- 1 ನಮ್ಮಲ್ಲಿ ಬಹು ನಿಶ್ಚಯವಾಗಿ ನಂಬಿ ಕೊಂಡಿರುವ ವಿಷಯಗಳ ಪ್ರಕಟನೆಯನ್ನು ಕ್ರಮವಾಗಿ ಬರೆಯುವದಕ್ಕೆ ಅನೇಕರು ಕೈಕೊಂಡು
- 2 ಮೊದಲಿನಿಂದಲೂ ಕಣ್ಣಾರೆ ಕಂಡ ಸಾಕ್ಷಿಗಳು ಮತ್ತು ವಾಕ್ಯಪರಿಚಾರಕರು ಅವುಗಳನ್ನು ನಮಗೆ ಒಪ್ಪಿಸಿಕೊ ಟ್ಟದ್ದರಿಂದ
- 3 ಅತ್ಯುತ್ತಮನಾದ ಥೆಯೊಫಿಲನೇ, ಮೊದಲಿ ನಿಂದಲೂ ಎಲ್ಲವುಗಳನ್ನು ಪೂರ್ಣವಾಗಿ ತಿಳಿದುಕೊಂಡಿ ರುವ ನಾನು ಸಹ ಅವುಗಳನ್ನು ಕ್ರಮವಾಗಿ ನಿನಗೆ ಬರೆಯುವದು ಒಳ್ಳೇದೆಂದು ನನಗೆ ತೋಚಿತು;
- 4 ಹೀಗೆ ನಿನಗೆ ಬೋಧಿಸಲ್ಪಟ್ಟವುಗಳು ಸ್ಥಿರವಾದವುಗಳೆಂದು ಇದರಿಂದ ನೀನು ತಿಳಿಯಬಹುದು.
- 5 ಯೂದಾಯದ ಅರಸನಾದ ಹೆರೋದನ ದಿನ ಗಳಲ್ಲಿ ಅಬೀಯನ ವರ್ಗಕ್ಕೆ ಸೇರಿದ ಜಕರಿಯನೆಂದು ಹೆಸರಿದ್ದ ಒಬ್ಬ ಯಾಜಕನಿದ್ದನು. ಅವನ ಹೆಂಡತಿಯು ಆರೋನನ ಕುಮಾರ್ತೆಯರಿಗೆ ಸಂಬಂಧಪಟ್ಟವಳು. ಆಕೆಯ ಹೆಸರು ಎಲಿಸಬೇತ್.
- 6 ಅವರಿಬ್ಬರೂ ಕರ್ತನ ಎಲ್ಲಾ ಆಜ್ಞೆಗಳನ್ನೂ ನ್ಯಾಯವಿಧಿಗಳನ್ನು ತಪ್ಪಿಲ್ಲದೆ ಕೈಕೊಂಡು ದೇವರ ಮುಂದೆ ನೀತಿವಂತರಾಗಿದ್ದರು.
- 7 ಎಲಿಸಬೇತಳು ಬಂಜೆಯಾದದರಿಂದ ಅವರಿಗೆ ಮಕ್ಕ ಳಿರಲಿಲ್ಲ; ಅವರಿಬ್ಬರೂ ಬಹಳ ಪ್ರಾಯಹೋದವರಾ ಗಿದ್ದರು.
- 8 ಹೀಗಿರಲಾಗಿ ಅವನು ತನ್ನ ವರ್ಗದ ಸರತಿಯ ಮೇರೆಗೆ ದೇವರ ಮುಂದೆ ಯಾಜಕನ ಉದ್ಯೋಗವನ್ನು ಮಾಡುತ್ತಿದ್ದಾಗ
- 9 ಯಾಜಕೋದ್ಯೋಗದ ಪದ್ಧತಿಯ ಪ್ರಕಾರ ಅವನು ಕರ್ತನ ಆಲಯದಲ್ಲಿ ಪ್ರವೇಶಿಸಿ ಧೂಪವನ್ನು ಸುಡುವದು ಅವನ ಪಾಲಿಗೆ ಬಂತು.
- 10 ಧೂಪಾರ್ಪಣೆಯ ಸಮಯದಲ್ಲಿ ಜನ ಸಮೂಹ ವೆಲ್ಲಾ ಹೊರಗೆ ಪ್ರಾರ್ಥಿಸುತ್ತಿದ್ದರು.
- 11 ಆಗ ಧೂಪ ವೇದಿಯ ಬಲಗಡೆಯಲ್ಲಿ ನಿಂತುಕೊಂಡಿದ್ದ ಕರ್ತನ ದೂತನು ಅವನಿಗೆ ಕಾಣಿಸಿಕೊಂಡನು.
- 12 ಜಕರೀ ಯನು ಅವನನ್ನು ನೋಡಿ ಕಳವಳದಿಂದ ಭಯಹಿಡಿ ದವನಾದನು.
- 13 ಆದರೆ ಆ ದೂತನು ಅವನಿಗೆ--ಜಕರೀಯನೇ, ಭಯಪಡಬೇಡ; ಯಾಕಂದರೆ ನಿನ್ನ ಪ್ರಾರ್ಥನೆಯು ಕೇಳಲ್ಪಟ್ಟಿದೆ; ನಿನ್ನ ಹೆಂಡತಿಯಾದ ಎಲಿಸಬೇತಳು ನಿನಗೆ ಒಬ್ಬ ಮಗನನ್ನು ಹೆರುವಳು. ನೀನು ಅವನನ್ನು ಯೋಹಾನನೆಂದು ಕರೆಯಬೇಕು.
- 14 ನಿನಗೆ ಆನಂದವೂ ಉಲ್ಲಾಸವೂ ಆಗುವದು; ಅನೇಕರು ಅವನ ಜನನದಲ್ಲಿ ಆನಂದಿಸುವರು.
- 15 ಯಾಕಂದರೆ ಅವನು ಕರ್ತನ ದೃಷ್ಟಿಯಲ್ಲಿ ದೊಡ್ಡವ ನಾಗಿದ್ದು ದ್ರಾಕ್ಷಾರಸವನ್ನಾಗಲಿ ಮದ್ಯವನ್ನಾಗಲಿ ಕುಡಿ ಯುವದೇ ಇಲ್ಲ; ಅವನು ತಾಯಿಯ ಗರ್ಭದಿಂದಲೇ ಪರಿಶುದ್ಧಾತ್ಮಭರಿತನಾಗಿರುವನು.
- 16 ಅವನು ಇಸ್ರಾ ಯೇಲಿನ ಮಕ್ಕಳಲ್ಲಿ ಅನೇಕರನ್ನು ಅವರ ದೇವರಾದ ಕರ್ತನ ಕಡೆಗೆ ತಿರುಗಿಸುವನು.
- 17 ಅವನು ತಂದೆಗಳ ಹೃದಯಗಳನ್ನು ಮಕ್ಕಳಕಡೆಗೂ ಅವಿಧೇಯರನ್ನು ನೀತಿವಂತರ ಜ್ಞಾನಕ್ಕೂ ತಿರುಗಿಸಿ ಕರ್ತನಿಗೋಸ್ಕರ ಜನರನ್ನು ಸಿದ್ಧಮಾಡುವದಕ್ಕೆ ಎಲೀಯನ ಆತ್ಮದಲ್ಲಿ ಯೂ ಬಲದಲ್ಲಿಯೂ ಆತನ ಮುಂದೆ ಹೋಗುವನು ಎಂದು ಹೇಳಿದನು.
- 18 ಆಗ ಜಕರೀಯನು ಆ ದೂತನಿಗೆ--ಇದನ್ನು ನಾನು ಯಾವದರಿಂದ ತಿಳು ಕೊಳ್ಳಲಿ? ಯಾಕಂದರೆ ನಾನು ಮುದುಕನು; ನನ್ನ ಹೆಂಡತಿಯೂ ಪ್ರಾಯಗತಿಸಿದವಳು ಅಂದನು.
- 19 ಅದಕ್ಕೆ ಆ ದೂತನು ಪ್ರತ್ಯುತ್ತರವಾಗಿ--ನಾನು ದೇವರ ಸನ್ನಿಧಿಯಲ್ಲಿ ನಿಲ್ಲುವ ಗಬ್ರಿಯೇಲನು, ಈಗ ನಿನ್ನ ಸಂಗಡ ಮಾತನಾಡುವದಕ್ಕೂ ಈ ಸಂತೋಷದ ವರ್ತಮಾನವನ್ನು ನಿನಗೆ ತಿಳಿಸುವದಕ್ಕೂ ಕಳುಹಿಸ ಲ್ಪಟ್ಟಿದ್ದೇನೆ.
- 20 ಇಗೋ, ತಕ್ಕ ಕಾಲದಲ್ಲಿ ನೆರವೇರುವ ನನ್ನ ಮಾತುಗಳನ್ನು ನೀನು ನಂಬದೆ ಹೋದದರಿಂದ ಈ ಸಂಗತಿಗಳು ಈಡೇರುವ ದಿನದ ವರೆಗೆ ನೀನು ಮೂಕನಾಗಿದ್ದು ಮಾತನಾಡಲಾರದೆ ಇರುವಿ ಅಂದನು.
- 21 ಆಗ ಜಕರೀಯನಿಗಾಗಿ ಕಾದುಕೊಂಡಿದ್ದ ಜನರು ಅವನು ದೇವಾಲಯದಲ್ಲಿ ಬಹಳ ತಡಮಾಡಿದ್ದಕ್ಕೆ ಆಶ್ಚರ್ಯಪಟ್ಟರು.
- 22 ಅವನು ಹೊರಗೆ ಬಂದಾಗ ಅವರೊಂದಿಗೆ ಮಾತನಾಡಲಾರದೆ ಇದ್ದನು; ಅದಕ್ಕ ವರು ಅವನು ದೇವಾಲಯದಲ್ಲಿ ಒಂದು ದರ್ಶನವನ್ನು ಕಂಡನೆಂದು ಗ್ರಹಿಸಿದರು; ಯಾಕಂದರೆ ಅವನು ಅವರಿಗೆ ಸನ್ನೆ ಮಾಡುತ್ತಾ ಮಾತಿಲ್ಲದವನಾಗಿದ್ದನು.
- 23 ಇದಾದ ಮೇಲೆ ತನ್ನ ಸೇವೆಯ ದಿನಗಳು ಮುಗಿದ ಕೂಡಲೆ ಅವನು ತನ್ನ ಸ್ವಂತ ಮನೆಗೆ ಹೊರಟು ಹೋದನು.
- 24 ಆ ದಿವಸಗಳಾದ ಮೇಲೆ ಅವನ ಹೆಂಡತಿಯಾದ ಎಲಿಸಬೇತಳು ಗರ್ಭಿಣಿಯಾಗಿ ಐದು ತಿಂಗಳು ತನ್ನನ್ನು ಮರೆಮಾಡಿಕೊಂಡು--
- 25 ಜನರಲ್ಲಿ ನನಗಿದ್ದ ಅವ ಮಾನವನ್ನು ತೆಗೆದುಹಾಕುವದಕ್ಕಾಗಿ ಕರ್ತನು ನನ್ನ ಮೇಲೆ ದೃಷ್ಟಿಯಿಟ್ಟ ದಿನಗಳಲ್ಲಿ ನನಗೆ ಹೀಗೆ ಮಾಡಿದನು ಎಂದು ಹೇಳಿದಳು.
- 26 ಆರನೆಯ ತಿಂಗಳಿನಲ್ಲಿ ಗಲಿಲಾಯ ಪಟ್ಟಣದ ನಜರೇತೆಂಬ ಊರಿಗೆ ದೇವರಿಂದ ಗಬ್ರಿಯೇಲನೆಂಬ ದೂತನು
- 27 ದಾವೀದನ ಮನೆತನದವನಾದ ಯೋಸೇ ಫನಿಗೆ ನಿಶ್ಚಯಮಾಡಲ್ಪಟ್ಟ ಮರಿಯಳೆಂಬ ಒಬ್ಬ ಕನ್ಯೆಯ ಬಳಿಗೆ ಕಳುಹಿಸಲ್ಪಟ್ಟನು.
- 28 ಆ ದೂತನು ಆಕೆಗೆ--ಅಪಾರ ದಯೆ ಹೊಂದಿದವಳೇ, ನಿನಗೆ ವಂದನೆ; ಕರ್ತನು ನಿನ್ನೊಂದಿಗಿದ್ದಾನೆ; ಸ್ತ್ರೀಯರಲ್ಲಿ ನೀನು ಧನ್ಯಳೇ ಎಂದು ಹೇಳಿದನು.
- 29 ಆಕೆಯು ಅವನನ್ನು ನೋಡಿ ಅವನ ಮಾತಿಗೆ ಕಳವಳಗೊಂಡು ಇದು ಎಂಥಾತರವಾದ ವಂದನೆ ಎಂದು ತನ್ನ ಮನದಲ್ಲಿ ಯೋಚಿಸುತ್ತಿರುವಾಗ
- 30 ಆ ದೂತನು ಆಕೆಗೆ-- ಮರಿಯಳೇ, ಹೆದರಬೇಡ; ಯಾಕಂದರೆ ನೀನು ದೇವರ ದಯೆಯನ್ನು ಹೊಂದಿದ್ದೀ;
- 31 ಇಗೋ, ನೀನು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವಿ; ಆತನಿಗೆ ಯೇಸು ಎಂದು ಹೆಸರಿಡಬೇಕು.
- 32 ಆತನು ದೊಡ್ಡವನಾಗಿದ್ದು ಮಹೋನ್ನತನ ಕುಮಾರನೆಂದು ಕರೆಯಲ್ಪಡುವನು; ದೇವರಾದ ಕರ್ತನು ಆತನ ತಂದೆ ಯಾದ ದಾವೀದನ ಸಿಂಹಾಸನವನ್ನು ಆತನಿಗೆ ಕೊಡು ವನು.
- 33 ಆತನು ಯಾಕೋಬನ ಮನೆತನವನ್ನು ಸದಾ ಕಾಲವೂ ಆಳುವನು; ಆತನ ರಾಜ್ಯಕ್ಕೆ ಅಂತ್ಯವೇ ಇಲ್ಲ ಎಂದು ಹೇಳಿದನು.
- 34 ಆಗ ಮರಿಯಳು ಆ ದೂತ ನಿಗೆ--ಇದು ಹೇಗಾದೀತು? ನಾನು ಪುರುಷನನ್ನು ಅರಿತವಳಲ್ಲವಲ್ಲಾ ಅಂದಳು.
- 35 ಅದಕ್ಕೆ ಆ ದೂತನು ಪ್ರತ್ಯುತ್ತರವಾಗಿ ಆಕೆಗೆ--ಪವಿತ್ರಾತ್ಮನು ನಿನ್ನ ಮೇಲೆ ಬರುವನು, ಮಹೋನ್ನತನ ಶಕ್ತಿಯು ನಿನ್ನನ್ನು ಆವರಿಸಿ ಕೊಳ್ಳುವದು; ಆದದರಿಂದ ನಿನ್ನಿಂದ ಹುಟ್ಟುವ ಆ ಪವಿತ್ರವಾದ ಶಿಶುವು ದೇವರ ಮಗನೆಂದು ಕರೆಯ ಲ್ಪಡುವನು.
- 36 ಇಗೋ, ಬಂಜೆಯೆಂದು ಕರೆಯಲ್ಪಟ್ಟ ನಿನ್ನ ಬಂಧುವಾದ ಎಲಿಸಬೇತಳು ಸಹ ತನ್ನ ಮುಪ್ಪಿನ ಪ್ರಾಯದಲ್ಲಿ ಮಗನನ್ನು ಗರ್ಭಧರಿಸಿದ್ದಾಳೆ. ಆಕೆಗೆ ಇದು ಆರನೆಯ ತಿಂಗಳು.
- 37 ಯಾಕಂದರೆ ದೇವರಿಗೆ ಅಸಾಧ್ಯವಾದದ್ದು ಯಾವದೂ ಇಲ್ಲ ಎಂದು ಹೇಳಿ ದನು.
- 38 ಆಗ ಮರಿಯಳು--ನೋಡು, ನಾನು ಕರ್ತನ ದಾಸಿ; ನಿನ್ನ ಮಾತಿನಂತೆ ನನಗೆ ಆಗಲಿ ಅಂದಳು; ಆ ದೂತನು ಆಕೆಯ ಬಳಿಯಿಂದ ಹೊರಟುಹೋದನು.
- 39 ಆ ದಿವಸಗಳಲ್ಲಿ ಮರಿಯಳು ಎದ್ದು ಬೆಟ್ಟದ ಸೀಮೆಯ ಯೆಹೂದದ ಪಟ್ಟಣಕ್ಕೆ ಅವಸರದಿಂದ ಹೋಗಿ
- 40 ಜಕರೀಯನ ಮನೆಯನ್ನು ಪ್ರವೇಶಿಸಿ ಎಲಿಸಬೇತಳನ್ನು ವಂದಿಸಿದಳು.
- 41 ಎಲಿಸಬೇತಳು ಮರಿಯಳ ವಂದನೆಯನ್ನು ಕೇಳಿದಾಗ ಅವಳ ಗರ್ಭ ದಲ್ಲಿದ್ದ ಕೂಸು ಹಾರಾಡಿತು; ಎಲಿಸಬೇತಳು ಪರಿಶುದ್ಧಾ ತ್ಮಭರಿತಳಾಗಿ
- 42 ಗಟ್ಟಿಯಾದ ಧ್ವನಿಯಿಂದ ಮಾತ ನಾಡಿ--ಸ್ತ್ರೀಯರಲ್ಲಿ ನೀನು ಧನ್ಯಳೇ; ನಿನ್ನ ಗರ್ಭಫಲವು ಆಶೀರ್ವದಿಸಲ್ಪಟ್ಟದ್ದೇ.
- 43 ನನ್ನ ಕರ್ತನ ತಾಯಿಯು ನನ್ನ ಬಳಿಗೆ ಬರುವದು ನನಗೆಲ್ಲಿಂದಾಯಿತು?
- 44 ಇಗೋ, ನಿನ್ನ ವಂದನೆಯ ಧ್ವನಿಯು ನನ್ನ ಕಿವಿ ಗಳಲ್ಲಿ ಬಿದ್ದ ಕೂಡಲೆ ಕೂಸು ನನ್ನ ಗರ್ಭದಲ್ಲಿ ಉಲ್ಲಾಸದಿಂದ ಹಾರಾಡಿತು.
- 45 ಕರ್ತನಿಂದ ತನಗೆ ಹೇಳಲ್ಪಟ್ಟವುಗಳು ನೆರವೇರುವವೆಂದು ನಂಬಿದವಳು ಧನ್ಯಳು ಎಂದು ಹೇಳಿದಳು.
- 46 ಆಗ ಮರಿಯಳು--ನನ್ನ ಪ್ರಾಣವು ಕರ್ತನನ್ನು ಘನಪಡಿಸುತ್ತದೆ;
- 47 ನನ್ನ ಆತ್ಮವು ನನ್ನ ರಕ್ಷಕನಾದ ದೇವರಲ್ಲಿ ಉಲ್ಲಾಸಗೊಂಡಿದೆ;
- 48 ಆತನು ತನ್ನ ದಾಸಿಯ ದೀನಸ್ಥಿತಿಯನ್ನು ಲಕ್ಷಿಸಿದ್ದಾನೆ. ಇಗೋ, ಇಂದಿನಿಂದ ತಲತಲಾಂತರಗಳವರು ನನ್ನನ್ನು ಧನ್ಯಳೆಂದು ಕರೆಯುವರು.
- 49 ಪರಾಕ್ರಮಿಯಾದಾತನು ನನಗೆ ಮಹತ್ತಾದವುಗಳನ್ನು ಮಾಡಿದ್ದಾನೆ; ಆತನ ಹೆಸರು ಪರಿಶುದ್ಧವಾದದ್ದು.
- 50 ಆತನಿಗೆ ಭಯಪಡು ವವರ ಮೇಲೆ ಆತನ ಕರುಣೆಯು ತಲತಲಾಂತರ ಗಳಿಗೂ ಇರುವದು.
- 51 ಆತನು ತನ್ನ ಬಾಹುಬಲವನ್ನು ತೋರಿಸಿ ಗರ್ವಿಷ್ಠರನ್ನು ಅವರ ಹೃದಯದ ಕಲ್ಪನೆಗಳ ನಿಮಿತ್ತವಾಗಿ ಅವರನ್ನು ಚದರಿಸಿಬಿಟ್ಟಿದ್ದಾನೆ;
- 52 ಬಲಿಷ್ಠ ರನ್ನು ಅವರ ಸ್ಥಾನಗಳಿಂದ ಕೆಳಗೆ ದೊಬ್ಬಿ ದೀನರನ್ನು ಮೇಲಕ್ಕೆ ಎತ್ತಿದ್ದಾನೆ.
- 53 ಹಸಿದವರನ್ನು ಒಳ್ಳೆಯವು ಗಳಿಂದ ತೃಪ್ತಿಪಡಿಸಿ ಐಶ್ವರ್ಯವಂತರನ್ನು ಬರಿದಾಗಿ ಕಳುಹಿಸಿಬಿಟ್ಟಿದ್ದಾನೆ.
- 54 ತನ್ನ ಕರುಣೆಯ ಜ್ಞಾಪಕಾರ್ಥ ವಾಗಿ ತನ್ನ ಸೇವಕನಾದ ಇಸ್ರಾಯೇಲನಿಗೆ ಸಹಾಯ ಮಾಡಿದ್ದಾನೆ.
- 55 ಇದಲ್ಲದೆ ನಮ್ಮ ಪಿತೃಗಳಿಗೂ ಅಬ್ರ ಹಾಮನಿಗೂ ಅವನ ಸಂತತಿಗೂ ಸದಾಕಾಲಕ್ಕೆ ಆತನು ಹೇಳಿದಂತೆ ಮಾಡಿದ್ದಾನೆ ಅಂದಳು.
- 56 ಮರಿ ಯಳು ಸುಮಾರು ಮೂರು ತಿಂಗಳು ಅವಳ ಜೊತೆ ಯಲ್ಲಿದ್ದು ತನ್ನ ಸ್ವಂತ ಮನೆಗೆ ಹಿಂದಿರುಗಿಹೋದಳು.
- 57 ಇದಲ್ಲದೆ ಎಲಿಸಬೇತಳಿಗೆ ಹೆರಿಗೆಯ ಸಮಯವು ಪೂರ್ಣವಾದಾಗ ಆಕೆಯು ಒಬ್ಬ ಮಗನನ್ನು ಹೆತ್ತಳು.
- 58 ಆಗ ಕರ್ತನು ತನ್ನ ಮಹಾಕರುಣೆಯನ್ನು ಆಕೆಯ ಮೇಲೆ ತೋರಿಸಿದ್ದನ್ನು ಆಕೆಯ ನೆರೆಹೊರೆಯವರೂ ಬಂಧುಗಳೂ ಕೇಳಿ ಆಕೆಯ ಕೂಡ ಸಂತೋಷಪಟ್ಟರು.
- 59 ತರುವಾಯ ಅವರು ಎಂಟನೇ ದಿನದಲ್ಲಿ ಆ ಮಗುವಿಗೆ ಸುನ್ನತಿ ಮಾಡಿಸುವದಕ್ಕಾಗಿ ಬಂದು ಅವನ ತಂದೆಯ ಹೆಸರಿನಂತೆ ಅವನನ್ನು ಜಕರೀಯನೆಂದು ಕರೆದರು.
- 60 ಅದಕ್ಕೆ ಅವನ ತಾಯಿಯು ಪ್ರತ್ಯುತ್ತರ ವಾಗಿ--ಹಾಗಲ್ಲ. ಅವನು ಯೋಹಾನನೆಂದು ಕರೆಯ ಲ್ಪಡಬೇಕು ಅಂದಳು.
- 61 ಅದಕ್ಕವರು ಆಕೆಗೆ--ನಿನ್ನ ಬಂಧುಗಳಲ್ಲಿ ಈ ಹೆಸರಿನಿಂದ ಕರೆಯಲ್ಪಟ್ಟವರು ಒಬ್ಬರೂ ಇಲ್ಲ ಅಂದರು.
- 62 ಅವನು ಯಾವ ಹೆಸರಿ ನಿಂದ ಕರೆಯಲ್ಪಡಬೇಕೆಂದು ಅವನ ತಂದೆಗೆ ಅವರು ಸನ್ನೆ ಮಾಡಿದರು.
- 63 ಆಗ ಅವನು ಒಂದು ಬರೆಯುವ ಹಲಗೆಯನ್ನು ಕೇಳಿ ಅವನ ಹೆಸರು ಯೋಹಾನನು ಎಂದು ಬರೆದನು. ಆಗ ಅವರೆಲ್ಲರೂ ಆಶ್ಚರ್ಯಪಟ್ಟರು.
- 64 ಕೂಡಲೆ ಅವನ ಬಾಯಿ ತೆರೆಯಲ್ಪಟ್ಟು ಅವನ ನಾಲಿಗೆಯು ಸಡಿಲವಾಯಿತು ಮತ್ತು ಅವನು ಮಾತ ನಾಡಿ ದೇವರನ್ನು ಕೊಂಡಾಡಿದನು.
- 65 ಆಗ ಅವರ ಸುತ್ತಲೂ ಮತ್ತು ಎಲ್ಲಾ ಯೂದಾಯದ ಬೆಟ್ಟದ ಸೀಮೆಯಲ್ಲಿಯೂ ಈ ಸಂಗತಿಗಳೆಲ್ಲಾ ಹರಡಿದವು.
- 66 ಕೇಳಿದವರೆಲ್ಲರೂ ಅವುಗಳನ್ನು ತಮ್ಮ ಹೃದಯದಲ್ಲಿ ಇಟ್ಟುಕೊಂಡು--ಈ ಕೂಸೂ ಎಂಥದ್ದಾಗುವನೊ ಎಂದು ಅಂದುಕೊಂಡರು. ಕರ್ತನ ಹಸ್ತವು ಅವನ ಸಂಗಡ ಇತ್ತು.
- 67 ಅವನ ತಂದೆಯಾದ ಜಕರೀಯನು ಪವಿತ್ರಾತ್ಮ ಭರಿತನಾಗಿ ಪ್ರವಾದಿಸುತ್ತಾ--
- 68 ಇಸ್ರಾಯೇಲಿನ ದೇವರಾದ ಕರ್ತನು ಸ್ತುತಿ ಹೊಂದಲಿ, ಯಾಕಂದರೆ ಆತನು ತನ್ನ ಜನರನ್ನು ಸಂಧಿಸಿ ಅವರನ್ನು ವಿಮೋಚಿ ಸಿದ್ದಾನೆ.
- 69 ಆತನು ತನ್ನ ಸೇವಕನಾದ ದಾವೀದನ ಮನೆತನದಲ್ಲಿ ನಮಗಾಗಿ ರಕ್ಷಣೆಯ ಕೊಂಬನ್ನು ಎತ್ತಿ ದ್ದಾನೆ.
- 70 ಲೋಕಾದಿಯಿಂದ ಆತನು ತನ್ನ ಪರಿಶುದ್ಧ ಪ್ರವಾದಿಗಳ ಬಾಯಿಂದ ಮಾತನಾಡಿದ ಪ್ರಕಾರ
- 71 ನಾವು ನಮ್ಮ ಶತ್ರುಗಳಿಂದಲೂ ನಮ್ಮನ್ನು ಹಗೆ ಮಾಡುವವರ ಕೈಯಿಂದಲೂ ರಕ್ಷಿಸಲ್ಪಡುವಂತೆ
- 72 ನಮ್ಮ ಪಿತೃಗಳಿಗೆ ವಾಗ್ದಾನ ಮಾಡಿದ ಕರುಣೆಯನು ನೆರವೇರಿಸಲು ತನ್ನ ಪರಿಶುದ್ಧ ಒಡಂಬಡಿಕೆಯನ್ನು ನೆನಪಿಗೆ ತಂದು
- 73 ನಮ್ಮ ಪಿತೃವಾದ ಅಬ್ರಹಾಮನಿಗೆ ಆಣೆಯಿಟ್ಟು ಪ್ರಮಾಣ ಮಾಡಿದಂತೆ
- 74 ನಾವು ನಮ್ಮ ಶತ್ರುಗಳ ಕೈಯಿಂದ ಬಿಡಿಸಲ್ಪಟ್ಟು ಭಯವಿಲ್ಲದವರಾಗಿ
- 75 ನಮ್ಮ ಜೀವಮಾನದ ಎಲ್ಲಾ ದಿನಗಳಲ್ಲಿ ಆತನ ಮುಂದೆ ಪರಿಶುದ್ಧತೆಯಿಂದಲೂ ನೀತಿಯಿಂದಲೂ ಆತನನ್ನು ಸೇವಿಸುವವರಾಗುವದಕ್ಕೆ ಆತನು ಅನುಗ್ರಹಿ ಸುವನು.
- 76 ಇದಲ್ಲದೆ ಮಗುವೇ, ನೀನಾದರೋ ಮಹೋನ್ನತನ ಪ್ರವಾದಿ ಎಂದು ಕರೆಯಲ್ಪಡುವಿ; ಯಾಕಂದರೆ ಕರ್ತನ ಮಾರ್ಗಗಳನ್ನು ಸಿದ್ಧಮಾಡು ವದಕ್ಕೆ ಆತನ ಮುಂದೆ ಹೋಗುವಿ.
- 77 ಹೇಗೆಂದರೆ ಆತನು ತನ್ನ ಜನರಿಗೆ ಪಾಪಗಳ ಪರಿಹಾರದಿಂದ ರಕ್ಷಣೆಯ ತಿಳುವಳಿಕೆಯನ್ನು ಕೊಡುವನು.
- 78 ನಮ್ಮ ದೇವರ ಮಮತೆಯ ಕರುಣೆಯಿಂದ ಅದು ಆಗುವದ ಲ್ಲದೆ ಮೇಲಣದಿಂದ ಅರುಣೋದಯವು ಉಂಟಾಗಿ ನಮ್ಮನ್ನು ಸಂಧಿಸಿ
- 79 ಕತ್ತಲೆಯಲ್ಲಿಯೂ ಮರಣದ ನೆರಳಿನಲ್ಲಿಯೂ ಕೂತವರಿಗೆ ಬೆಳಕನ್ನು ಕೊಡುವದಕ್ಕೂ ನಮ್ಮ ಪಾದಗಳನ್ನು ಸಮಾಧಾನದ ಮಾರ್ಗದಲ್ಲಿ ನಡಿಸುವದಕ್ಕೂ ಆಗುವದು ಎಂದು ಹೇಳಿದನು.
- 80 ಆ ಬಾಲಕನು ಬೆಳೆದು ಆತ್ಮದಲ್ಲಿ ಬಲಗೊಂಡನು. ತನ್ನನ್ನು ಇಸ್ರಾಯೇಲಿಗೆ ತೋರ್ಪಡಿಸಿಕೊಳ್ಳುವ ದಿನದವರೆಗೆ ಅರಣ್ಯದಲ್ಲಿದ್ದನು.
Luke 01
- Details
- Parent Category: New Testament
- Category: Luke
ಲೂಕನು ಅಧ್ಯಾಯ 1