- 1 ಸೌಲನು ದಾವೀದನನ್ನು ಕೊಂದುಹಾಕುವ ಹಾಗೆ ತನ್ನ ಮಗನಾದ ಯೋನಾತಾನನ ಸಂಗಡವೂ ತನ್ನ ಸಮಸ್ತ ಸೇವಕರ ಸಂಗಡವೂ ಮಾತನಾಡಿದನು.
- 2 ಆದರೆ ಸೌಲನ ಮಗನಾದ ಯೋನಾತಾನನು ದಾವೀದನನ್ನು ಬಹಳವಾಗಿ ಪ್ರೀತಿ ಸುತ್ತಿದ್ದನು; ಯೋನಾತಾನನು ದಾವೀದನಿಗೆ--ನನ್ನ ತಂದೆಯಾದ ಸೌಲನು ನಿನ್ನನ್ನು ಕೊಲ್ಲಬೇಕೆಂದು ಹುಡುಕುತ್ತಾನೆ; ನೀನು ನಾಳೆ ಬೆಳಗಿನವರೆಗೆ ಎಚ್ಚರಿಕೆ ಯಾಗಿದ್ದು ಮರೆಯಾದ ಸ್ಥಳಗಳಲ್ಲಿ ಅಡಗಿಕೋ.
- 3 ಆಗ ನಾನು ಹೊರಟು ಬಂದು ನೀನು ಇರುವ ಹೊಲದಲ್ಲಿ ನನ್ನ ತಂದೆಯ ಬಳಿಯಲ್ಲಿ ನಿಂತುಕೊಂಡು ನಿನಗೋಸ್ಕರ ನನ್ನ ತಂದೆಯ ಸಂಗಡ ಮಾತನಾಡಿದ್ದನ್ನು ನಿನಗೆ ತಿಳಿಸುವೆನು ಅಂದನು.
- 4 ಹಾಗೆಯೇ ಯೋನಾತಾನನು ತನ್ನ ತಂದೆಯಾದ ಸೌಲನ ಸಂಗಡ ದಾವೀದನನ್ನು ಕುರಿತು ಒಳ್ಳೇದನ್ನು ಮಾತನಾಡಿ ಅವನಿಗೆ--ಅರಸನು ತನ್ನ ಸೇವಕನಾದ ದಾವೀದನಿಗೆ ವಿರೋಧವಾಗಿ ಪಾಪಮಾಡದೆ ಇರಲಿ, ಅವನು ನಿನಗೆ ವಿರೋಧವಾಗಿ ಪಾಪಮಾಡಲಿಲ್ಲ; ಅವನ ಕ್ರಿಯೆಗಳು ನಿನಗೆ ಬಹಳ ಉತ್ತಮವಾಗಿವೆ;
- 5 ಅವನು ತನ್ನ ಪ್ರಾಣವನ್ನು ತನ್ನ ಕೈಯಲ್ಲಿ ಹಿಡುಕೊಂಡು ಫಿಲಿಷ್ಟಿಯನನ್ನು ಕೊಂದನು. ಕರ್ತನು ಎಲ್ಲಾ ಇಸ್ರಾಯೇಲಿಗೋಸ್ಕರ ದೊಡ್ಡ ರಕ್ಷಣೆ ಯನ್ನುಂಟು ಮಾಡಿದನು. ನೀನೂ ನೋಡಿ ಸಂತೋಷ ಪಟ್ಟೆ; ಈಗ ಕಾರಣವಿಲ್ಲದೆ ದಾವೀದನನ್ನು ಕೊಂದು ನಿರಪರಾಧಿಯ ರಕ್ತಕ್ಕೆ ವಿರೋಧವಾಗಿ ಪಾಪವನ್ನು ಮಾಡುವದು ಯಾಕೆ ಅಂದನು.
- 6 ಆಗ ಸೌಲನು ಯೋನಾತಾನನ ಮಾತನ್ನು ಕೇಳಿ--ಕರ್ತನಾಣೆ ಅವನುಕೊಲೆಯಾಗುವದಿಲ್ಲ ಅಂದನು.
- 7 ಆಗ ಯೋನಾತಾ ನನು ದಾವೀದನನ್ನು ಕರೆದು ಆ ಮಾತುಗಳನ್ನೆಲ್ಲಾ ಅವನಿಗೆ ತಿಳಿಸಿ ದಾವೀದನನ್ನು ಸೌಲನ ಬಳಿಗೆ ಕರ ತಂದನು; ಅವನು ಮುಂಚಿನ ಹಾಗೆಯೇ ಅವನ ಬಳಿಯಲ್ಲಿ ಇದ್ದನು.
- 8 ಆದರೆ ತಿರಿಗಿ ಯುದ್ಧ ಉಂಟಾ ಯಿತು; ಆಗ ದಾವೀದನು ಹೋಗಿ ಫಿಲಿಷ್ಟಿಯರ ಸಂಗಡ ಯುದ್ಧ ಮಾಡಿ ಅವರನ್ನು ದೊಡ್ಡ ಸಂಹಾರ ದಿಂದ ಹೊಡೆದನು; ಅವರು ಅವನ ಎದುರಿನಿಂದ ಓಡಿಹೋದರು.
- 9 ಸೌಲನು ತನ್ನ ಕೈಯಲ್ಲಿ ಈಟಿಯನ್ನು ಹಿಡಿದು ತನ್ನ ಮನೆಯೊಳಗೆ ಕುಳಿತಿರುವಾಗ ಕರ್ತನಿಂದ ಕಳುಹಿಸಲ್ಪಟ್ಟ ದುರಾತ್ಮವು ಅವನ ಮೇಲೆ ಬಂತು; ದಾವೀದನು ತನ್ನ ಕೈಯಿಂದ (ಕಿನ್ನರಿ) ಬಾರಿಸುತ್ತಿದ್ದನು.
- 10 ಆಗ ಸೌಲನು ದಾವೀದನನ್ನು ಈಟಿಯಿಂದ ಗೋಡೆಗೆ ಹತ್ತಿಕೊಳ್ಳುವ ಹಾಗೆ ಹೊಡೆಯಬೇಕೆಂದು ಯತ್ನಿಸಿದನು; ಆದರೆ ಇವನು ಸೌಲನ ಎದುರಿನಿಂದ ತಪ್ಪಿಸಿಕೊಂಡನು. ಈಟಿಯು ಗೋಡೆಯಲ್ಲಿ ಹತ್ತಿ ಕೊಳ್ಳುವಂತೆ ಅವನು ಹೊಡೆದನು. ದಾವೀದನು ಆ ರಾತ್ರಿಯಲ್ಲಿ ಓಡಿಹೋಗಿ ತಪ್ಪಿಸಿಕೊಂಡನು.
- 11 ಆದರೆ ದಾವೀದನಿಗಾಗಿ ಕಾದುಕೊಂಡಿದ್ದು ಉದಯ ದಲ್ಲಿ ಅವನನ್ನು ಕೊಂದುಹಾಕುವ ಹಾಗೆ ಸೌಲನು ಅವನ ಮನೆಗೆ ದೂತರನ್ನು ಕಳುಹಿಸಿದನು. ಆಗ ಅವನ ಹೆಂಡತಿಯಾದ ವಿಾಕಲಳು ಅವನಿಗೆ--ನೀನು ಈ ರಾತ್ರಿಯಲ್ಲಿ ನಿನ್ನ ಪ್ರಾಣವನ್ನು ತಪ್ಪಿಸಿಕೊಳ್ಳದೆ ಹೋದರೆ ನಾಳೆ ಕೊಲ್ಲಲ್ಪಡುವಿ ಎಂದು ಹೇಳಿ
- 12 ವಿಾಕಲಳು ದಾವೀದನನ್ನು ಕಿಟಕಿಯ ಮಾರ್ಗವಾಗಿ ಇಳಿಸಿಬಿಟ್ಟಳು; ಅವನು ತಪ್ಪಿಸಿಕೊಂಡು ಓಡಿಹೋದನು.
- 13 ತರುವಾಯ ವಿಾಕಲಳು ಒಂದು ಗೊಂಬೆಯನ್ನು ತೆಗೆದುಕೊಂಡು ಮಂಚದ ಮೇಲೆ ಮಲಗಿಸಿ ಅದರ ತಲೇ ಭಾಗದಲ್ಲಿ ಒಂದು ಹೋತದ ಉಣ್ಣೆಯ ತಲೆದಿಂಬನ್ನು ಹಾಕಿ ಅದನ್ನು ವಸ್ತ್ರದಿಂದ ಮುಚ್ಚಿದಳು.
- 14 ಸೌಲನು ದಾವೀದನನ್ನು ಹಿಡುಕೊಂಡು ಬರಲು ದೂತರನ್ನು ಕಳುಹಿಸಿದಾಗ ಅವನು ಕಾಯಿಲೆಯ ಲ್ಲಿದ್ದಾನೆ ಅಂದಳು.
- 15 ತಿರಿಗಿ ಸೌಲನು ದಾವೀದನನ್ನು ನೋಡುವದಕ್ಕೋಸ್ಕರ ದೂತರನ್ನು ಕಳುಹಿಸಿ--ಅವ ನನ್ನು ನಾನು ಕೊಂದುಹಾಕುವ ಹಾಗೆ ನೀವು ಮಂಚದ ಸಂಗಡ ಅವನನ್ನು ನನ್ನ ಬಳಿಗೆ ತಕ್ಕೊಂಡು ಬನ್ನಿರಿ ಅಂದನು.
- 16 ಹಾಗೆಯೇ ಸೇವಕರು ಬಂದು ನೋಡಿ ದಾಗ ಇಗೋ, ಗೊಂಬೆಯು ಮಂಚದ ಮೇಲೆ ಇತ್ತು;
- 17 ಅದರ ತಲೆಗೆ ಒಂದು ಹೋತದ ಉಣ್ಣೆಯ ತಲೆ ದಿಂಬು ಇತ್ತು. ಆಗ ಸೌಲನು ವಿಾಕಲಳಿಗೆ--ನೀನು ಈ ಪ್ರಕಾರ ನನಗೆ ಮೋಸ ಮಾಡಿ ನನ್ನ ಶತ್ರು ವನ್ನು ಕಳುಹಿಸಿದ್ದೇನು? ಅವನು ತಪ್ಪಿಸಿಕೊಂಡನಲ್ಲಾ ಅಂದನು. ಆಗ ವಿಾಕಲಳು ಸೌಲನಿಗೆ ಪ್ರತ್ಯುತ್ತರ ವಾಗಿ--ನಾನು ನಿನ್ನನ್ನು ಕೊಂದುಹಾಕುವದು ಯಾಕೆ? ನನ್ನನ್ನು ಹೋಗಗೊಡಿಸೆಂದು ಅವನು ನನಗೆ ಹೇಳಿ ದನು ಅಂದಳು.
- 18 ಹೀಗೆಯೇ ದಾವೀದನು ತಪ್ಪಿಸಿಕೊಂಡು ಓಡಿ ಹೋಗಿ ರಾಮದಲ್ಲಿರುವ ಸಮುವೇಲನ ಬಳಿಗೆ ಬಂದು ಸೌಲನು ತನಗೆ ಮಾಡಿದ್ದನ್ನೆಲ್ಲಾ ಅವನಿಗೆ ತಿಳಿಸಿದನು. ಅವನೂ ಸಮುವೇಲನೂ ಹೋಗಿ ನಯೋತಿನಲ್ಲಿ ವಾಸವಾಗಿದ್ದರು.
- 19 ಇಗೋ, ದಾವೀದನು ರಾಮದ ನಯೋತಿನಲ್ಲಿ ಇದ್ದಾನೆಂದು ಸೌಲನಿಗೆ ತಿಳಿಸಲ್ಪಟ್ಟಿತು.
- 20 ಆದದರಿಂದ ಸೌಲನು ದಾವೀದನನ್ನು ಹಿಡು ಕೊಂಡು ಬರಲು ದೂತರನ್ನು ಕಳುಹಿಸಿದನು. ಅವರು ಪ್ರವಾದಿಗಳ ಗುಂಪು ಪ್ರವಾದಿಸುವದನ್ನೂ ಅವರ ಮೇಲೆ ಯಜಮಾನನಾಗಿರುವ ಸಮುವೇಲನು ನಿಂತಿ ರುವದನ್ನೂ ನೋಡಿದಾಗ ದೇವರ ಆತ್ಮನು ಸೌಲನ ದೂತರ ಮೇಲೆ ಬಂದನು; ಅವರು ಸಹ ಪ್ರವಾದಿ ಸಿದರು.
- 21 ಇದು ಸೌಲನಿಗೆ ತಿಳಿಸಲ್ಪಟ್ಟಾಗ ಅವನು ಬೇರೆ ದೂತರನ್ನು ಕಳುಹಿಸಿದನು; ಅವರೂ ಹಾಗೆಯೇ ಪ್ರವಾದಿಸಿದರು. ಮೂರನೆಯ ಸಾರಿ ಸೌಲನು ದೂತ ರನ್ನು ಕಳುಹಿಸಿದನು; ಅವರೂ ಹಾಗೆಯೇ ಪ್ರವಾದಿ ಸಿದರು.
- 22 ಆಗ ಸೌಲನು ತಾನೇ ರಾಮಕ್ಕೆ ಹೋದನು; ಸೇಕೂವಿನಲ್ಲಿರುವ ದೊಡ್ಡ ಬಾವಿಯ ಬಳಿಗೆ ಬಂದುಸಮುವೇಲನು ದಾವೀದನು ಎಲ್ಲಿದ್ದಾರೆ ಎಂದು ಕೇಳಿ ದನು. ಆಗ ಒಬ್ಬನು--ಇಗೋ, ಅವರು ರಾಮದ ನಯೋತಿನಲ್ಲಿದ್ದಾರೆ ಅಂದನು.
- 23 ಹಾಗೆಯೇ ಅವನು ರಾಮದ ನಯೋತಿಗೆ ಹೋದನು; ಆಗ ದೇವರ ಆತ್ಮ ಅವನ ಮೇಲೆ ಬಂದನು; ಅವನು ರಾಮದ ನಯೋತಿಗೆ ಸೇರುವ ವರೆಗೂ ಪ್ರವಾದಿಸುತ್ತಾ ಬಂದನು.
- 24 ಅಲ್ಲಿ ತನ್ನ ವಸ್ತ್ರಗಳನ್ನು ಬಿಚ್ಚಿಹಾಕಿ ತಾನೂ ಹಾಗೆಯೇ ಸಮುವೇಲನ ಮುಂದೆ ಪ್ರವಾದಿಸಿದನು; ಆ ದಿನ ಹಗಲೆಲ್ಲವೂ ರಾತ್ರಿಯೆಲ್ಲವೂ ಬೆತ್ತಲೆಯಾಗಿ ಬಿದ್ದಿದ್ದನು. ಆದದರಿಂದ--ಸೌಲನು ಕೂಡಾ ಪ್ರವಾದಿ ಗಳಲ್ಲಿ ಇದ್ದಾನೋ ಅನ್ನುವರು.
1 Samuel 19
- Details
- Parent Category: Old Testament
- Category: 1 Samuel
1 ಸಮುವೇಲನು ಅಧ್ಯಾಯ 19