- 1 ಬಾಲಕನಾದ ಸಮುವೇಲನು ಏಲಿಯ ಮುಂದೆ ಕರ್ತನಿಗೆ ಸೇವೆ ಮಾಡಿಕೊಂಡಿ ದ್ದನು. ಆ ದಿನಗಳಲ್ಲಿ ಕರ್ತನ ವಾಕ್ಯವು ವಿರಳವಾಗಿತ್ತು; ಅಲ್ಲಿ ಪ್ರಕಟವಾದ ದೇವದರ್ಶನವಿರಲಿಲ್ಲ.
- 2 ಆ ಕಾಲ ದಲ್ಲಿ ಆದದ್ದೇನಂದರೆ, ಏಲಿಯು ತನ್ನ ಸ್ಥಳದಲ್ಲಿ ಮಲ ಗಿದ್ದನು; ನೋಡುವದಕ್ಕಾಗದಂತೆ ಅವನ ಕಣ್ಣುಗಳು ಮೊಬ್ಬಾಗುತ್ತಿದ್ದವು.
- 3 ದೇವರ ಮಂಜೂಷವಿರುವ ಕರ್ತನ ಮಂದಿರದಲ್ಲಿ ದೇವರ ದೀಪವು ಆರಿಹೋಗು ವದಕ್ಕಿಂತ ಮುಂಚೆ ಸಮುವೇಲನು ಮಲಗಿದ್ದನು; ಆಗ ಕರ್ತನು ಸಮುವೇಲನನ್ನು ಕರೆದನು.
- 4 ಅದಕ್ಕ ವನು--ಇಗೋ, ನಾನು ಇಲ್ಲಿ ಇದ್ದೇನೆ ಎಂದು ಹೇಳಿ ಏಲಿಯ ಬಳಿಗೆ ಓಡಿಹೋಗಿ,--ಇಗೋ, ಇಲ್ಲಿ ಇದ್ದೇನೆ; ನೀನು ನನ್ನನ್ನು ಕರೆದಿಯಲ್ಲಾ ಅಂದನು.
- 5 ಅದಕ್ಕವನು--ನಾನು ನಿನ್ನನ್ನು ಕರೆಯಲಿಲ್ಲ; ಹೋಗಿ ಮಲಗಿಕೋ ಅಂದನು.
- 6 ಅವನು ಹೋಗಿ ಹಾಗೆಯೇ ಮಲಗಿದನು. ಕರ್ತನು--ಸಮುವೇಲನೇ ಎಂದು ಅವ ನನ್ನು ತಿರಿಗಿ ಕರೆದನು. ಆಗ ಸಮುವೇಲನು ಎದ್ದು ಏಲಿಯ ಬಳಿಗೆ ಹೋಗಿ--ಇಗೋ, ಇದ್ದೇನೆ; ನೀನು ನನ್ನನ್ನು ಕರೆದಿಯಲ್ಲಾ ಅಂದನು. ಅದಕ್ಕವನು--ನನ್ನ ಮಗನೇ, ನಾನು ನಿನ್ನನ್ನು ಕರೆಯಲಿಲ್ಲ; ಹೋಗಿ ಮಲ ಗಿಕೋ ಅಂದನು.
- 7 ಆದರೆ ಸಮುವೇಲನು ಆ ವರೆಗೂ ಕರ್ತನನ್ನು ಅರಿತವನೂ ಅಲ್ಲ; ಕರ್ತನ ವಾಕ್ಯವು ಅವನಿಗೆ ಪ್ರಕಟಿಸಲ್ಪಟ್ಟಿರಲೂ ಇಲ್ಲ.
- 8 ಕರ್ತನು ಮತ್ತೆ ಮೂರನೇ ಸಾರಿ--ಸಮುವೇಲನೇ ಎಂದು ಕರೆದನು. ಅವನು ಎದ್ದು ಏಲಿಯ ಬಳಿಗೆ ಹೋಗಿ--ಇಗೋ, ಇದ್ದೇನೆ; ನೀನು ನನ್ನನ್ನು ಕರೆದಿಯಲ್ಲಾ ಅಂದನು. ಆಗ ಕರ್ತನು ಹುಡುಗನನ್ನು ಕರೆಯುತ್ತಾನೆಂದು ಏಲಿಯು ಗ್ರಹಿಸಿಕೊಂಡನು.
- 9 ಏಲಿಯು ಸಮುವೇಲ ನಿಗೆ--ಹೋಗಿ ಮಲಗು; ಆತನು ನಿನ್ನನ್ನು ಕರೆದಾಗ ನೀನು--ಕರ್ತನೇ, ಮಾತನಾಡು; ನಿನ್ನ ದಾಸನು ಕೇಳು ತ್ತಾನೆ ಎಂದು ಹೇಳು ಅಂದನು. ಹಾಗೆಯೇ ಸಮು ವೇಲನು ಹೋಗಿ ತನ್ನ ಸ್ಥಳದಲ್ಲಿ ಮಲಗಿದನು.
- 10 ಆಗ ಕರ್ತನು ಬಂದು ನಿಂತು ಮೊದಲಿನ ಹಾಗೆಯೇಸಮುವೇಲನೇ, ಸಮುವೇಲನೇ ಎಂದು ಕರೆದನು. ಅದಕ್ಕೆ ಸಮುವೇಲನು--ಮಾತನಾಡು; ನಿನ್ನ ದಾಸನು ಕೇಳುತ್ತಾನೆ ಅಂದನು.
- 11 ಕರ್ತನು ಸಮುವೇಲನಿಗೆ ಹೇಳಿದ್ದೇನಂದರೆ--ಇಗೋ, ನಾನು ಇಸ್ರಾಯೇಲಿನಲ್ಲಿ ಒಂದು ಕಾರ್ಯ ವನ್ನು ಮಾಡುವೆನು; ಅದನ್ನು ಕೇಳುವವನ ಎರಡು ಕಿವಿಗಳೂ ಘಣಘಣಿಸುವವು;
- 12 ನಾನು ಏಲಿಯ ಮನೆಯನ್ನು ಕುರಿತು ಹೇಳಿದ್ದನ್ನೆಲ್ಲಾ ಅವರಿಗೆ ಆ ದಿವಸದಲ್ಲಿ ಮಾಡುತ್ತೇನೆ; ನಾನು ಆರಂಭಿಸಿದ ಹಾಗೆ ಅಂತ್ಯ ವನ್ನು ಮಾಡುವೆನು.
- 13 ತನ್ನ ಕುಮಾರರು ತಮ್ಮ ಭ್ರಷ್ಟತ ನಕ್ಕೆ ಈಡಾದಾಗ ಅವರನ್ನು ಹತೋಟಿಗೆ ತರಲಿಲ್ಲ. ಆದದರಿಂದ ಅವನಿಗೆ, ಅವನು ತಿಳಿದ ದುಷ್ಟತನದ ನಿಮಿತ್ತ ನಾನು ಎಂದೆಂದಿಗೂ ಅವನ ಮನೆಗೆ ನ್ಯಾಯ ತೀರಿಸುವೆನು ಎಂದು ಹೇಳಿದ್ದೇನೆ.
- 14 ಆದದರಿಂದ ಏಲಿಯ ಮನೆಯ ದುಷ್ಟತನವು ಎಂದೆಂದಿಗೂ ಬಲಿ ಯಿಂದಲಾದರೂ ಅರ್ಪಣೆಯಿಂದಲಾದರೂ ಶುದ್ಧ ಮಾಡಲ್ಪಡುವದಿಲ್ಲ ಎಂದು ನಾನು ಏಲಿಯ ಮನೆ ಯನ್ನು ಕುರಿತು ಆಣೆ ಇಟ್ಟೆನು ಅಂದನು.
- 15 ಸಮುವೇಲನು ಉದಯದವರೆಗೂ ಮಲಗಿದ್ದು ಕರ್ತನ ಮನೆಯ ಬಾಗಿಲುಗಳನ್ನು ತೆರೆದನು. ಆದರೆ ಸಮುವೇಲನು ದರ್ಶನವನ್ನು ಏಲಿಗೆ ತಿಳಿಸಲು ಭಯ ಪಟ್ಟನು.
- 16 ಆಗ ಏಲಿಯು ಸಮುವೇಲನನ್ನು ಕರೆದು ಅವನಿಗೆ ನನ್ನ ಮಗನಾದ ಸಮುವೇಲನೇ ಅಂದನು.
- 17 ಅದಕ್ಕವನು--ಇಗೋ, ಇದ್ದೇನೆ ಅಂದನು. ಏಲಿ ಯು ಅವನಿಗೆ--ಕರ್ತನು ನಿನಗೆ ಹೇಳಿದ ಮಾತೇನು? ನನಗೆ ಅದನ್ನು ಮರೆಮಾಡಬೇಡ. ಕರ್ತನು ನಿನಗೆ ಹೇಳಿದ ಸಕಲ ವಾರ್ತೆಗಳಲ್ಲಿ ನೀನು ಯಾವದನ್ನಾದರೂ ನನಗೆ ಮರೆಮಾಡಿದರೆ ದೇವರು ನಿನಗೆ ಅದಕ್ಕಿಂತ ಅಧಿಕವಾಗಿ ಮಾಡಲಿ ಅಂದನು.
- 18 ಸಮುವೇಲನು ಒಂದನ್ನೂ ಮರೆಮಾಡದೆ ಆ ಮಾತುಗಳನ್ನೆಲ್ಲಾ ಅವನಿಗೆ ತಿಳಿಸಿದನು. ಅದಕ್ಕವನು--ಅದು ಕರ್ತನದೇ ಆಗಿದೆ. ಆತನು ಸರಿತೋರುವದನ್ನು ಮಾಡಲಿ ಅಂದನು.
- 19 ಸಮುವೇಲನು ಬೆಳೆಯುತ್ತಾ ಬಂದನು; ಕರ್ತನು ಅವನ ಸಂಗಡ ಇದ್ದು ಆತನ ವಾಕ್ಯಗಳಲ್ಲಿ ಒಂದಾ ದರೂ ಭೂಮಿಗೆ ಬಿದ್ದು ಹೋಗಗೊಡಿಸಲಿಲ್ಲ.
- 20 ಆಗ ಸಮುವೇಲನು ಕರ್ತನ ಪ್ರವಾದಿಯಾಗಿ ಸ್ಥಿರಮಾಡಲ್ಪ ಟ್ಟನೆಂದು ದಾನ್ ಊರು ಮೊದಲುಗೊಂಡು ಬೇರ್ಷ ಬದ ವರೆಗೂ ಇದ್ದ ಇಸ್ರಾಯೇಲ್ಯರೆಲ್ಲರು ತಿಳಿದಿದ್ದರು.
- 21 ಕರ್ತನು ತಿರಿಗಿ ಶೀಲೋವಿನಲ್ಲಿ ಕಾಣಿಸಿಕೊಂಡನು. ಕರ್ತನು ಶೀಲೋವಿನಲ್ಲಿ ತನ್ನ ವಾಕ್ಯದಿಂದ ಸಮು ವೇಲನಿಗೆ ತನ್ನನ್ನು ಪ್ರಕಟಿಸಿಕೊಂಡನು.
1 Samuel 03
- Details
- Parent Category: Old Testament
- Category: 1 Samuel
1 ಸಮುವೇಲನು ಅಧ್ಯಾಯ 3