- 1 ಸಮುವೇಲನು ಇಸ್ರಾಯೇಲ್ಯರೆಲ್ಲರಿಗೆ--ಇಗೋ, ನೀವು ನನಗೆ ಹೇಳಿದ್ದೆಲ್ಲಾದರಲ್ಲಿ ನಿಮ್ಮ ಮಾತು ಕೇಳಿ ನಿಮ್ಮ ಮೇಲೆ ಒಬ್ಬ ಅರಸನನ್ನು ನೇಮಿಸಿದೆನು.
- 2 ಇಗೋ, ಆ ಅರಸನು ಇನ್ನು ಮುಂದೆ ನಿಮ್ಮನ್ನು ನಡಿಸುತ್ತಾನೆ. ಈಗ ನಾನು ತಲೆನರೆತ ಮುದುಕನಾಗಿದ್ದೇನೆ. ಇಗೋ, ನನ್ನ ಕುಮಾರರು ನಿಮ್ಮ ಸಂಗಡ ಇದ್ದಾರೆ. ನಾನು ನನ್ನ ಬಾಲ್ಯದಿಂದ ಈ ದಿನದ ವರೆಗೂ ನಿಮ್ಮ ಮುಂದೆ ನಡಕೊಂಡಿದ್ದೇನೆ.
- 3 ಇಗೋ, ನಾನು ಇಲ್ಲಿದ್ದೇನೆ; ಕರ್ತನ ಮುಂದೆಯೂ ಆತನ ಅಭಿಷಿಕ್ತನ ಮುಂದೆಯೂ ನನಗೆ ವಿರೋಧವಾಗಿ ಸಾಕ್ಷಿಕೊಡಿರಿ. ನಾನು ಯಾರ ಎತ್ತನ್ನಾದರೂ ಕತ್ತೆಯ ನ್ನಾದರೂ ತೆಗೆದುಕೊಂಡೆನೋ? ಯಾರಿಗಾದರೂ ವಂಚನೆ ಮಾಡಿದೆನೋ? ಯಾರನ್ನಾದರೂ ಹಿಂಸಿಸಿ ದೆನೋ? ಯಾರಿಂದಲಾದರೂ ಕಣ್ಣಿಗೆ ಮರೆಮಾಡುವ ಲಂಚವನ್ನು ತೆಗೆದುಕೊಂಡೆನೋ? ಹೀಗಿದ್ದರೆ ಹೇಳಿರಿ ತಿರಿಗಿಕೊಡುತ್ತೇನೆ ಅಂದನು.
- 4 ಅವರು--ನೀನು ನಮಗೆ ವಂಚನೆ ಮಾಡಲಿಲ್ಲ, ನಮ್ಮನ್ನು ಹಿಂಸಿಸಲಿಲ್ಲ; ನೀನು ಯಾವನ ಕೈಯಿಂದ ಏನಾದರೂ ತಕ್ಕೊಳ್ಳಲಿಲ್ಲ ಅಂದರು.
- 5 ಅವನು ಅವರಿಗೆ--ನೀವು ನನ್ನಲ್ಲಿ ಏನಾದರೂ ಕಂಡು ಹಿಡಿಯಲಿಲ್ಲವೆಂಬದಕ್ಕೆ ಕರ್ತನೇ ನಿಮಗೆ ಸಾಕ್ಷಿಯಾಗಿ ದ್ದಾನೆ; ಆತನ ಅಭಿಷಿಕ್ತನು ಈಹೊತ್ತು ಸಾಕ್ಷಿಯಾಗಿದ್ದಾನೆ ಅಂದನು. ಅದಕ್ಕವರು--ಆತನು ಸಾಕ್ಷಿಯಾಗಿದ್ದಾನೆ ಅಂದರು.
- 6 ಆಗ ಸಮುವೇಲನು ಜನರಿಗೆ--ಮೋಶೆ ಯನ್ನೂ ಆರೋನನನ್ನೂ ಮುಂದಕ್ಕೆ ತಂದು ನಿಮ್ಮ ಪಿತೃಗಳನ್ನು ಐಗುಪ್ತದೇಶದೊಳಗಿಂದ ಬರಮಾಡಿದ ಕರ್ತನೇ ಇದಕ್ಕೆ ಸಾಕ್ಷಿ.
- 7 ಆದದರಿಂದ ಈಗ ನಿಲ್ಲಿರಿ; ಕರ್ತನು ನಿಮಗೂ ನಿಮ್ಮ ತಂದೆಗಳಿಗೂ ಮಾಡಿದ ಸಮಸ್ತ ನೀತಿಯುಳ್ಳ ಕ್ರಿಯೆಗಳ ವಿಷಯ ಕರ್ತನ ಮುಂದೆ ನಿಮಗೆ ನ್ಯಾಯ ಹೇಳುತ್ತೇನೆ.
- 8 ಯಾಕೋಬನು ಐಗುಪ್ತಕ್ಕೆ ಬಂದ ತರುವಾಯ ನಿಮ್ಮ ತಂದೆಗಳು ಕರ್ತ ನಿಗೆ ಮೊರೆಯಿಟ್ಟರು. ಆಗ ಕರ್ತನು ಮೋಶೆಯನ್ನೂ ಆರೋನನನ್ನೂ ಕಳುಹಿಸಿದನು. ಇವರು ನಿಮ್ಮ ತಂದೆ ಗಳನ್ನು ಐಗುಪ್ತದಿಂದ ಕರತಂದು ಅವರನ್ನು ಈ ದೇಶ ದಲ್ಲಿ ವಾಸಿಸುವಂತೆ ಮಾಡಿದನು.
- 9 ಆದರೆ ಅವರು ತಮ್ಮ ದೇವರಾದ ಕರ್ತನನ್ನು ಮರೆತುಹೋದಾಗ ಆತನು ಅವರನ್ನು ಹಾಚೋರಿನ ಸೈನ್ಯಾಧಿಪತಿಯಾದ ಸೀಸೆರನ ಕೈಗೂ ಫಿಲಿಷ್ಟಿಯರ ಕೈಗೂ ಮೋವಾಬ್ಯರ ಅರಸನ ಕೈಗೂ ಮಾರಿಬಿಟ್ಟನು.
- 10 ಇವರು ಅವರ ಸಂಗಡ ಯುದ್ಧಮಾಡಿದರು. ಆದದರಿಂದ ಅವರು ಕರ್ತನಿಗೆ ಮೊರೆಯಿಟ್ಟು--ನಾವು ಕರ್ತನಾದ ನಿನ್ನನ್ನು ಬಿಟ್ಟು ಬಾಳನನ್ನೂ ಅಷ್ಟೋರೆತನ್ನೂ ಸೇವಿಸಿದ್ದರಿಂದ ಪಾಪಮಾಡಿದೆವು. ಈಗ ನೀನು ನಮ್ಮ ಶತ್ರುಗಳ ಕೈಯಿಂದ ನಮ್ಮನ್ನು ಬಿಡಿಸು, ನಾವು ನಿನ್ನನ್ನು ಸೇವಿಸು ವೆವು ಅಂದರು.
- 11 ಆಗ ಕರ್ತನು ಯೆರುಬ್ಬಾಳನನ್ನೂ ಬೆದಾನನನ್ನೂ ಯೆಫ್ತಾಹನನ್ನೂ ಸಮುವೇಲನನ್ನೂ ಕಳುಹಿಸಿ ನಿಮ್ಮನ್ನು ಸಮಸ್ತ ದಿಕ್ಕಿನಲ್ಲಿರುವ ನಿಮ್ಮ ಶತ್ರು ಗಳ ಕೈಯಿಂದ ಬಿಡಿಸಿ ನೀವು ಸುರಕ್ಷಿತವಾಗಿ ವಾಸಿಸು ವಂತೆ ಮಾಡಿದನು.
- 12 ಆದರೆ ಅಮ್ಮೋನನ ಮಕ್ಕಳ ಅರಸನಾದ ನಾಹಾಷನು ನಿಮಗೆ ವಿರೋಧವಾಗಿ ಯುದ್ಧ ಮಾಡಲು ಬರುವದನ್ನು ನೋಡಿದಾಗ ನಿಮ್ಮ ದೇವರಾದ ಕರ್ತನೇ ನಿಮಗೆ ಅರಸನಾಗಿದ್ದರೂ ನೀವು ನನಗೆ--ಹಾಗೆ ಬೇಡ; ಒಬ್ಬ ಅರಸನು ನಮ್ಮನ್ನು ಆಳಬೇಕು ಅಂದಿರಿ.
- 13 ಇಗೋ, ನೀವು ಆರಿಸಿಕೊಂಡು ಅಪೇಕ್ಷಿಸಿದ ಅರಸನು ಇಲ್ಲಿ ಇದ್ದಾನೆ. ಇಗೋ, ಕರ್ತನು ನಿಮ್ಮ ಮೇಲೆ ಅವನನ್ನು ಅರಸನನ್ನಾಗಿ ನೇಮಿಸಿದ್ದಾನೆ.
- 14 ನೀವು ಕರ್ತನ ಮಾತಿಗೆ ವಿರೋಧವಾಗಿ ತಿರುಗಿ ಬೀಳದೆ ಕರ್ತನಿಗೆ ಭಯಪಟ್ಟು ಆತನನ್ನು ಸೇವಿಸಿ ಆತನ ಮಾತಿಗೆ ವಿಧೇಯರಾದರೆ ನೀವೂ ನಿಮ್ಮ ಮೇಲೆ ಆಳುವ ಅರಸನೂ ನಿಮ್ಮ ದೇವರಾದ ಕರ್ತನನ್ನು ತಪ್ಪದೆ ಹಿಂಬಾಲಿಸುವಿರಿ.
- 15 ನೀವು ಕರ್ತನ ಮಾತಿಗೆ ವಿಧೇಯರಾಗದಿದ್ದರೆ, ಕರ್ತನ ಆಜ್ಞೆಗೆ ವಿರೋಧವಾಗಿ ತಿರಿಗಿ ಬಿದ್ದರೆ, ಕರ್ತನ ಹಸ್ತವು ನಿಮ್ಮ ತಂದೆಗಳಿಗೆ ವಿರೋಧವಾಗಿದ್ದಂತೆಯೇ ನಿಮಗೂ ವಿರೋಧವಾಗಿ ರುವದು.
- 16 ಈಗ ನಿಂತುಕೊಂಡು ಕರ್ತನು ನಿಮ್ಮ ಕಣ್ಣುಗಳ ಮುಂದೆ ಮಾಡುವ ಈ ದೊಡ್ಡ ಕಾರ್ಯ ವನ್ನು ನೋಡಿರಿ.
- 17 ಈ ದಿನ ಗೋಧಿಯ ಸುಗ್ಗಿ ಅಲ್ಲವೋ? ನೀವು ನಿಮಗೆ ಒಬ್ಬ ಅರಸನನ್ನು ಕೇಳಿದ್ದ ರಿಂದ ಕರ್ತನ ದೃಷ್ಟಿಗೆ ನೀವು ಮಾಡಿದ ನಿಮ್ಮ ಕೆಟ್ಟತ ನವು ಹೆಚ್ಚಾಗಿದೆ ಎಂದು ತಿಳುಕೊಂಡು ನೋಡುವ ಹಾಗೆ ನಾನು ಕರ್ತನಿಗೆ ಮೊರೆಯಿಡುವೆನು; ಆಗ ಆತನು ಗುಡುಗನ್ನೂ ಮಳೆಯನ್ನೂ ಕಳುಹಿಸುವನು.
- 18 ಸಮುವೇಲನು ಕರ್ತನಿಗೆ ಮೊರೆ ಇಟ್ಟದ್ದರಿಂದ ಆ ದಿವಸದಲ್ಲೇ ಕರ್ತನು ಗುಡುಗನ್ನೂ ಮಳೆಯನ್ನೂ ಕಳುಹಿಸಿದನು. ಆಗ ಜನರೆಲ್ಲರು ಕರ್ತನಿಗೂ ಸಮು ವೇಲನಿಗೂ ಬಹಳವಾಗಿ ಭಯಪಟ್ಟರು.
- 19 ಜನರೆಲ್ಲರು ಸಮುವೇಲನಿಗೆ--ನಾವು ಸಾಯದ ಹಾಗೆ ನಿನ್ನ ದೇವ ರಾದ ಕರ್ತನಿಗೆ ನಿನ್ನ ಸೇವಕರಿಗೋಸ್ಕರ ಪ್ರಾರ್ಥನೆ ಮಾಡು. ಯಾಕಂದರೆ ನಮಗೆ ಒಬ್ಬ ಅರಸನು ಬೇಕೆಂದು ಕೇಳಿ ನಮ್ಮ ಸಮಸ್ತ ಪಾಪಗಳಿಗೆ ಕೆಟ್ಟತನ ವನ್ನು ಕೂಡಿಸಿದೆವೆಂದು ಹೇಳಿದರು.
- 20 ಆಗ ಸಮು ವೇಲನು ಜನರಿಗೆ--ನೀವು ಭಯಪಡಬೇಡಿರಿ. ಈ ಕೆಟ್ಟತನವನ್ನೆಲ್ಲಾ ಮಾಡಿದ್ದೀರಿ; ಆದರೂ ಕರ್ತನನ್ನು ಬಿಟ್ಟು ತಿರುಗದೆ ನಿಮ್ಮ ಪೂರ್ಣ ಹೃದಯದಿಂದ ಕರ್ತನನ್ನು ಸೇವಿಸಿರಿ. ಲಾಭಕರವಿಲ್ಲದಂಥವುಗಳನ್ನೂ ಬಿಡಿಸಲಾರದವುಗಳನ್ನೂ ವ್ಯರ್ಥವಾದವುಗಳನ್ನೂ ಅನುಸರಿಸುವದಕ್ಕೆ ಹೋಗಬೇಡಿರಿ.
- 21 ಅವು ವ್ಯರ್ಥ ವಾದವುಗಳೇ ಸರಿ. ಯಾಕಂದರೆ ಕರ್ತನು ತನ್ನ ಮಹತ್ತಾದ ಹೆಸರಿಗೋಸ್ಕರ ತನ್ನ ಜನರನ್ನು ಕೈಬಿಡು ವದಿಲ್ಲ.
- 22 ನಿಮ್ಮನ್ನು ತನ್ನ ಜನರಾಗಿ ಮಾಡಿಕೊಳ್ಳಲು ಇಚ್ಛೈಸಿದ್ದಾನಲ್ಲಾ! ಇದಲ್ಲದೆ ನಾನು ನಿಮಗೋಸ್ಕರ ಪ್ರಾರ್ಥನೆ ಮಾಡದೆ ಕರ್ತನಿಗೆ ವಿರೋಧವಾಗಿ ಮಾಡುವ ಪಾಪವು ನನಗೆ ದೂರವಾಗಿರಲಿ.
- 23 ಉತ್ತಮವಾದ ಸರಿಯಾದ ಮಾರ್ಗವನ್ನು ನಿಮಗೆ ಬೋಧಿಸುವೆನು.
- 24 ಆದರೆ ನೀವು ಕರ್ತನಿಗೆ ಭಯ ಪಟ್ಟು ನಿಮ್ಮ ಪೂರ್ಣ ಹೃದಯದಿಂದ ಸತ್ಯದಲ್ಲಿ ಆತ ನನ್ನು ಸೇವಿಸಿರಿ. ಆತನು ನಿಮಗೋಸ್ಕರ ಎಂಥ ಮಹತ್ತಾದ ಕಾರ್ಯಗಳನ್ನು ಮಾಡಿದನೆಂದು ಆಲೋ ಚಿಸಿರಿ.
- 25 ಆದರೆ ನೀವು ಕೆಟ್ಟತನವನ್ನು ಇನ್ನೂ ಮಾಡಿದರೆ ನೀವೂ ನಿಮ್ಮ ಅರಸನೂ ನಾಶವಾಗುವಿರಿ ಅಂದನು.
1 Samuel 12
- Details
- Parent Category: Old Testament
- Category: 1 Samuel
1 ಸಮುವೇಲನು ಅಧ್ಯಾಯ 12