wheel

AJC Publications and Media Portal

 

But the Comforter, which is the Holy Ghost, whom the Father will send in my name, he shall teach you all things,
and bring all things to your remembrance, whatsoever I have said unto you. John 14:26


ಮತ್ತಾಯನುಅಧ್ಯಾಯ 24
  • 1 ತರುವಾಯ ಯೇಸು ದೇವಾಲಯದಿಂದ ಹೊರಟುಹೋದ ಮೇಲೆ ಆತನ ಶಿಷ್ಯರು ಆ ದೇವಾಲಯದ ಕಟ್ಟಡಗಳನ್ನು ತೋರಿಸುವದಕ್ಕಾಗಿ ಆತನ ಬಳಿಗೆ ಬಂದರು.
  • 2 ಆಗ ಯೇಸು ಅವರಿಗೆ--ಇವುಗಳನ್ನೆಲ್ಲಾ ನೀವು ನೋಡುತ್ತೀರಲ್ಲಾ. ಎಲ್ಲಾ ಕೆಡವ ಲ್ಪಡದು ಕಲ್ಲಿನ ಮೇಲೆ ಕಲ್ಲು ಒಂದು ಇಲ್ಲಿ ಬಿಡಲ್ಪ ಡುವದಿಲ್ಲ ಎಂದು ನಾನು ನಿಮಗೆ ನಿಜವಾಗಿ ಹೇಳು ತ್ತೇನೆ ಅಂದನು.
  • 3 ಆತನು ಎಣ್ಣೇಮರಗಳ ಗುಡ್ಡದ ಮೇಲೆ ಕೂತುಕೊಂಡಾಗ ಶಿಷ್ಯರು ಪ್ರತ್ಯೇಕವಾಗಿ ಆತನ ಬಳಿಗೆ ಬಂದು--ಇವು ಯಾವಾಗ ಆಗುವವು? ಮತ್ತು ನಿನ್ನ ಬರೋಣಕ್ಕೂ ಲೋಕವು ಅಂತ್ಯವಾಗುವದಕ್ಕೂ ಸೂಚನೆ ಏನು? ನಮಗೆ ಹೇಳು ಎಂದು ಕೇಳಿದರು.
  • 4 ಆಗ ಯೇಸು ಪ್ರತ್ಯುತ್ತರವಾಗಿ ಅವರಿಗೆ--ಯಾವನಾ ದರೂ ನಿಮ್ಮನ್ನು ಮೋಸಗೊಳಿಸದಂತೆ ಎಚ್ಚರಿಕೆ ಯಿಂದಿರ್ರಿ.
  • 5 ಯಾಕಂದರೆ ನನ್ನ ಹೆಸರಿನಲ್ಲಿ ಅನೇಕರು ಬಂದು--ನಾನು ಕ್ರಿಸ್ತನು ಎಂದು ಹೇಳಿ ಅನೇಕರನ್ನು ಮೋಸಗೊಳಿಸುವರು.
  • 6 ಯುದ್ಧಗಳನ್ನೂ ಯುದ್ಧಗಳ ಸುದ್ದಿಗಳನ್ನೂ ನೀವು ಕೇಳುವಿರಿ. ಕಳವಳಗೊಳ್ಳದಂತೆ ನೀವು ನೋಡಿಕೊಳ್ಳಿರಿ; ಯಾಕಂದರೆ ಇವೆಲ್ಲವುಗಳು ಸಂಭವಿಸುವದು ಅಗತ್ಯ; ಆದರೆ ಇದು ಇನ್ನೂ ಅಂತ್ಯವಲ್ಲ.
  • 7 ಯಾಕಂದರೆ ಜನಾಂಗಕ್ಕೆ ವಿರೋಧವಾಗಿ ಜನಾಂಗವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು; ಅಲ್ಲಲ್ಲಿ ಬರಗಳು, ಘೋರವ್ಯಾಧಿಗಳು ಮತ್ತು ಭೂಕಂಪಗಳು ಆಗುವವು.
  • 8 ಇವೆಲ್ಲವುಗಳು ಸಂಕಟಗಳ ಆರಂಭವು.
  • 9 ಆಗ ನಿಮ್ಮನ್ನು ಸಂಕಟಪಡಿ ಸುವದಕ್ಕಾಗಿ ಒಪ್ಪಿಸುವರು; ಮತ್ತು ನಿಮ್ಮನ್ನು ಕೊಲ್ಲು ವರು. ಇದಲ್ಲದೆ ನನ್ನ ಹೆಸರಿನ ನಿಮಿತ್ತವಾಗಿ ಎಲ್ಲಾ ಜನಾಂಗಗಳವರು ನಿಮ್ಮನ್ನು ಹಗೆ ಮಾಡುವರು.
  • 10 ಆಗ ಅನೇಕರು ಅಭ್ಯಂತರಪಟ್ಟು ಒಬ್ಬರನ್ನೊಬ್ಬರು ಹಿಡುಕೊಡುವರು ಮತ್ತು ಒಬ್ಬರನ್ನೊಬ್ಬರು ಹಗೆಮಾಡು ವರು.
  • 11 ಇದಲ್ಲದೆ ಬಹುಮಂದಿ ಸುಳ್ಳು ಪ್ರವಾದಿಗಳು ಎದ್ದು ಅನೇಕರನ್ನು ಮೋಸಗೊಳಿ ಸುವರು.
  • 12 ದುಷ್ಟತನ ಹೆಚ್ಚಾಗುವದರಿಂದ ಬಹಳ ಜನರ ಪ್ರೀತಿಯು ತಣ್ಣಗಾಗುವದು.
  • 13 ಆದರೆ ಕಡೇವರೆಗೆ ತಾಳುವವನೇ ರಕ್ಷಿಸಲ್ಪಡುವನು.
  • 14 ರಾಜ್ಯದ ಈ ಸುವಾರ್ತೆಯು ಲೋಕದಲ್ಲೆಲ್ಲಾ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವದು; ತರುವಾಯ ಅಂತ್ಯಬರುವದು.
  • 15 ಆದದರಿಂದ ಪ್ರವಾದಿಯಾದ ದಾನಿಯೇಲನಿಂದ ಹೇಳಲ್ಪಟ್ಟ ಹಾಳುಮಾಡುವ ಅಸಹ್ಯವು ಪರಿಶುದ್ಧ ಸ್ಥಳದಲ್ಲಿ ನಿಂತಿರುವದನ್ನು ನೀವು ನೋಡುವಾಗ (ಓದುವವನು ಗ್ರಹಿಸಲಿ)
  • 16 ಯೂದಾಯದಲ್ಲಿ ದ್ದವರು ಬೆಟ್ಟಗಳಿಗೆ ಓಡಿ ಹೋಗಲಿ;
  • 17 ಮಾಳಿಗೆಯ ಮೇಲಿರುವವನು ತನ್ನ ಮನೆಯೊಳಗಿಂದ ಏನಾದರೂ ತಕ್ಕೊಳ್ಳುವದಕ್ಕಾಗಿ ಕೆಳಗೆ ಇಳಿಯದಿರಲಿ;
  • 18 ಇಲ್ಲವೆ ಹೊಲದಲ್ಲಿರುವವನು ತನ್ನ ಬಟ್ಟೆಗಳನ್ನು ತಕ್ಕೊಳ್ಳುವ ದಕ್ಕಾಗಿ ಹಿಂತಿರುಗದೆ ಇರಲಿ.
  • 19 ಆ ದಿವಸಗಳಲ್ಲಿ ಗರ್ಭಿಣಿಯರಿಗೂ ಮೊಲೆಕುಡಿಸುವ ಕೂಸುಗಳಿದ್ದ ವರಿಗೂ ಅಯ್ಯೋ!
  • 20 ಆದರೆ ನಿಮ್ಮ ಪಲಾಯನವು ಚಳಿಗಾಲದಲ್ಲಾಗಲೀ ಸಬ್ಬತ್ತಿನ ದಿನದಲ್ಲಾಗಲೀ ಆಗದಂತೆ ಪ್ರಾರ್ಥಿಸಿರಿ.
  • 21 ಅಂಥ ಮಹಾ ಸಂಕಟವು ಲೋಕಾದಿಯಿಂದ ಇಂದಿನವರೆಗೂ ಆಗಲಿಲ್ಲ, ಆಮೇಲೆ ಎಂದಿಗೂ ಆಗುವದಿಲ್ಲ.
  • 22 ಆ ದಿವಸಗಳು ಕಡಿಮೆ ಮಾಡಲ್ಪಡದಿದ್ದರೆ ಯಾವನೂ ಉಳಿಯು ವದಿಲ್ಲ; ಆದರೆ ಆಯಲ್ಪಟ್ಟವರಿಗಾಗಿ ಆ ದಿವಸಗಳು ಕಡಿಮೆ ಮಾಡಲ್ಪಡುವವು.
  • 23 ಆಗ ಯಾರಾದರೂ ನಿಮಗೆ--ಇಗೋ, ಕ್ರಿಸ್ತನು ಇಲ್ಲಿದ್ದಾನೆ ಇಲ್ಲವೆ ಅಲ್ಲಿದ್ದಾನೆ ಎಂದು ಹೇಳಿದರೆ ಅದನ್ನು ನಂಬಬೇಡಿರಿ.
  • 24 ಯಾಕಂದರೆ ಸುಳ್ಳು ಕ್ರಿಸ್ತರು ಮತ್ತು ಸುಳ್ಳು ಪ್ರವಾದಿಗಳು ಎದ್ದು ಸಾಧ್ಯವಾದರೆ ಆಯಲ್ಪಟ್ಟವರನ್ನು ಸಹ ಮೋಸಗೊಳಿಸುವಂತೆ ದೊಡ್ಡ ಸೂಚಕ ಕಾರ್ಯ ಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡಿ ತೋರಿಸು ವರು.
  • 25 ಇಗೋ, ಮುಂದಾಗಿ ನಾನು ನಿಮಗೆ ಹೇಳಿದ್ದೇನೆ.
  • 26 ಆದಕಾರಣ ಅವರು ನಿಮಗೆ--ಇಗೋ, ಆತನು ಅಡವಿಯಲ್ಲಿದ್ದಾನೆಂದು ಹೇಳಿದರೆ ಹೋಗಬೇಡಿರಿ; ಇಗೋ, ಆತನು ಗುಪ್ತವಾದ ಕೋಣೆಗಳಲ್ಲಿದ್ದಾನೆಂದು ಹೇಳಿದರೆ ಅದನ್ನು ನಂಬ ಬೇಡಿರಿ.
  • 27 ಯಾಕಂದರೆ ಮಿಂಚು ಪೂರ್ವದಿಂದ ಹೊರಟು ಬಂದು ಪಶ್ಚಿಮದವರೆಗೆ ಹೊಳೆಯು ವಂತೆಯೇ ಮನುಷ್ಯಕುಮಾರನ ಬರೋಣವೂ ಇರು ವದು.
  • 28 ಯಾಕಂದರೆ ಹೆಣ ಇದ್ದಲ್ಲಿ ಹದ್ದುಗಳು ಕೂಡಿಕೊಳ್ಳುವವು.
  • 29 ಆ ಸಂಕಟದ ದಿವಸಗಳು ಮುಗಿದ ತಕ್ಷಣವೇ ಸೂರ್ಯನು ಕತ್ತಲಾಗುವನು; ಚಂದ್ರನು ತನ್ನ ಬೆಳಕು ಕೊಡದೆ ಇರುವನು; ನಕ್ಷತ್ರಗಳು ಆಕಾಶದಿಂದ ಬೀಳುವವು ಆಕಾಶದ ಶಕ್ತಿಗಳು ಕದಲಿಸಲ್ಪಡುವವು.
  • 30 ಆಗ ಮನುಷ್ಯಕುಮಾರನ ಸೂಚನೆಯು ಆಕಾಶದಲ್ಲಿ ಕಾಣುವದು; ಭೂಮಿಯ ಎಲ್ಲಾ ಗೋತ್ರದವರು ಗೋಳಾಡುವರು. ಮತ್ತು ಮನುಷ್ಯಕುಮಾರನು ಆಕಾಶದ ಮೇಘಗಳಲ್ಲಿ ಶಕ್ತಿಯೊಡನೆಯೂ ಮಹಾ ಪ್ರಭಾವದೊಂದಿಗೂ ಬರುವದನ್ನು ಅವರು ನೋಡು ವರು.
  • 31 ತರುವಾಯ ಆತನು ತನ್ನ ದೂತರನ್ನು ತುತೂರಿಯ ಮಹಾಶಬ್ದದೊಂದಿಗೆ ಕಳುಹಿಸುವನು; ಆಗ ಅವರು ಆತನಿಂದ ಆಯಲ್ಪಟ್ಟವರನ್ನು ನಾಲ್ಕು ದಿಕ್ಕುಗಳಿಂದ ಆಕಾಶದ ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೂ ಒಟ್ಟುಗೂಡಿಸುವರು.
  • 32 ಈಗ ಅಂಜೂರ ಮರದ ಸಾಮ್ಯದಿಂದ ಕಲಿ ಯಿರಿ; ಆದರ ಕೊಂಬೆಯು ಇನ್ನೂ ಎಳೆಯದಾಗಿದ್ದು ಎಲೆಗಳನ್ನು ಬಿಡುವಾಗ ಬೇಸಿಗೆಯು ಹತ್ತಿರವಾಯಿ ತೆಂದು ನೀವು ತಿಳಿದುಕೊಳ್ಳುವಿರಿ;
  • 33 ಅದರಂತೆಯೇ ನೀವು ಇವುಗಳನ್ನೆಲ್ಲಾ ನೋಡುವಾಗ ಅದು ಸವಿಾಪ ದಲ್ಲಿ ಬಾಗಲುಗಳಲ್ಲಿಯೇ ಇದೆಯೆಂದು ತಿಳು ಕೊಳ್ಳಿರಿ.
  • 34 ಇವೆಲ್ಲವುಗಳು ನೇರವೇರುವ ವರೆಗೆ ಈ ಸಂತತಿಯು ಅಳಿದುಹೋಗುವದೇ ಇಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
  • 35 ಆಕಾಶವೂ ಭೂಮಿಯೂ ಅಳಿದುಹೋಗುವವು; ಆದರೆ ನನ್ನ ಮಾತುಗಳು ಅಳಿದುಹೋಗುವದೇ ಇಲ್ಲ.
  • 36 ಆದರೆ ಆ ದಿನವಾಗಲೀ ಗಳಿಗೆಯಾಗಲೀ ನನ್ನ ತಂದೆಗೆ ಮಾತ್ರವೇ ಹೊರತು ಮತ್ತಾರಿಗೂ ಪರಲೋಕದ ದೂತರಿಗೂ ತಿಳಿಯದು.
  • 37 ಆದರೆ ನೋಹನ ದಿವಸಗಳು ಇದ್ದಂತೆಯೇ ಮನುಷ್ಯ ಕುಮಾರನ ಬರೋಣವೂ ಇರುವದು.
  • 38 ನೋಹನು ನಾವೆಯಲ್ಲಿ ಸೇರಿದ ದಿವಸದ ವರೆಗೆ ಪ್ರಳಯವು ಬರುವದಕ್ಕಿಂತ ಮುಂಚಿನ ಆ ದಿವಸಗಳಲ್ಲಿ ಜನರು ತಿನ್ನುತ್ತಾ ಕುಡಿಯುತ್ತಾ ಮದುವೆ ಮಾಡಿಕೊಳ್ಳುತ್ತಾ ಮದುವೆ ಮಾಡಿಕೊಡುತ್ತಾ ಇದ್ದರು.
  • 39 ಪ್ರಳಯವು ಬಂದು ಅವರನ್ನು ಬಡುಕೊಂಡು ಹೊಗುವವರೆಗೂ ಅವರಿಗೆ ತಿಳಿದಿರಲಿಲ್ಲ; ಹಾಗೆಯೇ ಮನುಷ್ಯ ಕುಮಾರನ ಬರೋಣವೂ ಇರುವದು.
  • 40 ಆಗ ಇಬ್ಬರು ಹೊಲದಲ್ಲಿರುವರು; ಒಬ್ಬನು ತೆಗೆಯಲ್ಪಡು ವನು; ಮತ್ತೊಬ್ಬನು ಬಿಡಲ್ಪಡುವನು.
  • 41 ಇಬ್ಬರು ಸ್ತ್ರೀಯರು ಬೀಸುತ್ತಿರುವಾಗ ಒಬ್ಬಳು ತೆಗೆಯಲ್ಪಡು ವಳು, ಮತ್ತೊಬ್ಬಳು ಬಿಡಲ್ಪಡುವಳು.
  • 42 ನಿಮ್ಮ ಕರ್ತನು ಯಾವ ಗಳಿಗೆಯಲ್ಲಿ ಬರು ತ್ತಾನೋ ನಿಮಗೆ ಗೊತ್ತಿಲ್ಲವಾದದರಿಂದ ಎಚ್ಚರ ವಾಗಿರ್ರಿ.
  • 43 ಕಳ್ಳನು ಯಾವ ಗಳಿಗೆಯಲ್ಲಿ ಬರುತ್ತಾ ನೆಂದು ಮನೇ ಯಜಮಾನನು ತಿಳಿದಿದ್ದರೆ ಅವನು ತನ್ನ ಮನೆಯು ಕನ್ನಾಕೊರೆಯದಂತೆ ಕಾಯುತ್ತಿದ್ದ ನೆಂದು ನೀವು ತಿಳಿದುಕೊಳ್ಳಿರಿ.
  • 44 ಆದಕಾರಣ ನೀವು ಸಹ ಸಿದ್ಧವಾಗಿರ್ರಿ; ಯಾಕಂದರೆ ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ.
  • 45 ಹಾಗಾದರೆ ತನ್ನ ಮನೆಯಲ್ಲಿದ್ದವರಿಗೆ ತಕ್ಕ ಕಾಲ ದಲ್ಲಿ ಆಹಾರ ಕೊಡುವಂತೆ ಅವರ ಮೇಲೆ ತನ್ನ ಯಜಮಾನನು ನೇಮಿಸಿದ ಅಧಿಕಾರಿಯೂ ನಂಬಿಗಸ್ತನೂ ಜ್ಞಾನಿಯೂ ಆದ ಸೇವಕನು ಯಾರು?
  • 46 ಯಜಮಾನನು ಬಂದು ಯಾವ ಸೇವಕನು ಹಾಗೆ ಮಾಡುವದನ್ನು ನೋಡುವನೋ ಆ ಸೇವಕನೇ ಧನ್ಯನು.
  • 47 ಅವನನ್ನು ಆತನು ತನ್ನ ಎಲ್ಲಾ ಆಸ್ತಿಯ ಮೇಲೆ ನೇಮಿಸುವನೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
  • 48 ಆದರೆ ಆ ಕೆಟ್ಟ ಸೇವಕನು ತನ್ನ ಹೃದಯದಲ್ಲಿ--ನನ್ನ ಯಜಮಾನನು ಬರುವದಕ್ಕೆ ತಡಮಾಡುತ್ತಾನೆ ಎಂದು ಅಂದುಕೊಂಡು
  • 49 ತನ್ನ ಜೊತೇ ಸೇವಕರನ್ನು ಹೊಡೆಯುತ್ತಾ ಕುಡುಕರ ಸಂಗಡ ತಿನ್ನುವದಕ್ಕೂ ಕುಡಿಯುವದಕ್ಕೂ ಪ್ರಾರಂಭಿಸು ವದಾದರೆ
  • 50 ಅವನು ನಿರೀಕ್ಷಿಸದೆ ಇರುವ ದಿನದಲ್ಲಿ ಇಲ್ಲವೆ ನೆನಸದ ಗಳಿಗೆಯಲ್ಲಿ ಆ ಸೇವಕನ ಯಜಮಾ ನನು ಬಂದು
  • 51 ಅವನನ್ನು ಛೇದಿಸಿ ಕಪಟಿಗಳೊಂದಿಗೆ ಅವನ ಪಾಲನ್ನು ನೇಮಿಸುವನು; ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು.