- 1 ಇದಲ್ಲದೆ ಅವನು ತಾಮ್ರದ ಬಲಿಪೀಠ ವನ್ನು ಮಾಡಿದನು. ಅದರ ಉದ್ದ ಇಪ್ಪತ್ತು ಮೊಳ, ಅಗಲ ಇಪ್ಪತ್ತು ಮೊಳ, ಎತ್ತರ ಹತ್ತು ಮೊಳ.
- 2 ಅವನು ಎರಕದ ಸಮುದ್ರವನ್ನು ಮಾಡಿಸಿದನು; ಅದು ಸುತ್ತಲಾಗಿ ಈ ಅಂಚಿನಿಂದ ಆ ಅಂಚಿಗೆ ಹತ್ತು ಮೊಳ, ಅದರ ಎತ್ತರ ಐದು ಮೊಳ, ಸುತ್ತಳತೆ ಮೂವತ್ತು ಮೊಳ ನೂಲಳತೆಯಾಗಿತ್ತು.
- 3 ಅದರ ಕೆಳಭಾಗದಲ್ಲಿ ಸುತ್ತಲೂ ಎತ್ತುಗಳ ರೂಪಗಳಿದ್ದವು; ಅವು ಒಂದೊಂದು ಮೊಳಕ್ಕೆ ಹತ್ತಾಗಿ ಆ ಸಮುದ್ರದ ಸುತ್ತಲೂ ಇದ್ದವು. ಇದು ಎರಕ ಹೊಯ್ಯಲ್ಪಡುವಾಗ ಎತ್ತುಗಳ ರೂಪ ಎರಡು ಸಾಲಾಗಿ ಎರಕ ಹೊಯ್ಯ ಲ್ಪಟ್ಟಿದ್ದವು.
- 4 ಅದು ಹನ್ನೆರಡು ಎತ್ತುಗಳ ಮೇಲೆ ನಿಂತಿತ್ತು. ಮೂರು ಉತ್ತರಕ್ಕೂ ಮೂರು ಪಶ್ಚಿಮಕ್ಕೂ ಮೂರು ದಕ್ಷಿಣಕ್ಕೂ ಮೂರು ಪೂರ್ವಕ್ಕೂ ನೋಡು ತ್ತಿದ್ದವು. ಆ ಸಮುದ್ರವು ಅವುಗಳ ಮೇಲೆ ಇತ್ತು,
- 5 ಅವುಗಳ ಹಿಂಭಾಗಗಳೆಲ್ಲಾ ಒಳಗಾಗಿದ್ದವು. ಅದರ ದಪ್ಪವು ನಾಲ್ಕು ಬೆರಳಷ್ಟಾಗಿಯೂ ಅದರ ಅಂಚು ಪಾತ್ರೆಯ ಅಂಚಿನ ಹಾಗೆಯೂ ತಾವರೆ ಪುಷ್ಪದ ಹಾಗೆಯೂ ಇತ್ತು; ಅದು ಮೂರು ಸಾವಿರ ಕೊಳಗ ಹಿಡಿಯುವದಾಗಿತ್ತು.
- 6 ಇದಲ್ಲದೆ ಹತ್ತು ತೊಟ್ಟಿಗಳನ್ನು ಮಾಡಿಸಿ ಅವುಗಳಲ್ಲಿ ದಹನಬಲಿಗೋಸ್ಕರ ಅರ್ಪಿಸು ವವುಗಳನ್ನು ತೊಳೆಯುವ ನಿಮಿತ್ತವಾಗಿ ಬಲಪಾರ್ಶ್ವ ದಲ್ಲಿ ಐದನ್ನೂ ಎಡಪಾರ್ಶ್ವದಲ್ಲಿ ಐದನ್ನೂ ಇರಿಸಿ ದನು. ಆದರೆ ಆ ಸಮುದ್ರವು ಯಾಜಕರಿಗೋಸ್ಕರ ತೊಳೆಯುವದಕ್ಕೆ ಇತ್ತು.
- 7 ಅವುಗಳ ಮಾದರಿಯ ಪ್ರಕಾರವಾಗಿ ಹತ್ತು ಬಂಗಾರದ ದೀಪಸ್ತಂಭಗಳನ್ನು ಮಾಡಿಸಿ ಮಂದಿರದಲ್ಲಿ ಬಲಗಡೆ ಐದನ್ನೂ ಎಡಗಡೆ ಐದನ್ನೂ ಇರಿಸಿದನು.
- 8 ಹಾಗೆಯೇ ಅವನು ಹತ್ತು ಮೇಜುಗಳನ್ನು ಮಾಡಿಸಿ ಮಂದಿರದಲ್ಲಿ ಬಲಗಡೆ ಐದನ್ನೂ ಎಡಗಡೆ ಐದನ್ನೂ ಇರಿಸಿದನು. ನೂರು ಬಂಗಾರದ ಬೋಗುಣಿಗಳನ್ನು ಮಾಡಿಸಿದನು.
- 9 ಇದ ಲ್ಲದೆ ಅವನು ಯಾಜಕರ ಅಂಗಳವನ್ನೂ ದೊಡ್ಡ ಅಂಗಳವನ್ನೂ ಅಂಗಳಗಳಿಗೋಸ್ಕರ ಬಾಗಲುಗಳನ್ನೂ ಮಾಡಿಸಿ
- 10 ಸಮುದ್ರವನ್ನು ತಾಮ್ರದಿಂದ ಹೊದಿಸಿ ದನು. ಸಮುದ್ರವನ್ನು ಪೂರ್ವ ಭಾಗದ ಬಲ ಪಾರ್ಶ್ವ ದಲ್ಲಿ ದಕ್ಷಿಣಕ್ಕೆ ಎದುರಾಗಿ ಇರಿಸಿದನು.
- 11 ಹೂರಾಮನು ಪಾತ್ರೆಗಳನ್ನೂ ಸಲಿಕೆಗಳನ್ನೂ ಬೋಗುಣಿಗಳನ್ನೂ ಮಾಡಿದನು. ಹೀಗೆಯೇ ಹೂರಾ ಮನು ದೇವರ ಆಲಯಕ್ಕೋಸ್ಕರ ಅರಸನಾದ ಸೊಲೊ ಮೋನನಿಗೆ ಮಾಡಬೇಕಾದ ಕಾರ್ಯವನ್ನು ಮಾಡಿ ತೀರಿಸಿದನು.
- 12 ಎರಡು ಸ್ತಂಭಗಳನ್ನೂ ಎರಡು ಸ್ತಂಭ ಗಳ ಮೇಲಿರುವ ಬೋದಿಗೆಗಳನ್ನೂ ಬೋದಿಗೆಗಳ ಮೇಲೆ ಮುಚ್ಚುವ ಎರಡು ಜಾಲರು ಹಣಿತೆಗಳನ್ನೂ
- 13 ಕಂಬಗಳ ಮೇಲಿರುವ ಎರಡು ಬೋದಿಗೆಗಳನ್ನೂ ಮುಚ್ಚತಕ್ಕದ್ದಾದ ಒಂದೊಂದು ಜಾಲರು ಹೆಣಿತಕ್ಕೆ ಎರಡು ಸಾಲು ದಾಳಿಂಬರ ಕಾಯಿಗಳನ್ನೂ ಜಾಲರು ಹಣಿತೆಗಳಿಗೆ ನಾನೂರು ದಾಳಿಂಬರ ಕಾಯಿಗಳನ್ನೂ ಮಾಡಿದನು.
- 14 ಇದಲ್ಲದೆ ಅವನು ಆಧಾರಗಳನ್ನೂ ಅದರ ಮೇಲೆ ಇರುವ ತೊಟ್ಟಿಗಳನ್ನೂ ಮಾಡಿದನು.
- 15 ಒಂದು ಸಮುದ್ರವನ್ನೂ ಅದರ ಕೆಳಗೆ ಇರುವ ಹನ್ನೆರಡು ಎತ್ತುಗಳನ್ನೂ ಪಾತ್ರೆಗಳನ್ನೂ ಸಲಿಕೆಗಳನ್ನೂ ಕೊಂಡಿಗಳನ್ನೂ
- 16 ಅವುಗಳ ಎಲ್ಲಾ ಸಾಮಾನುಗಳನ್ನೂ ಅರಸನಾದ ಸೊಲೊಮೋನನಿಗೆ ಅವನ ತಂದೆಯಾದ ಹೂರಾಮನು ಹೊಳೆಯುವ ತಾಮ್ರದಿಂದ ಕರ್ತನ ಆಲಯಕ್ಕೋಸ್ಕರ ಮಾಡಿದನು.
- 17 ಯೊರ್ದನಿನ ತಗ್ಗಿ ನಲ್ಲಿ ಸುಕ್ಕೋತಿಗೂ ಚೆರೇದಕ್ಕೂ ನಡುವೆ ಇರುವ ಜೇಡಿಮಣ್ಣಿನ ಸ್ಥಳದಲ್ಲಿ ಅರಸನು ಅವುಗಳನ್ನು ಎರಕ ಹೊಯಿಸಿದನು.
- 18 ಹೀಗೆ ಸೊಲೊಮೋನನು ಈ ಸಾಮಾನುಗಳನ್ನೆಲ್ಲಾ ಬಹಳವಾಗಿ ಮಾಡಿಸಿದನು.ಆ ತಾಮ್ರದ ತೂಕ ತಿಳಿಯಕೂಡದಷ್ಟಾಗಿತ್ತು.
- 19 ಹೀಗೆಯೇ ಸೊಲೊಮೋನನು ಕರ್ತನ ಆಲಯದ ಎಲ್ಲಾ ಸಾಮಾನುಗಳನ್ನೂ ಬಂಗಾರದ ಧೂಪಪೀಠ ವನ್ನೂ ಸಮ್ಮುಖದ ರೊಟ್ಟಿಗಳನ್ನು ಇಡುವ ಮೇಜು ಗಳನ್ನೂ
- 20 ಶುದ್ಧ ಬಂಗಾರವಾದ ದೈವೋಕ್ತಿಯ ಸ್ಥಾನದ ಮುಂದೆ ನ್ಯಾಯದ ಪ್ರಕಾರ ಹತ್ತಿರದ ದೀಪ ಸ್ತಂಭಗಳನ್ನೂ
- 21 ಅವುಗಳ ದೀಪಗಳನ್ನೂ ಹೂವು ಗಳನ್ನೂ ದೀಪಗಳ ಚಿಮಟೆಗಳನ್ನೂ ಬಂಗಾರದಿಂದ ಅಂದರೆ ನಿರ್ಮಲವಾದ ಬಂಗಾರದಿಂದ ಮಾಡಿಸಿ ದನು; ಕತ್ತರಿಗಳನ್ನೂ ಬೋಗುಣಿಗಳನ್ನೂ ಸೌಟು ಗಳನ್ನೂ ಅಗ್ನಿಪಾತ್ರೆಗಳನ್ನೂ ಶುದ್ಧ ಬಂಗಾರದಿಂದ ಮಾಡಿಸಿದನು.
- 22 ಇದಲ್ಲದೆ ಆಲಯ ಪ್ರವೇಶದ ಸ್ಥಳವೂ ಅತಿಪರಿಶುದ್ಧ ಸ್ಥಾನಕ್ಕೋಸ್ಕರವಾಗಿರುವ ಅದರ ಅಂತರಂಗದ ಬಾಗಲುಗಳೂ ಮಂದಿರದ ಮನೇ ಬಾಗಲುಗಳೂ ಬಂಗಾರದವುಗಳಾಗಿದ್ದವು.
2 Chronicles 04
- Details
- Parent Category: Old Testament
- Category: 2 Chronicles
2 ಪೂರ್ವಕಾಲವೃತ್ತಾ ಅಧ್ಯಾಯ 4