- 1 ಹಾಗಾದರೆ ಏನು ಹೇಳೋಣ? ಕೃಪೆಯು ಹೆಚ್ಚಲಿ ಎಂದು ನಾವು ಪಾಪದಲ್ಲಿ ಇನ್ನೂ ಇರಬೇಕೋ?
- 2 ಹಾಗೆ ಎಂದಿಗೂ ಅಲ್ಲ; ಪಾಪದ ಪಾಲಿಗೆ ಸತ್ತವರಾದ ನಾವು ಇನ್ನೂ ಅದರಲ್ಲಿ ಬದುಕು ವದು ಹೇಗೆ?
- 3 ಯೇಸು ಕ್ರಿಸ್ತನಲ್ಲಿ ಸೇರುವದಕ್ಕೆ ಬಾಪ್ತಿಸ್ಮ ಮಾಡಿಸಿಕೊಂಡವರಾದ ನಾವೆಲ್ಲರು ಆತನ ಮರಣದಲ್ಲಿ ಸೇರುವದಕ್ಕೆ ಬಾಪ್ತಿಸ್ಮ ಮಾಡಿಸಿಕೊಂಡೆವೆಂದು ನಿಮಗೆ ತಿಳಿಯದೋ?
- 4 ಹೀಗಿರಲಾಗಿ ನಾವು ಬಾಪ್ತಿಸ್ಮ ಮಾಡಿಸಿ ಕೊಂಡಾಗ ಆತನ ಮರಣದಲ್ಲಿ ಪಾಲುಗಾರರಾಗು ವದಕ್ಕೆ ಆತನೊಂದಿಗೆ ಹೂಣಲ್ಪಟ್ಟೆವು; ಕ್ರಿಸ್ತನು ತಂದೆಯ ಮಹಿಮೆಯಿಂದ ಹೇಗೆ ಸತ್ತವರೊಳಗಿಂದ ಎಬ್ಬಿಸಲ್ಪಟ್ಟನೋ ಹಾಗೆಯೇ ನಾವು ಕೂಡ ಜೀವ ದಿಂದೆದ್ದು ನೂತನ ಜೀವದಲ್ಲಿ ನಡೆದುಕೊಳ್ಳಬೇಕು.
- 5 ಹೇಗಂದರೆ ಆತನ ಮರಣದ ಹೋಲಿಕೆಯಲ್ಲಿ ನಾವು ಒಟ್ಟಾಗಿ ನೆಲೆಸಿದ್ದರೆ ಆತನ ಪುನರುತ್ಥಾನದ ಹೋಲಿಕೆ ಯಲ್ಲಿಯೂ ಇರುವೆವು.
- 6 ಪಾಪದ ಶರೀರವು ನಾಶ ವಾಗಿ ನಾವು ಇನ್ನೂ ಪಾಪಕ್ಕೆ ದಾಸರಾಗಿರದಂತೆ ನಮ್ಮ ಹಳೇ ಮನುಷ್ಯನು ಕ್ರಿಸ್ತನ ಕೂಡ ಶಿಲುಬೆಗೆ ಹಾಕಲ್ಪಟ್ಟ ನೆಂದು ತಿಳಿದಿದ್ದೇವೆ.
- 7 ಯಾಕಂದರೆ ಸತ್ತವನು ಪಾಪ ದಿಂದ ಬಿಡುಗಡೆ ಹೊಂದಿದ್ದಾನೆ.
- 8 ಇದಲ್ಲದೆ ನಾವು ಕ್ರಿಸ್ತನೊಡನೆ ಸತ್ತ ಪಕ್ಷದಲ್ಲಿ ಆತನೊಡನೆ ನಾವು ಸಹ ಜೀವಿಸುವೆವೆಂದು ನಂಬು ತ್ತೇವೆ.
- 9 ಯಾಕಂದರೆ ಕ್ರಿಸ್ತನು ಸತ್ತಮೇಲೆ ಜೀವಿತ ನಾಗಿ ಎದ್ದು ಬಂದದ್ದರಿಂದ ಆತನು ಇನ್ನು ಮುಂದೆ ಸಾಯತಕ್ಕವನಲ್ಲ; ಮರಣವು ಇನ್ನು ಮುಂದೆ ಆತ ನನ್ನು ಆಳುವದಿಲ್ಲವೆಂದು ನಮಗೆ ತಿಳಿದದೆ.
- 10 ಆತನು ಸತ್ತಿದ್ದರಲ್ಲಿ ಪಾಪಕ್ಕಾಗಿ ಒಂದೇ ಸಾರಿ ಸತ್ತನು. ಆದರೆ ಆತನು ಜೀವಿಸುವದರಲ್ಲಿ ದೇವರಿಗಾಗಿ ಜೀವಿಸುತ್ತಾನೆ.
- 11 ಅದೇ ಪ್ರಕಾರ ನೀವು ಸಹ ಪಾಪದ ಪಾಲಿಗೆ ನಿಜವಾಗಿ ಸತ್ತವರೂ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ದೇವರಿಗಾಗಿ ಜಿವಿಸುವವರೂ ಎಂದು ಎಣಿಸಿಕೊಳ್ಳಿರಿ.
- 12 ಹೀಗಿರುವದರಿಂದ ಸಾಯತಕ್ಕ ನಿಮ್ಮ ದೇಹದ ಮೇಲೆ ಪಾಪವನ್ನು ಆಳಗೊಡಿಸಿ ನೀವು ಅದರ ದುರಾಶೆಗಳಿಗೆ ಒಳಪಡಬೇಡಿರಿ;
- 13 ಇಲ್ಲವೆ ನೀವು ನಿಮ್ಮ ಅಂಗಗಳನ್ನು ಪಾಪಕ್ಕೆ ಒಳಪಡಿಸುವವರಾಗಿದ್ದು ಅನೀತಿಯನ್ನು ನಡಿಸುವ ಸಾಧನಗಳಾಗಮಾಡಬೇಡಿರಿ; ಆದರೆ ಸತ್ತವರೊಳಗಿಂದ ಜೀವಿಸುವವರೋ ಎಂಬಂತೆ ನೀತಿಕಾರ್ಯಗಳನ್ನು ನಡಿಸುವ ಸಾಧನಗಳನ್ನಾಗಿ ನಿಮ್ಮ ಅಂಗಗಳನ್ನು ದೇವರಿಗೆ ಒಳಪಡಿಸಿರಿ.
- 14 ಯಾಕಂದರೆ ಪಾಪವು ನಿಮ್ಮ ಮೇಲೆ ಪ್ರಭುತ್ವ ನಡಿಸಬಾರದು; ಕಾರಣವೇನಂದರೆ ನೀವು ನ್ಯಾಯಪ್ರಮಾಣಾಧೀನ ರಲ್ಲ, ಕೃಪೆಗೆ ಅಧೀನರಾಗಿದ್ದೀರಿ.
- 15 ಹಾಗಾದರೇನು? ನಾವು ನ್ಯಾಯಪ್ರಮಾಣಾ ಧೀನರಲ್ಲ, ಕೃಪೆಗೆ ಅಧೀನರಾಗಿದ್ದೇವೆಂದು ಪಾಪವನ್ನು ಮಾಡಬಹುದೋ? ಹಾಗೆ ಎಂದಿಗೂ ಅಲ್ಲ.
- 16 ನೀವು ಯಾರಿಗೆ ದಾಸರಂತೆ ವಿಧೇಯರಾಗುತ್ತೇವೆಂದು ನಿಮ್ಮನ್ನು ಒಪ್ಪಿಸಿಕೊಡುತ್ತಿರೋ ಅವರಿಗೆ ದಾಸರಾಗಿಯೇ ವಿಧೇ ಯರಾಗಿರುವಿರೆಂಬದು ನಿಮಗೆ ಗೊತ್ತಿಲ್ಲವೋ? ಪಾಪಕ್ಕೆ ದಾಸರಾದರೆ ಮರಣವೇ; ಇಲ್ಲವೆ ವಿಧೇಯತ್ವಕ್ಕೆ ದಾಸ ರಾದರೆ ನೀತಿಯೇ.
- 17 ಆದರೆ ನೀವು ಪಾಪಕ್ಕೆ ದಾಸ ರಾಗಿದ್ದರೂ ನಿಮಗೆ ಒಪ್ಪಿಸಲ್ಪಟ್ಟ ಬೋಧನೆಗೆ ನೀವು ಹೃದಯಪೂರ್ವಕವಾಗಿ ಅಧೀನರಾದದರಿಂದ ದೇವ ರಿಗೆ ಸ್ತೋತ್ರವಾಗಲಿ.
- 18 ಹೀಗೆ ನೀವು ಪಾಪದಿಂದ ಬಿಡುಗಡೆಯನ್ನು ಹೊಂದಿ ನೀತಿಗೆ ದಾಸರಾದಿರಿ.
- 19 ನಿಮ್ಮ ಶರೀರದ ಬಲಹೀನತೆಯ ದೆಸೆಯಿಂದ ಮನುಷ್ಯ ರೀತಿಯಾಗಿ ನಾನು ಮಾತನಾಡುತ್ತೇನೆ. ಅಶುದ್ಧತ್ವಕ್ಕೆ ದಾಸರನ್ನಾಗಿ ನಿಮ್ಮ ಅಂಗಗಳನ್ನು ದುಷ್ಟತ್ವ ದಿಂದ ದುಷ್ಟತ್ವಕ್ಕೆ ಒಳಪಡಿಸಿದಂತೆಯೇ ಈಗ ಪರಿಶುದ್ಧತೆ ಗಾಗಿ ನಿಮ್ಮ ಅಂಗಗಳನ್ನು ನೀತಿಗೆ ದಾಸರನ್ನಾಗಿ ಒಳಪಡಿಸಿರಿ.
- 20 ನೀವು ಪಾಪಕ್ಕೆ ದಾಸರಾಗಿದ್ದಾಗ ನೀತಿಯ ಹಂಗಿನವರಾಗಿರಲಿಲ್ಲ.
- 21 ನೀವು ಆಗ ಮಾಡಿ ದವುಗಳಿಂದ ನಿಮಗುಂಟಾದ ಫಲವೇನು? ಈಗ ಅವುಗಳ ವಿಷಯದಲ್ಲಿ ನಿಮಗೆ ನಾಚಿಕೆಯುಂಟಷ್ಟೆ; ಅವುಗಳ ಅಂತ್ಯವು ಮರಣವೇ.
- 22 ಈಗಲಾದರೋ ನೀವು ಪಾಪದಿಂದ ಬಿಡುಗಡೆಯನ್ನು ಹೊಂದಿ ದೇವರಿಗೆ ದಾಸರಾದದರಿಂದ ಪರಿಶುದ್ಧತೆಯೇ ನಿಮಗೆ ಫಲ; ಅದರ ಅಂತ್ಯವು ನಿತ್ಯಜೀವವೇ.
- 23 ಯಾಕಂದರೆ ಪಾಪದ ಸಂಬಳ ಮರಣ. ಆದರೆ ದೇವರ ದಾನವು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮುಖಾಂತರ ನಿತ್ಯಜೀವವು.
Romans 06
- Details
- Parent Category: New Testament
- Category: Romans
ರೋಮಾಪುರದವರಿಗೆ ಅಧ್ಯಾಯ 6