- 1 ಯೇಸು ಈ ಮಾತುಗಳನ್ನೆಲ್ಲಾ ಹೇಳಿ ಮುಗಿಸಿದ ನಂತರ ತನ್ನ ಶಿಷ್ಯರಿಗೆ--
- 2 ಎರಡು ದಿವಸಗಳಾದ ಮೇಲೆ ಪಸ್ಕ ಹಬ್ಬ ಇರುವ ದೆಂದು ನೀವು ಬಲ್ಲಿರಿ. ಆಗ ಮನುಷ್ಯಕುಮಾರನು ಶಿಲುಬೆಗೆ ಹಾಕಲ್ಪಡುವದಕ್ಕಾಗಿ ಹಿಡಿದುಕೊಡಲ್ಪಡು ವನು ಅಂದನು.
- 3 ಆಗ ಪ್ರಧಾನ ಯಾಜಕರೂ ಶಾಸ್ತ್ರಿಗಳೂ ಜನರ ಹಿರಿಯರೂ ಒಟ್ಟಾಗಿ ಸೇರಿ ಕಾಯಫನೆಂಬ ಮಹಾಯಾಜಕನ ಭವನಕ್ಕೆ ಬಂದು
- 4 ತಾವು ಕುಯುಕ್ತಿಯಿಂದ ಯೇಸುವನ್ನು ಹಿಡಿದು ಕೊಲ್ಲಬೇಕೆಂದು ಆಲೋಚನೆ ಮಾಡಿಕೊಂಡರು.
- 5 ಆದರೆ ಅವರು ಜನರಲ್ಲಿ ಗದ್ದಲವಾದೀತು ಹಬ್ಬದಲ್ಲಿ ಬೇಡ ಅಂದರು.
- 6 ಯೇಸು ಬೇಥಾನ್ಯದಲ್ಲಿ ಕುಷ್ಠರೋಗಿಯಾದ ಸೀಮೋನನ ಮನೆಯಲ್ಲಿದ್ದನು.
- 7 ಆತನು ಅಲ್ಲಿ ಊಟಕ್ಕೆ ಕೂತಿದ್ದಾಗ ಒಬ್ಬ ಸ್ತ್ರೀಯು ಅತಿಶ್ರೇಷ್ಠವಾದ ತೈಲದ ಭರಣಿಯೊಂದಿಗೆ ಆತನ ಬಳಿಗೆ ಬಂದು ಅದನ್ನು ಆತನ ತಲೆಯ ಮೇಲೆ ಹೊಯಿದಳು.
- 8 ಆದರೆ ಆತನ ಶಿಷ್ಯರು ಇದನ್ನು ನೋಡಿ ಕೋಪ ಗೊಂಡು--ಈ ನಷ್ಟವು ಯಾವ ಉದ್ದೇಶಕ್ಕೆ?
- 9 ಯಾಕಂದರೆ ಈ ತೈಲವನ್ನು ಹೆಚ್ಚಿನ ಹಣಕ್ಕೆ ಮಾರಿ ಬಡವರಿಗೆ ಕೊಡಬಹುದಾಗಿತ್ತಲ್ಲಾ ಅಂದರು.
- 10 ಆದರೆ ಯೇಸು ಅದನ್ನು ತಿಳಿದವನಾಗಿ ಅವರಿಗೆ --ನೀವು ಯಾಕೆ ಈ ಸ್ತ್ರೀಯನ್ನು ತೊಂದರೆಪಡಿಸುತ್ತೀರಿ? ಯಾಕಂದರೆ ಈಕೆಯು ನನಗಾಗಿ ಒಳ್ಳೇಕಾರ್ಯವನ್ನು ಮಾಡಿದ್ದಾಳೆ;
- 11 ಬಡವರು ಯಾವಾಗಲೂ ನಿಮ್ಮ ಸಂಗಡ ಇರುತ್ತಾರೆ; ಆದರೆ ನಾನು ಯಾವಾಗಲೂ ನಿಮ್ಮ ಸಂಗಡ ಇರುವದಿಲ್ಲ.
- 12 ಇದಲ್ಲದೆ ಈಕೆಯು ಈ ತೈಲವನ್ನು ನನ್ನ ದೇಹದ ಮೇಲೆ ಹೊಯಿದದ್ದ ರಿಂದ ನನ್ನ ಹೂಣುವಿಕೆಗಾಗಿ ಇದನ್ನು ಮಾಡಿದ್ದಾಳೆ ಅಂದನು.
- 13 ನಾನು ನಿಮಗೆ ನಿಜವಾಗಿ ಹೇಳುವದೇ ನಂದರೆ--ಲೋಕದಲ್ಲೆಲ್ಲಾ ಎಲ್ಲೆಲ್ಲಿ ಈ ಸುವಾರ್ತೆಯು ಸಾರಲ್ಪಡುವದೋ ಅಲ್ಲೆಲ್ಲಾ ಈ ಸ್ತ್ರೀಯು ಮಾಡಿದ್ದು ಸಹ ಈಕೆಯ ಜ್ಞಾಪಕಾರ್ಥವಾಗಿ ಹೇಳಲ್ಪಡುವದು ಅಂದನು.
- 14 ಆಗ ಹನ್ನೆರಡು ಮಂದಿಯಲ್ಲಿ ಒಬ್ಬನಾದ ಯೂದ ಇಸ್ಕರಿಯೋತ್ ಎಂಬವನು ಪ್ರಧಾನ ಯಾಜಕರ ಬಳಿಗೆ ಹೋಗಿ--
- 15 ನಾನು ಆತನನ್ನು ನಿಮಗೆ ಒಪ್ಪಿಸಿಕೊಟ್ಟರೆ ನೀವು ನನಗೆ ಏನು ಕೊಡುತ್ತೀರಿ ಅಂದನು. ಆಗ ಅವರು ಅವನೊಂದಿಗೆ ಮೂವತ್ತು ಬೆಳ್ಳಿಯ ನಾಣ್ಯಗಳಿಗೆ ಒಪ್ಪಂದ ಮಾಡಿಕೊಂಡರು.
- 16 ಅಂದಿನಿಂದ ಅವನು ಆತನನ್ನು ಹಿಡಿದುಕೊಡು ವದಕ್ಕೆ ಸಂದರ್ಭವನ್ನು ಹುಡುಕುತ್ತಿದ್ದನು.
- 17 ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿನದಲ್ಲಿ ಶಿಷ್ಯರು ಯೇಸುವಿನ ಬಳಿಗೆ ಬಂದು--ಪಸ್ಕದ ಊಟಮಾಡುವದಕ್ಕೆ ನಾವು ನಿನಗಾಗಿ ಎಲ್ಲಿ ಸಿದ್ಧಮಾಡಬೇಕೆಂದು ನೀನು ಕೋರುತ್ತೀ ಎಂದು ಆತನನ್ನು ಕೇಳಿದರು.
- 18 ಅದಕ್ಕೆ ಆತನು--ನೀವು ಪಟ್ಟಣದೊಳಕ್ಕೆ ಇಂಥವನ ಬಳಿಗೆ ಹೋಗಿ-- ನನ್ನ ಸಮಯವು ಸವಿಾಪವಾಗಿದೆ; ನನ್ನ ಶಿಷ್ಯರ ಜೊತೆಗೆ ನಿನ್ನ ಮನೆಯಲ್ಲಿ ಪಸ್ಕವನ್ನು ಆಚರಿಸುತ್ತೇನೆಂದು ಬೋಧಕನು ಹೇಳುತ್ತಾನೆ ಎಂಬದಾಗಿ ಅವನಿಗೆ ಹೇಳಿರಿ ಅಂದನು.
- 19 ಯೇಸು ಅವರಿಗೆ ಆಜ್ಞಾಪಿಸಿದಂತೆ ಶಿಷ್ಯರು ಪಸ್ಕವನ್ನು ಸಿದ್ಧಪಡಿಸಿದರು.
- 20 ಸಾಯಂಕಾಲ ವಾದಾಗ ಆತನು ಹನ್ನೆರಡು ಮಂದಿ ಶಿಷ್ಯರೊಂದಿಗೆ ಊಟಕ್ಕೆ ಕೂತುಕೊಂಡನು;
- 21 ಅವರು ಊಟಮಾಡು ತ್ತಿದ್ದಾಗ ಆತನು--ನಾನು ನಿಮಗೆ ನಿಜವಾಗಿ ಹೇಳು ತ್ತೇನೆ, ನಿಮ್ಮಲ್ಲಿ ಒಬ್ಬನು ನನ್ನನ್ನು ಹಿಡುಕೊಡುವನು ಅಂದನು.
- 22 ಆಗ ಅವರು ಬಹಳ ದುಃಖಪಟ್ಟು--ಕರ್ತನೇ, ಅವನು ನಾನೋ ಎಂದು ಅವರಲ್ಲಿ ಪ್ರತಿಯೊಬ್ಬನು ಆತನನ್ನು ಕೇಳಲಾರಂಭಿಸಿದರು.
- 23 ಅದಕ್ಕೆ ಆತನು ಪ್ರತ್ಯುತ್ತರವಾಗಿ--ನನ್ನ ಸಂಗಡ ಪಾತ್ರೆಯಲ್ಲಿ ಕೈ ಅದ್ದಿದವನೇ ನನ್ನನ್ನು ಹಿಡುಕೊಡುವನು.
- 24 ಮನುಷ್ಯಕುಮಾರನು ತನ್ನ ವಿಷಯದಲ್ಲಿ ಬರೆದಿರುವ ಪ್ರಕಾರ ಹೋಗುತ್ತಾನೆ; ಆದರೆ ಮನುಷ್ಯಕುಮಾರನು ಯಾವನಿಂದ ಹಿಡಿದು ಕೊಡಲ್ಪಡುತ್ತಾನೋ ಆ ಮನುಷ್ಯನಿಗೆ ಅಯ್ಯೋ! ಆ ಮನುಷ್ಯನು ಹುಟ್ಟದೆ ಹೋಗಿದ್ದರೆ ಅವನಿಗೆ ಒಳ್ಳೇದಾಗುತ್ತಿತ್ತು ಅಂದನು.
- 25 ಆಗ ಅವನನ್ನು ಹಿಡಿದುಕೊಡಬೇಕೆಂದಿದ್ದ ಯೂದನು--ಬೋಧಕನೇ, ಅವನು ನಾನೋ? ಅಂದದ್ದಕ್ಕೆ ಆತನು--ನೀನೇ ಹೇಳಿದ್ದೀ ಅಂದನು.
- 26 ಅವರು ಊಟಮಾಡುತ್ತಿರುವಾಗ ಯೇಸು ರೊಟ್ಟಿ ಯನ್ನು ತೆಗೆದುಕೊಂಡು ಅದನ್ನು ಆಶೀರ್ವದಿಸಿ ಮುರಿದು ತನ್ನ ಶಿಷ್ಯರಿಗೆ ಕೊಟ್ಟು--ತಕ್ಕೊಳ್ಳಿರಿ, ತಿನ್ನಿರಿ; ಇದು ನನ್ನ ದೇಹ ಅಂದನು.
- 27 ಮತ್ತು ಪಾತ್ರೆಯನ್ನು ತೆಗೆದುಕೊಂಡು ಸ್ತೋತ್ರ ಮಾಡಿ ಅವರಿಗೆ ಕೊಟ್ಟು --ನೀವೆಲ್ಲರೂ ಇದರಲ್ಲಿರುವದನ್ನು ಕುಡಿಯಿರಿ;
- 28 ಯಾಕಂದರೆ ಇದು ಬಹು ಜನರ ಪಾಪಗಳ ಪರಿಹಾರಕ್ಕೋಸ್ಕರ ಸುರಿಸಲ್ಪಡುವ ಹೊಸಒಡಂಬಡಿಕೆ ಯ ನನ್ನ ರಕ್ತವಾಗಿದೆ ಅಂದನು.
- 29 ಮತ್ತು ನಾನು ನಿಮಗೆ ಹೇಳುವದೇನಂದರೆ--ಇಂದಿನಿಂದ ನನ್ನ ತಂದೆಯ ರಾಜ್ಯದಲ್ಲಿ ನಿಮ್ಮೊಂದಿಗೆ ಹೊಸದಾಗಿ ಕುಡಿಯುವ ಆ ದಿನದವರೆಗೆ ನಾನು ಈ ದ್ರಾಕ್ಷಾರಸ ವನ್ನು ಕುಡಿಯುವದೇ ಇಲ್ಲ ಎಂದು ಹೇಳಿದನು.
- 30 ತರುವಾಯ ಅವರು ಕೀರ್ತನೆ ಹಾಡಿ ಎಣ್ಣೇ ಮರಗಳ ಗುಡ್ಡಕ್ಕೆ ಹೋದರು.
- 31 ಆಮೇಲೆ ಯೇಸು ಅವರಿಗೆ--ನೀವೆಲ್ಲರೂ ಈ ರಾತ್ರಿ ನನ್ನ ವಿಷಯದಲ್ಲಿ ಅಭ್ಯಂತರಪಡುವಿರಿ; ಯಾಕಂದರೆ-- ನಾನು ಕುರುಬನನ್ನು ಹೊಡೆಯುವೆನು; ಮಂದೆ ಯ ಕುರಿಗಳು ಚದರಿಹೋಗುವವು ಎಂದು ಬರೆದದೆ;
- 32 ಆದರೆ ನಾನು ಎದ್ದ ಮೇಲೆ ನಿಮಗಿಂತ ಮುಂಚಿತ ವಾಗಿ ಗಲಿಲಾಯಕ್ಕೆ ಹೋಗುವೆನು ಅಂದನು.
- 33 ಪೇತ್ರನು ಪ್ರತ್ಯುತ್ತರವಾಗಿ ಆತನಿಗೆ-- ಎಲ್ಲರೂ ನಿನ್ನ ವಿಷಯದಲ್ಲಿ ಅಭ್ಯಂತರಪಟ್ಟರೂ ನಾನು ಎಂದಿಗೂ ಅಭ್ಯಂತರಪಡುವದಿಲ್ಲ ಅಂದನು.
- 34 ಯೇಸು ಅವ ನಿಗೆ--ಈ ರಾತ್ರಿಯಲ್ಲಿ ಹುಂಜ ಕೂಗುವದಕ್ಕಿಂತ ಮುಂಚೆ ಮೂರು ಸಾರಿ ನನ್ನನ್ನು ಅಲ್ಲಗಳೆಯುವಿ ಎಂದು ನಾನು ನಿನಗೆ ನಿಜವಾಗಿ ಹೇಳುತ್ತೇನೆ ಅಂದನು.
- 35 ಅದಕ್ಕೆ ಪೇತ್ರನು ಆತನಿಗೆ-- ನಿನ್ನೊಂದಿಗೆ ಸಾಯಬೇಕಾಗಿದ್ದರೂ ನಾನು ನಿನ್ನನ್ನು ಅಲ್ಲಗಳೆಯುವ ದೇ ಇಲ್ಲ ಅಂದನು. ಅದೇ ಪ್ರಕಾರ ಶಿಷ್ಯರೆಲ್ಲರೂ ಹೇಳಿದರು.
- 36 ತರುವಾಯ ಯೇಸು ಶಿಷ್ಯರ ಸಂಗಡ ಗೆತ್ಸೇಮನೆ ಎಂಬ ಸ್ಥಳಕ್ಕೆ ಬಂದು ಅವರಿಗೆ--ನಾನು ಆಚೇ ಕಡೆಗೆ ಹೋಗಿ ಪ್ರಾರ್ಥಿಸುವಾಗ ನೀವು ಇಲ್ಲೇ ಕೂತುಕೊಳ್ಳಿರಿ ಅಂದನು.
- 37 ಆತನು ತನ್ನ ಜೊತೆಯಲ್ಲಿ ಪೇತ್ರನನ್ನೂ ಜೆಬೆದಾಯನ ಇಬ್ಬರು ಕುಮಾರರನ್ನೂ ಕರೆದುಕೊಂಡು ಹೋಗಿ ದುಃಖಿಸುವದಕ್ಕೂ ಬಹು ವ್ಯಥೆಪಡುವದಕ್ಕೂ ಆರಂಭಿಸಿದನು.
- 38 ಆತನು ಅವರಿಗೆ--ನನ್ನ ಪ್ರಾಣವು ಮರಣಹೊಂದುವಷ್ಟು ಅತಿ ದುಃಖಕ್ಕೆ ಒಳಗಾಗಿದೆ; ನೀವು ಇಲ್ಲೇ ಇದ್ದು ನನ್ನೊಡನೆ ಎಚ್ಚರವಾಗಿರ್ರಿ ಅಂದನು.
- 39 ಆಮೇಲೆ ಆತನು ಸ್ವಲ್ಪದೂರ ಹೋಗಿ ಅಡ್ಡಬಿದ್ದು ಪ್ರಾರ್ಥಿ ಸುತ್ತಾ--ಓ ನನ್ನ ತಂದೆಯೇ, ಸಾಧ್ಯವಾದರೆ ಈ ಪಾತ್ರೆಯು ನನ್ನನ್ನು ಬಿಟ್ಟು ಹೋಗಲಿ; ಆದಾಗ್ಯೂ ನನ್ನ ಚಿತ್ತದಂತಲ್ಲ; ನಿನ್ನ ಚಿತ್ತದಂತೆಯೇ ಆಗಲಿ ಅಂದನು.
- 40 ಆತನು ತನ್ನ ಶಿಷ್ಯರ ಬಳಿಗೆ ಬಂದಾಗ ಅವರು ನಿದ್ರೆ ಮಾಡುವದನ್ನು ಕಂಡು ಪೇತ್ರನಿಗೆ--ಏನು ನೀವು ಒಂದು ಗಳಿಗೆಯಾದರೂ ನನ್ನೊಡನೆ ಎಚ್ಚರವಾಗಿರಲಾರಿರಾ?
- 41 ನೀವು ಶೋಧನೆಗೆ ಒಳಗಾ ಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ; ಆತ್ಮವು ಸಿದ್ಧವಾಗಿದೆ ನಿಜವೇ; ಆದರೆ ಶರೀರವು ಬಲಹೀನ ವಾಗಿದೆ ಅಂದನು.
- 42 ತಿರಿಗಿ ಆತನು ಎರಡನೆಯ ಸಾರಿ ಹೋಗಿ ಪ್ರಾರ್ಥಿಸುತ್ತಾ--ಓ ನನ್ನ ತಂದೆಯೇ, ನಾನು ಈ ಪಾತ್ರೆಯಲ್ಲಿ ಕುಡಿಯದ ಹೊರತು ಇದು ನನ್ನನ್ನು ಬಿಟ್ಟು ಹೋಗಕೂಡದಾಗಿದ್ದರೆ ನಿನ್ನ ಚಿತ್ತವೇ ಆಗಲಿ ಅಂದನು.
- 43 ಆತನು ಬಂದು ಅವರು ತಿರಿಗಿ ನಿದ್ದೆ ಮಾಡುವದನ್ನು ಕಂಡನು; ಯಾಕಂದರೆ ಅವರ ಕಣ್ಣುಗಳು ಭಾರವಾಗಿದ್ದವು.
- 44 ಆತನು ಅವರನ್ನು ಬಿಟ್ಟು ತಿರಿಗಿ ಹೊರಟು ಹೋಗಿ ಮೂರನೆಯ ಸಾರಿ ಅದೇ ಮಾತುಗಳನ್ನು ಹೇಳಿ ಪ್ರಾರ್ಥಿಸಿದನು
- 45 ತರುವಾಯ ಆತನು ತನ್ನ ಶಿಷ್ಯರ ಬಳಿಗೆ ಬಂದು ಅವರಿಗೆ--ಈಗ ನಿದ್ದೆ ಮಾಡಿ ವಿಶ್ರಾಂತಿತಕ್ಕೊಳ್ಳಿರಿ; ಇಗೋ, ಮನುಷ್ಯಕುಮಾರನು ಪಾಪಿಷ್ಠರ ಕೈಗಳಿಗೆ ಹಿಡಿದು ಕೊಡಲ್ಪಡುವ ಸಮಯವು ಸವಿಾಪಿಸಿದೆ;
- 46 ಏಳಿರಿ, ನಾವು ಹೋಗೋಣ; ಇಗೋ, ನನ್ನನ್ನು ಹಿಡುಕೊಡು ವವನು ಸವಿಾಪವಾಗಿದ್ದಾನೆ ಅಂದನು.
- 47 ಆತನು ಇನ್ನೂ ಮಾತನಾಡುತ್ತಿರುವಾಗ ಇಗೋ, ಪ್ರಧಾನಯಾಜಕರ ಮತ್ತು ಜನರ ಹಿರಿಯರ ಕಡೆಯಿಂದ ಕತ್ತಿ ದೊಣ್ಣೆಗಳೊಡನೆ ಬಂದ ದೊಡ್ಡ ಜನ ಸಮೂಹದೊಂದಿಗೆ ಹನ್ನೆರಡು ಮಂದಿಯಲ್ಲಿ ಒಬ್ಬನಾದ ಯೂದನೂ ಬಂದನು.
- 48 ಆತನನ್ನು ಹಿಡು ಕೊಡುವದಕ್ಕಿದ್ದವನು ಅವರಿಗೆ--ನಾನು ಯಾವಾತನಿಗೆ ಮುದ್ದಿಡುತ್ತೇನೋ ಅವನೇ ಆತನು. ಆತನನ್ನು ಗಟ್ಟಿ ಯಾಗಿ ಹಿಡಿಯಿರಿ ಎಂದು ಗುರುತನ್ನು ಹೇಳಿದ್ದನು.
- 49 ಕೂಡಲೆ ಅವನು ಯೇಸುವಿನ ಬಳಿಗೆ ಬಂದು ಬೋಧಕನೇ, ವಂದನೆ ಎಂದು ಹೇಳಿ ಆತನಿಗೆ ಮುದ್ದಿಟ್ಟನು.
- 50 ಅದಕ್ಕೆ ಯೇಸು ಅವನಿಗೆ--ಸ್ನೇಹಿತನೇ, ನೀನು ಯಾಕೆ ಬಂದಿರುತ್ತೀ ಎಂದು ಕೇಳಿದನು; ಆಗ ಅವರು ಬಂದು ಯೇಸುವಿನ ಮೇಲೆ ಕೈಹಾಕಿ ಆತನನ್ನು ಹಿಡಿದರು.
- 51 ಇಗೋ, ಯೇಸುವಿನ ಸಂಗಡ ಇದ್ದವರಲ್ಲಿ ಒಬ್ಬನು ಕೈಚಾಚಿ ತನ್ನ ಕತ್ತಿಯನ್ನು ಹಿರಿದು ಮಹಾ ಯಾಜಕನ ಆಳನ್ನು ಹೊಡೆದು ಅವನ ಕಿವಿಯನ್ನು ಕಡಿದುಹಾಕಿದನು.
- 52 ಆಗ ಯೇಸು ಅವನಿಗೆ--ನಿನ್ನ ಕತ್ತಿಯನ್ನು ತಿರಿಗಿ ಅದರ ಒರೆಯಲ್ಲಿ ಸೇರಿಸು; ಯಾಕಂದರೆ ಕತ್ತಿಯನ್ನು ಹಿಡಿದವರೆಲ್ಲರು ಕತ್ತಿಯಿಂದ ನಾಶವಾಗುವರು.
- 53 ನಾನು ಈಗ ನನ್ನ ತಂದೆಗೆ ಪ್ರಾರ್ಥಿಸಲಾರನೆಂದೂ ಆತನು ಈಗಲೇ ಹನ್ನೆರಡು ಗಣಗಳಿಗಿಂತ ಹೆಚ್ಚಾದ ದೂತರನ್ನು ನನಗೆ ಕೊಡ ಲಾರನೆಂದೂ ನೀನು ನೆನಸುತ್ತಿಯೋ?
- 54 ಹಾಗಾದರೆ ಇವುಗಳು ಹೀಗೆ ಆಗಬೇಕೆಂಬ ಬರಹಗಳು ನೆರವೇರು ವದು ಹೇಗೆ ಅಂದನು.
- 55 ಅದೇ ಗಳಿಗೆಯಲ್ಲಿ ಯೇಸು ಜನಸಮೂಹಗಳಿಗೆ--ಒಬ್ಬ ಕಳ್ಳನಿಗೆ ವಿರೋಧವಾಗಿ ಬರುವಂತೆ ಕತ್ತಿಗಳೊಂದಿಗೂ ದೊಣ್ಣೆಗಳೊಂದಿಗೂ ನನ್ನನ್ನು ಹಿಡಿಯುವದಕ್ಕಾಗಿ ಬಂದಿರಾ? ನಾನು ದಿನಾ ಲು ನಿಮ್ಮ ಸಂಗಡ ದೇವಾಲಯದಲ್ಲಿ ಕೂತುಕೊಂಡು ಬೋಧಿಸುತ್ತಿದ್ದಾಗ ನೀವು ನನ್ನನ್ನು ಹಿಡಿಯಲಿಲ್ಲ;
- 56 ಆದರೆ ಪ್ರವಾದಿಗಳ ಬರಹಗಳು ನೆರವೇರುವಂತೆ ಇದೆಲ್ಲಾ ಆಯಿತು ಎಂದು ಹೇಳಿದನು. ಆಗ ಶಿಷ್ಯರೆಲ್ಲರೂ ಆತನನ್ನು ಬಿಟ್ಟು ಓಡಿಹೋದರು.
- 57 ಮತ್ತು ಯೇಸುವನ್ನು ಹಿಡಿದಿದ್ದವರು ಆತನನ್ನು ಮಹಾಯಾಜಕನಾದ ಕಾಯಫನ ಬಳಿಗೆ ತಕ್ಕೊಂಡು ಹೋದರು; ಅಲ್ಲಿ ಶಾಸ್ತ್ರಿಗಳೂ ಹಿರಿಯರೂ ಕೂಡಿಬಂದಿದ್ದರು.
- 58 ಆದರೆ ಪೇತ್ರನು ಮಹಾ ಯಾಜಕನ ಭವನದವರೆಗೆ ದೂರದಿಂದ ಆತನನ್ನು ಹಿಂಬಾಲಿಸಿ ಒಳಗೆ ಹೋಗಿ ಅಂತ್ಯವೇನಾಗುವದೆಂದು ನೋಡಲು ಸೇವಕರೊಂದಿಗೆ ಕೂತುಕೊಂಡನು.
- 59 ಆಗ ಪ್ರಧಾನಯಾಜಕರೂ ಹಿರಿಯರೂ ಆಲೋ ಚನಾ ಸಭೆಯವರೆಲ್ಲರೂ ಯೇಸುವಿಗೆ ವಿರೋಧವಾಗಿ ಆತನನ್ನು ಕೊಲ್ಲಿಸುವಂತೆ ಸುಳ್ಳು ಸಾಕ್ಷಿಗಾಗಿ ಹುಡುಕಿ ದರು.
- 60 ಆದರೆ ಯಾರೂ ಸಿಕ್ಕಲಿಲ್ಲ; ಹೌದು, ಬಹುಮಂದಿ ಸುಳ್ಳು ಸಾಕ್ಷಿಗಳು ಬಂದರೂ ಅವರಿಗೆ ಏನೂ ದೊರೆಯಲಿಲ್ಲ; ಕಡೆಯಲ್ಲಿ ಇಬ್ಬರು ಸುಳ್ಳು ಸಾಕ್ಷಿಗಳು ಬಂದು--
- 61 ನಾನು ದೇವಾಲಯ ವನ್ನು ಕೆಡವಿ ಮೂರು ದಿವಸಗಳಲ್ಲಿ ಕಟ್ಟಬಲ್ಲೆನೆಂದು ಇವನು ಹೇಳಿದನು ಅಂದರು.
- 62 ಮಹಾಯಾಜಕರು ಎದ್ದು ಆತನಿಗೆ--ನೀನು ಏನೂ ಉತ್ತರ ಕೊಡುವದಿ ಲ್ಲವೋ? ಇವರು ನಿನಗೆ ವಿರೋಧವಾಗಿ ಸಾಕ್ಷಿ ಹೇಳುವದು ಏನು ಅಂದನು.
- 63 ಆದರೆ ಯೇಸು ಸುಮ್ಮನಿದ್ದನು. ಆಗ ಮಹಾಯಾಜಕನು ಪ್ರತ್ಯುತ್ತರವಾಗಿ ಆತನಿಗೆ--ನೀನು ದೇವಕುಮಾರನಾದ ಕ್ರಿಸ್ತನಾದರೆ ಅದನ್ನು ನಮಗೆ ಹೇಳಬೇಕೆಂದು ಜೀವಸ್ವರೂಪನಾದ ದೇವರ ಆಣೆಯನ್ನು ನಿನಗೆ ಇಡುತ್ತೇನೆ ಅಂದನು.
- 64 ಅದಕ್ಕೆ ಯೇಸು ಅವನಿಗೆ--ನೀನೇ ಹೇಳಿದ್ದೀ; ಆದರೂ--ಇನ್ನು ಮೇಲೆ ಮನುಷ್ಯಕುಮಾರನು ಸರ್ವ ಶಕ್ತನ ಬಲಪಾರ್ಶ್ವದಲ್ಲಿ ಕೂತಿರುವದನ್ನೂ ಆಕಾಶದ ಮೇಘಗಳ ಮೇಲೆ ಬರುವದನ್ನೂ ನೀವು ನೋಡುವಿರಿ ಎಂದು ನಾನು ನಿಮಗೆ ಹೇಳುತ್ತೇನೆ ಅಂದನು.
- 65 ಆಗ ಮಹಾ ಯಾಜಕನು ತನ್ನ ಬಟ್ಟೆಗಳನ್ನು ಹರಕೊಂಡು--ಇವನು ದೇವದೂಷಣೆ ಮಾಡಿದ್ದಾನೆ; ನಮಗೆ ಇನ್ನು ಹೆಚ್ಚಿನ ಸಾಕ್ಷಿಗಳು ಯಾಕೆ ಬೇಕು? ಇಗೋ, ಈಗಲೇ ಇವನ ದೇವದೂಷಣೆಯನ್ನು ನೀವು ಕೇಳಿದ್ದೀರಲ್ಲಾ
- 66 ನಿಮಗೆ ಹೇಗೆ ತೋರುತ್ತದೆ ಎಂದು ಕೇಳಿದ್ದಕ್ಕೆ ಅವರು ಪ್ರತ್ಯುತ್ತರವಾಗಿ--ಇವ
- 66 ನಿಮಗೆ ಹೇಗೆ ತೋರುತ್ತದೆ ಎಂದು ಕೇಳಿದ್ದಕ್ಕೆ ಅವರು ಪ್ರತ್ಯುತ್ತರವಾಗಿ--ಇವನು ಮರಣಕ್ಕೆ ಪಾತ್ರನು ಅಂದರು.
- 67 ಆಮೇಲೆ ಅವರು ಆತನ ಮುಖದ ಮೇಲೆ ಉಗುಳಿ ಆತನನ್ನು ಗುದ್ದಿದರು; ಬೇರೆ ಕೆಲವರು ಆತನನ್ನು ಹೊಡೆದರು.
- 68 ಕ್ರಿಸ್ತನೇ, ನಿನ್ನನ್ನು ಹೊಡೆದವರು ಯಾರು? ನಮಗೆ ಪ್ರವಾದನೆ ಹೇಳು ಅಂದರು.
- 69 ಆಗ ಪೇತ್ರನು ಭವನದ ಹೊರಗೆ ಕೂತಿರಲು ಒಬ್ಬ ಹುಡುಗಿಯು ಅವನ ಬಳಿಗೆ ಬಂದು-- ನೀನೂ ಗಲಿಲಾಯದ ಯೇಸುವಿನೊಂದಿಗೆ ಇದ್ದವನು ಅಂದಳು.
- 70 ಆದರೆ ಅವನು ಎಲ್ಲರ ಮುಂದೆ-- ನೀನು ಏನು ಹೇಳುತ್ತಿಯೋ ನಾನು ಅರಿಯೆನು ಎಂದು ಅಲ್ಲಗಳೆದನು.
- 71 ಅವನು ದ್ವಾರಾಂಗಳ ದೊಳಗೆ ಹೋದಾಗ ಮತ್ತೊಬ್ಬ ಹುಡುಗಿಯು ಅವನನ್ನು ನೋಡಿ ಅಲ್ಲಿದ್ದವರಿಗೆ--ಇವನು ಸಹ ನಜರೇತಿನ ಯೇಸುವಿನೊಂದಿಗೆ ಇದ್ದವನು ಅಂದಳು.
- 72 ಆಗ ಅವನು ಪ್ರಮಾಣಮಾಡಿ--ನಾನು ಆ ಮನುಷ್ಯನನ್ನು ಅರಿಯೆನು ಎಂದು ತಿರಿಗಿ ಅಲ್ಲಗಳೆ ದನು.
- 73 ಮತ್ತೆ ಸ್ವಲ್ಪ ಸಮಯವಾದ ಮೇಲೆ ಅಲ್ಲಿ ನಿಂತಿದ್ದವರು ಪೇತ್ರನಿಗೆ--ನಿಶ್ಚಯವಾಗಿ ನೀನು ಸಹ ಅವರಲ್ಲಿ ಒಬ್ಬನು; ಯಾಕಂದರೆ ನಿನ್ನ ಭಾಷೆಯು ನಿನ್ನನ್ನು ತೋರಿಸಿಕೊಡುತ್ತದೆ ಅಂದರು.
- 74 ಅದಕ್ಕೆ ಅವನು--ಆ ಮನುಷ್ಯನನ್ನು ನಾನು ಅರಿಯೆನು ಎಂದು ಶಪಿಸಿಕೊಳ್ಳುವದಕ್ಕೂ ಆಣೆಯಿಟ್ಟುಕೊಳ್ಳುವದಕ್ಕೂ ಪ್ರಾರಂಭಿಸಿದನು. ಕೂಡಲೆ ಹುಂಜವು ಕೂಗಿತು.
- 75 ಆಗ ಪೇತ್ರನು--ಹುಂಜವು ಕೂಗುವದಕ್ಕಿಂತ ಮುಂಚಿತವಾಗಿ ನೀನು ಮೂರು ಸಾರಿ ನನ್ನನ್ನು ಅಲ್ಲಗಳೆ ಯುವಿ ಎಂದು ಯೇಸು ತನಗೆ ಹೇಳಿದ ಮಾತನ್ನು ಜ್ಞಾಪಕಮಾಡಿಕೊಂಡು ಹೊರಗೆ ಹೋಗಿ ಬಹು ವ್ಯಥೆಪಟ್ಟು ಅತ್ತನು.
Matthew 26
- Details
- Parent Category: New Testament
- Category: Matthew
ಮತ್ತಾಯನು ಅಧ್ಯಾಯ 26