- 1 ಸಬ್ಬತ್ತು ಕಳೆದ ಮೇಲೆ ಮಗ್ದಲದ ಮರಿಯಳೂ ಯಾಕೋಬನ ತಾಯಿ ಯಾದ ಮರಿಯಳೂ ಮತ್ತು ಸಲೋಮೆಯೂ ಆತನಿಗೆ ಹಚ್ಚುವದಕ್ಕಾಗಿ ಸುಗಂಧದ್ರವ್ಯಗಳನ್ನು ಕೊಂಡು ಕೊಂಡು ಬಂದರು.
- 2 ವಾರದ ಮೊದಲನೆಯ ದಿನ ನಸುಕಿನಲ್ಲಿ ಸೂರ್ಯನು ಉದಯಿಸುವಾಗ ಅವರು ಸಮಾಧಿಯ ಬಳಿಗೆ ಬಂದರು,
- 3 ಅವರು--ಸಮಾಧಿಯ ಬಾಗಲಿನಿಂದ ಆ ಕಲ್ಲನ್ನು ನಮಗೋಸ್ಕರ ಯಾರು ಉರುಳಿಸುವರು ಎಂದು ತಮ್ಮತಮ್ಮೊಳಗೆ ಮಾತನಾಡಿ ಕೊಂಡರು.
- 4 ಯಾಕಂದರೆ ಅದು ಬಹಳ ದೊಡ್ಡದಾ ಗಿತ್ತು. ಆದರೆ ಅವರು ನೋಡಿ ಆ ಕಲ್ಲು ಉರುಳಿಸ ಲ್ಪಟ್ಟದ್ದನ್ನು ಕಂಡರು.
- 5 ಅವರು ಸಮಾಧಿಯೊಳಕ್ಕೆ ಪ್ರವೇಶಿಸಿದವರಾಗಿ ಉದ್ದವಾದ ಬಿಳಿ ಉಡುಪನ್ನು ತೊಟ್ಟುಕೊಂಡಿದ್ದ ಒಬ್ಬ ಯೌವನಸ್ಥನು ಬಲಗಡೆಯಲ್ಲಿ ಕೂತಿರುವದನ್ನು ಕಂಡು ಭಯಭ್ರಾಂತರಾದರು.
- 6 ಆದರೆ ಅವನು ಅವರಿಗೆ--ಭಯಪಡಬೇಡಿರಿ, ಶಿಲುಬೆಗೆ ಹಾಕಲ್ಪಟ್ಟ ನಜರೇತಿನ ಯೇಸುವನ್ನು ಹುಡುಕುತ್ತಿದ್ದೀರಿ; ಆತನು ಎದ್ದಿದ್ದಾನೆ; ಇಲ್ಲಿ ಇಲ್ಲ, ಆತನನ್ನು ಇಟ್ಟಿದ್ದ ಸ್ಥಳವನ್ನು ನೋಡಿರಿ;
- 7 ಆದರೆ ನೀವು ಹೊರಟುಹೋಗಿ ಆತನು ನಿಮಗೆ ಹೇಳಿದಂತೆ ನಿಮ್ಮ ಮುಂದೆ ಗಲಿಲಾಯಕ್ಕೆ ಹೋಗುತ್ತಾನೆ; ಅಲ್ಲಿ ನೀವು ಆತನನ್ನು ಕಾಣುವಿರಿ ಎಂದು ಆತನ ಶಿಷ್ಯರಿಗೆ ಮತ್ತು ಪೇತ್ರನಿಗೆ ಹೇಳಿರಿ ಅಂದನು.
- 8 ಆಗ ಅವರು ಬೇಗನೆ ಹೊರಟು ಸಮಾಧಿಯ ಬಳಿಯಿಂದ ಓಡಿಹೋದರು; ಯಾಕಂದರೆ ಅವರು ಆಶ್ಚರ್ಯದಿಂದ ನಡುಗುತ್ತಿದ್ದರು; ಇದಲ್ಲದೆ ಅವರು ಹೆದರಿದವರಾದದರಿಂದ ಯಾರಿಗೂ ಏನೂ ಹೇಳಲಿಲ್ಲ.
- 9 ಹೀಗಿರಲಾಗಿ ವಾರದ ಮೊದಲನೆಯ ದಿನದ ಬೆಳಿಗ್ಗೆ ಯೇಸು ಎದ್ದಮೇಲೆ ಆತನು ಮೊದಲು ತಾನು ಏಳು ದೆವ್ವಗಳನ್ನು ಬಿಡಿಸಿದ್ದ ಮಗ್ದಲದ ಮರಿಯಳಿಗೆ ಕಾಣಿಸಿಕೊಂಡನು.
- 10 ಆತನ ಸಂಗಡ ಇದ್ದವರು ಶೋಕಿಸಿ ಅಳುತ್ತಿರುವಾಗ ಆಕೆಯು ಹೋಗಿ ಅವರಿಗೆ ಹೇಳಿದಳು.
- 11 ಆದರೆ ಆತನು ಬದುಕಿದ್ದಾನೆಂದೂ ಆಕೆಯು ಆತನನ್ನು ನೋಡಿದ್ದಾಳೆಂದೂ ಅವರು ಕೇಳಿದರು; ಆದರೂ ನಂಬಲಿಲ್ಲ.
- 12 ಇದಾದ ಮೇಲೆ ಅವರಲ್ಲಿ ಇಬ್ಬರು ಒಂದು ಗ್ರಾಮಕ್ಕೆ ನಡೆದು ಹೋಗುತ್ತಿದ್ದಾಗ ಆತನು ಅವರಿಗೆ ಬೇರೊಂದು ರೂಪದಲ್ಲಿ ಕಾಣಿಸಿಕೊಂಡನು.
- 13 ಅವರು ಹೋಗಿ ಉಳಿದವರಿಗೆ ತಿಳಿಸಿದರು; ಆದರೆ ಅವರನ್ನೂ ಅವರು ನಂಬಲಿಲ್ಲ.
- 14 ತರುವಾಯ ಊಟಕ್ಕೆ ಕೂತಿದ್ದ ಹನ್ನೊಂದು ಮಂದಿಗೆ ಆತನು ಕಾಣಿಸಿಕೊಂಡು ತಾನು ಎದ್ದು ಬಂದಮೇಲೆ ತನ್ನನ್ನು ನೋಡಿದವರನ್ನು ನಂಬಲಿಲ್ಲ ವಾದ ಕಾರಣ ಅವರ ಅಪನಂಬಿಕೆಗೂ ಹೃದಯದ ಕಾಠಿಣ್ಯಕ್ಕೂ ಆತನು ಅವರನ್ನು ಗದರಿಸಿದನು.
- 15 ಆತನು ಅವರಿಗೆ--ನೀವು ಸಮಸ್ತ ಲೋಕಕ್ಕೆ ಹೋಗಿ ಎಲ್ಲಾ ಸೃಷ್ಟಿಗೆ ಸುವಾರ್ತೆಯನ್ನು ಸಾರಿರಿ.
- 16 ನಂಬಿ ಬಾಪ್ತಿಸ್ಮ ಮಾಡಿಸಿಕೊಳ್ಳುವವನು ರಕ್ಷಣೆ ಹೊಂದುವನು. ಆದರೆ ನಂಬದೆ ಹೋಗುವವನು ದಂಡನೆಗೆ ಗುರಿಯಾಗುವನು.
- 17 ಇದಲ್ಲದೆ ನಂಬುವವರಿಂದ ಈ ಸೂಚಕಕಾರ್ಯಗಳು ಉಂಟಾಗುವವು; ಅವರು ನನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸುವರು; ಅವರು ಹೊಸ ಭಾಷೆಗಳಲ್ಲಿ ಮಾತನಾಡುವರು;
- 18 ಅವರು ಸರ್ಪಗಳನ್ನು ಎತ್ತುವರು; ಮರಣಕರವಾದದ್ದೇ ನಾದರೂ ಕುಡಿದರೆ ಅದು ಅವರಿಗೆ ಯಾವ ಕೇಡನ್ನೂ ಮಾಡುವದಿಲ್ಲ; ಅವರು ರೋಗಿಗಳ ಮೇಲೆ ಕೈಗಳನ್ನಿಡು ವಾಗ ಅವರು ಸ್ವಸ್ಥರಾಗುವರು ಎಂದು ಹೇಳಿದನು.
- 19 ಹೀಗೆ ಕರ್ತನು ಅವರೊಂದಿಗೆ ಮಾತನಾಡಿದ ನಂತರ ಆತನು ಮೇಲಕ್ಕೆ ಪರಲೋಕದಲ್ಲಿ ಸ್ವೀಕರಿ ಸಲ್ಪಟ್ಟು ದೇವರ ಬಲಪಾರ್ಶ್ವದಲ್ಲಿ ಕೂತುಕೊಂಡನು.
- 20 ಮತ್ತು ಅವರು ಹೊರಟುಹೋಗಿ ಎಲ್ಲಾ ಕಡೆಯಲ್ಲಿ ಸಾರಿದರು. ಇದಲ್ಲದೆ ಕರ್ತನು ಅವರ ಜೊತೆಯಲ್ಲಿ ಕೆಲಸಮಾಡುತ್ತಾ ನಡೆದ ಸೂಚಕ ಕಾರ್ಯಗಳಿಂದ ವಾಕ್ಯವನ್ನು ಸ್ಥಿರಪಡಿಸುತ್ತಾ ಇದ್ದನು. ಆಮೆನ್.
Mark 16
- Details
- Parent Category: New Testament
- Category: Mark
ಮಾರ್ಕನು ಅಧ್ಯಾಯ 16