- 1 ನಾನು ನಿಮಗೆ ಒಪ್ಪಿಸುವ ನಮ್ಮ ಸಹೋದರಿಯಾದ ಫೊಯಿಬೆಯನ್ನು ಪ್ರೀತಿಯಿಂದ ಅಂಗೀಕರಿಸಿರಿ. ಆಕೆಯು ಕೆಂಕ್ರೆಯ ಲ್ಲಿರುವ ಸಭೆಯ ಸೇವಕಳಾಗಿದ್ದಾಳೆ.
- 2 ನೀವು ಆಕೆಯನ್ನು ಪರಿಶುದ್ಧರಿಗೆ ತಕ್ಕಂತೆ ಕರ್ತನಲ್ಲಿ ಅಂಗೀಕರಿಸಿ ಆಕೆಯ ಕೆಲಸದಲ್ಲಿ ಆಕೆಗೆ ಅವಶ್ಯವಾದ ಸಹಾಯವನ್ನು ಮಾಡಿರಿ; ಆಕೆಯು ನನಗೂ ಅನೇಕರಿಗೂ ಸಹಾಯ ಮಾಡಿದವಳಾಗಿದ್ದಾಳೆ.
- 3 ಕ್ರಿಸ್ತ ಯೇಸುವಿನಲ್ಲಿ ನನ್ನ ಸಹಾಯಕರಾದ ಪ್ರಿಸ್ಕಿಲ್ಲಳಿಗೂ ಅಕ್ವಿಲನಿಗೂ ನನ್ನ ವಂದನೆಗಳನ್ನು ತಿಳಿಸಿರಿ.
- 4 ಅವರು ನನ್ನ ಪ್ರಾಣಕ್ಕಾಗಿ ತಮ್ಮ ಕುತ್ತಿಗೆಗಳನ್ನೇ ಒಡ್ಡಿದರು. ನಾನು ಮಾತ್ರವೇ ಅಲ್ಲ, ಅನ್ಯಜನರ ಸಭೆಗಳವರೆಲ್ಲರೂ ಅವರನ್ನು ವಂದಿಸುತ್ತಾರೆ.
- 5 ಅದರಂತೆಯೇ ಅವರ ಮನೆಯಲ್ಲಿರುವ ಸಭೆಗೂ ವಂದನೆ ಹೇಳಿರಿ; ಅಖಾಯದಲ್ಲಿ ಕ್ರಿಸ್ತನಿಗೆ ಪ್ರಥಮ ಫಲವಾಗಿರುವ ನನ್ನ ಪ್ರಿಯನಾದ ಎಪೈನೆತನಿಗೂ ವಂದನೆ.
- 6 ನಮಗೋಸ್ಕರ ಬಹು ಶ್ರಮೆಪಟ್ಟ ಮರಿಯಳಿಗೆ ವಂದನೆ.
- 7 ನನಗಿಂತ ಮೊದಲು ಕ್ರಿಸ್ತ ನಲ್ಲಿದ್ದು ಅಪೊಸ್ತಲರಲ್ಲಿ ಪ್ರಖ್ಯಾತಿಗೊಂಡ ನನ್ನ ಬಂಧುಗಳೂ ನನ್ನ ಜೊತೆ ಸೆರೆಯವರೂ ಆಗಿರುವ ಅಂದ್ರೋನಿಕನಿಗೂ ಯೂನ್ಯನಿಗೂ ವಂದನೆಗಳು.
- 8 ಕರ್ತನಲ್ಲಿ ನನ್ನ ಪ್ರಿಯನಾಗಿರುವ ಅಂಪ್ಲಿಯಾತನಿಗೆ ವಂದನೆ.
- 9 ಕ್ರಿಸ್ತನಲ್ಲಿ ನಮ್ಮ ಸಹಾಯಕನಾದ ಉರ್ಬಾನನಿಗೂ ನನ್ನ ಪ್ರಿಯನಾದ ಸ್ತಾಖುನಿಗೂ ವಂದನೆಗಳು.
- 10 ಕ್ರಿಸ್ತನಲ್ಲಿ ಮೆಚ್ಚಿಕೆ ಹೊಂದಿದ ಅಪೆಲ್ಲ ನಿಗೆ ವಂದನೆ; ಅರಿಸ್ತೊಬೂಲನ ಮನೆಯವರಿಗೆ ವಂದನೆಗಳು.
- 11 ನನ್ನ ಬಂಧುವಾದ ಹೆರೊಡಿಯೋ ನನಿಗೆ ವಂದನೆ. ಕರ್ತನಲ್ಲಿರುವ ನಾರ್ಕಿಸ್ಸನ ಮನೆ ಯವರಿಗೆ ವಂದನೆಗಳು.
- 12 ಕರ್ತನಲ್ಲಿ ಪ್ರಯಾಸಪ ಡುವ ತ್ರುಫೈನಳಿಗೂ ತ್ರುಫೋಸಳಿಗೂ ವಂದನೆಗಳು. ಕರ್ತನಲ್ಲಿ ಹೆಚ್ಚಾಗಿ ಪ್ರಯಾಸಪಟ್ಟಿರುವ ಪ್ರಿಯ ಪೆರ್ಸೀ ಸಳಿಗೆ ವಂದನೆ.
- 13 ಕರ್ತನಲ್ಲಿ ಆರಿಸಲ್ಪಟ್ಟ ರೂಫನಿಗೂ ನನಗೆ ತಾಯಿಯಂತಿರುವ ಅವನ ತಾಯಿಗೂ ವಂದನೆ ಗಳು.
- 14 ಅಸುಂಕ್ರಿತನಿಗೂ ಪ್ಲೆಗೋನನಿಗೂ ಹೆರ್ಮೇ ಯನಿಗೂ ಪತ್ರೋಬನಿಗೂ ಹೆರ್ಮಾನನಿಗೂ ಅವ ರೊಂದಿಗಿರುವ ಸಹೋದರರಿಗೂ ವಂದನೆಗಳು.
- 15 ಫಿಲೊಲೊಗನಿಗೂ ಯೂಲ್ಯಳಿಗೂ ನೇರ್ಯನಿಗೂ ಅವನ ಸಹೋದರರಿಗೂ ಒಲುಂಪನಿಗೂ ಅವರೊಂದಿ ಗಿರುವ ಪರಿಶುದ್ಧರೆಲ್ಲರಿಗೂ ವಂದನೆಗಳು.
- 16 ಪವಿತ್ರ ವಾದ ಮುದ್ದಿನಿಂದ ಒಬ್ಬರನ್ನೊಬ್ಬರು ವಂದಿಸಿರಿ. ಕ್ರಿಸ್ತನ ಸಭೆಗಳು ನಿಮ್ಮನ್ನು ವಂದಿಸುತ್ತವೆ.
- 17 ಸಹೋದರರೇ, ನೀವು ಹೊಂದಿದ ಉಪದೇಶಕ್ಕೆ ವಿರುದ್ಧವಾಗಿ ಭೇದಗಳನ್ನೂ ವಿಘ್ನಗಳನ್ನೂ ನಿಮ್ಮಲ್ಲಿ ಉಂಟು ಮಾಡುವವರನ್ನು ಗುರುತಿಟ್ಟು ಅವರನ್ನು ಬಿಟ್ಟು ತೊಲಗಿಹೋಗಿರಿ ಎಂದು ನಾನು ನಿಮ್ಮನ್ನು ಬೇಡಿ ಕೊಳ್ಳುತ್ತೇನೆ.
- 18 ಅಂಥವರು ನಮ್ಮ ಕರ್ತನಾದ ಯೇಸು ಕ್ರಿಸ್ತನ ಸೇವೆಯನ್ನು ಮಾಡದೆ ತಮ್ಮ ಹೊಟ್ಟೆಯ ಸೇವೆಯನ್ನೇ ಮಾಡುವವರಾಗಿ ನಯದ ನುಡಿ ಗಳಿಂದಲೂ ಹೊಗಳಿಕೆಯ ಮಾತುಗಳಿಂದಲೂ ನಿಷ್ಕಪ ಟಿಗಳ ಹೃದಯಗಳನ್ನು ಮೋಸಗೊಳಿಸುತ್ತಾರೆ.
- 19 ನಿಮ್ಮ ವಿಧೇಯತ್ವವು ಎಲ್ಲರಿಗೂ ಪ್ರಸಿದ್ಧವಾಗಿದ್ದದರಿಂದ ನಿಮ್ಮ ವಿಷಯದಲ್ಲಿ ನಾನು ಆನಂದಪಡುತ್ತೇನೆ. ಆದಾಗ್ಯೂ ನೀವು ಒಳ್ಳೇತನದ ವಿಷಯದಲ್ಲಿ ಜಾಣರೂ ಕೆಟ್ಟತನದ ವಿಷಯದಲ್ಲಿ ಕಳಂಕವಿಲ್ಲದವರೂ ಆಗಿರಬೇಕೆಂದು ಅಪೇಕ್ಷಿಸುತ್ತೇನೆ.
- 20 ಶಾಂತಿದಾಯಕನಾದ ದೇವರು ಶೀಘ್ರವಾಗಿ ಸೈತಾನನನ್ನು ನಿಮ್ಮ ಪಾದಗಳ ಕೆಳಗೆ ತುಳಿದುಬಿಡುವನು. ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೊಂದಿಗಿರಲಿ. ಆಮೆನ್.
- 21 ನನ್ನ ಜೊತೆ ಕೆಲಸದವನಾದ ತಿಮೊಥೆಯನೂ ನನ್ನ ಬಂಧುಗಳಾದ ಲೂಕ್ಯನೂ ಯಾಸೋನನೂ ಸೋಸಿಪತ್ರನೂ ನಿಮಗೆ ವಂದನೆಗಳನ್ನು ಹೇಳುತ್ತಾರೆ.
- 22 ಈ ಪತ್ರಿಕೆಯನ್ನು ಬರೆದ ತೆರ್ತ್ಯನೆಂಬ ನಾನು ನಿಮ್ಮನ್ನು ಕರ್ತನಲ್ಲಿ ವಂದಿಸುತ್ತೇನೆ.
- 23 ನನಗೂ ಸಮಸ್ತ ಸಭೆಗೂ ಅತಿಥಿಸತ್ಕಾರವನ್ನು ಮಾಡುತ್ತಿರುವ ಗಾಯನು ನಿಮ್ಮನ್ನು ವಂದಿಸುತ್ತಾನೆ. ಈ ಪಟ್ಟಣದ ಖಜಾನೆಯ ಮೇಲ್ವಿಚಾರಕ ನಾಗಿರುವ ಎರಸ್ತನೂ ಸಹೋದರನಾದ ಕ್ವರ್ತನೂ ನಿಮಗೆ ವಂದನೆಗಳನ್ನು ಹೇಳುತ್ತಾರೆ.
- 24 ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೆಲ್ಲರೊಂದಿಗಿರಲಿ. ಆಮೆನ್.
- 25 ಪ್ರಕಟನೆಯಾದ ಈ ಮರ್ಮಕ್ಕೆ ಅನುಸಾರ ಅಂದರೆ ಯೇಸು ಕ್ರಿಸ್ತನ ವಿಷಯವಾದಂಥ ನಾನು ಸಾರುವಂಥ ಸುವಾರ್ತೆಗನುಸಾರ ನಿಮ್ಮನ್ನು ಸ್ಥಿರಪಡಿ ಸುವದಕ್ಕೆ ಶಕ್ತನಾಗಿರುವಾತನಿಂದ
- 26 ಅನಾದಿಯಿಂದ ಗುಪ್ತವಾಗಿದ್ದ ಮರ್ಮವು ಈಗ ಪ್ರಕಾಶಕ್ಕೆ ಬಂದು ನಿತ್ಯನಾದ ದೇವರ ಅಪ್ಪಣೆಯ ಪ್ರಕಾರ ಪ್ರವಾದಿಗಳ ಗ್ರಂಥಗಳ ಮೂಲಕ ಅನ್ಯಜನರೆಲ್ಲರಿಗೆ ನಂಬಿಕೆಯೆಂಬ ವಿಧೇಯತ್ವವನ್ನು ಉಂಟುಮಾಡುವದಕ್ಕೋಸ್ಕರ ತಿಳಿಸ ಲ್ಪಟ್ಟಿದೆ.
- 27 ಜ್ಞಾನಿಯಾದ ಒಬ್ಬನೇ ದೇವರಿಗೆ ಯೇಸು ಕ್ರಿಸ್ತನ ಮೂಲಕ ಎಂದೆಂದಿಗೂ ಮಹಿಮೆ ಉಂಟಾಗಲಿ. ಆಮೆನ್.
Romans 16
- Details
- Parent Category: New Testament
- Category: Romans
ರೋಮಾಪುರದವರಿಗೆ ಅಧ್ಯಾಯ 16