- 1 ತರುವಾಯ ಫರಿಸಾಯರೂ ಶಾಸ್ತ್ರಿಗಳಲ್ಲಿ ಕೆಲವರೂ ಯೆರೂಸಲೇಮಿನಿಂದ ಆತನ ಬಳಿಗೆ ಕೂಡಿಬಂದರು.
- 2 ಆಗ ಆತನ ಶಿಷ್ಯರಲ್ಲಿ ಕೆಲವರು ಅಶುದ್ಧವಾದ ಅಂದರೆ ತೊಳೆಯದಿರುವ ಕೈಗಳಿಂದ ರೊಟ್ಟಿ ತಿನ್ನುವದನ್ನು ಅವರು ನೋಡಿ ತಪ್ಪು ಕಂಡು ಹಿಡಿದರು.
- 3 ಯಾಕಂದರೆ ಫರಿಸಾಯರು ಮತ್ತು ಯೆಹೂದ್ಯರೆಲ್ಲರು ಹಿರಿಯರ ಸಂಪ್ರದಾಯವನ್ನು ಅನುಸರಿಸುವವರಾಗಿ ತಮ್ಮ ಕೈಗಳನ್ನು ಅನೇಕ ಸಾರಿ ತೊಳೆದುಕೊಳ್ಳದ ಹೊರತು ಊಟಮಾಡುವದಿಲ್ಲ.
- 4 ಅವರು ಪೇಟೆಯಿಂದ ಬಂದಾಗ ಸ್ನಾನ ಮಾಡದೆ ಊಟಮಾಡುವದಿಲ್ಲ; ಮತ್ತು ಅವರು ಬಟ್ಟಲುಗಳನ್ನು ಪಾತ್ರೆಗಳನ್ನು ಹಿತ್ತಾಳೆಯ ಪಾತ್ರೆಗಳನ್ನು ಮೇಜುಗಳನ್ನು ತೊಳೆಯುವಂಥ ಅನೇಕ ಆಚಾರಗಳನ್ನು ಮಾಡಿಕೊಂಡಿ ದ್ದರು.
- 5 ತರುವಾಯ ಫರಿಸಾಯರೂ ಶಾಸ್ತ್ರಿಗಳೂ ಆತನಿಗೆ--ನಿನ್ನ ಶಿಷ್ಯರು ಹಿರಿಯರ ಸಂಪ್ರದಾಯದ ಪ್ರಕಾರ ಕೈತೊಳಕೊಳ್ಳದೆ ಯಾಕೆ ರೊಟ್ಟಿ ತಿನ್ನುತ್ತಾರೆ ಎಂದು ಕೇಳಿದರು.
- 6 ಆತನು ಪ್ರತ್ಯುತ್ತರವಾಗಿ ಅವರಿಗೆ --ಈ ಜನರು ತಮ್ಮ ತುಟಿಗಳಿಂದ ನನ್ನನ್ನು ಸನ್ಮಾನಿಸು ತ್ತಾರೆ; ಆದರೆ ಅವರ ಹೃದಯವು ನನ್ನಿಂದ ದೂರ ವಾಗಿದೆ;
- 7 ಮನುಷ್ಯರ ಕಟ್ಟಳೆಗಳನ್ನು ಬೋಧನೆ ಗಳನ್ನಾಗಿ ಮಾಡಿ ಕಲಿಸುವದರಿಂದ ಅವರು ನನ್ನನ್ನು ಆರಾಧಿಸುವದು ವ್ಯರ್ಥವಾಗಿದೆ ಎಂದು ಬರೆಯಲ್ಪಟ್ಟ ಪ್ರಕಾರ ಕಪಟಿಗಳಾದ ನಿಮ್ಮ ವಿಷಯದಲ್ಲಿ ಯೆಶಾಯನು ವಿಹಿತವಾಗಿ ಪ್ರವಾದಿಸಿದ್ದಾನೆ.
- 8 ನೀವು ದೈವಾಜ್ಞೆ ಯನ್ನು ಬದಿಗೆ ಇಡುವದಕ್ಕಾಗಿ ಪಾತ್ರೆಗಳನ್ನು ಮತ್ತು ಬಟ್ಟಲುಗಳನ್ನು ತೊಳೆಯುವ ಮನುಷ್ಯರ ಅನೇಕ ಸಂಪ್ರದಾಯಗಳನ್ನು ಹಿಡಿದು ಅನುಸರಿಸುತ್ತೀರಿ ಅಂದನು.
- 9 ಆತನು ಅವರಿಗೆ--ನೀವು ನಿಮ್ಮ ಸಂಪ್ರ ದಾಯವನ್ನು ಕೈಕೊಳ್ಳುವಂತೆ ದೈವಾಜ್ಞೆಯನ್ನು ಸಂಪೂರ್ಣವಾಗಿ ಅಸಡ್ಡೆ ಮಾಡುತ್ತೀರಿ.
- 10 ಯಾಕಂದರೆ ಮೋಶೆಯು--ನಿನ್ನ ತಂದೆಯನ್ನು ನಿನ್ನ ತಾಯಿಯನ್ನು ಸನ್ಮಾನಿಸಬೇಕೆಂತಲೂ ಮತ್ತು--ತಂದೆಯನ್ನಾಗಲೀ ತಾಯಿಯನ್ನಾಗಲೀ ಶಪಿಸುವವನು ಸಾಯಲೇ ಬೇಕೆಂತಲೂ ಹೇಳಿದ್ದಾನೆ.
- 11 ಆದರೆ ನೀವು--ಒಬ್ಬ ಮನುಷ್ಯನು ತನ್ನ ತಂದೆಗಾಗಲೀ ಅಥವಾ ತಾಯಿ ಗಾಗಲೀ--ನೀನು ನನ್ನಿಂದ ಹೊಂದಲಿಕ್ಕಿರುವ ಪ್ರಯೋಜನವು ಕೊರ್ಬಾನ್ (ಅಂದರೆ ಒಂದು ದಾನ) ಆಗಿದೆ ಎಂದು ಹೇಳಿದರೆ ಅವನು ಸ್ವತಂತ್ರ ನಾಗುವನು ಎಂದು ಅನ್ನುತ್ತೀರಿ;
- 12 ಅವನು ತನ್ನ ತಂದೆಗಾದರೂ ತಾಯಿಗಾದರೂ ಏನನ್ನೂ ನೀವು ಮಾಡಗೊಡಿಸದೆ
- 13 ನೀವು ಕಲಿಸಿರುವ ನಿಮ್ಮ ಸಂಪ್ರದಾಯದ ಮೂಲಕ ದೇವರ ವಾಕ್ಯವನ್ನು ನಿರರ್ಥಕಮಾಡುತ್ತೀರಿ, ಇಂಥ ಅನೇಕವಾದವುಗಳನ್ನು ನೀವು ಮಾಡುತ್ತೀರಿ ಅಂದನು.
- 14 ಆಮೇಲೆ ಆತನು ಜನರನ್ನೆಲ್ಲಾ ತನ್ನ ಬಳಿಗೆ ಕರೆದು ಅವರಿಗೆ--ನಿಮ್ಮಲ್ಲಿ ಪ್ರತಿಯೊಬ್ಬನು ನಾನು ಹೇಳುವದನ್ನು ಕೇಳಿ ಗ್ರಹಿಸಿರಿ;
- 15 ಹೊರಗಿನಿಂದ ಮನುಷ್ಯನೊಳಗೆ ಸೇರಿ ಅವನನ್ನು ಹೊಲೆಮಾಡು ವಂಥದ್ದು ಯಾವದೂ ಇಲ್ಲ. ಆದರೆ ಅವನೊಳಗಿಂದ ಹೊರಗೆ ಬರುವಂಥವುಗಳೇ ಮನುಷ್ಯನನ್ನು ಹೊಲೆ ಮಾಡುವವುಗಳಾಗಿವೆ.
- 16 ಯಾವನಿಗಾದರೂ ಕೇಳು ವದಕ್ಕೆ ಕಿವಿಗಳಿದ್ದರೆ ಅವನು ಕೇಳಲಿ ಅಂದನು.
- 17 ಆತನು ಜನರನ್ನು ಬಿಟ್ಟು ಮನೆಯೊಳಗೆ ಬಂದ ಮೇಲೆ ಆತನ ಶಿಷ್ಯರು ಆ ಸಾಮ್ಯದ ವಿಷಯವಾಗಿ ಆತನನ್ನು ಕೇಳಿದರು.
- 18 ಆಗ ಆತನು ಅವರಿಗೆ-- ನೀವು ಸಹ ಗ್ರಹಿಕೆ ಇಲ್ಲದವರಾಗಿದ್ದೀರಾ? ಹೊರಗಿ ನಿಂದ ಮನುಷ್ಯನೊಳಗೆ ಸೇರುವಂಥದ್ದು ಯಾವದೂ ಅವನನ್ನು ಹೊಲೆಮಾಡಲಾರದು ಎಂದು ನೀವು ತಿಳಿದುಕೊಳ್ಳುವದಿಲ್ಲವೋ?
- 19 ಯಾಕಂದರೆ ಅದು ಅವನ ಹೃದಯದೊಳಗೆ ಸೇರದೆ ಹೊಟ್ಟೆಯೊಳಗೆ ಸೇರಿ ಎಲ್ಲಾ ಆಹಾರ ಪದಾರ್ಥಗಳನ್ನು ಶುದ್ಧಮಾಡುತ್ತಾ ಬಹಿರ್ಭೂಮಿಗೆ ಹೋಗುತ್ತದೆ ಅಂದನು.
- 20 ಮತ್ತು ಆತನು--ಮನುಷ್ಯನೊಳಗಿಂದ ಹೊರಡುವಂಥದ್ದೇ ಮನುಷ್ಯನನ್ನು ಹೊಲೆಮಾಡುತ್ತದೆ.
- 21 ಯಾಕಂದರೆ ಮನುಷ್ಯರ ಹೃದಯದೊಳಗಿಂದ ಹೊರಡುವಂಥದ್ದು ಅಂದರೆ ಕೆಟ್ಟಆಲೋಚನೆಗಳು ವ್ಯಭಿಚಾರಗಳು ಹಾದರಗಳು ಕೊಲೆಗಳು
- 22 ಕಳ್ಳತನಗಳು ದುರಾಶೆ ಕೆಟ್ಟತನ ಮೋಸ ಕಾಮಾಭಿಲಾಷೆ ಕೆಟ್ಟದೃಷಿ ದೇವದೂಷಣೆ ಗರ್ವ ಬುದ್ಧಿಗೇಡಿತನ
- 23 ಈ ಎಲ್ಲಾ ಕೆಟ್ಟವುಗಳು ಒಳಗಿನಿಂದ ಬಂದು ಮನುಷ್ಯನನ್ನು ಹೊಲೆ ಮಾಡುತ್ತವೆ ಅಂದನು.
- 24 ಅಲ್ಲಿಂದ ಆತನು ಎದ್ದು ತೂರ್ ಸೀದೋನ್ ಮೇರೆಗಳಿಗೆ ಹೋಗಿ ಒಂದು ಮನೆಯೊಳಗೆ ಬಂದನು. ಮತ್ತು ಅದು ಯಾರಿಗೂ ಗೊತ್ತಾಗಬಾರದೆಂದು ಆತನು ಇಷ್ಟಪಟ್ಟನು; ಆದರೆ ಆತನು ಮರೆಯಾಗಿರಲಾರದೆ ಹೋದನು.
- 25 ಯಾಕಂದರೆ ಒಬ್ಬ ಸ್ತ್ರೀಯು ಆತನ ವಿಷಯವಾಗಿ ಕೇಳಿ ಅಲ್ಲಿಗೆ ಬಂದು ಆತನ ಪಾದಗಳಿಗೆ ಬಿದ್ದಳು. ಯಾಕಂದರೆ ಆಕೆಯ ಮಗಳಿಗೆ ಅಶುದ್ಧಾತ್ಮ ಹಿಡಿದಿತ್ತು.
- 26 ಆ ಸ್ತ್ರೀಯು ಸುರೋಪೊಯಿನಿಕ ಜನಾಂ ಗದವಳಾದ ಒಬ್ಬ ಗ್ರೀಕಳು. ಆಕೆಯು ತನ್ನ ಮಗಳನ್ನು ಹಿಡಿದ ದೆವ್ವವನ್ನು ಬಿಡಿಸಬೇಕೆಂದು ಆತನನ್ನು ಬೇಡಿ ಕೊಂಡಳು.
- 27 ಆದರೆ ಯೇಸು ಆಕೆಗೆ--ಮಕ್ಕಳಿಗೆ ಮೊದಲು ತೃಪ್ತಿಯಾಗಲಿ; ಯಾಕಂದರೆ ಮಕ್ಕಳ ರೊಟ್ಟಿ ಯನ್ನು ತೆಗೆದುಕೊಂಡು ನಾಯಿಗಳಿಗೆ ಹಾಕುವದು ಸರಿಯಲ್ಲ ಎಂದು ಹೇಳಿದನು.
- 28 ಆಕೆಯು ಪ್ರತ್ಯುತ್ತರ ವಾಗಿ ಆತನಿಗೆ--ಹೌದು, ಕರ್ತನೇ; ಆದರೂ ಮೇಜಿನ ಕೆಳಗೆ ಮಕ್ಕಳ ರೊಟ್ಟಿಯ ತುಂಡುಗಳನ್ನು ನಾಯಿಗಳು ತಿನ್ನುತ್ತವೆ ಅಂದಳು.
- 29 ಆತನು ಅವಳಿಗೆ --ಈ ಮಾತಿನ ದೆಸೆಯಿಂದ ದೆವ್ವವು ನಿನ್ನ ಮಗಳನ್ನು ಬಿಟ್ಟು ಹೋಗಿದೆ, ನೀನು ಹೋಗು ಅಂದನು.
- 30 ಆಕೆಯು ತನ್ನ ಮನೆಗೆ ಬಂದಾಗ ದೆವ್ವವು ಹೊರಟು ಹೋದದ್ದನ್ನೂ ತನ್ನ ಮಗಳು ಹಾಸಿಗೆಯ ಮೇಲೆ ಮಲಗಿದ್ದನ್ನೂ ಕಂಡಳು.
- 31 ತಿರಿಗಿ ಆತನು ತೂರ್ ಸೀದೋನ್ ತೀರಗಳಿಂದ ಹೊರಟು ದೆಕಪೊಲಿಯ ತೀರಗಳ ಮಧ್ಯದಿಂದ ಗಲಿ ಲಾಯ ಸಮುದ್ರಕ್ಕೆ ಬಂದನು.
- 32 ಆಗ ಅವರು ತೊದಲು ಮಾತನಾಡುವ ಒಬ್ಬ ಕಿವುಡನನ್ನು ಆತನ ಬಳಿಗೆ ತಂದು ಆತನು ತನ್ನ ಕೈಯನ್ನು ಅವನ ಮೇಲೆ ಇಡಬೇಕೆಂದು ಆತನನ್ನು ಬೇಡಿಕೊಂಡರು.
- 33 ಆತನು ಅವನನ್ನು ಜನಸಮೂಹದಿಂದ ಆಚೆಗೆ ಕರಕೊಂಡು ಹೋಗಿ ತನ್ನ ಬೆರಳುಗಳನ್ನು ಅವನ ಕಿವಿಗಳಲ್ಲಿಟ್ಟು ಉಗುಳಿ ಅವನ ನಾಲಿಗೆಯನ್ನು ಮುಟ್ಟಿದನು;
- 34 ಮತ್ತು ಆತನು ಪರಲೋಕದ ಕಡೆಗೆ ನೋಡುತ್ತಾ ನಿಟ್ಟುಸಿರುಬಿಟ್ಟು ಅವನಿಗೆ--ಎಪ್ಫಥಾ ಅಂದನು. ಅಂದರೆ ತೆರೆಯಲ್ಪಡಲಿ ಎಂದರ್ಥ.
- 35 ಕೂಡಲೆ ಅವನ ಕಿವಿಗಳು ತೆರೆಯಲ್ಪಟ್ಟವು; ಅವನ ನಾಲಿಗೆಯ ನರವು ಸಡಿಲ ವಾಯಿತು; ಮತ್ತು ಅವನು ಸ್ಪಷ್ಟವಾಗಿ ಮಾತನಾಡಿ ದನು.
- 36 ಯಾವ ಮನುಷ್ಯನಿಗೂ ಇದನ್ನು ಹೇಳಬಾರ ದೆಂದು ಆತನು ಅವರಿಗೆ ಖಂಡಿತವಾಗಿ ಹೇಳಿದನು; ಆದರೆ ಎಷ್ಟು ಖಂಡಿತವಾಗಿ ಹೇಳಿದರೂ ಅವರು ಅದನ್ನು ಮತ್ತಷ್ಟು ಹೆಚ್ಚಾಗಿ ಪ್ರಚಾರ ಮಾಡಿದರು.
- 37 ಜನರು ಅತ್ಯಂತಾಶ್ಚರ್ಯಪಟ್ಟು-- ಆತನು ಎಲ್ಲವುಗಳನ್ನು ಚೆನ್ನಾಗಿ ಮಾಡಿದ್ದಾನೆ; ಕಿವುಡರು ಕೇಳುವಂತೆಯೂ ಮೂಕರು ಮಾತನಾಡುವಂತೆಯೂ ಮಾಡಿದ್ದಾನೆ ಎಂದು ಅಂದುಕೊಂಡರು.
Mark 07
- Details
- Parent Category: New Testament
- Category: Mark
ಮಾರ್ಕನು ಅಧ್ಯಾಯ 7