- 1 ಮನಸ್ಸೆಯು ಆಳಲು ಆರಂಭಿಸಿದಾಗ ಹನ್ನೆರಡು ವರುಷದವನಾಗಿದ್ದು ಅವನು ಐವತ್ತೈದು ವರುಷ ಯೆರೂಸಲೇಮಿನಲ್ಲಿ ಆಳಿದನು. ಅವನ ತಾಯಿಯ ಹೆಸರು ಹೆಫ್ಚಿಬಾ.
- 2 ಕರ್ತನು ಇಸ್ರಾಯೇಲಿನ ಮಕ್ಕಳ ಮುಂದೆ ಹೊರಡಿಸಿದ ಅನ್ಯ ಜನಾಂಗಗಳ ಅಸಹ್ಯವಾದವುಗಳ ಹಾಗೆಯೇ ಅವನು ಕರ್ತನ ದೃಷ್ಟಿಗೆ ಕೆಟ್ಟದ್ದನ್ನು ಮಾಡಿದನು.
- 3 ಅವನು ತನ್ನ ತಂದೆಯಾದ ಹಿಜ್ಕೀಯನು ನಾಶಮಾಡಿದ ಉನ್ನತ ಸ್ಥಳಗಳನ್ನು ತಿರಿಗಿ ಕಟ್ಟಿಸಿ ಬಾಳನಿಗೆ ಬಲಿಪೀಠ ಗಳನ್ನು ಉಂಟುಮಾಡಿ ಇಸ್ರಾಯೇಲಿನ ಅರಸನಾದ ಅಹಾಬನು ಮಾಡಿದ ಹಾಗೆ ವಿಗ್ರಹದ ತೋಪನ್ನು ಮಾಡಿ ಆಕಾಶದ ಎಲ್ಲಾ ಸೈನ್ಯಕ್ಕೆ ಅಡ್ಡಬಿದ್ದು ಅವುಗಳನ್ನು ಸೇವಿಸಿದನು.
- 4 ಇದಲ್ಲದೆ ಯೆರೂಸಲೇಮಿನಲ್ಲಿ ನನ್ನ ನಾಮವನ್ನು ಇರಿಸುವೆನೆಂದು ಕರ್ತನು ಯಾವದನ್ನು ಕುರಿತು ಹೇಳಿದ್ದನೋ ಆ ಕರ್ತನ ಮನೆಯಲ್ಲಿ ಅವನು ಬಲಿಪೀಠಗಳನ್ನು ಕಟ್ಟಿಸಿದನು.
- 5 ಕರ್ತನ ಮನೆಯ ಎರಡು ಅಂಗಳಗಳಲ್ಲಿ ಆಕಾಶದ ಎಲ್ಲಾ ಸೈನ್ಯಕ್ಕೋಸ್ಕರ ಬಲಿಪೀಠಗಳನ್ನು ಕಟ್ಟಿಸಿದನು.
- 6 ಅವನು ತನ್ನ ಮಗನನ್ನು ಬೆಂಕಿಯಲ್ಲಿ ದಾಟುವಂತೆ ಮಾಡಿದನು; ಮೇಘ ಮಂತ್ರ ಗಳನ್ನೂ ಸರ್ಪಮಂತ್ರಗಳನ್ನೂ ಮಾಡಿದನು; ಯಕ್ಷಿಣಿ ಗಾರರ ಬಳಿಯಲ್ಲೂ ಮಂತ್ರಜ್ಞರ ಬಳಿಯಲ್ಲೂ ವಿಚಾರಿ ಸಿದನು; ಕರ್ತನಿಗೆ ಕೋಪವನ್ನು ಎಬ್ಬಿಸಲು ಆತನ ದೃಷ್ಟಿಯಲ್ಲಿ ಅತ್ಯಂತ ಕೆಟ್ಟತನವನ್ನು ಮಾಡಿದನು.
- 7 ಈ ಮನೆಯಲ್ಲಿಯೂ ಇಸ್ರಾಯೇಲಿನ ಸಕಲ ಗೋತ್ರಗಳ ಲ್ಲಿಯೂ ನಾನು ಆದುಕೊಂಡ ಯೆರೂಸಲೇಮಿನ ಲ್ಲಿಯೂ ನನ್ನ ನಾಮವನ್ನು ಯುಗಯುಗಕ್ಕೂ ಇರುವಂತೆ ಮಾಡುವೆನೆಂದು ಕರ್ತನು ದಾವೀದನಿಗೂ ಅವನ ಮಗನಾದ ಸೊಲೊಮೋನನಿಗೂ ಯಾವದನ್ನು ಕುರಿತು ಹೇಳಿದ್ದನೋ ಆ ಮನೆಯಲ್ಲಿ ತಾನು ಮಾಡಿದ ತೋಪಿನ ಕೆತ್ತಿದ ವಿಗ್ರಹವನ್ನು ಇಟ್ಟನು.
- 8 ಕರ್ತನು --ನಾನು ಅವರಿಗೆ ಆಜ್ಞಾಪಿಸಿದ ಎಲ್ಲಾದರ ಪ್ರಕಾರವೂ ನನ್ನ ಸೇವಕನಾದ ಮೋಶೆಯು ಅವರಿಗೆ ಆಜ್ಞಾಪಿಸಿದ ಎಲ್ಲಾ ನ್ಯಾಯಪ್ರಮಾಣದ ಪ್ರಕಾರವೂ ಮಾಡಿ ಅವುಗಳನ್ನು ಅವರು ಕೈಕೊಂಡರೆ ನಾನು ಅವರ ತಂದೆಗಳಿಗೆ ಕೊಟ್ಟ ದೇಶದೊಳಗಿಂದ ಅವರ ಪಾದಗಳು ಇನ್ನು ಕದಲುವಂತೆ ಮಾಡುವದಿಲ್ಲವೆಂದು ಹೇಳಿದನು.
- 9 ಆದರೆ ಅವರು ಕೇಳದೆ ಹೋದರು; ಕರ್ತನು ಇಸ್ರಾಯೇಲ್ ಮಕ್ಕಳ ಮುಂದೆ ನಾಶಮಾಡಿದ ಜನಾಂಗಗಳ ಕೆಟ್ಟತನಕ್ಕಿಂತ ಅಧಿಕ ವಾಗಿ ಮಾಡಲು ಮನಸ್ಸೆಯು ಅವರನ್ನು ಮಾರ್ಗ ತಪ್ಪಿಸಿದನು.
- 10 ಆದದರಿಂದ ಕರ್ತನು ಪ್ರವಾದಿಗಳಾದ ತನ್ನ ಸೇವಕರ ಮುಖಾಂತರ ಹೇಳಿದ್ದೇನಂದರೆ--
- 11 ಯೆಹೂದದ ಅರಸನಾದ ಮನಸ್ಸೆಯು ತನ್ನ ಮುಂದೆ ಇದ್ದ ಅಮೋರಿಯರು ಮಾಡಿದ ಎಲ್ಲಕ್ಕಿಂತ ಕೆಟ್ಟದ್ದಾದ ಈ ಅಸಹ್ಯಗಳನ್ನು ಮಾಡಿದನು. ಯೆಹೂದವನ್ನು ತನ್ನ ವಿಗ್ರಹಗಳಿಂದ ಪಾಪಮಾಡಿಸಿದನು. ಈ ಕಾರಣ ದಿಂದ ಇಸ್ರಾಯೇಲಿನ ದೇವರಾದ ಕರ್ತನು ಹೇಳು ವದೇನಂದರೆ--
- 12 ಇಗೋ, ನಾನು ಯೆರೂಸಲೇಮಿನ ಮೇಲೆಯೂ ಯೆಹೂದದ ಮೇಲೆಯೂ ಕೇಡನ್ನು ಬರಮಾಡುವೆನು; ಅದನ್ನು ಕೇಳುವವನ ಎರಡೂ ಕಿವಿಗಳು ಕಿರಗುಟ್ಟುವವು.
- 13 ನಾನು ಯೆರೂಸಲೇಮಿನ ಮೇಲೆ ಸಮಾರ್ಯದ ನೂಲನ್ನೂ ಅಹಾಬನ ಮನೆಯ ಗಟ್ಟಿ ತೂಕವನ್ನೂ ಗುಂಡನ್ನೂ ಚಾಚುವೆನು; ತಟ್ಟೆ ಯನ್ನು ಒರಸಿ ಬೋರಲು ಹಾಕುವ ಹಾಗೆ ನಾನು ಯೆರೂಸಲೇಮನ್ನು ಒರಸಿಬಿಡುವೆನು.
- 14 ಇದಲ್ಲದೆ ನಾನು ನನ್ನ ಬಾಧ್ಯತೆಗೆ ಉಳಿದಿರುವವರನ್ನು ಬಿಟ್ಟು ಬಿಟ್ಟು ಅವರನ್ನು ಶತ್ರುಗಳ ಕೈಗೆ ಒಪ್ಪಿಸಿಬಿಡುವೆನು. ಅವರು ತಮ್ಮ ಶತ್ರುಗಳಿಗೆ ಕೊಳ್ಳೆಯೂ ಸೂರೆಯೂ ಆಗಿ ಹೋಗುವರು.
- 15 ಅವರ ತಂದೆಗಳು ಐಗುಪ್ತ ದಿಂದ ಹೊರಟ ದಿವಸ ಮೊದಲುಗೊಂಡು ಇಂದಿನ ವರೆಗೂ ಅವರು ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿ ನನಗೆ ಕೋಪವನ್ನು ಎಬ್ಬಿಸಿದ್ದಾರೆ.
- 16 ಇದಲ್ಲದೆ ಮನಸ್ಸೆಯು ಕರ್ತನ ದೃಷ್ಟಿಯಲ್ಲಿ ಕೇಡನ್ನು ಮಾಡಿದ್ದರಲ್ಲಿ ಯೆಹೂದವು ಪಾಪವನ್ನು ಮಾಡಲು ಪ್ರೇರೇಪಿಸಿದ ತನ್ನ ಪಾಪದ ಹೊರತು ಅವನು ಯೆರೂಸಲೇಮನ್ನು ಒಂದು ಕೊನೆಯಿಂದ ಮತ್ತೊಂದು ಕೊನೆಯ ವರೆಗೂ ತಾನು ಬಹು ಹೆಚ್ಚಾಗಿ ಚೆಲ್ಲಿದ ನಿರಾಪರಾಧದ ರಕ್ತದಿಂದ ತುಂಬಿಸಿದನು.
- 17 ಮನಸ್ಸೆಯ ಇತರ ಕ್ರಿಯೆಗಳೂ ಅವನು ಮಾಡಿದ ಎಲ್ಲವೂ ಅವನು ಮಾಡಿದ ಪಾಪವೂ ಯೆಹೂದದ ಅರಸುಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಡಲಿಲ್ಲವೋ?
- 18 ಮನಸ್ಸೆಯು ತನ್ನ ಪಿತೃಗಳ ಸಂಗಡ ನಿದ್ರಿಸಿದನು ಅವನನ್ನು ಅವನ ಮನೆಯ ತೋಟವಾದ ಉಜ್ಜನ ತೋಟದಲ್ಲಿ ಹೂಣಿ ಟ್ಟರು. ಅವನ ಮಗನಾದ ಆಮೋನನು ಅವನಿಗೆ ಬದಲಾಗಿ ಅರಸನಾದನು.
- 19 ಆಮೋನನು ಆಳಲು ಆರಂಭಿಸಿದಾಗ ಇಪ್ಪತ್ತೆ ರಡು ವರುಷದವನಾಗಿದ್ದು ಯೆರೂಸಲೇಮಿನಲ್ಲಿ ಎರಡು ವರುಷ ಆಳಿದನು. ಅವನ ತಾಯಿಯೂ ಯೊಟ್ಬಾ ಊರಿನವನಾದ ಹಾರೂಚನ ಮಗಳಾದ ಮೆಷುಲ್ಲೆ ಮೆತ್ ಎಂಬ ಹೆಸರುಳ್ಳವಳು.
- 20 ಅವನು ತನ್ನ ತಂದೆ ಯಾದ ಮನಸ್ಸೆಯು ಮಾಡಿದ ಹಾಗೆ ಕರ್ತನ ದೃಷ್ಟಿ ಯಲ್ಲಿ ಕೆಟ್ಟದ್ದನ್ನು ಮಾಡಿದನು.
- 21 ಅವನು ತನ್ನ ಪಿತೃಗಳ ದೇವರಾದ ಕರ್ತನ ಮಾರ್ಗವನ್ನು ಬಿಟ್ಟು
- 22 ತನ್ನ ತಂದೆಯು ನಡೆದ ಎಲ್ಲಾ ಮಾರ್ಗದಲ್ಲಿ ನಡೆದು ತನ್ನ ತಂದೆಯು ಸೇವಿಸಿದ ವಿಗ್ರಹಗಳನ್ನು ತಾನೂ ಸೇವಿಸಿ ಅವುಗಳನ್ನು ಆರಾಧಿಸಿದನು.
- 23 ಆದರೆ ಆಮೋನನ ಸೇವಕರು ಅವನ ಮೇಲೆ ಒಳಸಂಚು ಮಾಡಿ ಅರಸ ನನ್ನು ಅವನ ಮನೆಯಲ್ಲಿಯೇ ಕೊಂದುಹಾಕಿದರು.
- 24 ದೇಶದ ಜನರು ಅರಸನಾದ ಆಮೋನನ ಮೇಲೆ ಒಳಸಂಚು ಮಾಡಿದ ಎಲ್ಲರನ್ನು ಸಂಹರಿಸಿ ಅವನ ಮಗನಾದ ಯೋಷೀಯನನ್ನು ಅವನಿಗೆ ಬದಲಾಗಿ ಅರಸನನ್ನಾಗಿ ಮಾಡಿದರು.
- 25 ಆಮೋನನು ಮಾಡಿದ ಅವನ ಇತರ ಕ್ರಿಯೆಗಳು ಯೆಹೂದದ ಅರಸುಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಡಲಿಲ್ಲವೋ?
- 26 ಅವನ ಶವವನ್ನು ಉಜ್ಜನ ತೋಟದಲ್ಲಿದ್ದ ಸಮಾಧಿ ಯಲ್ಲಿ ಹೂಣಿಟ್ಟರು. ಅವನ ಮಗನಾದ ಯೋಷೀ ಯನು ಅವನಿಗೆ ಬದಲಾಗಿ ಅರಸನಾದನು.
2 Kings 21
- Details
- Parent Category: Old Testament
- Category: 2 Kings
2 ಅರಸುಗಳು ಅಧ್ಯಾಯ 21