- 1 ತರುವಾಯ ಯೆರೂಸಲೇಮಿನವರಾದ ಶಾಸ್ತ್ರಿಗಳೂ ಫರಿಸಾಯರೂ ಯೇಸುವಿನ ಬಳಿಗೆ ಬಂದು--
- 2 ನಿನ್ನ ಶಿಷ್ಯರು ಹಿರಿಯರ ಸಂಪ್ರದಾಯ ವನ್ನು ಯಾಕೆ ಮಾರುತ್ತಾರೆ? ಯಾಕಂದರೆ ಅವರು ರೊಟ್ಟಿ ತಿನ್ನುವಾಗ ತಮ್ಮ ಕೈಗಳನ್ನು ತೊಳಕೊಳ್ಳುವದಿಲ್ಲ ಅಂದರು.
- 3 ಅದಕ್ಕೆ ಆತನು ಪ್ರತ್ಯುತ್ತರವಾಗಿ ಅವ ರಿಗೆ--ನೀವು ಸಹ ನಿಮ್ಮ ಸಂಪ್ರದಾಯದ ನಿಮಿತ್ತವಾಗಿ ದೇವರ ಆಜ್ಞೆಯನ್ನು ಯಾಕೆ ಮಾರುತ್ತೀರಿ?
- 4 ಯಾಕಂ ದರೆ ದೇವರು ಅಪ್ಪಣೆ ಕೊಟ್ಟು ಹೇಳಿದ್ದೇನಂದರೆ--ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು. ಮತ್ತು--ಯಾವನಾದರೂ ತಂದೆಯನ್ನಾಗಲೀ ತಾಯಿಯನ್ನಾ ಗಲೀ ಶಪಿಸಿದರೆ ಅವನು ಸಾಯಲೇಬೇಕು ಎಂಬದೇ.
- 5 ಆದರೆ ನೀವು--ಯಾವನಾದರೂ ತನ್ನ ತಂದೆಗಾಗಲೀ ತಾಯಿಗಾಗಲೀ-- ನನ್ನಿಂದ ನಿನಗೆ ಪ್ರಯೋಜನ ವಾಗತಕ್ಕದ್ದು ಕಾಣಿಕೆಯಾಯಿತು ಎಂದು ಹೇಳುವದಾ ದರೆ
- 6 ಅವನು ತನ್ನ ತಂದೆಯನ್ನಾಗಲೀ ತಾಯಿಯನ್ನಾ ಗಲೀ ಸನ್ಮಾನಿಸುವದರಿಂದ ಬಿಡುಗಡೆಯಾಗಿದ್ದಾನೆಂದು ನೀವು ಹೇಳುತ್ತೀರಿ. ಹೀಗೆ ನಿಮ್ಮ ಸಂಪ್ರದಾಯದ ನಿಮಿತ್ತವಾಗಿ ದೇವರ ಆಜ್ಞೆಯನ್ನು ನಿರರ್ಥಕ ಮಾಡಿದ್ದೀರಿ.
- 7 ಕಪಟಿಗಳೇ, ನಿಮ್ಮ ವಿಷಯವಾಗಿ ಯೆಶಾಯನು ಸರಿಯಾಗಿ ಪ್ರವಾದಿಸಿದನು;
- 8 ಆದೇ ನಂದರೆ-- ಈ ಜನರು ತಮ್ಮ ಬಾಯಿಂದ ನನ್ನನ್ನು ಸಮಾಪಿಸಿ ತುಟಿಗಳಿಂದ ನನ್ನನ್ನು ಸನ್ಮಾನಿಸುತ್ತಾರೆ; ಆದರೆ ಅವರ ಹೃದಯವು ನನ್ನಿಂದ ದೂರವಾಗಿದೆ.
- 9 ಅವರು ಮನುಷ್ಯರ ಆಜ್ಞೆಗಳನ್ನು ಬೋಧಿಸಿ ಕಲಿಸುವ ದರಿಂದ ನನ್ನನ್ನು ಆರಾಧಿಸುವದು ವ್ಯರ್ಥ ಎಂಬದೇ.
- 10 ಆತನುಜನ ಸಮೂಹಗಳನ್ನು ಕರೆದು ಅವರಿಗೆ--ಕೇಳಿ ತಿಳುಕೊಳ್ಳಿರಿ;
- 11 ಬಾಯೊಳಗೆ ಹೋಗುವಂಥದು ಮನುಷ್ಯನನ್ನು ಹೊಲೆಮಾಡುವದಿಲ್ಲ; ಆದರೆ ಬಾಯೊ ಳಗಿಂದ ಹೊರಗೆ ಬರುವಂಥದೇ ಮನುಷ್ಯನನ್ನು ಹೊಲೆಮಾಡುತ್ತದೆ ಎಂದು ಹೇಳಿದನು.
- 12 ತರುವಾಯ ಆತನ ಶಿಷ್ಯರು ಬಂದು--ಫರಿಸಾ ಯರು ನಿನ್ನ ಈ ಮಾತನ್ನು ಕೇಳಿದ ಮೇಲೆ ಅಭ್ಯಂತರ ಪಟ್ಟರೆಂದು ನಿನಗೆ ತಿಳಿಯಿತೋ ಎಂದು ಕೇಳಿದರು.
- 13 ಅದಕ್ಕೆ ಆತನು ಪ್ರತ್ಯುತ್ತರವಾಗಿ ಅವರಿಗೆ--ಪರ ಲೋಕದ ನನ್ನ ತಂದೆಯು ನೆಡದೆ ಇರುವ ಪ್ರತಿಯೊ ಂದು ಗಿಡವು ಬೇರು ಸಹಿತವಾಗಿ ಕಿತ್ತುಹಾಕಲ್ಪಡುವದು.
- 14 ಅವರನ್ನು ಬಿಡಿರಿ; ಅವರು ಕುರುಡರನ್ನು ನಡಿಸುವ ಕುರುಡರು. ಕುರುಡನು ಕುರುಡನನ್ನು ನಡಿಸಿದರೆ ಇಬ್ಬರೂ ಕುಣಿಯೊಳಕ್ಕೆ ಬೀಳುವರು ಎಂದು ಹೇಳಿ ದನು.
- 15 ತರುವಾಯ ಪೇತ್ರನು ಪ್ರತ್ಯುತ್ತರವಾಗಿ ಆತ ನಿಗೆ--ಈ ಸಾಮ್ಯವನ್ನು ನಮಗೆ ತಿಳಿಯಪಡಿಸು ಅಂದನು.
- 16 ಅದಕ್ಕೆ ಯೇಸು--ನೀವು ಸಹ ಇನ್ನೂ ಗ್ರಹಿಸದೆ ಇದ್ದೀರಾ?
- 17 ಬಾಯೊಳಗೆ ಹೋಗಿ ಹೊಟ್ಟೆ ಯಲ್ಲಿ ಸೇರುವದೆಲ್ಲವೂ ಬಹಿರ್ಭೂಮಿಗೆ ಹೋಗುವ ದೆಂದು ನೀವು ಇನ್ನೂ ಗ್ರಹಿಸಲಿಲ್ಲವೋ?
- 18 ಆದರೆ ಬಾಯೊಳಗಿಂದ ಹೊರಗೆ ಹೊರಡುವಂಥವುಗಳು ಹೃದಯದೊಳಗಿಂದ ಬಂದು ಮನುಷ್ಯನನ್ನು ಹೊಲೆ ಮಾಡುತ್ತವೆ.
- 19 ಯಾಕಂದರೆ ಹೃದಯದೊಳಗಿಂದ ಕೆಟ್ಟ ಆಲೋಚನೆಗಳು, ಕೊಲೆಗಳು, ಹಾದರಗಳು, ಜಾರತ್ವ ಗಳು, ಕಳ್ಳತನಗಳು, ಸುಳ್ಳುಸಾಕ್ಷಿ, ದೇವ ದೂಷಣೆಗಳು ಹೊರಗೆ ಬರುತ್ತವೆ.
- 20 ಇಂಥವುಗಳೇ ಮನುಷ್ಯನನ್ನು ಹೊಲೆಮಾಡುತ್ತವೆ; ಆದರೆ ಕೈತೊಳಕೊಳ್ಳದೆ ಊಟ ಮಾಡುವದು ಮನುಷ್ಯನನ್ನು ಹೊಲೆಮಾಡುವದಿಲ್ಲ ಅಂದನು.
- 21 ತರುವಾಯ ಯೇಸು ಅಲ್ಲಿಂದ ಹೊರಟು ತೂರ್ ಸೀದೋನ್ ತೀರಗಳಿಗೆ ಬಂದನು.
- 22 ಆಗ ಇಗೋ, ಕಾನಾನ್ಯಳಾದ ಒಬ್ಬ ಸ್ತ್ರೀಯು ಅದೇ ಪ್ರಾಂತ್ಯಗಳಿಂದ ಬಂದು ಆತನಿಗೆ--ಓ ಕರ್ತನೇ, ದಾವೀದನ ಕುಮಾ ರನೇ, ನನ್ನ ಮೇಲೆ ಕರುಣೆಯಿಡು; ನನ್ನ ಮಗಳು ದೆವ್ವದಿಂದ ಬಹಳವಾಗಿ ಸಂಕಟಪಡುತ್ತಿದ್ದಾಳೆ ಎಂದು ಕೂಗಿಕೊಂಡಳು.
- 23 ಆದರೆ ಆತನು ಆಕೆಗೆ ಒಂದು ಮಾತೂ ಉತ್ತರ ಕೊಡಲಿಲ್ಲ; ಆಗ ಆತನ ಶಿಷ್ಯರು ಬಂದು--ಆಕೆಯನ್ನು ಕಳುಹಿಸಿಬಿಡು, ಯಾಕಂದರೆ ಆಕೆಯು ನಮ್ಮ ಹಿಂದೆ ಕೂಗಿಕೊಂಡು ಬರುತ್ತಾಳೆ ಎಂದು ಆತನನ್ನು ಬೇಡಿಕೊಂಡರು.
- 24 ಆದರೆ ಆತನು ಪ್ರತ್ಯು ತ್ತರವಾಗಿ-- ತಪ್ಪಿಸಿಕೊಂಡ ಕುರಿಗಳಾಗಿರುವ ಇಸ್ರಾ ಯೇಲಿನ ಮನೆತನದವರ ಬಳಿಗೆ ಮಾತ್ರ ನಾನು ಕಳುಹಿಸಲ್ಪಟ್ಟಿದ್ದೇನೆ ಅಂದನು.
- 25 ಆಗ ಆಕೆಯು ಬಂದು ಆತನನ್ನು ಆರಾಧಿಸಿ--ಕರ್ತನೇ, ನನಗೆ ಸಹಾಯ ಮಾಡು ಎಂದು ಕೇಳಿಕೊಂಡಳು.
- 26 ಆದರೆ ಆತನು ಪ್ರತ್ಯುತ್ತರವಾಗಿ--ಮಕ್ಕಳ ರೊಟ್ಟಿಯನ್ನು ತಕ್ಕೊಂಡು ನಾಯಿಗಳಿಗೆ ಹಾಕುವದು ಸರಿಯಲ್ಲ ಎಂದು ಹೇಳಿ ದನು.
- 27 ಆಗ ಆಕೆಯು--ಕರ್ತನೇ, ಅದು ನಿಜವೇ; ಆದರೂ ನಾಯಿಗಳು ತಮ್ಮ ಯಜಮಾನರ ಮೇಜಿನಿಂದ ಬೀಳುವ ರೊಟ್ಟಿ ತುಂಡುಗಳನ್ನು ತಿನ್ನು ತ್ತವಲ್ಲಾ ಅಂದಳು.
- 28 ಆಗ ಯೇಸು ಪ್ರತ್ಯುತ್ತರವಾಗಿ ಆಕೆಗೆ--ಓ ಸ್ತ್ರೀಯೇ, ನಿನ್ನ ನಂಬಿಕೆಯು ದೊಡ್ಡದು; ನೀನು ಇಷ್ಟಪಟ್ಟಂತೆಯೇ ನಿನಗಾಗಲಿ ಎಂದು ಹೇಳಿ ದನು. ಮತ್ತು ಆಕೆಯ ಮಗಳು ಅದೇ ಗಳಿಗೆಯಲ್ಲಿ ಸ್ವಸ್ಥಳಾದಳು.
- 29 ಇದಾದ ಮೇಲೆ ಯೇಸು ಅಲ್ಲಿಂದ ಹೊರಟು ಗಲಿಲಾಯ ಸಮುದ್ರದ ಸಮಾಪಕ್ಕೆ ಬಂದನು; ಮತು ಆತನು ಬೆಟ್ಟವನ್ನು ಹತ್ತಿ ಅಲ್ಲಿ ಕೂತುಕೊಂಡನು.
- 30 ಆಗ ಜನರ ದೊಡ್ಡ ಸಮೂಹಗಳು ಕುಂಟರನ್ನು ಕುರುಡರನ್ನು ಮೂಕರನ್ನು ಊನವಾದವರನ್ನು ಮತ್ತು ಬೇರೆ ಅನೇಕರನ್ನು ತಮ್ಮೊಂದಿಗೆ ಕರಕೊಂಡು ಯೇಸು ವಿನ ಪಾದಗಳ ಬಳಿಗೆ ತಂದರು. ಮತ್ತು ಆತನು ಅವರನ್ನು ಸ್ವಸ್ಥಪಡಿಸಿದನು.
- 31 ಮೂಕರು ಮಾತನಾಡು ವದನ್ನೂ ಊನವಾದವರು ಸ್ವಸ್ಥರಾಗಿರುವದನ್ನೂ ಕುಂಟರು ನಡೆದಾಡುವದನ್ನೂ ಕುರುಡರು ನೋಡುವ ದನ್ನೂ ಜನಸಮೂಹದವರು ಕಂಡು ಆಶ್ಚರ್ಯದಿಂದ ಇಸ್ರಾಯೇಲಿನ ದೇವರನ್ನು ಮಹಿಮೆಪಡಿಸಿದರು.
- 32 ತರುವಾಯ ಯೇಸು ತನ್ನ ಶಿಷ್ಯರನ್ನು ಕರೆದು-- ನಾನು ಈ ಜನಸಮೂಹವನ್ನು ಕನಿಕರಿಸುತ್ತೇನೆ; ಯಾಕ ಂದರೆ ಈಗ ಬಿಟ್ಟೂಬಿಡದೆ ಮೂರು ದಿನಗಳಿಂದ ಅವರು ನನ್ನೊಂದಿಗಿದ್ದಾರೆ; ಮತ್ತು ಅವರಿಗೆ ತಿನ್ನುವದಕ್ಕೆ ಏನೂ ಇಲ್ಲ; ದಾರಿಯಲ್ಲಿ ಅವರು ಬಳಲಿಹೋದಾರೆಂದು ಅವ ರನ್ನು ಉಪವಾಸವಾಗಿ ಕಳುಹಿಸು
- 33 ಅದಕ್ಕೆ ಆತನ ಶಿಷ್ಯರು ಆತನಿಗೆ--ಇಂಥಾ ದೊಡ್ಡ ಸಮೂಹವನ್ನು ತೃಪ್ತಿಪಡಿಸುವಂತೆ ಈ ಅರಣ್ಯದಲ್ಲಿ ನಮಗೆ ಎಲ್ಲಿಂದ ರೊಟ್ಟಿಯು ಸಿಕ್ಕೀತು ಅಂದರು.
- 34 ಆಗ ಯೇಸು ಅವರಿಗೆ--ನಿಮ್ಮ ಹತ್ತಿರ ಎಷ್ಟು ರೊಟ್ಟಿಗಳಿವೆ ಎಂದು ಕೇಳಿದನು. ಅವರು--ಏಳು ರೊಟ್ಟಿಗಳು ಮತ್ತು ಕೆಲವು ಚಿಕ್ಕ ಮಾನುಗಳಿವೆ ಅಂದರು.
- 35 ಆಗ ಜನಸಮೂಹವು ನೆಲದ ಮೇಲೆ ಕೂತುಕೊಳ್ಳ ಬೇಕೆಂದು ಆತನು ಅಪ್ಪಣೆಕೊಟ್ಟನು.
- 36 ಆತನು ಆ ಏಳು ರೊಟ್ಟಿಗಳನ್ನು ಮತ್ತು ಮಾನುಗಳನ್ನು ತಕ್ಕೊಂಡು ಸ್ತೋತ್ರಮಾಡಿ ಅವುಗಳನ್ನು ಮುರಿದು ತನ್ನ ಶಿಷ್ಯರಿಗೆ ಕೊಟ್ಟನು ಮತ್ತು ಶಿಷ್ಯರು ಜನಸಮೂಹಕ್ಕೆ ಕೊಟ್ಟರು.
- 37 ಅವರೆಲ್ಲರೂ ಊಟಮಾಡಿ ತೃಪ್ತರಾದರು; ಮತ್ತು ಅವರು ಮಿಕ್ಕ ತುಂಡುಗಳನ್ನು ಕೂಡಿಸಲಾಗಿ ಏಳು ಪುಟ್ಟಿಗಳು ತುಂಬಿದವು.
- 38 ಊಟಮಾಡಿದವರು ಸ್ತ್ರೀಯರೂ ಮಕ್ಕಳೂ ಅಲ್ಲದೆ ನಾಲ್ಕು ಸಾವಿರ ಗಂಡಸರು.
- 39 ತರುವಾಯ ಆತನು ಜನಸಮೂಹವನ್ನು ಕಳುಹಿಸಿಬಿಟ್ಟು ದೋಣಿಯನ್ನು ಹತ್ತಿ ಮಗ್ದಲ ತೀರಕ್ಕೆ ಬಂದನು.
Matthew 15
- Details
- Parent Category: New Testament
- Category: Matthew
ಮತ್ತಾಯನು ಅಧ್ಯಾಯ 15