- 1 ಆಗ ರೆಹಬ್ಬಾಮನು ಶೆಕೆಮಿಗೆ ಹೋದನು; ಅವನನ್ನು ಅರಸನಾಗಿ ಮಾಡುವದಕ್ಕೆ ಸಮಸ್ತ ಇಸ್ರಾಯೇಲ್ಯರು ಶೆಕೆಮಿಗೆ ಬಂದರು.
- 2 ಅರಸ ನಾದ ಸೊಲೊಮೋನನ ಸಮ್ಮುಖದಿಂದ ಓಡಿಹೋಗಿ ಐಗುಪ್ತದಲ್ಲಿ ವಾಸವಾಗಿದ್ದು ಐಗುಪ್ತದಲ್ಲಿರುವ ನೆಬಾ ಟನ ಮಗನಾದ ಯಾರೊಬ್ಬಾಮನು ಇದನ್ನು ಕೇಳಿ ಐಗುಪ್ತದಿಂದ ತಿರಿಗಿ ಬಂದನು.
- 3 ಅವರು ಅವನನ್ನು ಕರೇಕಳುಹಿಸಿದರು. ಆಗ ಯಾರೊಬ್ಬಾಮನೂ ಸಮಸ್ತ ಇಸ್ರಾಯೇಲ್ಯರೂ ರೆಹಬ್ಬಾಮನ ಬಳಿಗೆ ಬಂದು
- 4 ಅವನ ಸಂಗಡ ಮಾತನಾಡಿ--ನಿನ್ನ ತಂದೆಯು ನಮ್ಮ ನೊಗವನ್ನು ಕಠಿಣವಾಗಿ ಮಾಡಿದನು; ಈಗ ನೀನು ನಿನ್ನ ತಂದೆಯ ಕಠಿಣವಾದ ಸೇವೆಯನ್ನೂ ಅವನು ನಮ್ಮ ಮೇಲೆ ಹಾಕಿದ ತನ್ನ ಭಾರವಾದ ನೊಗವನ್ನೂ ಹಗುರ ಮಾಡಿದರೆ ನಾವು ನಿನ್ನನ್ನು ಸೇವಿಸುವೆವು ಅಂದರು.
- 5 ಅವನು ಅವರಿಗೆ--ಮೂರು ದಿವಸಗಳಾದ ತರುವಾಯ ತಿರಿಗಿ ನನ್ನ ಬಳಿಗೆ ಬನ್ನಿರಿ ಎಂದು ಹೇಳಿದ್ದರಿಂದ ಜನರು ಹೊರಟುಹೋದರು.
- 6 ಆಗ ಅರಸನಾದ ರೆಹಬ್ಬಾಮನು ತನ್ನ ತಂದೆಯಾದ ಸೊಲೊಮೋನನು ಬದುಕಿರುವಾಗ ಅವನ ಮುಂದೆ ನಿಲ್ಲುತ್ತಿದ್ದ ಹಿರಿಯರ ಆಲೋಚನೆಯನ್ನು ಕೇಳಿ-- ಈ ಜನರಿಗೆ ಪ್ರತ್ಯುತ್ತರಕೊಡಲು ನೀವು ಏನು ಆಲೋಚನೆ ಹೇಳುತ್ತೀರಿ ಅಂದನು.
- 7 ಅವರು ಅವ ನಿಗೆ--ನೀನು ಈ ಜನರಿಗೆ ದಯವುಳ್ಳವನಾಗಿ ಅವ ರನ್ನು ಮೆಚ್ಚಿಸಿ ಅವರಿಗೆ ಒಳ್ಳೇ ಮಾತುಗಳನ್ನು ಆಡಿದರೆ ಅವರು ಎಂದೆಂದಿಗೂ ನಿನ್ನ ಸೇವಕರಾಗಿರುವರು ಅಂದರು.
- 8 ಆದರೆ ಹಿರಿಯರು ತನಗೆ ಹೇಳಿದ ಆಲೋಚನೆಯನ್ನು ಬಿಟ್ಟು ತನ್ನ ಸಂಗಡ ಬೆಳೆದು ತನ್ನ ಮುಂದೆ ನಿಂತಿರುವ ಯೌವನಸ್ಥರ ಆಲೋಚನೆಯನ್ನು ಅವನು ಕೇಳಿ ಅವರಿಗೆ--
- 9 ನಿನ್ನ ತಂದೆಯು ನಮ್ಮ ಮೇಲೆ ಹಾಕಿದ ನೊಗವನ್ನು ಹಗುರ ಮಾಡೆಂದು ನನಗೆ ಹೇಳಿದ ಈ ಜನರಿಗೆ ಪ್ರತ್ಯುತ್ತರಕೊಡಲು ನೀವು ಯಾವ ಯೋಚನೆ ಹೇಳುತ್ತೀರಿ ಅಂದನು.
- 10 ಆಗ ಅವನ ಕೂಡ ಬೆಳೆದ ಯೌವನಸ್ಥರು ಅವ ನಿಗೆ--ನಿನ್ನ ತಂದೆಯು ನಮ್ಮ ನೊಗವನ್ನು ಭಾರ ಮಾಡಿದನು; ಆದರೆ ನೀನು ಅದನ್ನು ನಮಗೆ ಹಗುರ ಮಾಡೆಂದು
- 11 ನಿನ್ನ ಸಂಗಡ ಮಾತನಾಡಿ ಹೇಳಿದ ಈ ಜನರಿಗೆ ನೀನು ಹೀಗೆ ಹೇಳಬೇಕು--ನನ್ನ ಕಿರು ಬೆರಳು ನನ್ನ ತಂದೆಯ ನಡುವಿಗಿಂತ ದಪ್ಪವಾಗಿರು ವದು. ನನ್ನ ತಂದೆಯು ನಿಮ್ಮ ಮೇಲೆ ಭಾರವಾದ ನೊಗವನ್ನು ಹೊರಿಸಿದನು; ನಾನಾದರೋ ನಿಮ್ಮ ನೊಗವನ್ನು ಹೆಚ್ಚು ಭಾರವಾಗಿ ಮಾಡುವೆನು. ನನ್ನ ತಂದೆಯು ನಿಮ್ಮನ್ನು ಬೆತ್ತಗಳಿಂದ ಶಿಕ್ಷಿಸಿದನು; ಆದರೆ ನಾನು ನಿಮ್ಮನ್ನು ಚೇಳುಗಳಿಂದ ಶಿಕ್ಷಿಸುವೆನು ಎಂದು ಹೇಳು ಅಂದರು.
- 12 ಆಗ--ಮೂರನೇ ದಿವಸದಲ್ಲಿ ನನ್ನ ಬಳಿಗೆ ಬನ್ನಿರಿ ಎಂದು ಅರಸನು ಹೇಳಿದ ಪ್ರಕಾರ ಮೂರನೇ ದಿವಸದಲ್ಲಿ ಯಾರೊಬ್ಬಾಮನೂ ಸಮಸ್ತ ಜನರೂ ರೆಹಬ್ಬಾಮನ ಬಳಿಗೆ ಬಂದರು.
- 13 ಅರಸನು ಜನರಿಗೆ ಕಠಿಣವಾದ ಪ್ರತ್ಯುತ್ತರ ಹೇಳಿದನು; ಹಿರಿಯರು ಅವನಿಗೆ ಕೊಟ್ಟ ಆಲೋಚನೆಯನ್ನು ಬಿಟ್ಟು ಯೌವ ನಸ್ಥರ ಆಲೋಚನೆಯ ಪ್ರಕಾರ ಅವರ ಸಂಗಡ ಮಾತನಾಡಿ ಅವರಿಗೆ--
- 14 ನನ್ನ ತಂದೆಯು ನಿಮ್ಮ ನೊಗವನ್ನು ಭಾರ ಮಾಡಿದನು; ನಾನು ಅದನ್ನು ಇನ್ನೂ ಹೆಚ್ಚು ಭಾರ ಮಾಡುತ್ತೇನೆ. ನನ್ನ ತಂದೆಯು ನಿಮ್ಮನ್ನು ಬೆತ್ತಗಳಿಂದ ಶಿಕ್ಷಿಸಿದನು; ನಾನು ನಿಮ್ಮನ್ನು ಚೇಳುಗಳಿಂದ ಶಿಕ್ಷಿಸುವೆನು ಅಂದನು.
- 15 ಹೀಗೆ ಅರ ಸನು ಜನರ ಮಾತನ್ನು ಕೇಳದೆ ಹೋದನು. ಕರ್ತನು ನೆಬಾಟನ ಮಗನಾದ ಯಾರೊಬ್ಬಾಮನಿಗೆ ಶಿಲೋವಿ ನವನಾದ ಅಹೀಯನ ಮುಖಾಂತರ ಹೇಳಿದ ವಾಕ್ಯವು ಈಡೇರುವದಕ್ಕೆ ಈ ಕಾರಣ ದೇವರಿಂದ ಉಂಟಾ ಯಿತು.
- 16 ಅರಸನು ತಮಗೆ ಕಿವಿಗೊಡದೆ ಹೋದ ನೆಂದು ಸಮಸ್ತ ಇಸ್ರಾಯೇಲ್ಯರು ನೋಡಿ ಅರಸನಿಗೆ ಪ್ರತ್ಯುತ್ತರವಾಗಿ--ದಾವೀದನಲ್ಲಿ ನಮಗೆ ಭಾಗವೇನು? ಇಷಯನ ಮಗನಲ್ಲಿ ನಮಗೆ ಬಾಧ್ಯತೆ ಇಲ್ಲ. ಇಸ್ರಾ ಯೇಲ್ಯರೇ, ನಿಮ್ಮ ಗುಡಾರಗಳಿಗೆ ಹೋಗಿರಿ; ದಾವೀ ದನೇ, ನಿನ್ನ ಮನೆಯನ್ನು ನೋಡಿಕೋ ಎಂದು ಹೇಳಿ ಇಸ್ರಾಯೇಲ್ಯರೆಲ್ಲರು ತಮ್ಮ ಗುಡಾರಗಳಿಗೆ ಹೋದರು.
- 17 ಆದರೆ ಯೆಹೂದದ ಪಟ್ಟಣಗಳಲ್ಲಿ ವಾಸವಾಗಿರುವ ಇಸ್ರಾಯೇಲಿನ ಮಕ್ಕಳ ಮೇಲೆ ರೆಹಬ್ಬಾಮನು ಆಳಿದನು.
- 18 ಆಗ ರೆಹಬ್ಬಾಮನು ಕಪ್ಪಕ್ಕೆ ಗೊತ್ತುಗಾರನಾದ ಹದೋರಾಮನನ್ನು ಕಳು ಹಿಸಲು ಇಸ್ರಾಯೇಲಿನ ಮಕ್ಕಳು ಅವನ ಮೇಲೆ ಕಲ್ಲೆಸೆದು ಕೊಂದುಹಾಕಿದರು, ಆದದರಿಂದ ಅರಸನಾದ ರೆಹಬ್ಬಾಮನು ಯೆರೂಸಲೇಮಿಗೆ ಓಡಿಹೋಗಲು ಆತುರಪಟ್ಟು ತನ್ನ ರಥವನ್ನೇರಿದನು.
- 19 ಹೀಗೆ ಇಂದಿನ ವರೆಗೂ ಇಸ್ರಾಯೇಲ್ಯರು ದಾವೀದನ ಮನೆಗೆ ವಿರೋಧವಾಗಿ ತಿರುಗಿಬಿದ್ದರು.
2 Chronicles 10
- Details
- Parent Category: Old Testament
- Category: 2 Chronicles
2 ಪೂರ್ವಕಾಲವೃತ್ತಾ ಅಧ್ಯಾಯ 10