- 1 ಇಸ್ರಾಯೇಲಿನ ಅರಸನಾದ ಯಾರೊ ಬ್ಬಾಮನ ಆಳ್ವಿಕೆಯ ಇಪ್ಪತ್ತೇಳನೇ ವರುಷ ದಲ್ಲಿ ಯೆಹೂದದ ಅರಸನಾಗಿರುವ ಅಮಚ್ಯನ ಮಗ ನಾದ ಅಜರ್ಯನು ಆಳಲು ಆರಂಭಿಸಿದನು.
- 2 ಅವನು ಆಳಲು ಆರಂಭಿಸಿದಾಗ ಹದಿನಾರು ವರುಷದವ ನಾಗಿದ್ದು ಯೆರೂಸಲೇಮಿನಲ್ಲಿ ಐವತ್ತೆರಡು ವರುಷ ಆಳಿದನು. ಅವನ ತಾಯಿಯ ಹೆಸರು ಯೆಕೊಲ್ಯಳು; ಅವಳು ಯೆರೂಸಲೇಮಿನವಳು.
- 3 ಅವನು ತನ್ನ ತಂದೆಯಾದ ಅಮಚ್ಯನು ಮಾಡಿದ ಎಲ್ಲಾದರ ಹಾಗೆ ಕರ್ತನ ಸನ್ನಿಧಿಯಲ್ಲಿ ಒಳ್ಳೆಯದನ್ನು ಮಾಡಿದನು.
- 4 ಆದರೆ ಉನ್ನತ ಸ್ಥಳಗಳು ಕೆಡವಲ್ಪಡಲಿಲ್ಲ; ಜನರು ಇನ್ನೂ ಉನ್ನತ ಸ್ಥಳಗಳ ಮೇಲೆ ಬಲಿಗಳನ್ನು ಅರ್ಪಿಸಿ ಧೂಪವನ್ನು ಅರ್ಪಿಸುತ್ತಿದ್ದರು.
- 5 ಕರ್ತನು ಅರಸನನ್ನು ಹೊಡೆದದ್ದರಿಂದ ಅವನು ತನ್ನ ಜೀವದಿಂದಿರು ವರೆಗೂ ಕುಷ್ಠರೋಗಿಯಾಗಿದ್ದು ಪ್ರತ್ಯೇಕವಾದ ಮನೆಯಲ್ಲಿ ವಾಸವಾಗಿದ್ದನು. ಅರಸನ ಮಗನಾದ ಯೋತಾಮನು ಮನೆ ಯಜಮಾನನಾಗಿದ್ದು ದೇಶದ ಜನರಿಗೆ ನ್ಯಾಯ ತೀರಿಸುತ್ತಿದ್ದನು.
- 6 ಅಜರ್ಯನ ಇತರ ಕ್ರಿಯೆಗಳೂ ಅವನು ಮಾಡಿದ ಎಲ್ಲವೂ ಯೆಹೂದದ ಅರಸುಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಡಲಿಲ್ಲವೋ?
- 7 ಅಜರ್ಯನು ತನ್ನ ಪಿತೃಗಳ ಸಂಗಡ ನಿದ್ರಿಸಿದನು; ಅವನನ್ನು ದಾವೀದನ ಪಟ್ಟಣದಲ್ಲಿ ಅವನ ಪಿತೃಗಳ ಸ್ಮಶಾನ ಭೂಮಿಯಲ್ಲಿ ಹೂಣಿಟ್ಟರು; ಅವನ ಮಗನಾದ ಯೋತಾಮನು ಅವನಿಗೆ ಬದಲಾಗಿ ಅರಸನಾದನು.
- 8 ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಮೂವತ್ತೆಂಟನೇ ವರುಷದಲ್ಲಿ ಯಾರೊಬ್ಬಾಮನ ಮಗ ನಾದ ಜೆಕರ್ಯ ಇಸ್ರಾಯೇಲಿನ ಮೇಲೆ ಸಮಾರ್ಯ ದಲ್ಲಿ ಆರು ತಿಂಗಳು ಆಳಿದನು.
- 9 ಅವನು ತನ್ನ ಪಿತೃಗಳು ಮಾಡಿದ ಪ್ರಕಾರ ಕರ್ತನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. ಅವನು ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಗಳನ್ನು ತೊರೆದುಬಿಡಲಿಲ್ಲ.
- 10 ಆಗ ಯಾಬೇಷನ ಮಗನಾದ ಶಲ್ಲೂಮನು ಅವನ ಮೇಲೆ ಒಳಸಂಚು ಮಾಡಿ ಜನರ ಮುಂದೆ ಅವನನ್ನು ಹೊಡೆದು ಕೊಂದು ಹಾಕಿ ಅವನಿಗೆ ಬದಲಾಗಿ ಅರಸನಾದನು.
- 11 ಇಗೋ, ಜೆಕರ್ಯನ ಇತರ ಕ್ರಿಯೆಗಳು ಇಸ್ರಾಯೇಲಿನ ಅರಸು ಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ.
- 12 ನಿನ್ನ ಕುಮಾರರು ನಾಲ್ಕನೇ ಸಂತತಿಯ ವರೆಗೂ ಇಸ್ರಾಯೇಲಿನ ಸಿಂಹಾಸನದ ಮೇಲೆ ಕುಳಿತಿರುವರು ಎಂದು ಕರ್ತನು ಯೇಹುವಿಗೆ ಹೇಳಿದ ವಾಕ್ಯವು ಇದೇ; ಹೀಗೆಯೇ ಆಯಿತು.
- 13 ಯೆಹೂದದ ಅರಸನಾದ ಉಜ್ಜೀಯನ ಆಳ್ವಿಕೆಯ ಮೂವತ್ತೊಂಭತ್ತನೇ ವರುಷದಲ್ಲಿ ಯಾಬೇಷನ ಮಗ ನಾದ ಶಲ್ಲೂಮನು ಆಳಲು ಆರಂಭಿಸಿ ಸಮಾರ್ಯ ದಲ್ಲಿ ಒಂದು ತಿಂಗಳು ಆಳಿದನು.
- 14 ಯಾಕಂದರೆ ಗಾದಿಯ ಮಗನಾದ ಮೆನಹೇಮನು ತಿರ್ಚದಿಂದ ಹೊರಟು ಹೋಗಿ ಸಮಾರ್ಯಕ್ಕೆ ಬಂದು ಸಮಾರ್ಯ ದಲ್ಲಿ ಯಾಬೇಷನ ಮಗನಾದ ಶಲ್ಲೂಮನನ್ನು ಹೊಡೆದು ಕೊಂದುಹಾಕಿ ಅವನಿಗೆ ಬದಲಾಗಿ ಅರಸ ನಾದನು.
- 15 ಇಗೋ, ಶಲ್ಲೂಮನ ಇತರ ಕ್ರಿಯೆಗಳೂ ಅವನು ಮಾಡಿದ ಒಳಸಂಚೂ ಇಸ್ರಾಯೇಲಿನ ಅರಸು ಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ.
- 16 ಆಗ ಮೆನಹೇಮನು ತಿಪ್ಸಹನ್ನೂ ಅದರಲ್ಲಿ ಇದ್ದ ಎಲ್ಲರನ್ನೂ ತಿರ್ಚ ಮೊದಲುಗೊಂಡು ಅದರ ಮೇರೆಗಳನ್ನೂ ಹಾಳುಮಾಡಿದನು. ಅವರು ತಮ್ಮ ಬಾಗಲುಗಳನ್ನು ತನಗೆ ತೆರೆಯದೆ ಇದ್ದದರಿಂದ ಅವರನ್ನು ಹೊಡೆದನು; ಅದರಲ್ಲಿರುವ ಗರ್ಭಿಣಿಯರನ್ನೆಲ್ಲಾ ಸೀಳಿಸಿದನು.
- 17 ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಮೂವತ್ತೊಂಭತ್ತನೇ ವರುಷದಲ್ಲಿ ಗಾದಿಯ ಮಗ ನಾದ ಮೆನಹೇಮನು ಇಸ್ರಾಯೇಲಿನ ಮೇಲೆ ಆಳ ಲಾರಂಭಿಸಿ ಸಮಾರ್ಯದಲ್ಲಿ ಹತ್ತು ವರುಷ ಆಳಿದನು.
- 18 ಅವನು ಕರ್ತನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು; ಅವನು ತನ್ನ ದಿವಸಗಳಲ್ಲೆಲ್ಲಾ ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಗಳನ್ನು ತೊರೆದುಬಿಡಲಿಲ್ಲ.
- 19 ಆದರೆ ಅಶ್ಶೂರದ ಅರಸನಾದ ಪೂಲನು ದೇಶದ ಮೇಲೆ ಬಂದನು. ಆಗ ಮೆನಹೇಮನು ರಾಜ್ಯವನ್ನು ತನ್ನ ಕೈಯಲ್ಲಿ ಧೃಢಪಡಿಸಲು ಅವನ ಕೈ ತನ್ನ ಸಂಗಡ ಇರುವ ಹಾಗೆ ಪೂಲನಿಗೆ ಸಾವಿರ ಬೆಳ್ಳಿ ತಲಾಂತು ಗಳನ್ನು ಕೊಟ್ಟನು.
- 20 ಮೆನಹೇಮನು ಈ ಹಣವನ್ನು ಇಸ್ರಾಯೇಲಿನವರಿಂದ ಬರಮಾಡಿದನು. ಹೇಗಂದರೆ, ಅಶ್ಶೂರದ ಅರಸನಿಗೆ ಕೊಡಲು ಎಲ್ಲಾ ಐಶ್ವರ್ಯವಂತ ರಿಂದ ತಲಾ ಐವತ್ತು ಬೆಳ್ಳಿ ಶೆಕೇಲುಗಳನ್ನು ತೆಗೆದು ಕೊಂಡನು. ಆದದರಿಂದ ಅಶ್ಶೂರದ ಅರಸನು ದೇಶ ದಲ್ಲಿ ನಿಲ್ಲದೆ ತಿರಿಗಿ ಹೋದನು.
- 21 ಮೆನಹೇಮನ ಇತರ ಕ್ರಿಯೆಗಳೂ ಅವನು ಮಾಡಿದ ಎಲ್ಲವೂ ಇಸ್ರಾಯೇಲಿನ ಅರಸುಗಳ ವೃತ್ತಾಂತಗಳ ಪುಸ್ತಕದಲ್ಲಿ ಬರೆಯಲ್ಪಡಲಿಲ್ಲವೋ?
- 22 ಮೆನಹೇಮನು ತನ್ನ ಪಿತೃ ಗಳ ಸಂಗಡ ನಿದ್ರಿಸಿದನು; ಅವನ ಮಗನಾದ ಪೆಕ ಹನು ಅವನಿಗೆ ಬದಲಾಗಿ ಅರಸನಾದನು;
- 23 ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಐವತ್ತನೇ ವರುಷದಲ್ಲಿ ಮೆನಹೇಮನ ಮಗನಾದ ಪೆಕಹನು ಸಮಾರ್ಯದಲ್ಲಿ ಇಸ್ರಾಯೇಲಿನ ಮೇಲೆ ಎರಡು ವರುಷ ಆಳಿದನು.
- 24 ಅವನು ಕರ್ತನ ಸಮ್ಮುಖ ದಲ್ಲಿ ಕೆಟ್ಟದ್ದನ್ನು ಮಾಡಿದನು; ಅವನು ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗನಾ ದಂಥ ಯಾರೊಬ್ಬಾಮನ ಪಾಪಗಳನ್ನು ತೊರೆಯಲಿಲ್ಲ.
- 25 ಆದರೆ ಅವನ ಅಧಿಪತಿಯಾದಂಥ, ರೆಮಲ್ಯನ ಮಗನಾದ ಪೆಕಹನು ಅವನ ಮೇಲೆ ಒಳಸಂಚು ಮಾಡಿ ಅರ್ಗೋಬನ್ನೂ ಅರ್ಯೇಯನ್ನೂ ಗಿಲ್ಯಾದಿನ ಜನರಲ್ಲಿ ಐವತ್ತು ಮಂದಿಯನ್ನೂ ತನ್ನ ಸಂಗಡ ಕೂಡಿಸಿ ಕೊಂಡು ಸಮಾರ್ಯದಲ್ಲಿ ಅರಸನಿಗಿದ್ದ ಅರಮನೆ ಯೊಳಗೆ ಅವನನ್ನು ಕೊಂದುಹಾಕಿ ಅವನಿಗೆ ಬದಲಾಗಿ ಅರಸನಾದನು.
- 26 ಇಗೋ, ಪೆಕಹನ ಇತರ ಕ್ರಿಯೆ ಗಳೂ ಅವನು ಮಾಡಿದ್ದೆಲ್ಲವೂ ಇಸ್ರಾಯೇಲಿನ ಅರಸು ಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ.
- 27 ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಐವತ್ತೆರಡನೇ ವರುಷದಲ್ಲಿ ರೆಮಲ್ಯನ ಮಗನಾದ ಪೆಕಹನು ಇಸ್ರಾಯೇಲಿನ ಮೇಲೆ ಸಮಾರ್ಯದಲ್ಲಿ ಆಳಲು ಆರಂಭಿಸಿ ಇಪ್ಪತ್ತು ವರುಷ ಆಳಿದನು.
- 28 ಅವನು ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿ ದನು; ಅವನು ಇಸ್ರಾಯೇಲ್ಯರನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಗಳನ್ನು ತೊರೆದುಬಿಡಲಿಲ್ಲ.
- 29 ಇಸ್ರಾಯೇಲಿನ ಅರಸನಾದ ಪೆಕಹನ ದಿವಸಗಳಲ್ಲಿ ಅಶ್ಶೂರದ ಅರಸ ನಾದ ತಿಗ್ಲತ್ಪಿಲೆಸೆರನು ಬಂದು ನೆಫ್ತಾಲಿಯ ದೇಶವಾದ ಇಯ್ಯೋನನ್ನೂ ಅಬೇಲ್ಬೆತ್ಮಾಕವನ್ನೂ ಯಾನೋಹ ವನ್ನೂ ಕೆದೆಷನ್ನೂ ಹಾಚೋರನ್ನೂ ಗಿಲ್ಯಾದನ್ನೂ ಗಲಿಲಾಯವನ್ನೂ ಹಿಡುಕೊಂಡು ಜನರನ್ನು ಸೆರೆಯಾಗಿ ಅಶ್ಯೂರಿಗೆ ಒಯ್ದನು.
- 30 ಇದಲ್ಲದೆ ಉಜ್ಜೀಯನ ಮಗ ನಾದ ಯೋತಾಮನ ಇಪ್ಪತ್ತನೇ ವರುಷದಲ್ಲಿ ಏಲನ ಮಗನಾದ ಹೋಶೆಯನು ರೆಮಲ್ಯನ ಮಗನಾದ ಪೆಕಹನ ಮೇಲೆ ಒಳಸಂಚು ಮಾಡಿ ಅವನನ್ನು ಸಂಹರಿಸಿ ಅವನಿಗೆ ಬದಲಾಗಿ ಅರಸನಾದನು.
- 31 ಇಗೋ, ಪೆಕಹನ ಇತರ ಕ್ರಿಯೆಗಳೂ ಅವನು ಮಾಡಿದ್ದೆಲ್ಲವೂ ಇಸ್ರಾಯೇಲಿನ ಅರಸುಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ.
- 32 ಇಸ್ರಾಯೇಲಿನ ಅರಸನಾದಂಥ, ರೆಮಲ್ಯನ ಮಗನಾದ, ಪೆಕಹನ ಆಳ್ವಿಕೆಯ ಎರಡನೇ ವರುಷದಲ್ಲಿ ಯೆಹೂದದ ಅರಸನಾದಂಥ, ಉಜ್ಜೀಯನ ಮಗ ನಾದ, ಯೋತಾಮನು ಆಳಲು ಆರಂಭಿಸಿದನು.
- 33 ಅವನು ಆಳಲು ಆರಂಭಿಸಿದಾಗ ಇಪ್ಪತ್ತೈದು ವರುಷ ದವನಾಗಿದ್ದು ಯೆರೂಸಲೇಮಿನಲ್ಲಿ ಹದಿನಾರು ವರುಷ ಆಳಿದನು. ಅವನ ತಾಯಿಯು ಚಾದೋಕನ ಮಗಳಾ ಗಿದ್ದ ಯೆರೂಷಳು.
- 34 ಅವನು ತನ್ನ ತಂದೆಯಾದ ಉಜ್ಜೀಯನು ಮಾಡಿದ ಪ್ರಕಾರವೇ ಮಾಡಿ ಕರ್ತನ ಸಮ್ಮುಖದಲ್ಲಿ ಒಳ್ಳೆಯದಾದದ್ದನ್ನು ಮಾಡಿದನು.
- 35 ಇವನು ಕರ್ತನ ಮನೆಗೆ ಎತ್ತರವಾದ ಬಾಗಲನ್ನು ಕಟ್ಟಿಸಿದನು. ಆದರೆ ಉನ್ನತ ಸ್ಥಳಗಳು ತೆಗೆಯಲ್ಪಡಲಿಲ್ಲ; ಜನರು ಇನ್ನೂ ಉನ್ನತ ಸ್ಥಳಗಳ ಮೇಲೆ ಬಲಿಗಳನ್ನೂ ಧೂಪವನ್ನೂ ಅರ್ಪಿಸುತ್ತಿದ್ದರು.
- 36 ಯೋತಾಮನ ಇತರ ಕ್ರಿಯೆಗಳೂ ಅವನು ಮಾಡಿದ ಎಲ್ಲವೂ ಯೆಹೂದದ ಅರಸುಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ.
- 37 ಆ ದಿವಸಗಳಲ್ಲಿ ಕರ್ತನು ಅರಾ ಮ್ಯರ ಅರಸನಾದ ರೆಚೀನನನ್ನೂ ರೆಮಲ್ಯನ ಮಗನಾದ ಪೆಕಹನನ್ನೂ ಯೆಹೂದದ ಮೇಲೆ ಕಳುಹಿಸಲು ಆರಂಭಿ ಸಿದನು.
- 38 ಯೋತಾಮನು ತನ್ನ ಪಿತೃಗಳ ಸಂಗಡ ನಿದ್ರಿಸಿದನು. ಅವನನ್ನು ಅವನ ತಂದೆಯಾದ ದಾವೀ ದನ ಪಟ್ಟಣದಲ್ಲಿ ತನ್ನ ಪಿತೃಗಳ ಸ್ಮಶಾನ ಭೂಮಿಯಲ್ಲಿ ಹೂಣಿಟ್ಟರು. ಅವನ ಮಗನಾದ ಆಹಾಜನು ಅವನಿಗೆ ಬದಲಾಗಿ ಅರಸನಾದನು.
2 Kings 15
- Details
- Parent Category: Old Testament
- Category: 2 Kings
2 ಅರಸುಗಳು ಅಧ್ಯಾಯ 15