- 1 ಮತ್ತು ಆದದ್ದೇನಂದರೆ, ಯೇಸು ತನ್ನ ಹನ್ನೆರಡು ಮಂದಿ ಶಿಷ್ಯರಿಗೆ ಅಪ್ಪಣೆ ಕೊಡು ವದನ್ನು ಮುಗಿಸಿದ ಮೇಲೆ ಅವರ ಪಟ್ಟಣಗಳಲ್ಲಿ ಬೋಧಿಸುವದಕ್ಕೂ ಸಾರುವದಕ್ಕೂ ಅಲ್ಲಿಂದ ಹೊರಟು ಹೋದನು.
- 2 ಆಗ ಯೋಹಾನನು ಸೆರೆಮನೆಯಲ್ಲಿ ಕ್ರಿಸ್ತನ ಕಾರ್ಯಗಳನ್ನು ಕೇಳಿದ್ದರಿಂದ ತನ್ನ ಶಿಷ್ಯರಲ್ಲಿ ಇಬ್ಬರನ್ನು ಕಳುಹಿಸಿ ಆತನಿಗೆ--
- 3 ಬರಬೇಕಾದಾತನು ನೀನೋ ಇಲ್ಲವೆ ನಾವು ಬೇರೊಬ್ಬನಿಗಾಗಿ ನೋಡಬೇಕೋ ಅಂದನು.
- 4 ಯೇಸು ಪ್ರತ್ಯುತ್ತರವಾಗಿ ಅವರಿಗೆ-- ನೀವು ಹೋಗಿ ಕೇಳುವವುಗಳನ್ನೂ ನೋಡುವವು ಗಳನ್ನೂ ಯೋಹಾನನಿಗೆ ತಿಳಿಸಿರಿ;
- 5 ಕುರುಡರು ದೃಷ್ಟಿ ಹೊಂದುತ್ತಾರೆ, ಕುಂಟರು ನಡೆಯುತ್ತಾರೆ,ಕುಷ್ಟರೋಗಿಗಳು ಶುದ್ಧರಾಗುತ್ತಾರೆ, ಕಿವುಡರು ಕೇಳುತ್ತಾರೆ, ಸತ್ತವರು ಎಬ್ಬಿಸಲ್ಪಡುತ್ತಾರೆ ಮತ್ತು ಬಡವರಿಗೆ ಸುವಾರ್ತೆ ಸಾರಲ್ಪಡುತ್ತದೆ.
- 6 ನನ್ನ ವಿಷಯವಾಗಿ ಸಂಶಯಪಡದವನೇ ಧನ್ಯನು ಅಂದನು.
- 7 ಅವರು ಹೊರಟುಹೋಗುತ್ತಿದ್ದಾಗ ಯೇಸು ಯೋಹಾನನ ಕುರಿತಾಗಿ ಜನಸಮೂಹಗಳೊಂ ದಿಗೆ -- ಏನು ನೋಡುವದಕ್ಕಾಗಿ ನೀವು ಅಡವಿಗೆ ಹೋದಿರಿ? ಗಾಳಿಯಿಂದ ಅಲ್ಲಾಡುವದಂಟನ್ನೋ?
- 8 ಆದರೆ ನೀವು ಏನು ನೊಡುವದಕ್ಕಾಗಿ ಹೋದಿರಿ? ನಯವಾದ ವಸ್ತ್ರಗಳನ್ನು ಧರಿಸಿಕೊಂಡ ಮನುಷ್ಯ ನನ್ನೋ? ಇಗೋ, ನಯವಾದ ಬಟ್ಟೆಗಳನ್ನು ಧರಿಸಿಕೊ ಳ್ಳುವವರು ಅರಮನೆಗಳಲ್ಲಿ ಇರುತ್ತಾರೆ.
- 9 ಆದರೆ ನೀವು ಏನು ನೋಡುವದಕ್ಕಾಗಿ ಹೋದಿರಿ? ಪ್ರವಾದಿ ಯನ್ನೋ? ಹೌದು, ಪ್ರವಾದಿಗಿಂತಲೂ ಹೆಚ್ಚಿನವನು ಎಂದು ನಾನು ನಿಮಗೆ ಹೇಳುತ್ತೇನೆ.
- 10 ಯಾಕಂ ದರೆ--ಇಗೋ, ನಿನ್ನ ಮಾರ್ಗವನ್ನು ನಿನ್ನ ಮುಂದೆ ಸಿದ್ಧಪಡಿಸುವ ನನ್ನ ದೂತನನ್ನು ನಾನು ನಿನ್ನ ಮುಂದೆ ಕಳುಹಿಸುತ್ತೇನೆಂದು ಯಾವನ ವಿಷಯವಾಗಿ ಬರೆದಿ ದೆಯೋ ಅವನೇ ಇವನು.
- 11 ನಾನು ನಿಮಗೆ ನಿಜವಾಗಿ ಹೇಳುತ್ತೇನೆ--ಸ್ತ್ರೀಯರಲ್ಲಿ ಹುಟ್ಟಿದವರೊ ಳಗೆ ಬಾಪ್ತಿಸ್ಮ ಮಾಡಿಸುವ ಯೋಹಾನನಿಗಿಂತ ದೊಡ್ಡವನು ಏಳಲಿಲ್ಲ; ಆದಾಗ್ಯೂ ಪರಲೋಕ ರಾಜ್ಯದಲ್ಲಿ ಅತ್ಯಲ್ಪನಾದವನು ಅವನಿಗಿಂತಲೂ ದೊಡ್ಡ ವನಾಗಿದ್ದಾನೆ.
- 12 ಇದಲ್ಲದೆ ಬಾಪ್ತಿಸ್ಮ ಮಾಡಿಸುವ ಯೋಹಾನನ ದಿನಗಳಿಂದ ಇದುವರೆಗೆ ಪರಲೋಕ ರಾಜ್ಯವು ಬಲಾತ್ಕಾರಕ್ಕೆ ಗುರಿಯಾಗಿದೆ; ಮತ್ತು ಬಲಾತ್ಕಾರಿಗಳು ಅದನ್ನು ಒತ್ತಾಯದಿಂದ ತೆಗೆದು ಕೊಳ್ಳುತ್ತಾರೆ.
- 13 ಯಾಕಂದರೆ ಎಲ್ಲಾ ಪ್ರವಾದಿಗಳೂ ನ್ಯಾಯಪ್ರಮಾಣವೂ ಯೋಹಾನನ ವರೆಗೆ ಪ್ರವಾದಿ ಸಿದ್ದುಂಟು.
- 14 ನೀವು ಇದನ್ನು ಅಂಗೀಕರಿಸುವದಕ್ಕೆ ಮನಸ್ಸಿದ್ದರೆ ಬರಬೇಕಾಗಿದ್ದ ಎಲೀಯನು ಇವನೇ.
- 15 ಕೇಳುವದಕ್ಕೆ ಕಿವಿಗಳುಳ್ಳವನು ಕೇಳಲಿ.
- 16 ಆದರೆ ಈ ಸಂತತಿಯನ್ನು ನಾನು ಯಾವದಕ್ಕೆ ಹೋಲಿಸಲಿ? ಮಕ್ಕಳು ಪೇಟೆಗಳಲ್ಲಿ ಕೂತುಕೊಂಡು ತಮ್ಮ ಸಂಗಡಿ ಗರನ್ನು ಕರೆಯುತ್ತಾ--
- 17 ನಾವು ನಿಮಗೋಸ್ಕರ ಕೊಳಲೂದಿದೆವು, ಆದರೆ ನೀವು ಕುಣಿಯಲಿಲ್ಲ; ನಾವು ನಿಮಗೋಸ್ಕರ ಶೋಕಿಸಿದೆವು, ಆದರೆ ನೀವು ಗೋಳಾಡಲಿಲ್ಲ ಎಂದು ಹೇಳುವವರಿಗೆ ಇದು ಹೋಲಿಕೆಯಾಗಿದೆ.
- 18 ಯಾಕಂದರೆ ಯೋಹಾನನು ತಿನ್ನದೆಯೂ ಕುಡಿಯದೆಯೂ ಬಂದನು. ಅದಕ್ಕೆ ಅವರು--ಅವನಿಗೆ ದೆವ್ವ ಹಿಡಿದಿದೆ ಅನ್ನುತ್ತಾರೆ.
- 19 ಮನುಷ್ಯಕುಮಾರನು ತಿನ್ನುವವನಾಗಿಯೂ ಕುಡಿಯುವವನಾಗಿಯೂ ಬಂದನು. ಅದಕ್ಕೆ ಅವರು--ಇಗೋ, ಈ ಮನುಷ್ಯನು ಹೊಟ್ಟೆ ಬಾಕನೂ ಮದ್ಯಪಾನ ಮಾಡುವವನೂ ಸುಂಕದವರ ಪಾಪಿಗಳ ಸ್ನೇಹಿತನೂ ಎಂದು ಅನ್ನುತ್ತಾರೆ. ಆದರೆ ಜ್ಞಾನವು ನೀತಿಯುಳ್ಳದ್ದೆಂದು ತನ್ನ ಮಕ್ಕಳಿಂದ ನಿರ್ಣಯಿ ಸಲ
- 20 ತರುವಾಯ ತಾನು ಹೆಚ್ಚಾದ ಮಹತ್ಕಾರ್ಯ ಗಳನ್ನು ನಡಿಸಿದ ಪಟ್ಟಣಗಳು ಮಾನಸಾಂತರಪಡದೆ ಇದ್ದದರಿಂದ ಆತನು ಅವುಗಳನ್ನು ಗದರಿಸತೊ ಡಗಿ --
- 21 ಖೊರಾಜಿನೇ, ನಿನಗೆ ಅಯ್ಯೋ! ಬೆತ್ಸಾಯಿದವೇ, ನಿನಗೆ ಅಯ್ಯೋ! ಯಾಕಂದರೆ ನಿನ್ನೊಳಗೆ ನಡೆದ ಮಹತ್ಕಾರ್ಯಗಳು ತೂರ್ ಮತ್ತು ಸೀದೋನ್‌ಗಳಲ್ಲಿ ನಡೆಯುತ್ತಿದ್ದರೆ ಅವುಗಳು ಆಗಲೇ ಗೋಣೀತಟ್ಟನ್ನು ಸುತ್ತಿಕೊಂಡು ಬೂದಿಯಲ್ಲಿ ಕೂತು ಮಾನಸಾಂತರಪಡುತ್ತಿದ್ದವು.
- 22 ಆದರೆ ನಾನು ನಿಮಗೆ ಹೇಳುವದೇನಂದರೆ-- ನ್ಯಾಯತೀರ್ಪಿನ ದಿನದಲ್ಲಿ ನಿಮಗಿಂತಲೂ ತೂರ್ ಮತ್ತು ಸೀದೋನ್‌ಗಳ ಗತಿಯು ಹೆಚ್ಚು ತಾಳಬಹುದಾಗಿರುವದು.
- 23 ಆಕಾಶದವರೆಗೂ ಹೆಚ್ಚಿಸಲ್ಪಟ್ಟ ಕಪೆರ್ನೌಮೇ, ನೀನು ಕೆಳಗೆ ಪಾತಾಳಕ್ಕೆ ದೊಬ್ಬಲ್ಪಡುವಿ; ಯಾಕಂದರೆ ನಿನ್ನೊಳಗೆ ನಡೆದಿರುವ ಮಹತ್ಕಾರ್ಯಗಳು ಸೊದೋಮಿನಲ್ಲಿ ನಡೆದಿದ್ದರೆ ಅದು ಈ ದಿನದವರೆಗೂ ಇರುತ್ತಿತ್ತು.
- 24 ಆದರೆ ನಾನು ನಿನಗೆ ಹೇಳುವದೇನಂದರೆ --ನ್ಯಾಯತೀರ್ಪಿನ ದಿನದಲ್ಲಿ ನಿನಗಿಂತಲೂ ಸೊದೋಮಿನ ಗತಿಯು ಹೆಚ್ಚು ತಾಳಬಹುದಾಗಿರುವದು.
- 25 ಆ ಸಮಯದಲ್ಲಿ ಯೇಸು--ತಂದೆಯೇ, ಪರಲೋಕ ಮತ್ತು ಭೂಲೋಕಗಳ ಒಡೆಯನೇ, ನೀನು ಈ ಸಂಗತಿಗಳನ್ನು ಜ್ಞಾನಿಗಳಿಗೂ ಬುದ್ಧಿವಂತ ರಿಗೂ ಮರೆಮಾಡಿ ಶಿಶುಗಳಿಗೆ ಪ್ರಕಟಮಾಡಿ ರುವದಕ್ಕಾಗಿ ನಾನು ನಿನ್ನನ್ನು ಕೊಂಡಾಡುತ್ತೇನೆ.
- 26 ಹೌದು, ತಂದೆಯೇ, ಇದು ನಿನ್ನ ದೃಷ್ಟಿಯಲ್ಲಿ ಒಳ್ಳೆಯದಾಗಿ ತೋಚಿತು.
- 27 ನನ್ನ ತಂದೆಯು ಎಲ್ಲವನ್ನೂ ನನಗೆ ಒಪ್ಪಿಸಿದ್ದಾನೆ. ತಂದೆಯೇ ಹೊರತು ಇನ್ನಾವನೂ ಮಗನನ್ನು ತಿಳಿದವನಲ್ಲ; ಇಲ್ಲವೆ ಮಗನೇ ಹೊರತು ಇನ್ನಾವನೂ ತಂದೆಯನ್ನು ತಿಳಿದವನಲ್ಲ; ಮತ್ತು ಮಗನು ತಂದೆಯನ್ನು ಯಾರಿಗೆ ಪ್ರಕಟಿಸುವದಕ್ಕೆ ಮನಸ್ಸುಳ್ಳವನಾಗಿದ್ದಾನೋ ಅವನೂ ಆತನನ್ನು ತಿಳಿದ
- 28 ಕಷ್ಟಪಡುವವರೇ ಮತ್ತು ಭಾರಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ, ನಾನು ನಿಮಗೆ ವಿಶ್ರಾಂತಿಯನ್ನು ಕೊಡುವೆನು.
- 29 ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಿಂದ ಕಲಿತು ಕೊಳ್ಳಿರಿ; ಯಾಕಂದರೆ ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನೀವು ನಿಮ್ಮ ಆತ್ಮಗಳಿಗೆ ವಿಶ್ರಾಂತಿಯನ್ನು ಕಂಡುಕೊಳ್ಳುವಿರಿ.
- 30 ಯಾಕಂದರೆ ನನ್ನ ನೊಗವು ಮೃದುವಾದದ್ದೂ ನನ್ನ ಹೊರೆಯು ಹಗುರವಾದದ್ದೂ ಆಗಿದೆ ಎಂದು ಹೇಳಿದನು.
Matthew 11
- Details
- Parent Category: New Testament
- Category: Matthew
ಮತ್ತಾಯನು ಅಧ್ಯಾಯ 11