- 1 ಆದರೆ ಯೆಹೋಷಾಫಾಟನು ತನ್ನ ಪಿತೃಗಳ ಸಂಗಡ ನಿದ್ರಿಸಿದನು; ದಾವೀದನ ಪಟ್ಟಣ ದಲ್ಲಿ ತನ್ನ ಪಿತೃಗಳ ಸಂಗಡ ಹೂಣಲ್ಪಟ್ಟನು. ಅವನ ಮಗನಾದ ಯೆಹೋರಾಮನು ಅವನಿಗೆ ಬದಲಾಗಿ ಆಳಿದನು.
- 2 ಇವನ ಸಹೋದರರಾಗಿರುವ ಯೆಹೋ ಷಾಫಾಟನ ಕುಮಾರರಾದ ಅಜರ್ಯನೂ ಯೆಹೀ ಯೇಲನೂ ಜೆಕರ್ಯನೂ ಅಜರ್ಯನೂ ವಿಾಕಾಯೇ ಲನೂ ಶೆಫಟ್ಯನೂ ಇದ್ದರು. ಇವರೆಲ್ಲರು ಇಸ್ರಾ ಯೇಲಿನ ಅರಸನಾದ ಯೆಹೋಷಾಫಾಟನ ಕುಮಾ ರರು.
- 3 ಅವರ ತಂದೆಯು ಯೆಹೂದದಲ್ಲಿ ಕೋಟೆ ಯುಳ್ಳ ಪಟ್ಟಣಗಳ ಸಂಗಡ ಬೆಳ್ಳಿಬಂಗಾರವನ್ನೂ ಬೆಲೆ ಯುಳ್ಳ ವಸ್ತುಗಳನ್ನೂ ಅವರಿಗೆ ದಾನಗಳಾಗಿ ಕೊಟ್ಟನು. ಆದರೆ ಯೆಹೋರಾಮನು ಚೊಚ್ಚಲು ಮಗನಾದದ ರಿಂದ ಅವನಿಗೆ ರಾಜ್ಯವನ್ನು ಕೊಟ್ಟನು.
- 4 ಯೆಹೋ ರಾಮನು ತನ್ನ ತಂದೆಯ ರಾಜ್ಯಕ್ಕೆ ಬಂದ ತರುವಾಯ ಅವನು ತನ್ನನ್ನು ಬಲಪಡಿಸಿಕೊಂಡು ತನ್ನ ಸಮಸ್ತ ಸಹೋದರರನ್ನೂ ಇಸ್ರಾಯೇಲಿನ ಪ್ರಧಾನರಲ್ಲಿ ಕೆಲ ವರನ್ನೂ ಕತ್ತಿಯಿಂದ ಕೊಂದುಹಾಕಿದನು.
- 5 ಯೆಹೋ ರಾಮನು ಆಳಲಾರಂಭಿಸಿದಾಗ ಮೂವತ್ತೆರಡು ವರುಷ ದವನಾಗಿದ್ದು ಯೆರೂಸಲೇಮಿನಲ್ಲಿ ಎಂಟು ವರುಷ ಆಳಿದನು.
- 6 ಅಹಾಬನ ಮನೆಯವರು ನಡೆದ ಹಾಗೆ ಅವನು ಇಸ್ರಾಯೇಲಿನ ಅರಸುಗಳ ಮಾರ್ಗದಲ್ಲಿ ನಡೆದನು. ಅಹಾಬನ ಮಗಳು ಅವನಿಗೆ ಹೆಂಡತಿ ಯಾಗಿದ್ದಳು. ಅವನು ಕರ್ತನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು,
- 7 ಆದರೆ ಕರ್ತನು ದಾವೀದನ ಸಂಗಡ ಮಾಡಿದ ಒಡಂಬಡಿಕೆಗೋಸ್ಕರವೂ ಆತನು ಅವನಿಗೂ ಅವನ ಮಕ್ಕಳಿಗೂ ಸರ್ವಕಾಲಕ್ಕೂ ಬೆಳಕನ್ನು ಕೊಡು ವೆನೆಂದು ಹೇಳಿದ್ದರಿಂದಲೂ ಆತನು ದಾವೀದನ ಮನೆಯನ್ನು ನಾಶಮಾಡಲು ಮನಸ್ಸಿಲ್ಲದೆ ಇದ್ದನು.
- 8 ಯೆಹೋರಾಮನ ದಿನಗಳಲ್ಲಿ ಎದೋಮ್ಯರು ಯೆಹೂ ದ್ಯರ ರಾಜ್ಯದ ಅಧೀನದಿಂದ ತಿರುಗಿಬಿದ್ದು ತಮಗೆ ತಾವೇ ಅರಸನನ್ನು ಮಾಡಿಕೊಂಡರು;
- 9 ಆಗ ಅವನು ತನ್ನ ಪ್ರಧಾನರ ಸಂಗಡಲೂ ಸಮಸ್ತ ರಥಗಳ ಸಂಗ ಡಲೂ ಹೊರಟು ಹೋಗಿ ರಾತ್ರಿಯಲ್ಲಿ ಎದ್ದು ತನ್ನನ್ನೂ ರಥಗಳ ಅಧಿಪತಿಗಳನ್ನೂ ಸುತ್ತಿಕೊಂಡಿದ್ದ ಎದೋಮ್ಯರನ್ನು ಹೊಡೆದನು.
- 10 ಹೀಗೆಯೇ ಇಂದಿನ ವರೆಗೂ ಎದೋಮ್ಯರು ಯೆಹೂದ್ಯರ ಅಧೀನಕ್ಕೆ ತಿರುಗಿ ಬಿದ್ದರು. ಅದೇ ಕಾಲದಲ್ಲಿ ಅವರು ತಮ್ಮ ಪಿತೃಗಳ ದೇವರಾದ ಕರ್ತನನ್ನು ಬಿಟ್ಟುಬಿಟ್ಟದ್ದರಿಂದ ಲಿಬ್ನವು ಅವರ ಅಧೀನಕ್ಕೆ ತಪ್ಪಿ ತಿರುಗಿಬಿತ್ತು.
- 11 ಅವನು ಯೆಹೂದದ ಪರ್ವತಗಳಲ್ಲಿ ಉನ್ನತ ಸ್ಥಳಗಳನ್ನು ಮಾಡಿ ಯೆರೂಸಲೇಮಿನ ನಿವಾಸಿಗಳನ್ನು ವ್ಯಭಿಚಾರ ಮಾಡಲು ಪ್ರೇರೇಪಿಸಿ ಹಾಗೆಯೇ ಮಾಡಲು ಯೆಹೂ ದದವರನ್ನು ಬಲವಂತ ಮಾಡಿದನು.
- 12 ಆದಕಾರಣ ಪ್ರವಾದಿಯಾದ ಎಲೀಯನಿಂದ ಅವನಿಗೆ ಒಂದು ಬರಹವು ಬಂತು. ಏನಂದರೆ--ನಿನ್ನ ತಂದೆಯಾದ ದಾವೀದನ ದೇವರಾದ ಕರ್ತನು ಹೀಗೆ ಹೇಳುತ್ತಾನೆನೀನು ನಿನ್ನ ತಂದೆಯಾದ ಯೆಹೋಷಾಫಾಟನ ಮಾರ್ಗ ಗಳಲ್ಲಿಯೂ ಯೆಹೂದದ ಅರಸನಾದ ಆಸನ ಮಾರ್ಗ ಗಳಲ್ಲಿಯೂ ನಡೆಯದೆ
- 13 ಇಸ್ರಾಯೇಲಿನ ಅರಸುಗಳ ಮಾರ್ಗದಲ್ಲಿ ನಡೆದು ಅಹಾಬನ ಮನೆಯ ವ್ಯಭಿಚಾರಿ ಗಳ ಹಾಗೆ ಯೆಹೂದದವರನ್ನೂ ಯೆರೂಸಲೇಮಿನ ನಿವಾಸಿಗಳನ್ನೂ ವ್ಯಭಿಚಾರ ಮಾಡಲು ಪ್ರೇರೇಪಿಸಿ ನಿನಗಿಂತ ಉತ್ತಮರಾಗಿರುವ ನಿನ್ನ ತಂದೆಯ ಮನೆ ಯವರಾದ ನಿನ್ನ ಸಹೋದರರನ್ನು ಕೊಂದುಹಾಕಿ ದ್ದರಿಂದ
- 14 ಇಗೋ, ಕರ್ತನು ದೊಡ್ಡ ಬಾಧೆಯಿಂದ ನಿನ್ನ ಜನರನ್ನೂ ಮಕ್ಕಳನ್ನೂ ಹೆಂಡತಿಯರನ್ನೂ ಸಮಸ್ತ ಸ್ಥಿತಿಯನ್ನೂ ಬಾಧಿಸುತ್ತಾನೆ.
- 15 ಇದಲ್ಲದೆ ದಿನದಿನಕ್ಕೆ ರೋಗ ಅನುಭವಿಸುವದರಿಂದ ನಿನ್ನ ಕರುಳುಗಳು ಹೊರಕ್ಕೆ ಹೊರಡುವ ವರೆಗೆ ನಿನ್ನ ಕರುಳುಗಳ ರೋಗದಿಂದ ನಿನಗೆ ಮಹಾರೋಗ ಉಂಟಾಗಿರುವದು ಎಂಬದೇ.
- 16 ಇದಲ್ಲದೆ ಕೂಷಿಯರ ಬಳಿಯಲ್ಲಿದ್ದ ಫಿಲಿಷ್ಟಿಯರ ಮತ್ತು ಅರಬ್ಬಿಯರ ಮನಸ್ಸನ್ನು ಯೆಹೋರಾಮನಿಗೆ ವಿರೋಧವಾಗಿ ಕರ್ತನು ಎಬ್ಬಿಸಿದನು.
- 17 ಆಗ ಅವರು ಯೆಹೂದದ ಮೇಲೆ ಬಂದು ಅದರಲ್ಲಿ ಹೊಕ್ಕು ಅರಸನ ಮನೆಯಲ್ಲಿ ಸಿಕ್ಕಿದ ಸಮಸ್ತ ಆಸ್ತಿಯನ್ನೂ ಅವನ ಕುಮಾರರನ್ನೂ ಹೆಂಡತಿಯರನ್ನೂ ತಕ್ಕೊಂಡು ಹೋದರು. ಆದದರಿಂದ ಅವನ ಕುಮಾರರಲ್ಲಿ ಚಿಕ್ಕವ ನಾದ ಯೆಹೋವಾಹಾಜನು ಹೊರತು ಅವನಿಗೆ ಕುಮಾರರು ಯಾರೂ ಬಿಡಲ್ಪಡಲಿಲ್ಲ.
- 18 ಇದೆಲ್ಲಾದರ ತರುವಾಯ ಕರ್ತನು ಅವನ ಕರುಳುಗಳಲ್ಲಿ ವಾಸಿ ಯಾಗಲಾರದ ರೋಗದಿಂದ ಅವನನ್ನು ಬಾಧಿಸಿದನು;
- 19 ಎರಡು ವರುಷವಾದ ತರುವಾಯ ಏನಾಯಿತಂದರೆ, ರೋಗದಿಂದ ಅವನ ಕರುಳುಗಳು ಹೊರಕ್ಕೆ ಬಂದವು. ಹೀಗೆಯೇ ಅವನು ಕೆಟ್ಟ ರೋಗಗಳಿಂದ ಸತ್ತನು. ಅವನ ಜನರು ಅವನ ಪಿತೃಗಳಿಗೋಸ್ಕರ ಸುಟ್ಟ ಹಾಗೆ ಅವನಿಗೋಸ್ಕರ ಸುಡಲಿಲ್ಲ.
- 20 ಅವನು ಆಳಲಾರಂಭಿಸಿದಾಗ ಮೂವತ್ತೆರಡು ವರುಷದವನಾಗಿದ್ದು ಯೆರೂಸಲೇಮಿನಲ್ಲಿ ಎಂಟು ವರುಷ ಆಳಿ ಯಾರಿಗೂ ಇಷ್ಪವಿಲ್ಲದವನಾಗಿ ಹೋದನು. ಆದರೂ ಅವರು ಅವನನ್ನು ದಾವೀದನ ಪಟ್ಟಣದಲ್ಲಿ ಹೂಣಿಟ್ಟರು; ಆದರೆ ಅರಸುಗಳ ಸಮಾಧಿ ಗಳಲ್ಲಿ ಅಲ್ಲ.
2 Chronicles 21
- Details
- Parent Category: Old Testament
- Category: 2 Chronicles
2 ಪೂರ್ವಕಾಲವೃತ್ತಾ ಅಧ್ಯಾಯ 21