- 1 ಎಫೆಸದಲ್ಲಿರುವ ಸಭೆಯ ದೂತನಿಗೆ ಬರೆ: ಏಳು ನಕ್ಷತ್ರಗಳನ್ನು ತನ್ನ ಬಲಗೈಯಲ್ಲಿ ಹಿಡುಕೊಂಡು ಏಳು ಚಿನ್ನದ ದೀಪ ಸ್ತಂಭಗಳ ಮಧ್ಯದಲ್ಲಿ ತಿರುಗಾಡುವಾತನು ಈ ವಿಷಯಗಳನ್ನು ಹೇಳುತ್ತಾನೆ.
- 2 ನಿನ್ನ ಕ್ರಿಯೆಗಳನ್ನೂ ಪ್ರಯಾಸವನ್ನೂ ತಾಳ್ಮೆಯನ್ನೂ ನಾನು ಬಲ್ಲೆನು; ನೀನು ದುಷ್ಟರನ್ನು ಸಹಿಸಲಾರಿ; ಅಪೊಸ್ತಲರಲ್ಲದಿದ್ದರೂ ತಮ್ಮನ್ನು ಅಪೊಸ್ತಲರೆಂದು ಹೇಳಿಕೊಳ್ಳುವವರನ್ನು, ನೀನು ಪರೀಕ್ಷಿಸಿ ಅವರನ್ನು ಸುಳ್ಳುಗಾರರೆಂದು ಕಂಡುಕೊಂಡಿ;
- 3 ನೀನು ಸಹಿಸಿ ಕೊಂಡು ತಾಳ್ಮೆಯುಳ್ಳವನಾಗಿ ನನ್ನ ಹೆಸರಿನ ನಿಮಿತ್ತ ಪ್ರಯಾಸಪಟ್ಟು ಬೇಸರಗೊಳ್ಳಲಿಲ್ಲ.
- 4 ಆದಾಗ್ಯೂ ನಿನ್ನಲ್ಲಿ ನನಗೆ ವಿರೋಧವಾದದ್ದು ಇದೆ. ಯಾಕಂದರೆ ನೀನು ನಿನ್ನ ಮೊದಲಿನ ಪ್ರೀತಿಯನ್ನು ಬಿಟ್ಟುಬಿಟ್ಟಿದ್ದೀ.
- 5 ಆದದ ರಿಂದ ನೀನು ಎಲ್ಲಿಂದ ಬಿದ್ದಿದ್ದೀಯೋ ಅದನ್ನು ನಿನ್ನ ನೆನಪಿಗೆ ತಂದುಕೊಂಡು ಮಾನಸಾಂತರಪಡು. ನೀನು ಮೊದಲು ಮಾಡುತ್ತಿದ್ದ ಕ್ರಿಯೆಗಳನ್ನು ಮಾಡು. ನೀನು ಮಾನಸಾಂತರಪಡದೆ ಹೋದರೆ ನಾನು ನಿನ್ನ ಬಳಿಗೆ ಬೇಗನೆ ಬಂದು ನಿನ್ನ ದೀಪ ಸ್ತಂಭವನ್ನು ಅದರ ಸ್ಥಳದಿಂದ ತೆಗೆದುಹಾಕುವೆನು
- 6 ಆದರೆ ಇದು ನಿನ್ನಲ್ಲಿ ಇದೆ; ಅದೇನಂದರೆ--ನೀನು ದ್ವೇಷಿಸುವ ನಿಕೊಲಾಯಿ ತರ ಕೃತ್ಯಗಳನ್ನು ನಾನು ಸಹ ದ್ವೇಷಿಸುತ್ತೇನೆ.
- 7 ಆತ್ಮನು ಸಭೆಗಳಿಗೆ ಹೇಳುವದನ್ನು ಕಿವಿಯುಳ್ಳವನು ಕೇಳಲಿ. ಯಾವನು ಜಯಹೊಂದುತ್ತಾನೋ ಅವನಿಗೆ ದೇವರ ಪರದೈಸಿನ ಮಧ್ಯದಲ್ಲಿರುವ ಜೀವವೃಕ್ಷದ ಹಣ್ಣನ್ನು ತಿನ್ನುವದಕ್ಕೆ ಕೊಡುವೆನು.
- 8 ಸ್ಮುರ್ನದಲ್ಲಿರುವ ಸಭೆಯ ದೂತನಿಗೆ ಬರೆ: ಮೊದ ಲನೆಯವನೂ ಕಡೆಯವನೂ ಸತ್ತವನಾಗಿದ್ದು ಈಗ ಬದುಕುವಾತನೂ ಹೇಳುವವುಗಳು ಯಾವವೆಂದರೆ,
- 9 ನಾನು ನಿನ್ನ ಕೃತ್ಯಗಳನ್ನೂ ಸಂಕಟವನ್ನೂ ಬಡತನವನೂ ಬಲ್ಲೆನು; (ಆದರೂ ನೀನು ಐಶ್ವರ್ಯವಂತನೇ). ಇದಲ್ಲದೆ ತಮ್ಮನ್ನು ಯೆಹೂದ್ಯರೆಂದು ಹೇಳಿಕೊಳ್ಳು ವವರ ದೂಷಣೆಯನ್ನು ನಾನು ಬಲ್ಲೆನು; ಅವರು ಯೆಹೂದ್ಯರಲ್ಲ, ಸೈತಾನನ ಸಭಾಮಂದಿರದವರಾಗಿ ದ್ದಾರೆ.
- 10 ನಿನ್ನನ್ನು ಸಂಕಟಪಡಿಸುವವುಗಳಲ್ಲಿ ಯಾವ ದಕ್ಕೂ ಹೆದರಬೇಡ. ಇಗೋ, ನೀವು ಶೋಧಿಸಲ್ಪಡು ವಂತೆ ಸೈತಾನನು ನಿಮ್ಮಲ್ಲಿ ಕೆಲವರನ್ನು ಸೆರೆಮನೆಯೊಳಗೆ ಹಾಕುವನು; ಹತ್ತು ದಿವಸಗಳ ತನಕ ನಿಮಗೆ ಸಂಕಟವಿ ರುವದು. ನೀನು ಸಾಯಬೇಕಾದರೂ ನಂಬಿಗಸ್ತ ನಾಗಿರು; ನಾನು ನಿನಗೆ
- 11 ಆತ್ಮನು ಸಭೆಗಳಿಗೆ ಹೇಳುವದನ್ನು ಕಿವಿಯುಳ್ಳವನು ಕೇಳಲಿ; ಜಯಹೊಂದುವವನಿಗೆ ಎರಡನೆಯ ಮರಣದಿಂದ ಕೇಡಾಗುವದೇ ಇಲ್ಲ.
- 12 ಪೆರ್ಗಮದಲ್ಲಿರುವ ಸಭೆಯ ದೂತನಿಗೆ ಬರೆ: ಹದವಾದ ಇಬ್ಬಾಯಿ ಕತ್ತಿಯನ್ನು ಹಿಡಿದಾತನು ಹೇಳು ವವುಗಳು ಯಾವವೆಂದರೆ,
- 13 ನಿನ್ನ ಕ್ರಿಯೆಗಳನ್ನೂ ನೀನು ವಾಸಮಾಡುವ ಸ್ಥಳವನ್ನೂ ಬಲ್ಲೆನು; ಅದು ಸೈತಾನನ ಆಸನವಿರುವ ಸ್ಥಳವಾಗಿದೆ; ನೀನು ನನ್ನ ಹೆಸರನ್ನು ಬಿಗಿಯಾಗಿ ಹಿಡುಕೊಂಡಿದ್ದೀ; ನಿಮ್ಮಲ್ಲಿರುವ ಸೈತಾನನ ನಿವಾಸದಲ್ಲಿ ನನಗೆ ನಂಬಿಗಸ್ತನಾದ ಹತಸಾಕ್ಷಿಯಾದ ಅಂತಿಪನು ಕೊಲ್ಲಲ್ಪಟ್ಟ ದಿನಗಳಲ್ಲಿ ಯಾದರೂ ನ
- 14 ಆದರೂ ನಿನಗೆ ವಿರೋಧವಾದ ಕೆಲವು ವಿಷಯಗಳು ನನಗಿವೆ. ವಿಗ್ರಹಗಳಿಗೆ ಯಜ್ಞಾರ್ಪಣೆ ಮಾಡಿದ ಪದಾರ್ಥಗಳನ್ನು ತಿನ್ನುವ ದಕ್ಕೂ ಜಾರತ್ವ ಮಾಡುವದಕ್ಕೂ ಇಸ್ರಾಯೇಲಿನ ಮಕ್ಕಳ ಮುಂದೆ ಮುಗ್ಗರಿಸುವ ಬಂಡೆಯನ್ನು ಹಾಕ ಬೇಕೆಂದು ಬಿಳಾಮನು ಬಾಲಾಕನಿಗೆ ಹೇಳಿದ ಬೋಧನೆಯನ್ನು
- 15 ಅದರಂತೆ ನಾನು ಹಗೆ ಮಾಡುವ ನಿಕೊಲಾಯಿತರ ಬೋಧನೆಯನ್ನು ಅವಲಂಬಿಸಿರುವವರೂ ನಿನ್ನಲ್ಲಿದ್ದಾರೆ.
- 16 ಆದದರಿಂದ ಮಾನಸಾಂತರಪಡು, ಇಲ್ಲದಿದ್ದರೆ ನಾನು ನಿನ್ನ ಬಳಿಗೆ ಬೇಗನೆ ಬಂದು ನನ್ನ ಬಾಯಿ ಕತ್ತಿಯಿಂದ ಅವರ ಮೇಲೆ ಯುದ್ಧ ಮಾಡುವೆನು.
- 17 ಆತ್ಮನು ಸಭೆಗಳಿಗೆ ಹೇಳುವದನ್ನು ಕಿವಿಯುಳ್ಳವನು ಕೇಳಲಿ. ಯಾವನೂ ಜಯಹೊಂದುತ್ತಾನೋ ಅವನಿಗೆ ಬಚ್ಚಿಟ್ಟಿರುವ ಮನ್ನವನ್ನು ತಿನ್ನುವದಕ್ಕೆ ನಾನು ಕೊಡು ವೆನು; ಇದಲ್ಲದೆ ಅವನಿಗೆ ಹೊಸ ಹೆಸರು ಬರೆದಿರುವ ಬಿಳೀ ಕಲ್ಲನ್ನು ಕೊಡುವೆನು ಅದನ್ನು ಹೊಂದಿದವನಿಗೇ ಹೊರತು ಅದು ಇನ್ನಾರಿಗೂ ತಿ
- 18 ಥುವತೈರದಲ್ಲಿರುವ ಸಭೆಯ ದೂತನಿಗೆ ಬರೆ: ಬೆಂಕಿಯ ಉರಿಯಂತಿರುವ ಕಣ್ಣುಗಳೂ ಶುದ್ಧವಾದ ತಾಮ್ರದಂತಿರುವ ಪಾದಗಳುಳ್ಳ ದೇವಕುಮಾರನು ಹೇಳುವವುಗಳು ಯಾವವೆಂದರೆ,
- 19 ನಿನ್ನ ಕ್ರಿಯೆ ಗಳನ್ನೂ ಪ್ರೀತಿಯನ್ನೂ ಸೇವೆಯನ್ನೂ ನಂಬಿಕೆಯನ್ನೂ ನಿನ್ನ ತಾಳ್ಮೆಯನ್ನೂ ನಿನ್ನ ಕ್ರಿಯೆಗಳನ್ನೂ ನಾನು ಬಲ್ಲೆನು; ಇದಲ್ಲದೆ ನಿನ್ನ ಕಡೇ ಕೃತ್ಯಗಳು ಮೊದಲಿನ ಕೃತ್ಯಗಳಿಗಿಂತ ಹೆಚ್ಚಾದವುಗಳೆಂದು ಬಲ್ಲೆನು.
- 20 ಆದಾಗ್ಯೂ ನಿನಗೆ ವಿರೋಧವಾದ ಕೆಲವು ವಿಷಯಗಳು ನನಗಿವೆ; ಅದೇ ನಂದರೆ, ಯೆಜೆಬೇಲೆಂಬ ಆ ಹೆಂಗಸು ತನ್ನನ್ನು ಪ್ರವಾದಿ ನಿಯೆಂದು ಹೇಳಿಕೊಂಡು ಜಾರತ್ವ ಮಾಡುವದಕ್ಕೂ ವಿಗ್ರಹಗಳಿಗೆ ಅರ್ಪಣೆ ಮಾಡಿದ ಪದಾರ್ಥಗಳನ್ನು ತಿನ್ನುವದಕ್ಕೂ ನನ್ನ ದಾಸರಿಗೆ ಬೋಧಿಸುತ್ತಾ ಅವರನ್ನು ವಂಚಿಸುತ್ತಿರು
- 21 ಅವಳು ಮಾಡಿದ ಜಾರತ್ವಕ್ಕಾಗಿ ಮಾನ ಸಾಂತರಪಡುವದಕ್ಕೆ ನಾನು ಅವಳಿಗೆ ಸಮಯವನ್ನು ಕೊಟ್ಟೆನು; ಆದರೆ ಅವಳು ಮಾನಸಾಂತರಪಡಲಿಲ್ಲ.
- 22 ಇಗೋ, ನಾನು ಅವಳನ್ನು ಹಾಸಿಗೆಯಲ್ಲಿಯೂ ಅವಳೊಂದಿಗೆ ವ್ಯಭಿಚಾರ ಮಾಡಿದವರು ತಮ್ಮ ಕೃತ್ಯಗಳಿ ಗಾಗಿ ಮಾನಸಾಂತರಪಡದಿದ್ದರೆ ಅವರನ್ನು ಮಹಾಸಂಕ ಟದಲ್ಲಿಯೂ ಹಾಕುವೆನು.
- 23 ಅವಳ ಮಕ್ಕಳನ್ನು ಕೊಂದೇಕೊಲ್ಲುವೆನು; ಆಗ ನಾನು ಅಂತರಿಂದ್ರಿಯಗ ಳನ್ನೂ ಹೃದಯಗಳನ್ನೂ ಪರೀಕ್ಷಿಸುವವನಾಗಿದ್ದೇನೆ ಂಬದು ಎಲ್ಲಾ ಸಭೆಗಳಿಗೆ ಗೊತ್ತಾಗುವದು; ನಿಮ್ಮಲ್ಲಿ ಪ್ರತಿಯೊಬ್ಬನಿಗೆ ನಿಮ್ಮ ಕೃತ್ಯಗಳ ಪ್ರಕಾರ ಕೊಡುವೆನು.
- 24 ಆದರೆ ನಿಮಗೂ ಥುವತೈರದಲ್ಲಿರುವ ಮಿಕ್ಕಾದವ ರಿಗೂ ನಾನು ಹೇಳುವದೇನಂದರೆ, ಅವರು ಹೇಳಿಕೊ ಳ್ಳುವಂಥ ಸೈತಾನನ ಅಗಾಧವಾದ ಬೋಧನೆಯು ಯಾರಾರಲ್ಲಿ ಇರುವದಿಲ್ಲವೋ ಯಾರು ಅದನ್ನು ಅರಿ ಯದೆ ಇದ್ದಾರೋ ಅವರ ಮೇಲೆ ನಾನು ಬೇರೆ ಯಾವ ಭಾರವನ್ನೂ ಹಾಕುವದಿಲ್ಲ.
- 25 ಆದರೆ ಈಗ ನಿಮಗಿರು ವದನ್ನು ನಾನು ಬರುವ ತನಕ ಬಿಗಿಯಾಗಿ ಹಿಡಿದು ಕೊಂಡಿರ್ರಿ.
- 26 ಯಾವನು ಜಯಹೊಂದಿ ನನ್ನ ಕ್ರಿಯೆಗಳನ್ನು ಕಡೇವರೆಗೂ ಕೈಕೊಳ್ಳುತ್ತಾನೋ ಅವನಿಗೆ ನಾನು ಜನಾಂಗಗಳ ಮೇಲೆ ಅಧಿಕಾರವನ್ನು ಕೊಡು ತ್ತೇನೆ.
- 27 ನಾನು ನನ್ನ ತಂದೆಯಿಂದ ಹೊಂದಿದ ಪ್ರಕಾ ರವೇ ಅವನು ಜನಾಂಗಗಳನ್ನು ಕಬ್ಬಿಣದ ಕೋಲಿನಿಂದ ಆಳುವನು; ಅವರು ಕುಂಬಾರನ ಮಡಿಕೆಗಳಂತೆ ಒಡೆದು ಚೂರಾಗುವರು.
- 28 ನಾನು ಅವನಿಗೆ ಉದಯನಕ್ಷತ್ರ ವನ್ನು ಕೊಡುವೆನು.
- 29 ಆತ್ಮನು ಸಭೆಗಳಿಗೆ ಹೇಳುವ ದನ್ನು ಕಿವಿಯುಳ್ಳವನು ಕೇಳಲಿ.
Revelation 02
- Details
- Parent Category: New Testament
- Category: Revelation
ಪ್ರಕಟನೆ ಅಧ್ಯಾಯ 2