲ; ಆದರೆ ಅದು ಇನ್ನೂರು ಮೊಳ ದಷ್ಟಿತ್ತು).
- 9 ಅವರು ದಡಕ್ಕೆ ಬಂದ ಕೂಡಲೆ ಕೆಂಡಗಳನ್ನೂ ಅವುಗಳ ಮೇಲೆ ಇಟ್ಟಿದ್ದ ವಿಾನುಗಳನ್ನೂ ರೊಟ್ಟಿಯನ್ನೂ ಕಂಡರು.
- 10 ಯೇಸು ಅವರಿಗೆ--ನೀವು ಈಗ ಹಿಡಿದ ವಿಾನುಗಳಲ್ಲಿ ಕೆಲ ವನ್ನು ತನ್ನಿರಿ ಅಂದನು.
- 11 ಸೀಮೋನ ಪೇತ್ರನು ಹೋಗಿ ನೂರೈವತ್ತು ಮೂರು ದೊಡ್ಡ ವಿಾನುಗಳಿಂದ ತುಂಬಿದ ಬಲೆಯನ್ನು ದಡಕ್ಕೆ ಎಳೆದನು. ಅಷ್ಟು ವಿಾನು ಗಳಿದ್ದರೂ ಬಲೆಯು ಹರಿದಿರಲಿಲ್ಲ.
- 12 ಯೇಸು ಅವ ರಿಗೆ--ಬಂದು ಊಟಮಾಡಿರಿ ಅಂದನು; ಆತನು ಕರ್ತನೆಂದು ತಿಳಿದಿದ್ದರಿಂದ--ನೀನು ಯಾರು ಎಂದು ಆತನನ್ನು ಕೇಳಲು ಶಿಷ್ಯರಲ್ಲಿ ಯಾರಿಗೂ ಧೈರ್ಯ ವಿರಲಿಲ್ಲ.
- 13 ಆಗ ಯೇಸು ಬಂದು ರೊಟ್ಟಿಯನ್ನು ತೆಗೆದುಕೊಂಡು ಕೊಟ್ಟನು; ಹಾಗೆಯೇ ವಿಾನನ್ನೂ ಕೊಟ್ಟನು.
- 14 ಯೇಸು ಸತ್ತವರೊಳಗಿಂದ ಎದ್ದ ಮೇಲೆ ತನ್ನ ಶಿಷ್ಯರಿಗೆ ತನ್ನನ್ನು ತೋರಿಸಿಕೊಂಡದ್ದು ಇದು ಮೂರನೆಯ ಸಾರಿ.
- 15 ಅವರು ಊಟಮಾಡಿದ ಮೇಲೆ ಯೇಸು ಸೀಮೋನ ಪೇತ್ರನಿಗೆ--ಯೋನನ ಮಗನಾದ ಸೀಮೋನನೇ, ನೀನು ಇವುಗಳಿಗಿಂತ ನನ್ನನ್ನು ಹೆಚ್ಚಾಗಿ ಪ್ರೀತಿಸುತ್ತೀಯೋ ಎಂದು ಕೇಳಲು ಅವನು ಆತ ನಿಗೆ--ಹೌದು, ಕರ್ತನೇ, ನಾನು ನಿನ್ನನ್ನು ಪ್ರೀತಿಸುತ್ತೇ ನೆಂಬದನ್ನು ನೀನೇ ಬಲ್ಲೆ ಅಂದನು. ಅದಕ್ಕೆ ಆತನು ಅವನಿಗೆ
- 16 ಆತನು ತಿರಿಗಿ ಎರಡನೆಯ ಸಾರಿ ಅವನಿಗೆ--ಯೋನನ ಮಗನಾದ ಸೀಮೋನನೇ, ನೀನು ನನ್ನನ್ನು ಪ್ರೀತಿಸುತ್ತೀಯೋ ಎಂದು ಕೇಳಲು ಅವನು ಆತನಿಗೆ--ಹೌದು, ಕರ್ತನೇ, ನಾನು ನಿನ್ನನ್ನು ಪ್ರೀತಿಸುತ್ತೇನೆಂಬದನ್ನು ನೀನೇ ಬಲ್ಲೆ ಅಂದನು. ಅದಕ್ಕೆ ಆತನು ಅವನಿಗೆ--ನನ್ನ ಕುರಿಗಳನ್ನು ಮೇಯಿಸು ಎಂದು
- 17 ಆತನು ಮೂರನೆಯ ಸಾರಿ ಅವನಿಗೆ--ಯೋನನ ಮಗನಾದ ಸೀಮೋನನೇ, ನೀನು ನನ್ನನ್ನು ಪ್ರೀತಿಸುತ್ತೀಯೋ ಎಂದು ಕೇಳಿದನು. ಆತನು ಮೂರನೆಯ ಸಾರಿ--ನೀನು ನನ್ನನ್ನು ಪ್ರೀತಿಸುತ್ತೀಯೋ ಎಂದು ತನ್ನನ್ನು ಕೇಳಿದ್ದಕ್ಕೆ ಪೇತ್ರನು ದುಃಖಪಟ್ಟು--ಕರ್ತನೇ, ನಿನಗೆ ಎಲ್ಲವುಗಳು ತಿಳಿದವೆ; ನಾನು ನಿನ
- 18 ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ--ನೀನು ಯೌವನಸ್ಥನಾಗಿದ್ದಾಗ ನೀನೇ ನಿನ್ನ ನಡುಕಟ್ಟಿಕೊಂಡು ಇಷ್ಟಬಂದ ಕಡೆಗೆ ತಿರುಗಾ ಡುತ್ತಿದ್ದಿ; ಆದರೆ ನೀನು ಮುದುಕನಾದಾಗ ನಿನ್ನ ಕೈಗಳನ್ನು ಚಾಚುವಿ, ಆಗ ಮತ್ತೊಬ್ಬನು ನಿನ್ನ ನಡುವನ್ನು ಕಟ್ಟಿ ನಿನಗೆ ಇಷ್ಟವಿಲ್ಲದ ಕಡೆಗೆ ನಿನ್ನನ್ನು ತೆಗೆದುಕೊಂ
- 19 ಅವನು ಎಂಥ ಮರಣ ದಿಂದ ದೇವರನ್ನು ಮಹಿಮೆಪಡಿಸಬೇಕಾಗಿದೆ ಎಂದು ಸೂಚಿಸಿ ಆತನು ಇದನ್ನು ಹೇಳಿದನು. ಆತನು ಇದನ್ನು ಹೇಳಿದ ಮೇಲೆ ಅವನಿಗೆ--ನನ್ನನ್ನು ಹಿಂಬಾಲಿಸು ಅಂದನು.
- 20 ಊಟದಲ್ಲಿ ಆತನ ಎದೆಗೆ ಒರಗಿಕೊಂಡು-- ಕರ್ತನೇ, ನಿನ್ನನ್ನು ಹಿಡುಕೊಡುವವನು ಯಾರು ಎಂದು ಕೇಳಿದಂಥ ಮತ್ತು ಯೇಸು ಪ್ರೀತಿಸಿದಂಥ ಶಿಷ್ಯನು ಹಿಂದೆ ಬರುವದನ್ನು ಪೇತ್ರನು ಹಿಂತಿರುಗಿ ನೋಡಿ
- 21 ಯೇಸುವಿಗೆ--ಕರ್ತನೇ, ಈ ಮನುಷ್ಯನ ವಿಷಯವೇನು ಅಂದನು.
- 22
- 22 ಯೇಸು ಅವನಿಗೆ--ನಾನು ಬರುವ ತನಕ ಅವನು ಇರಬೇಕೆಂದು ನನಗೆ ಮನಸ್ಸಿದ್ದರೆ ಅದು ನಿನಗೇನು? ನೀನು ನನ್ನನ್ನು ಹಿಂಬಾ ಲಿಸು ಅಂದನು.
- 23 ಆಗ ಆ ಶಿಷ್ಯನು ಸಾಯುವದಿ ಲ್ಲವೆಂಬ ಮಾತು ಸಹೋದರರಲ್ಲಿ ಹರಡಿತು. ಆದರೂ--ಅವನು ಸಾಯುವದಿಲ್ಲವೆಂದು ಯೇಸು ಅವನಿಗೆ ಹೇಳಲಿಲ್ಲ; ಆದರೆ--ನಾನು ಬರುವ ತನಕ ಅವನು ಇರುವದು ನನಗೆ ಮನಸ್ಸಿದ್ದರೆ ಅದು ನಿನಗೇನು ಎಂತಲೇ ಹೇಳಿದನು.
- 24 ಇವುಗಳ ವಿಷಯವಾಗಿ ಸಾಕ್ಷಿ ಹೇಳಿ ಇವುಗಳನ್ನು ಬರೆದ ಶಿಷ್ಯನು ಇವನೇ; ಇವನ ಸಾಕ್ಷಿಯು ಸತ್ಯವೆಂದು ನಾವು ಬಲ್ಲೆವು.
- 25 ಇದಲ್ಲದೆ ಯೇಸು ಮಾಡಿದವುಗಳು ಬಹಳ ಉಂಟು; ಅವುಗಳನ್ನು ಒಂದೊಂದಾಗಿ ಬರೆಯುವ ದಾದರೆ ಬರೆಯಬೇಕಾದ ಪುಸ್ತಕಗಳನ್ನು ಲೋಕವೇ ಹಿಡಿಸಲಾರದೆ ಹೋದೀತೆಂದು ನಾನು ನೆನಸುತ್ತೇನೆ. ಆಮೆನ್.
John 21
- Details
- Parent Category: New Testament
- Category: John
ಯೋಹಾನನು ಅಧ್ಯಾಯ 21