- 1 ಪ್ರವಾದಿಗಳ ಮಕ್ಕಳ ಹೆಂಡತಿಯರಲ್ಲಿ ಒಬ್ಬಳು ಎಲೀಷನಿಗೆ ಕೂಗಿ--ನಿನ್ನ ದಾಸ ನಾದ ನನ್ನ ಗಂಡನು ಸತ್ತನು; ನಿನ್ನ ದಾಸನು ಕರ್ತನಿಗೆ ಭಯಪಡುವವನಾಗಿದ್ದನೆಂದು ನೀನು ಬಲ್ಲೆ; ಈಗ ಸಾಲಗಾರನು ನನ್ನ ಇಬ್ಬರು ಮಕ್ಕಳನ್ನು ತನಗೆ ದಾಸ ರಾಗಿ ತೆಗೆದುಕೊಳ್ಳಲು ಬಂದಿದ್ದಾನೆ ಅಂದಳು.
- 2 ಎಲೀ ಷನು ಅವಳಿಗೆ--ನಾನು ನಿನಗೆ ಏನು ಮಾಡಬೇಕು? ಮನೆಯಲ್ಲಿ ನಿನಗೆ ಏನು ಉಂಟು, ನನಗೆ ತಿಳಿಸು ಅಂದನು. ಅವಳು--ನಿನ್ನ ಸೇವಕಳಿಗೆ ಒಂದು ಮೊಗೆ ಎಣ್ಣೆ ಅಲ್ಲದೆ ಮನೆಯಲ್ಲಿ ಮತ್ತೊಂದಿಲ್ಲ ಅಂದಳು.
- 3 ಆಗ ಅವನು--ನೀನು ಹೋಗಿ ಹೊರಗಿರುವ ನಿನ್ನ ಎಲ್ಲಾ ನೆರೆಮನೆಯವರಿಂದ ಬರೀ ಪಾತ್ರೆಗಳನ್ನು ಕೇಳಿಕೋ; ಸ್ವಲ್ಪಮಾತ್ರ ತಕ್ಕೊಳ್ಳಬೇಡ.
- 4 ನೀನು ಒಳಗೆ ಪ್ರವೇಶಿಸಿ ನೀನೂ ನಿನ್ನ ಕುಮಾರರೂ ಬಾಗಲು ಮುಚ್ಚಿ ಕೊಂಡು ಎಣ್ಣೆಯನ್ನು ಆ ಪಾತ್ರೆಗಳಲ್ಲೆಲ್ಲಾ ಹೊಯಿದು ತುಂಬಿದ್ದನ್ನು ಒಂದು ಕಡೆ ಇರಿಸು ಅಂದನು.
- 5 ಹೀಗೆ ಅವಳು ಅವನನ್ನು ಬಿಟ್ಟು ಹೋಗಿ ತಾನೂ ತನ್ನ ಕುಮಾರರೂ ಬಾಗಲು ಮುಚ್ಚಿದರು; ಇವರು ಅವಳ ಬಳಿಗೆ ಪಾತ್ರೆಗಳನ್ನು ತಕ್ಕೊಂಡು ಬಂದರು; ಅವಳು ಹೊಯಿದಳು.
- 6 ಆ ಪಾತ್ರೆಗಳು ತುಂಬಿದ ತರುವಾಯ ಏನಾಯಿತಂದರೆ, ಅವಳು ತನ್ನ ಮಗನಿಗೆ--ಇನ್ನೊಂದು ಪಾತ್ರೆಯನ್ನು ನನ್ನ ಬಳಿಗೆ ತಕ್ಕೊಂಡು ಬಾ ಅಂದಳು. ಅವನು ಅವಳಿಗೆ--ಇನ್ನು ಪಾತ್ರೆ ಇಲ್ಲ ಅಂದನು.
- 7 ಆಗ ಎಣ್ಣೆಯುಕ್ಕುವದು ನಿಂತು ಹೋಯಿತು. ಆಗ ಅವಳು ಬಂದು ದೇವರ ಮನುಷ್ಯನಿಗೆ ತಿಳಿಸಿದಳು. ಅವನು--ನೀನು ಹೋಗಿ ಆ ಎಣ್ಣೆಯನ್ನು ಮಾರಿ ನಿನ್ನ ಸಾಲವನ್ನು ತೀರಿಸಿ ಮಿಕ್ಕದ್ದರಿಂದ ನೀನೂ ನಿನ್ನ ಮಕ್ಕಳೂ ಜೀವನ ಮಾಡಿರಿ ಅಂದನು.
- 8 ಆ ಕಾಲದಲ್ಲಿ ಏನಾಯಿತಂದರೆ, ಎಲೀಷನು ಶೂನೇ ಮಿಗೆ ಹೋದನು. ಅಲ್ಲಿ ಘನವುಳ್ಳ ಒಬ್ಬ ಸ್ತ್ರೀಯು ಇದ್ದಳು. ಅವಳು ಅವನನ್ನು ರೊಟ್ಟಿ ತಿನ್ನಲು ಬಲವಂತ ಮಾಡಿದಳು. ಹಾಗೆಯೇ ಅವನು ಆ ಮಾರ್ಗವಾಗಿ ಹೋಗುವಾಗೆಲ್ಲಾ ಅಲ್ಲಿ ರೊಟ್ಟಿ ತಿನ್ನಲು ಹೋಗುತ್ತಿ ದ್ದನು.
- 9 ಆದದರಿಂದ ನನ್ನ ಗಂಡನಿಗೆ--ಇಗೋ, ನಮ್ಮ ಬಳಿಯಲ್ಲಿ ಯಾವಾಗಲೂ ಹಾದು ಹೋಗುವ ಇವನು ಪರಿಶುದ್ಧನಾದ ದೇವರ ಮನುಷ್ಯನಾಗಿದ್ದಾ ನೆಂದು ನನಗೆ ತಿಳಿಯುತ್ತದೆ.
- 10 ನಾವು ಮಾಳಿಗೆಯ ಮೇಲೆ ಒಂದು ಚಿಕ್ಕ ಕೊಠಡಿಯನ್ನು ಕಟ್ಟಿಸಿ ಅದರಲ್ಲಿ ಅವನಿಗೋಸ್ಕರ ಮಂಚವನ್ನೂ ಮೇಜನ್ನೂ ಕುರ್ಚಿ ಯನ್ನೂ ದೀಪಸ್ತಂಭವನ್ನೂ ಇಡೋಣ. ಅವನು ನಮ್ಮ ಬಳಿಗೆ ಬರುವಾಗ ಅಲ್ಲಿ ಪ್ರವೇಶಿಸುವನು ಅಂದಳು.
- 11 ಒಂದು ದಿನ ಅವನು ಅಲ್ಲಿಗೆ ಬಂದು ಆ ಕೊಠಡಿ ಯಲ್ಲಿ ಪ್ರವೇಶಿಸಿ ಮಲಗಿ ಎದ್ದ ಮೇಲೆ
- 12 ಅವನು ತನ್ನ ಸೇವಕನಾದ ಗೇಹಜಿಗೆ--ನೀನು ಶೂನೇಮ್ಯಳನ್ನು ಕರೆ ಅಂದನು. ಅವನು ಅವಳನ್ನು ಕರೆದದ್ದರಿಂದ ಅವಳು ಬಂದು ಮುಂದೆ ನಿಂತಳು.
- 13 ಅವನು ಗೇಹ ಜಿಗೆ--ನೀನು ಇಗೋ, ಈ ಸಕಲ ಚಿಂತೆಯಿಂದ ನಮಗೋಸ್ಕರ ಚಿಂತಿಸಿದಿ; ನಿನಗೆ ಮಾಡಬೇಕಾದ ದ್ದೇನು? ನಿನಗೋಸ್ಕರ ಅರಸನ ಸಂಗಡಲಾದರೂ ಸೈನ್ಯಾಧಿಪತಿಯ ಸಂಗಡಲಾದರೂ ಮಾತನಾಡ ಬೇಕೋ ಎಂದು ಇವಳಿಗೆ ಹೇಳು ಅಂದನು. ಅದಕ್ಕ ವಳು--ನನ್ನ ಸ್ವಜನರ ಮಧ್ಯದಲ್ಲಿ ನಾನು ವಾಸವಾಗಿ ದ್ದೇನೆ ಅಂದಳು.
- 14 ಅವನು--ಹಾಗಾದರೆ ಅವಳಿಗೋ ಸ್ಕರ ಮಾಡಬೇಕಾದದ್ದೇನು ಅಂದನು. ಅದಕ್ಕೆ ಗೇಹ ಜಿಯು--ಅವಳು ಮಗುವಿಲ್ಲದೆ ಇದ್ದಾಳೆ; ಅವಳ ಗಂಡನು ಮುದುಕನಾಗಿದ್ದಾನೆ ಅಂದನು.
- 15 ಪ್ರವಾ ದಿಯು--ಅವಳನ್ನು ಕರೆ ಅಂದನು. ಅವನು ಅವಳನ್ನು ಕರೆದಾಗ ಅವಳು ಬಾಗಲಲ್ಲಿ ನಿಂತಳು.
- 16 ಆಗ ಅವನು--ನೀನು ಬರುವ ವರುಷ ಇದೇ ಕಾಲದಲ್ಲಿ ಒಬ್ಬ ಮಗನನ್ನು ಅಪ್ಪಿಕೊಳ್ಳುವಿ ಅಂದನು. ಅದಕ್ಕವಳುಹಾಗಲ್ಲ, ದೇವರ ಮನುಷ್ಯನೇ, ನನ್ನ ಒಡೆಯನೇ, ನಿನ್ನ ಸೇವಕಳಿಗೆ ನೀನು ಸುಳ್ಳು ಹೇಳಬೇಡ ಅಂದಳು.
- 17 ಆ ಸ್ತ್ರೀಯು ಗರ್ಭಧರಿಸಿ ಎಲೀಷನು ತನಗೆ ಹೇಳಿದಂತೆ ಮುಂದಿನ ವರುಷ ಅದೇ ಕಾಲದಲ್ಲಿ ಒಬ್ಬ ಮಗನನ್ನು ಹೆತ್ತಳು.
- 18 ಆದರೆ ಆ ಮಗುವು ಬೆಳೆದಾಗ ಒಂದು ದಿನ ಅವನು ಬೆಳೆ ಕೊಯ್ಯುವವರ ಬಳಿಯಲ್ಲಿರುವ ತನ್ನ ತಂದೆಯ ಬಳಿಗೆ ಹೋದನು.
- 19 ಆಗ ಅವನು ತನ್ನ ತಂದೆಗೆ--ನನ್ನ ತಲೆ, ನನ್ನ ತಲೆ ಅಂದನು. ತಂದೆಯು ಒಬ್ಬ ಹುಡುಗನಿಗೆ--ಅವನನ್ನು ಅವನ ತಾಯಿಯ ಬಳಿಗೆ ಎತ್ತಿಕೊಂಡು ಹೋಗು ಅಂದನು.
- 20 ಹುಡು ಗನು ಅವನನ್ನು ಅವನ ತಾಯಿಯ ಬಳಿಗೆ ಎತ್ತಿಕೊಂಡು ಹೋದನು. ಅವನು ಮಧ್ಯಾಹ್ನದ ವರೆಗೂ ಅವಳ ತೊಡೆಯ ಮೇಲೆ ಇದ್ದುಕೊಂಡು ಸತ್ತುಹೋದನು.
- 21 ಆಗ ಅವಳು ಏರಿ ಹೋಗಿ ಅವನನ್ನು ದೇವರ ಮನುಷ್ಯನ ಮಂಚದಮೇಲೆ ಮಲಗಿಸಿ ಅವನಿಗೋಸ್ಕರ ಬಾಗಲು ಹಾಕಿ ಹೊರಟು ತನ್ನ ಗಂಡನನ್ನು ಕರೆದು --
- 22 ನಾನು ದೇವರ ಮನುಷ್ಯನ ಬಳಿಗೆ ಓಡಿಹೋಗಿ ತಿರುಗಿ ಬರುವ ಹಾಗೆ ನೀನು ದಯಮಾಡಿ ಯೌವನ ಸ್ಥರಲ್ಲಿ ಒಬ್ಬನನ್ನೂ ಕತ್ತೆಗಳಲ್ಲಿ ಒಂದನ್ನೂ ನನಗೆ ಕಳುಹಿಸು ಅಂದಳು.
- 23 ಅದಕ್ಕೆ ಅವನು--ಇಂದು ಅಮಾವಾಸ್ಯೆ ಯಲ್ಲ, ಸಬ್ಬತ್ತೂ ಅಲ್ಲ; ಯಾಕೆ ನೀನು ಈ ಹೊತ್ತು ಅವನ ಬಳಿಗೆ ಹೋಗುತ್ತೀ ಅಂದನು. ಅದಕ್ಕವಳು --ಒಳ್ಳೇದಾಗಿರುವದು ಅಂದಳು.
- 24 ಆಗ ಅವಳು ಕತ್ತೆಯ ಮೇಲೆ ತಡಿಯನ್ನು ಹಾಕಿಸಿ ತನ್ನ ಸೇವಕನಿಗೆ --ನಡಿಸಿಕೊಂಡು ಹೋಗು; ನಾನು ನಿನಗೆ ಹೇಳುವ ವರೆಗೂ ನನಗೋಸ್ಕರ ಸವಾರಿಯನ್ನು ತಡಮಾಡ ಬೇಡವೆಂದು ಹೇಳಿ ಕರ್ಮೆಲು ಬೆಟ್ಟದಲ್ಲಿರುವ ದೇವರ ಮನುಷ್ಯನ ಬಳಿಗೆ ಬಂದಳು.
- 25 ಆಗ ಏನಾಯಿತಂದರೆ, ದೇವರ ಮನುಷ್ಯನು ದೂರದಿಂದ ಅವಳನ್ನು ನೋಡಿ ಅವನು ತನ್ನ ಸೇವಕನಾದ ಗೇಹಜಿಗೆ -- ಇಗೋ, ಆ ಶೂನೇಮ್ಯಳು.
- 26 ನೀನು ಅವಳನ್ನು ಎದುರುಗೊ ಳ್ಳಲು ಓಡಿಹೋಗಿ ಅವಳಿಗೆ--ನಿನಗೆ ಕ್ಷೇಮವೋ? ನಿನ್ನ ಗಂಡನಿಗೆ ಕ್ಷೇಮವೋ? ಮಗುವಿಗೆ ಕ್ಷೇಮವೋ ಎಂದು ಕೇಳು ಅಂದನು.
- 27 ಅವಳು--ಕ್ಷೇಮವು ಅಂದಳು. ಅವಳು ಬೆಟ್ಟದ ಮೇಲಿದ್ದ, ದೇವರ ಮನು ಷ್ಯನ ಬಳಿಗೆ ಬಂದು ಅವನ ಪಾದಗಳನ್ನು ಹಿಡಿದಳು. ಆದರೆ ಅವಳನ್ನು ತಳ್ಳಲು ಗೇಹಜಿಯು ಹತ್ತಿರ ಬಂದ ದರಿಂದ ದೇವರ ಮನುಷ್ಯನು--ಅವಳನ್ನು ಬಿಡು; ಅವಳ ಹೃದಯದಲ್ಲಿ ದುಃಖವಿದೆ; ಕರ್ತನು ಅದನ್ನು ನನಗೆ ತಿಳಿಸದೆ ಮರೆಮಾಡಿದ್ದಾನೆ ಅಂದನು.
- 28 ಆಗ ಅವಳು--ನಾನು ನನ್ನ ಒಡೆಯನಿಂದ ಕುಮಾರನನ್ನು ಕೇಳಿಕೊಂಡೆನೋ? ನನ್ನನ್ನು ಮೋಸಗೊಳಿಸಬೇಡ ವೆಂದು ನಾನು ಹೇಳಲಿಲ್ಲವೋ ಅಂದಳು.
- 29 ಆಗ ಅವನು ಗೇಹಜಿಗೆ--ನೀನು ನಿನ್ನ ನಡುವನ್ನು ಕಟ್ಟಿ ಕೊಂಡು ನನ್ನ ಕೋಲನ್ನು ನಿನ್ನ ಕೈಯಲ್ಲಿ ಹಿಡುಕೊಂಡು ಹೋಗು. ನಿನಗೆ ಯಾವನಾದರೂ ಎದುರುಗೊಂಡರೆ ಅವನನ್ನು ವಂದಿಸಬೇಡ; ಯಾವನಾದರೂ ನಿನ್ನನ್ನು ವಂದಿಸಿದರೆ ಅವನಿಗೆ ಪ್ರತ್ಯುತ್ತರ ಹೇಳಬೇಡ; ನನ್ನ ಕೋಲನ್ನು ಆ ಹುಡುಗನ ಮುಖದ ಮೇಲೆ ಹಾಕು ಅಂದನು.
- 30 ಆದರೆ ಹುಡುಗನ ತಾಯಿ--ಕರ್ತನ ಜೀವದಾಣೆ, ಮತ್ತು ನಿನ್ನ ಜೀವದಾಣೆ, ನಾನು ನಿನ್ನನ್ನು ಬಿಡುವದಿಲ್ಲ ಅಂದಳು.
- 31 ಆಗ ಅವನೆದ್ದು ಅವಳ ಹಿಂದೆ ಹೋದನು. ಗೇಹಜಿಯು ಅವರಿಗೆ ಮುಂದಾಗಿ ಹೋಗಿ ಆ ಕೋಲನ್ನು ಹುಡುಗನ ಮುಖದ ಮೇಲೆ ಇಟ್ಟನು. ಆದರೆ ಶಬ್ದವಾದರೂ ಆಲೈಸುವದಾದರೂ ಇಲ್ಲದೆ ಇತ್ತು. ಆದದರಿಂದ ಅವನು ಎದುರುಗೊಳ್ಳಲು ತಿರಿಗಿ ಹೋಗಿ ಎಲೀಷನಿಗೆ--ಹುಡುಗನು ಎಚ್ಚರವಾಗ ಲಿಲ್ಲ ಅಂದನು.
- 32 ಎಲೀಷನು ಮನೆಯಲ್ಲಿ ಬಂದಾಗ ಇಗೋ, ಆ ಹುಡುಗನು ಸತ್ತವನಾಗಿದ್ದು ತನ್ನ ಮಂಚದ ಮೇಲೆ ಮಲಗಿಸಲ್ಪಟ್ಟಿದ್ದನು.
- 33 ಅವನು ಒಳಗೆ ಪ್ರವೇ ಶಿಸಿ ಯಾರೂ ಒಳಗೆ ಬಾರದಂತೆ ಆ ಕೋಣೆಯ ಬಾಗಲು ಮುಚ್ಚಿಕೊಂಡು ಕರ್ತನನ್ನು ಪ್ರಾರ್ಥಿಸಿದನು.
- 34 ಅವನು ಏರಿಹೋಗಿ ಮಗುವಿನ ಮೇಲೆ ಮಲಗಿ ಕೊಂಡು ತನ್ನ ಬಾಯಿಯನ್ನು ಅವನ ಬಾಯಿಯ ಮೇಲೆಯೂ ತನ್ನ ಕಣ್ಣುಗಳನ್ನು ಅವನ ಕಣ್ಣುಗಳ ಮೇಲೆಯೂ ತನ್ನ ಕೈಗಳನ್ನು ಅವನ ಕೈಗಳ ಮೇಲೆಯೂ ಇರಿಸಿದನು. ಅವನು ಮೇಲೆ ಬೋರ್ಲಬಿದ್ದದರಿಂದ ಮಗುವಿನ ಶರೀರವು ಬೆಚ್ಚಗೆ ಆಯಿತು.
- 35 ಆಗ ಅವನು ತಿರುಗಿ ಬಂದು ಮನೆಯಲ್ಲಿ ಸ್ವಲ್ಪಹೊತ್ತು ಅತ್ತಿತ್ತ ತಿರುಗಾಡಿ ಏರಿಹೋಗಿ ಅವನ ಮೇಲೆ ಬೋರ್ಲ ಬಿದ್ದನು. ಆಗ ಆ ಹುಡುಗನು ಏಳು ಸಾರಿ ಸೀತು ತರುವಾಯ ತನ್ನ ಕಣ್ಣುಗಳನ್ನು ತೆರೆದನು.
- 36 ಆಗ ಅವನು ಗೇಹಜಿಯನ್ನು ಕರೆದು--ಶೂನೇಮ್ಯಳನ್ನು ಕರೆ ಅಂದನು. ಅವನು ಅವಳನ್ನು ಕರೆದನು. ಅವಳು ಬಂದಾಗ ಅವನು--ನಿನ್ನ ಕುಮಾರನನ್ನು ತಕ್ಕೊಂಡು ಹೋಗು ಅಂದನು.
- 37 ಆಗ ಅವಳು ಬಂದು ಅವನ ಪಾದಗಳ ಮೇಲೆ ಬಿದ್ದು ಸಾಷ್ಟಾಂಗ ನಮಸ್ಕಾರ ಮಾಡಿ ತನ್ನ ಮಗನನ್ನು ಎತ್ತಿಕೊಂಡು ಹೋದಳು.
- 38 ಎಲೀಷನು ತಿರುಗಿ ಗಿಲ್ಗಾಲಿಗೆ ಬಂದಾಗ ದೇಶ ದಲ್ಲಿ ಬರ ಉಂಟಾಗಿತ್ತು. ಪ್ರವಾದಿಗಳ ಮಕ್ಕಳು ಅವನ ಮುಂದೆ ಕುಳಿತಿರುವಾಗ ಅವನು ತನ್ನ ಸೇವಕನಿಗೆನೀನು ದೊಡ್ಡ ಗಡಿಗೆಯನ್ನು ಮೇಲಿಟ್ಟು ಪ್ರವಾದಿಗಳ ಮಕ್ಕಳಿಗೋಸ್ಕರ ಆಹಾರವನ್ನು ಬೇಯಿಸು ಅಂದನು.
- 39 ಒಬ್ಬನು ಪಲ್ಯವನ್ನು ತರಲು ಅಡವಿಗೆ ಹೋಗಿ ಅಡವಿಯ ಬಳ್ಳಿಯನ್ನು ನೋಡಿ ಅಡವಿಯ ಕಾಯಿ ಗಳನ್ನು ತನ್ನ ಉಡಿಯ ತುಂಬ ಕೂಡಿಸಿಕೊಂಡು ಬಂದು ಅವುಗಳನ್ನು ಕೊಯಿದು ಆಹಾರವಿರುವ ಗಡಿಗೆಯಲ್ಲಿ ಹಾಕಿದನು; ಯಾಕಂದರೆ ಅವರು ಅವುಗಳನ್ನು ಅರಿ ಯದೆ ಇದ್ದರು.
- 40 ಜನರಿಗೆ ಅದನ್ನು ತಿನ್ನುವದಕ್ಕೆ ಬಡಿಸಿದರು. ಆಹಾರವನ್ನು ತಿನ್ನುತ್ತಿರುವಾಗ ಏನಾಯಿ ತಂದರೆ, ಅವರು--ದೇವರ ಮನುಷ್ಯನೇ, ಗಡಿಗೆಯಲ್ಲಿ ವಿಷ ಎಂದು ಕೂಗಿದರು. ಯಾಕಂದರೆ ಅದರಲ್ಲಿದ್ದದ್ದನ್ನು ಅವರು ತಿನ್ನಲಾರದೆ ಇದ್ದರು.
- 41 ಆಗ ಅವನು ಹಿಟ್ಟನ್ನು ತಕ್ಕೊಂಡು ಬರ ಹೇಳಿ ಅದನ್ನು ಗಡಿಗೆಯಲ್ಲಿ ಹಾಕಿ ಜನರು ತಿನ್ನುವದಕ್ಕೆ ಬಡಿಸಿರಿ ಅಂದನು. ಆಗ ಆ ಗಡಿಗೆಯಲ್ಲಿ ಕೆಟ್ಟದ್ದೇನೂ ಇರಲಿಲ್ಲ.
- 42 ಇದಲ್ಲದೆ ಬಾಳ್‌ಷಾಲಿಷಾದಿಂದ ಒಬ್ಬ ಮನು ಷ್ಯನು ದೇವರ ಮನುಷ್ಯನಿಗೆ ಮೊದಲ ಫಲವಾದ ಜವೆಗೋದಿಯ ಇಪ್ಪತ್ತು ರೊಟ್ಟಿಗಳನ್ನೂ ಕಾಳಿ ನಿಂದ ತುಂಬಿದ ತೆನೆಗಳನ್ನೂ ತಕ್ಕೊಂಡು ಬಂದನು.
- 43 ಆಗ ಅವನು--ಜನರಿಗೆ ಕೊಡು; ಅವರು ತಿನ್ನಲಿ ಅಂದನು. ಆದರೆ ಅವನ ಸೇವಕನು ಇದನ್ನು ನೂರು ಮಂದಿಗೆ ಬಡಿಸುವದು ಹೇಗೆ ಅಂದನು. ಅದಕ್ಕವನು -- ಜನರಿಗೆ ಕೊಡು; ಅವರು ತಿನ್ನಲಿ; ಅವರು ತಿಂದು ಇನ್ನೂ ಉಳಿಸಿ ಬಿಡುವರೆಂದು ಕರ್ತನು ಹೇಳುತ್ತಾನೆ ಅಂದನು.
- 44 ಹಾಗೆಯೇ ಅವನು ಅವರ ಮುಂದೆ ಇಟ್ಟನು. ಕರ್ತನ ವಾಕ್ಯದ ಪ್ರಕಾರ ಅವರು ತಿಂದು ಉಳಿಸಿಟ್ಟರು.
2 Kings 04
- Details
- Parent Category: Old Testament
- Category: 2 Kings
2 ಅರಸುಗಳು ಅಧ್ಯಾಯ 4