- 1 ಹಿಜ್ಕೀಯನು ಆಳಲಾರಂಭಿಸಿದಾಗ ಇಪ್ಪತ್ತೈದು ವರುಷದವನಾಗಿದ್ದು ಯೆರೂಸ ಲೇಮಿನಲ್ಲಿ ಇಪ್ಪತ್ತೊಂಭತ್ತು ವರುಷ ಆಳಿದನು. ಅವನ ತಾಯಿಯ ಹೆಸರು ಅಬೀಯಳು; ಇವಳು ಜೆಕರೀಯನ ಮಗಳಾಗಿದ್ದಳು.
- 2 ಅವನು ತನ್ನ ಪಿತೃವಾದ ದಾವೀದನು ಮಾಡಿದ ಎಲ್ಲಾದರ ಪ್ರಕಾರ ಕರ್ತನ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡಿದನು.
- 3 ಅವನು ತನ್ನ ಆಳ್ವಿಕೆಯ ಮೊದಲನೇ ವರುಷದ ಮೊದಲನೇ ತಿಂಗಳಲ್ಲಿ ಕರ್ತನ ಮನೆಯ ಬಾಗಲು ಗಳನ್ನು ತೆರೆದು ಅವುಗಳನ್ನು ಭದ್ರಮಾಡಿಸಿದನು.
- 4 ಇದಲ್ಲದೆ ಅವನು ಯಾಜಕರನ್ನೂ ಲೇವಿಯರನ್ನೂ ಕರೆಕಳುಹಿಸಿ ಅವರನ್ನು ಮೂಡಣ ಬೀದಿಯಲ್ಲಿ ಕೂಡಿಸಿ ಕೊಂಡು ಅವರಿಗೆ ಹೇಳಿದ್ದೇನಂದರೆ--
- 5 ಲೇವಿಯರೇ, ನನ್ನ ಮಾತನ್ನು ಕೇಳಿರಿ; ನೀವು ನಿಮ್ಮನ್ನು ಪರಿಶುದ್ಧ ಮಾಡಿಕೊಂಡು ನಿಮ್ಮ ಪಿತೃಗಳ ಕರ್ತನಾದ ದೇವರ ಮನೆಯನ್ನು ಪರಿಶುದ್ಧಮಾಡಿ ಅದರ ಮೈಲಿಗೆಯನ್ನು ಪರಿಶುದ್ಧ ಸ್ಥಾನದಿಂದ ತೆಗೆದುಹಾಕಿರಿ.
- 6 ನಮ್ಮ ಪಿತೃಗಳು ಅಪರಾಧಮಾಡಿ ನಮ್ಮ ದೇವರಾದ ಕರ್ತನ ದೃಷ್ಟಿಗೆ ಕೆಟ್ಟದ್ದನ್ನು ನಡಿಸಿ ಆತನನ್ನು ಬಿಟ್ಟು ಕರ್ತನ ನಿವಾಸ ಸ್ಥಾನದ ಕಡೆಯಿಂದ ತಮ್ಮ ಮುಖಗಳನ್ನು ತಿರುಗಿಸಿ ತಮ್ಮ ಬೆನ್ನುಗಳನ್ನು ತೋರಿಸಿದ್ದಾರೆ.
- 7 ಇದಲ್ಲದೆ ಅವರು ದ್ವಾರಾಂಗಳದ ಬಾಗಲುಗಳನ್ನು ಮುಚ್ಚಿ ದೀಪಗಳನ್ನು ಆರಿಸಿ ಇಸ್ರಾಯೇಲಿನ ದೇವರಿಗೆ ಪರಿಶುದ್ಧ ಸ್ಥಾನದಲ್ಲಿ ಧೂಪವನ್ನು ಸುಡದೆ, ದಹನಬಲಿಗಳನ್ನು ಅರ್ಪಿ ಸದೆ ಹೋದರು.
- 8 ಆದದರಿಂದ ಯೆಹೂದದ ಮೇಲೆ ಯೂ ಮತ್ತು ಯೆರೂಸಲೇಮಿನವರ ಮೇಲೆಯೂ ಕರ್ತನ ರೌದ್ರವಾಯಿತು; ನೀವು ನಿಮ್ಮ ಕಣ್ಣುಗಳಿಂದ ನೋಡುವ ಹಾಗೆ ಆತನು ಅವರನ್ನು ಕಳವಳಕ್ಕೂ ವಿಸ್ಮಯಕ್ಕೂ ಅಪಹಾಸ್ಯಕ್ಕೂ ಒಪ್ಪಿಸಿಕೊಟ್ಟನು.
- 9 ಅದ ಕ್ಕೋಸ್ಕರ ಇಗೋ, ನಮ್ಮ ಪಿತೃಗಳು ಕತ್ತಿಯಿಂದ ಬಿದ್ದಿ ದ್ದಾರೆ; ನಮ್ಮ ಕುಮಾರರೂ ಕುಮಾರ್ತೆಯರೂ ಹೆಂಡ ತಿಯರೂ ಸೆರೆಯಲ್ಲಿದ್ದಾರೆ.
- 10 ಈಗ ಇಸ್ರಾಯೇಲಿನ ದೇವರಾದ ಕರ್ತನ ಉಗ್ರಕೋಪವು ನಮ್ಮನ್ನು ಬಿಟ್ಟು ಹೋಗುವ ಹಾಗೆ ನಾನು ಆತನ ಸಂಗಡ ಒಡಂಬಡಿ ಕೆಯನ್ನು ಮಾಡಲು ಮನಸ್ಸುಳ್ಳವನಾಗಿದ್ದೇನೆ.
- 11 ನನ್ನ ಮಕ್ಕಳೇ, ಉದಾಸೀನರಾಗಿರಬೇಡಿರಿ; ಯಾಕಂದರೆ ತನ್ನ ಸಮ್ಮುಖದಲ್ಲಿ ನಿಲ್ಲುವದಕ್ಕೂ ತನ್ನನ್ನು ಸೇವಿಸುವದಕ್ಕೂ ಸೇವಕರಾಗಿರುವದಕ್ಕೂ ಧೂಪಸುಡುವದಕ್ಕೂ ಕರ್ತನು ನಿಮ್ಮನ್ನು ಆದುಕೊಂಡಿದ್ದಾನೆ ಅಂದನು.
- 12 ಆಗ ಲೇವಿಯರಾದ ಕೆಹಾತ್ಯರ ಮಕ್ಕಳಲ್ಲಿ ಅಮಾಸೈ ಯನ ಮಗನಾದ ಮಹತನೂ ಅಜರ್ಯನ ಮಗನಾದ ಯೋವೇಲೂ ಮೆರಾರೀಯ ಮಕ್ಕಳಲ್ಲಿ ಅಬ್ದೀಯ ಮಗ ನಾದ ಕೀಷನೂ ಯಹಲ್ಲೇಲನ ಮಗನಾದ ಅಜ ರ್ಯನೂ ಗೆರ್ಷೋನ್ಯರಲ್ಲಿ ಜಿಮ್ಮನ ಮಗನಾದ ಯೋವಾಹನೂ ಯೋವಾಹನ ಮಗನಾದ ಏದೆನೂ
- 13 ಎಲೀಚಾಫಾನನ ಮಕ್ಕಳಲ್ಲಿ ಶಿಮ್ರಿಯೂ ಯೆಗೀ ಯೇಲನೂ ಆಸಾಫನ ಮಕ್ಕಳಲ್ಲಿ
- 14 ಜೆಕರ್ಯನೂ ಮತ್ತನ್ಯನೂ ಹೆಮಾನನ ಮಕ್ಕಳಲ್ಲಿ ಯೆಹೀಯೇಲನೂ ಶಿಮ್ಮನೂ ಯೆದುತೂನನ ಮಕ್ಕಳಲ್ಲಿ ಶೆಮಾಯನೂ ಉಜ್ಜೀಯೇಲನೂ ಎದ್ದರು.
- 15 ಇವರು ತಮ್ಮ ಸಹೋ ದರರನ್ನು ಕೂಡಿಸಿ ತಮ್ಮನ್ನು ಪರಿಶುದ್ಧ ಮಾಡಿಕೊಂಡು ಕರ್ತನ ವಾಕ್ಯದಿಂದ ಅರಸನ ಆಜ್ಞೆಯ ಪ್ರಕಾರ ಕರ್ತನ ಆಲಯವನ್ನು ಶುಚಿಮಾಡಲು ಬಂದರು.
- 16 ಯಾಜ ಕರು ಕರ್ತನ ಆಲಯವನ್ನು ಶುಚಿಮಾಡಲು ಅದರ ಒಳಭಾಗದಲ್ಲಿ ಪ್ರವೇಶಿಸಿ ಕರ್ತನ ಮಂದಿರದಲ್ಲಿ ಕಂಡ ಮೈಲಿಗೆಯನ್ನು ಕರ್ತನ ಮನೆಯ ಅಂಗಳದೊಳಗೆ ತಂದರು; ಆಗ ಲೇವಿಯರು ಅದನ್ನು ತೆಗೆದುಕೊಂಡು ಕಿದ್ರೋನು ಹಳ್ಳದಲ್ಲಿ ಹಾಕಲು ಹೊರಗೆ ಒಯ್ದರು.
- 17 ಅವರು ಮೊದಲನೇ ತಿಂಗಳಿನ ಮೊದಲನೇ ದಿವಸ ದಲ್ಲಿ ಪರಿಶುದ್ಧ ಮಾಡಲು ಆರಂಭಿಸಿ ಆ ತಿಂಗಳ ಎಂಟನೇ ದಿವಸದಲ್ಲಿ ಕರ್ತನ ದ್ವಾರಾಂಗಳದ ವರೆಗೂ ಬಂದರು. ಹೀಗೆಯೇ ಎಂಟು ದಿವಸಗಳಲ್ಲಿ ಕರ್ತನ ಮನೆಯನ್ನು ಪರಿಶುದ್ಧಮಾಡಿ ಅದನ್ನು ಮೊದಲನೇ ತಿಂಗಳಿನ ಹದಿನಾರನೇ ದಿವಸದಲ್ಲಿ ತೀರಿಸಿದರು.
- 18 ಆಗ ಅವರು ಅರಸನಾದ ಹಿಜ್ಕೀಯನ ಬಳಿಗೆ ಬಂದು ಅವನಿಗೆ--ಕರ್ತನ ಸಮಸ್ತ ಆಲಯವನ್ನೂ ದಹನಬಲಿಯ ಯಜ್ಞವೇದಿಯನ್ನೂ ಅದರ ಎಲ್ಲಾ ಪಾತ್ರೆಗಳನ್ನೂ ಸಮ್ಮುಖದ ರೊಟ್ಟಿಯ ಮೇಜನ್ನೂ ಅದರ ಎಲ್ಲಾ ಪಾತ್ರೆಗಳನ್ನೂ ಶುಚಿಮಾಡಿದೆವು.
- 19 ಇದಲ್ಲದೆ ಅರಸನಾದ ಆಹಾಜನು ಆಳಿದಾಗ ತನ್ನ ಅಕೃತ್ಯದಿಂದ ಬಿಸಾಡಿದ ಎಲ್ಲಾ ಸಾಮಾನುಗಳನ್ನು ಸಿದ್ಧ ಮಾಡಿ ಪರಿಶುದ್ಧಮಾಡಿದೆವು; ಇಗೋ, ಅವು ಕರ್ತನ ಬಲಿಪೀಠದ ಮುಂದಿರುತ್ತವೆ ಎಂದು ಹೇಳಿದರು.
- 20 ಆಗ ಅರಸನಾದ ಹಿಜ್ಕೀಯನು ಉದಯದಲ್ಲಿ ಎದ್ದು ಪಟ್ಟಣದ ಪ್ರಧಾನರನ್ನು ಕೂಡಿಸಿ ಕರ್ತನ ಆಲಯಕ್ಕೆ ಹೋದನು.
- 21 ಅವರು ರಾಜ್ಯಕ್ಕೋಸ್ಕರವೂ ಪರಿಶುದ್ಧ ಸ್ಥಾನಕ್ಕೋಸ್ಕರವೂ ಯೆಹೂದಕ್ಕೋಸ್ಕರವೂ ಪಾಪದ ಬಲಿಯಾಗಿ ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ಏಳು ಕುರಿಮರಿಗಳನ್ನೂ ಏಳು ಮೇಕೆ ಗಳನ್ನೂ ತಂದರು. ಆಗ ಕರ್ತನ ಬಲಿಪೀಠದ ಮೇಲೆ ಅವುಗಳನ್ನು ಅರ್ಪಿಸಲು ಆರೋನನ ಮಕ್ಕಳಾದ ಯಾಜಕರಿಗೆ ಹೇಳಿದನು.
- 22 ಹೀಗೆ ಅವರು ಹೋರಿ ಗಳನ್ನು ವಧಿಸಿದಾಗ ಯಾಜಕರು ಅವುಗಳ ರಕ್ತವನ್ನು ತೆಗೆದುಕೊಂಡು ಬಲಿಪೀಠದ ಮೇಲೆ ಚಿಮಿಕಿಸಿದರು; ಹಾಗೆಯೇ ಅವರು ಟಗರುಗಳನ್ನು ವಧಿಸಿ ರಕ್ತವನ್ನು ಬಲಿಪೀಠದ ಮೇಲೆ ಚಿಮಿಕಿಸಿದರು; ಅವರು ಕುರಿಮರಿ ಗಳನ್ನೂ ವಧಿಸಿ ರಕ್ತವನ್ನು ಬಲಿಪೀಠದ ಮೇಲೆ ಚಿಮಿಕಿಸಿದರು.
- 23 ಅರಸನ ಮುಂದೆಯೂ ಸಭೆಯ ಮುಂದೆಯೂ ಪಾಪದ ಬಲಿಯಾದ ಮೇಕೆ ಹೋತ ಗಳನ್ನು ಹತ್ತಿರ ತಕ್ಕೊಂಡು ಬಂದು ತಮ್ಮ ಕೈಗಳನ್ನು ಅವುಗಳ ಮೇಲೆ ಇಟ್ಟರು.
- 24 ಆಗ ಸಮಸ್ತ ಇಸ್ರಾಯೇ ಲಿಗೋಸ್ಕರ ಪ್ರಾಯಶ್ಚಿತ್ತವಾಗಿ ಯಾಜಕರು ಅವುಗಳನ್ನು ವಧಿಸಿ ಬಲಿಪೀಠದ ಮೇಲೆ ಅವುಗಳ ರಕ್ತದಿಂದ ಪಾಪ ನಿವಾರಣೆ ಮಾಡಿದರು. ದಹನಬಲಿಯೂ ಪಾಪದ ಬಲಿಯೂ ಸಮಸ್ತ ಇಸ್ರಾಯೇಲಿಗೋಸ್ಕರ ಆಗ ಬೇಕೆಂದು ಅರಸನು ಆಜ್ಞಾಪಿಸಿದನು,
- 25 ಇದಲ್ಲದೆ ದಾವೀದನೂ ಅರಸನ ದರ್ಶಿಯಾದ ಗಾದನೂ ಪ್ರವಾ ದಿಯಾದ ನಾತಾನನೂ ಇವರ ಆಜ್ಞೆಯ ಪ್ರಕಾರ ತಾಳ ವೀಣೆ ಕಿನ್ನರಿಗಳನ್ನು ಹಿಡಿದವರಾಗಿ ಕರ್ತನ ಆಲಯದಲ್ಲಿ ಲೇವಿಯರನ್ನು ನಿಲ್ಲಿಸಿದನು. ಕರ್ತನ ಆಜ್ಞೆಯು ಅವನ ಪ್ರವಾದಿಗಳ ಮುಖಾಂತರ ಹಾಗೆ ಇತ್ತು.
- 26 ಲೇವಿಯರು ದಾವೀದನ ವಾದ್ಯಗಳನ್ನೂ ಯಾಜಕರು ತುತೂರಿಗಳನ್ನೂ ಹಿಡಿದು ನಿಂತಿರುವಾಗ
- 27 ಹಿಜ್ಕೀಯನು ಬಲಿಪೀಠದ ಮೇಲೆ ದಹನಬಲಿ ಯನ್ನು ಅರ್ಪಿಸಲು ಹೇಳಿದನು. ದಹನಬಲಿಯನ್ನು ಅರ್ಪಿಸಲು ಆರಂಭಿಸಿದಾಗ ತುತೂರಿಗಳಿಂದಲೂ ಇಸ್ರಾಯೇಲಿನ ಅರಸನಾದ ದಾವೀದನ ವಾದ್ಯಗ ಳಿಂದಲೂ ಕರ್ತನ ಹಾಡು ಆರಂಭವಾಯಿತು.
- 28 ಆಗ ಸಭೆಯವರೆಲ್ಲರೂ ಆರಾಧಿಸಿದರು. ದಹನಬಲಿ ಅರ್ಪಿಸಿ ತೀರಿಸುವ ಪರ್ಯಂತರ ಹಾಡುಗಾರರು ಹಾಡಿದರು, ತುತೂರಿ ಊದುವವರು ಊದಿದರು.
- 29 ಅವರು ಅರ್ಪಿಸುವದು ತೀರಿದಾಗ ಅರಸನೂ ಅವನ ಸಂಗಡ ಇದ್ದವರೆಲ್ಲರೂ ಬೊಗ್ಗಿ ಆರಾಧಿಸಿ ದರು.
- 30 ಇದಲ್ಲದೆ ಅರಸನಾದ ಹಿಜ್ಕೀಯನೂ ಪ್ರಧಾ ನರೂ ದಾವೀದನ ಮತ್ತು ಪ್ರವಾದಿಯಾದ ಆಸಾಫನ ಮಾತುಗಳಿಂದ ಕರ್ತನನ್ನು ಸ್ತುತಿಸಬೇಕೆಂದು ಲೇವಿ ಯರಿಗೆ ಹೇಳಿದರು. ಆಗ ಅವರು ಸಂತೋಷವಾಗಿ ಸ್ತುತಿಸಿ ಬೊಗ್ಗಿಕೊಂಡು ಆರಾಧಿಸಿದರು.
- 31 ಹಿಜ್ಕೀಯನು ಅವರಿಗೆ ಉತ್ತರಕೊಟ್ಟು--ಈಗ ನೀವು ನಿಮ್ಮನ್ನು ಕರ್ತನಿಗೆ ಪ್ರತಿಷ್ಠೆಮಾಡಿದ್ದ ರಿಂದ ಸವಿಾಪಕ್ಕೆ ಬಂದು ಬಲಿಗಳನ್ನೂ ಸ್ತೋತ್ರ ಅರ್ಪಣೆಗಳನ್ನೂ ಕರ್ತನ ಆಲಯಕ್ಕೆ ತಕ್ಕೊಂಡು ಬನ್ನಿರಿ ಅಂದನು. ಆಗ ಕೂಟದವರು ಬಲಿಗಳನ್ನೂ ಸ್ತೋತ್ರದ ಅರ್ಪಣೆಗಳನ್ನೂ ಉಚಿತಾರ್ಥ ವಾಗಿ ಕೊಡಲು ಮನಸ್ಸುಳ್ಳವರು ದಹನಬಲಿಗಳನ್ನೂ ತಂದರು.
- 32 ಸಭೆಯು ತಂದ ದಹನ ಬಲಿಗಳ ಲೆಕ್ಕ ವೇನಂದರೆ: ಎಪ್ಪತ್ತು ಹೋರಿಗಳು, ನೂರು ಟಗರು ಗಳು, ಇನ್ನೂರು ಕುರಿಮರಿಗಳು. ಇವೆಲ್ಲಾ ಕರ್ತನಿಗೆ ಅರ್ಪಿಸಿದ ದಹನಬಲಿಗಳಾಗಿದ್ದವು.
- 33 ಪ್ರತಿಷ್ಠೆ ಮಾಡ ಲ್ಪಟ್ಟವುಗಳು ಆರುನೂರು ಹೋರಿಗಳೂ ಮೂರು ಸಾವಿರ ಕುರಿಗಳೂ ಇದ್ದವು.
- 34 ಯಾಜಕರು ಸ್ವಲ್ಪ ಜನರಾಗಿದ್ದು ದಹನಬಲಿಗಳನ್ನೆಲ್ಲಾ ಸುಲಿಯಲಾರದೆ ಇದ್ದದ್ದರಿಂದ ಕೆಲಸವು ತೀರುವ ವರೆಗೂ ಯಾಜಕರು ತಮ್ಮನ್ನು ಪರಿಶುದ್ಧಮಾಡಿಕೊಳ್ಳುವ ವರೆಗೂ ಲೇವಿ ಯರಾದ ಅವರ ಸಹೋದರರು ಅವರಿಗೆ ಸಹಾಯ ಮಾಡುತ್ತಿದ್ದರು. ಯಾಕಂದರೆ ತಮ್ಮನ್ನು ಪರಿಶುದ್ಧಮಾಡಿ ಕೊಳ್ಳಲು ಯಾಜಕರಿಗಿಂತ ಲೇವಿಯರು ಯಥಾರ್ಥ ಹೃದಯವುಳ್ಳವರಾಗಿದ್ದರು.
- 35 ಇದಲ್ಲದೆ ದಹನಬಲಿ ಗಳೂ ಸಮಾಧಾನದ ಬಲಿಗಳ ಕೊಬ್ಬೂ ದಹನ ಬಲಿಗೆ ಬೇಕಾದ ಪಾನದ ಅರ್ಪಣೆಗಳೂ ಬಹಳ ವಾಗಿದ್ದವು. ಹೀಗೆಯೇ ಕರ್ತನ ಆಲಯದ ಸೇವೆಯು ಸಿದ್ಧವಾಯಿತು.
- 36 ಆಗ ದೇವರು ಜನರನ್ನು ಸಿದ್ಧಮಾಡಿದ್ದರಿಂದ ಹಿಜ್ಕೀಯನೂ ಜನರೆಲ್ಲರೂ ಸಂತೋಷಪಟ್ಟರು; ಯಾಕಂದರೆ ಈ ಕಾರ್ಯವು ಅಕಸ್ಮಾತ್ತಾಗಿ ಆಯಿತು.
2 Chronicles 29
- Details
- Parent Category: Old Testament
- Category: 2 Chronicles
2 ಪೂರ್ವಕಾಲವೃತ್ತಾ ಅಧ್ಯಾಯ 29