- 1 ಬೆನ್ಯಾವಿಾನನು ತನ್ನ ಚೊಚ್ಚಲ ಮಗನಾದ ಬೆಳನನ್ನೂ, ಎರಡನೆಯವನಾದ ಅಷ್ಬೇಲ ನನ್ನೂ, ಮೂರನೆಯವನಾದ ಅಹ್ರಹನನ್ನೂ
- 2 ನಾಲ್ಕನೆ ಯವನಾದ ನೋಹನನ್ನೂ, ಐದನೆಯವನಾದ ರಾಫನನ್ನೂ ಪಡೆದನು.
- 3 ಬೆಳನ ಕುಮಾರರು--ಅದ್ವಾರನು ಗೇರನು ಅಬೀಹೂದನು ಅಬೀಷೂವನು
- 4 ನಾಮಾ ನನು ಅಹೋಹನು ಗೇರನು ಶೆಪೂಫಾನನು ಹೂರಾ ಮನು.
- 5 ಏಹೂದನ ಕುಮಾರರು--ನಾಮಾನನು, ಅಹೀಯನು, ಗೇರನು.
- 6 ಇವರೇ ಗೆಬದ ನಿವಾಸಿಗಳ ಪಿತೃಗಳಲ್ಲಿ ಯಜ ಮಾನರಾಗಿದ್ದರು. ಆದರೆ ಅವರನ್ನು ಮಾನಾಹತಿಗೆ ತಕ್ಕೊಂಡು ಹೋದರು.
- 7 ಅವರನ್ನು ತಕ್ಕೊಂಡು ಹೋದ ತರುವಾಯ ಉಚ್ಚನನ್ನೂ ಅಹೀಹುದನನ್ನೂ ಪಡೆದನು.
- 8 ಇದಲ್ಲದೆ ಅವನು ಅವರನ್ನು ಕಳುಹಿಸಿದ ತರುವಾಯ ಶಹರಯಿಮನು ಮೋವಾಬಿನ ದೇಶದಲ್ಲಿ ಮಕ್ಕಳನ್ನು ಪಡೆದನು. ಹೂಷೀಮಳೂ ಬಾರಳೂ ಅವನಿಗೆ ಪತ್ನಿಯರಾಗಿದ್ದರು.
- 9 ಇದಲ್ಲದೆ ಅವನು ತನ್ನ ಹೆಂಡತಿಯಾದ ಹೋದೆಷಳಿಂದ ಯೋವಾಬನನ್ನೂ,
- 10 ಚಿಬ್ಯನನ್ನೂ, ಮೇಷನನ್ನೂ, ಮಲ್ಕಾಮನನ್ನೂ, ಯೆಯೂಚನನ್ನೂ, ಸಾಕ್ಯನನ್ನೂ, ಮಿರ್ಮನನ್ನೂ ಪಡೆದನು. ಅವನ ಕುಮಾರರಾದ ಇವರು ಪಿತೃಗಳಲ್ಲಿ ಯಜಮಾನರಾಗಿದ್ದರು.
- 11 ಹುಷೀಮಳಿಂದ ಅವನು ಅಬೀಟೂಬನನ್ನೂ, ಎಲ್ಪಾಲನನ್ನೂ ಪಡೆದನು.
- 12 ಎಲ್ಪಾಳನ ಕುಮಾರರು--ಏಬೆರನು, ಮಿಷಾಮನು, ಶೆಮೆದನು. ಇವನೇ ಒನೋನನ್ನೂ ಲೋದನ್ನೂ ಅವುಗಳ ಗ್ರಾಮಗಳನ್ನೂ ಕಟ್ಟಿಸಿದನು.
- 13 ಇದಲ್ಲದೆ ಅವನು ಗತ್‌ನವರನ್ನು ಓಡಿಸಿಬಿಟ್ಟ ಅಯ್ಯಾಲೋನಿನ ನಿವಾಸಿಗಳ ಪಿತೃಗಳಲ್ಲಿ ಯಜಮಾನರಾದ ಬೆರೀಯನು, ಶಮನು.
- 14 ಬೆರೀಯನ ಕುಮಾರರು -- ಅಹ್ಯೋನು, ಶಾಷಕನು, ಯೆರೇಮೋತನು,
- 15 ಜೆಬದ್ಯನು, ಅರಾ ದನು, ಎದೆರನು,
- 16 ವಿಾಕಾಯೇಲನು, ಇಷ್ಪನು, ಯೋಹನು,
- 17 ಜೆಬದ್ಯನು, ಮೆಷುಲ್ಲಾಮ್, ಹಿಜ್ಕೀ, ಹೆಬೆರ್,
- 18 ಇಷ್ಮೆರೈ, ಇಜ್ಲೀಯ, ಯೋಬಾಬ್‌ಇವರು ಎಲ್ಪಾಲನ ಕುಮಾರರು--
- 19 ಯಾಕೀಮನು, ಜಿಕ್ರೀಯು, ಜಬ್ದಿಯು,
- 20 ಎಲೀಗೇನೈ, ಚಿಲ್ಲೆತೈ, ಎಲೀಯೇಲ್,
- 21 ಅದಾಯ, ಬೆರಾಯ, ಶಿಮ್ರಾತ್ ಇವರು ಶಿವ್ಮೆಾಯ ಕುಮಾರರು.
- 22 ಇಷ್ಪಾನ್, ಏಬೆರ್, ಎಲೀಯೇಲ್,
- 23 ಅಬ್ದೋನನು, ಜಿಕ್ರೀಯು, ಹಾನಾ ನನು,
- 24 ಹನನ್ಯನು, ಏಲಾಮನು, ಅನೆತೋತಿಯನು,
- 25 ಇಫ್ದೆಯನು, ಪೆನೂವೇಲನು ಇವರು ಶಾಷಕನ ಕುಮಾರರು.
- 26 ಶಂಷೆರೈ, ಶೆಹರ್ಯ, ಅತಲ್ಯ,
- 27 ಯಾರೆಷ್ಯನು, ಏಲೀಯನು, ಜಿಕ್ರಿಯು--ಇವರು ಯೆರೋಹಾಮನ ಕುಮಾರರು.
- 28 ಇವರೇ ಪಿತೃಗಳಲ್ಲಿ ಯಜಮಾನರಾಗಿದ್ದು ತಮ್ಮ ವಂಶಗಳ ಮುಖ್ಯಸ್ಥರಾಗಿ ಯೆರೂಸಲೇಮಿನಲ್ಲಿ ವಾಸವಾಗಿದ್ದರು.
- 29 ಗಿಬ್ಯೋನಿಯ ತಂದೆ ಗಿಬ್ಯೋನಿನಲ್ಲಿ ವಾಸವಾಗಿ ದ್ದನು; ಅವನ ಹೆಂಡತಿಯ ಹೆಸರು ಮಾಕಳು.
- 30 ಅವನ ಚೊಚ್ಚಲ ಮಗನು ಅಬ್ದೋನನು; ಚೂರನು, ಕೀಷನು, ಬಾಳನು, ನಾದಾಬನು,
- 31 ಗೆದೋರನು, ಅಹ್ಯೋನು, ಜೆಕೆರನು.
- 32 ಮಿಕ್ಲೋತನು ಶಿಮಾಹನನ್ನು ಪಡೆದನು. ಇವರೂ ಸಹ ಯೆರೂಸಲೇಮಿನಲ್ಲಿ ಸಹೋದರರಿಗೆದುರಾಗಿ ಅವರ ಸಂಗಡ ವಾಸ ವಾಗಿದ್ದರು.
- 33 ನೇರನು ಕೀಷನನ್ನು ಪಡೆದನು; ಕೀಷನು ಸೌಲನನ್ನು ಪಡೆದನು; ಸೌಲನು ಯೋನಾ ತಾನನನ್ನೂ, ಮಲ್ಕೀಷೂವನನ್ನೂ ಅಬೀನಾದಾಬ ನನ್ನೂ, ಎಷ್ಬಾಳನನ್ನೂ ಪಡೆದನು.
- 34 ಯೋನಾತಾನನ ಮಗನು ಮೆರೀಬ್ಬಾಳನು; ಮೆರೀಬ್ಬಾಳನು ವಿಾಕನನ್ನು ಪಡೆದನು.
- 35 ವಿಾಕನ ಕುಮಾರರು--ಪಿತೋನನು, ಮೆಲೆಕನು, ತರೇಯನು, ಆಹಾಜನು.
- 36 ಆಹಾಜನು ಯೆಹೋವದ್ದಾಹನನ್ನು ಪಡೆದನು. ಯೆಹೋವದ್ದಾ ಹನು ಆಲೆಮೆತೆನನ್ನೂ, ಅಜ್ಮಾವೆತನನ್ನೂ, ಜಿವ್ರೆಾ ಯನ್ನೂ ಪಡೆದನು. ಜಿವ್ರೆಾಯು ಮೋಚನನ್ನು ಪಡೆದನು.
- 37 ಮೋಚನು ಬಿನ್ನನನ್ನು ಪಡೆದನು. ಇವನ ಮಗನು ರಾಫನು, ಇವನ ಮಗನು ಎಲ್ಲಾಸನು, ಇವನ ಮಗನು ಆಚೇಲನು.
- 38 ಆಚೇಲನಿಗೆ ಆರು ಮಂದಿ ಕುಮಾರರಿದ್ದರು. ಅವರ ಹೆಸರುಗಳು--ಅಜ್ರೀ ಕಾಮನು, ಬೋಕೆರೂ, ಇಷ್ಮಾಯೇಲನು, ಶೆಯರ್ಯನು, ಓಬದ್ಯನು, ಹಾನಾನನು.
- 39 ಆಚೇಲನ ಸಹೋದರನಾದ ಏಷೆಕನ ಕುಮಾ ರನು ಅವನ ಚೊಚ್ಚಲ ಮಗನಾದ ಊಲಾಮನು, ಎರಡನೆಯವನಾದ ಯೆಯೂಷನು, ಮೂರನೆಯವ ನಾದ ಎಲೀಫೆಲೆಟನು.
- 40 ಈ ಊಲಾಮನ ಕುಮಾ ರರು--ಬಿಲ್ಲುಗಾರರಾಗಿ ಯುದ್ಧದಲ್ಲಿ ಪರಾಕ್ರಮಶಾಲಿ ಗಳಾಗಿದ್ದರು; ಅವರಿಗೆ ಕುಮಾರರೂ ಮೊಮ್ಮಕ್ಕಳೂ ನೂರಾಐವತ್ತು ಮಂದಿಯಾಗಿದ್ದರು. ಇವರೆಲ್ಲರೂ ಬೆನ್ಯಾವಿಾನನ ಕುಮಾರರು.
1 Chronicles 08
- Details
- Parent Category: Old Testament
- Category: 1 Chronicles
1 ಪೂರ್ವಕಾಲವೃತ್ತಾ ಅಧ್ಯಾಯ 8