- 1 ತರುವಾಯ ಏನಾಯಿತಂದರೆ, ದಾವೀದನ ಮಗನಾದ ಅಬ್ಷಾಲೋಮನಿಗೆ ತಾಮಾರಳೆಂಬ ಹೆಸರುಳ್ಳ ಸೌಂದರ್ಯವತಿಯಾದ ಒಬ್ಬ ಸಹೋದರಿ ಇದ್ದಳು. ಅವಳನ್ನು ದಾವೀದನ ಮಗನಾದ ಅಮ್ನೋನನು ಪ್ರೀತಿಮಾಡಿದನು.
- 2 ತನ್ನ ಸಹೋದರಿಯಾದ ತಾಮಾರಳ ನಿಮಿತ್ತ ಬಹು ತಾಪಪಟ್ಟು ಅಸ್ವಸ್ಥನಾದನು; ಅವಳು ಕನ್ನಿಕೆಯಾಗಿದ್ದಳು; ಆದದರಿಂದ ಅವಳನ್ನು ಏನಾದರೂ ಮಾಡುವದಕ್ಕೆ ಅಮ್ನೋನನಿಗೆ ಕಷ್ಟವಾಗಿತ್ತು.
- 3 ಆದರೆ ಅಮ್ನೋನನಿಗೆ ದಾವೀದನ ಸಹೋದರನಾಗಿರುವ ಶಿಮ್ಮನ ಮಗನಾದ ಯೋನಾದಾಬನೆಂಬ ಒಬ್ಬ ಸ್ನೇಹಿತನಿದ್ದನು. ಈ ಯೋನಾದಾಬನು ಮಹಾ ಕುಯುಕ್ತಿಯುಳ್ಳವನಾಗಿ ದ್ದನು.
- 4 ಇವನು ಅವನಿಗೆ--ಅರಸನ ಮಗನಾದ ನೀನು ದಿನದಿನಕ್ಕೆ ಯಾಕೆ ಕ್ಷೀಣನಾಗಿ ಹೋಗುತ್ತೀ? ನನಗೆ ತಿಳಿಸುವದಿಲ್ಲವೋ ಅಂದನು. ಅದಕ್ಕೆ ಅಮ್ನೋನನು ಅವನಿಗೆ--ನಾನು ನನ್ನ ಸಹೋದರನಾಗಿರುವ ಅಬ್ಷಾ ಲೋಮನ ಸಹೋದರಿಯಾದ ತಾಮಾರಳನ್ನು ಪ್ರೀತಿ ಮಾಡುತ್ತೇನೆ ಅಂದನು.
- 5 ಆಗ ಯೋನಾದಾಬನು ಅವನಿಗೆ--ನೀನು ರೋಗಿಷ್ಟನ ಹಾಗೆ ಮಂಚದ ಮೇಲೆ ಮಲಗು; ನಿನ್ನನ್ನು ನೋಡುವದಕ್ಕೆ ನಿನ್ನ ತಂದೆ ಬರುವಾಗ ನೀನು ಅವನಿಗೆ--ನನ್ನ ಸಹೋದರಿಯಾದ ತಾಮಾರಳು ಬರುವ ಹಾಗೆ ದಯಮಾಡಬೇಕು; ನಾನು ಅವಳ ಕೈಯಿಂದ ಉಣ್ಣುವ ಹಾಗೆ ಅವಳು ನನ್ನ ಕಣ್ಣೆದುರಿನಲ್ಲಿ ಅಡಿಗೆಯನ್ನು ಮಾಡಿ ನನಗೆ ಆಹಾರ ಕೊಡಲಿ ಎಂದು ಹೇಳು ಅಂದನು.
- 6 ಅವನು ಅದೇ ಪ್ರಕಾರ ರೋಗಿಷ್ಟನ ಹಾಗೆ ಮಲಗಿದನು. ಅರಸನು ತನ್ನನ್ನು ನೋಡುವದಕ್ಕೆ ಬಂದಾಗ ಅಮ್ನೋನನು ಅರಸನಿಗೆ--ನೀನು ನನ್ನ ಸಹೋದರಿಯಾದ ತಾಮಾರಳು ಬರುವ ಹಾಗೆ ದಯಮಾಡಬೇಕು; ನಾನು ಅವಳ ಕೈಯಿಂದ ಉಣ್ಣುವ ಹಾಗೆ ಅವಳು ನನ್ನ ಕಣ್ಣುಮುಂದೆ ಎರಡು ಭಕ್ಷ್ಯಗಳನ್ನು ಮಾಡುವದಕ್ಕೆ ಬರಲಿ ಅಂದನು.
- 7 ಆಗ ದಾವೀದನು ತನ್ನ ಮನೆಯಲ್ಲಿರುವ ತಾಮಾರಳ ಬಳಿಗೆ ಮನುಷ್ಯನನ್ನು ಕಳುಹಿಸಿ--ನೀನು ನಿನ್ನ ಸಹೋದರನಾದ ಅಮ್ನೋನನ ಮನೆಗೆ ಹೋಗಿ ಅವನಿಗೆ ಅಡಿಗೆಯನ್ನು ಮಾಡು ಅಂದನು.
- 8 ಹಾಗೆಯೇ ತನ್ನ ಸಹೋದರನಾದ ಅಮ್ನೋನನ ಮನೆಗೆ ಹೋದಳು. ಆಗ ಅವನು ಮಲಗಿದ್ದನು. ಅವಳು ಹಿಟ್ಟನ್ನು ತೆಗೆದುಕೊಂಡು ಅವನ ಕಣ್ಣು ಮುಂದೆ ಹಿಸಿಕಿ ನಾದಿ ಭಕ್ಷ್ಯಗಳನ್ನು ಮಾಡಿ ಪಾತ್ರೆ ತಕ್ಕೊಂಡು ಅವನ ಮುಂದೆ ಇಟ್ಟಳು.
- 9 ಆದರೆ ಅಮ್ನೋನನು--ನಾನು ಉಣ್ಣುವದಿಲ್ಲ ಎಂದು ಹೇಳಿ ನನ್ನ ಬಳಿಯಿಂದ ಎಲ್ಲಾ ಜನರನ್ನು ಕಳುಹಿಸಿಬಿಡಿರಿ ಅಂದನು. ಹಾಗೆಯೇ ಎಲ್ಲರೂ ಅವನನ್ನು ಬಿಟ್ಟು ಹೊರಗೆ ಹೋದರು.
- 10 ಆಗ ಅಮ್ನೋನನು--ನಾನು ನಿನ್ನ ಕೈಯಿಂದ ತಿನ್ನುವಂತೆ ಆ ಭಕ್ಷ್ಯಗಳನ್ನು ಕೊಠಡಿ ಯೊಳಗೆ ತೆಗೆದುಕೊಂಡು ಬಾ ಅಂದನು. ಹಾಗೆಯೇ ತಾಮಾರಳು ತಾನು ಮಾಡಿದ ಭಕ್ಷ್ಯಗಳನ್ನು ಕೊಠಡಿ ಯೊಳಗೆ ತನ್ನ ಸಹೋದರನಾದ ಅಮ್ನೋನನ ಬಳಿಗೆ ತಕ್ಕೊಂಡು ಬಂದಳು.
- 11 ಆದರೆ ಅವನು ಅವುಗಳನ್ನು ಉಣ್ಣುವ ಹಾಗೆ ಅವಳು ಅವನ ಬಳಿಗೆ ತಂದಾಗ ಅವನು ಅವಳನ್ನು ಹಿಡಿದು ಅವಳಿಗೆ--ನನ್ನ ಸಹೋ ದರಿಯೇ, ನನ್ನ ಸಂಗಡ ಮಲಗು; ಬಾ ಅಂದನು.
- 12 ಅದಕ್ಕವಳು--ನನ್ನ ಸಹೋದರನೇ, ಬೇಡ; ನನ್ನನ್ನು ಒತ್ತಾಯಮಾಡಬೇಡ; ಯಾಕಂದರೆ ಇಸ್ರಾಯೇಲಿನಲ್ಲಿ ಇಂಥಾ ಕಾರ್ಯಮಾಡಕೂಡದು; ಇಂಥಾ ಬುದ್ಧಿಹೀನ ವಾದ ಕೆಲಸ ಮಾಡಬೇಡ.
- 13 ನಾನಾದರೋ ನನ್ನ ನಿಂದೆಯನ್ನು ಎಲ್ಲಿಗೆ ಹೋಗಮಾಡಲಿ; ಇದಲ್ಲದೆ ನೀನು ಇಸ್ರಾಯೇಲಿನಲ್ಲಿ ಬುದ್ಧಿಹೀನರೊಳಗೆ ಒಬ್ಬನ ಹಾಗೆ ಇರುವಿ. ಹಾಗಾದರೆ ಈಗ ದಯಮಾಡಿ ಅರಸನ ಸಂಗಡ ಮಾತನಾಡು; ಅವನು ನಿನ್ನ ಬಳಿಯಿಂದ ನನ್ನನ್ನು ಹೇಗಾದರೂ ಹಿಂತೆಗೆಯುವುದಿಲ್ಲ ಅಂದಳು.
- 14 ಅವನು ಅವಳ ಮಾತನ್ನು ಕೇಳಲೊಲ್ಲದೆ ತಾನು ಅವಳಿಗಿಂತ ಬಲವುಳ್ಳವನಾಗಿದ್ದದರಿಂದ ಅವಳನ್ನು ಕುಂದಿಸಿ ಅವಳ ಸಂಗಡ ಮಲಗಿದನು.
- 15 ಆಗ ಅಮ್ನೊನನು ಅವಳನ್ನು ಅತ್ಯಂತ ಹಗೆಮಾಡಿದನು; ಅವನು ಅವಳನ್ನು ಹಗೆಮಾಡಿದ ಹಗೆಯು ಮೊದಲು ಮಾಡಿದ ಪ್ರೀತಿಗಿಂತ ಅಧಿಕವಾಗಿತ್ತು; ಆದದರಿಂದ ಅಮ್ನೋನನು ಅವಳಿಗೆ--ಎದ್ದು ಹೋಗು ಅಂದನು.
- 16 ಆಗ ಅವಳು ಅವನಿಗೆ--ಇದಕ್ಕೆ ಕಾರಣವಿಲ್ಲ; ನನಗೆ ಮಾಡಿದ ಆ ಕೆಟ್ಟತನಕ್ಕಿಂತ ನೀನು ನನ್ನನ್ನು ಕಳುಹಿಸಿಬಿಡುವ ಈ ಕೆಟ್ಟತನವು ಮತ್ತೂ ಅಧಿಕವಾಗಿದೆ ಅಂದಳು.
- 17 ಆದರೆ ಅವನು ಅವಳ ಮಾತನ್ನು ಕೇಳಲೊಲ್ಲದೆ ತನ್ನನ್ನು ಸೇವಿಸುವ ತನ್ನ ದಾಸರನ್ನು ಕರೆದು--ಇವಳನ್ನು ನನ್ನ ಬಳಿಯಿಂದ ಹೊರಗೆ ತಳ್ಳಿ ಬಾಗಲು ಮುಚ್ಚಿ ಬೀಗಹಾಕು ಅಂದನು.
- 18 ಅವಳು ವಿವಿಧವಾದ ವಸ್ತ್ರವನ್ನು ಉಟ್ಟಿದ್ದಳು; ಯಾಕಂದರೆ ಅರಸನ ಕುಮಾರ್ತೆಯರಾದ ಕನ್ಯಾಸ್ತ್ರೀಯರು ಇಂಥಾ ನಿಲುವಂಗಿಗಳನ್ನು ಧರಿಸಿಕೊಳ್ಳುತ್ತಿದ್ದರು. ಆದರೆ ಅವನ ಸೇವಕನು ಅವಳನ್ನು ಹೊರಗೆ ಕಳುಹಿಸಿ ಬಾಗಲು ಮುಚ್ಚಿ ಬೀಗಹಾಕಿದನು.
- 19 ಆಗ ತನ್ನ ತಲೆಯಮೇಲೆ ಬೂದಿಯನ್ನು ಹಾಕಿಕೊಂಡು ತಾನು ಧರಿಸಿಕೊಂಡಿದ್ದ ವಿವಿಧವಾದ ವಸ್ತ್ರವನ್ನು ಹರಿದು ತನ್ನ ಕೈಗಳನ್ನು ತಲೆಯ ಮೇಲೆ ಇಟ್ಟುಕೊಂಡು ಅಳುತ್ತಾ ಹೋದಳು.
- 20 ಆಗ ಅವಳ ಸಹೋದರನಾದ ಅಬ್ಷಾಲೋಮನು ಅವಳಿಗೆ --ನಿನ್ನ ಸಹೋದರನಾದ ಅಮ್ನೋನನು ನಿನ್ನ ಸಂಗಡ ಇದ್ದನೋ? ನನ್ನ ಸಹೋದರಿಯೇ, ಈಗ ಮೌನ ವಾಗಿರು; ಅವನು ನಿನ್ನ ಸಹೋದರನು; ಈ ಕಾರ್ಯ ವನ್ನು ನಿನ್ನ ಮನಸ್ಸಿಗೆ ಹಚ್ಚಿಕೊಳ್ಳಬೇಡ ಅಂದನು. ಹಾಗೆಯೇ ತಾಮಾರಳು ತನ್ನ ಸಹೋದರನಾದ ಅಬ್ಷಾಲೋಮನ ಮನೆಯಲ್ಲಿ ಒಂಟಿಗಳಾಗಿದ್ದಳು.
- 21 ಅರಸನಾದ ದಾವೀದನು ಇವುಗಳನೆಲ್ಲಾ ಕೇಳಿದಾಗ ಬಹುಕೋಪಗೊಂಡನು.
- 22 ಅಬ್ಷಾಲೋಮನು ತನ್ನ ಸಹೋದರನಾದ ಅಮ್ನೋನನ ಸಂಗಡ ಒಳ್ಳೇದಾ ದರೂ ಕೆಟ್ಟದ್ದಾದರೂ ಮಾತನಾಡದೆ ಇದ್ದನು. ಅವನು ತನ್ನ ಸಹೋದರಿಯಾದ ತಾಮಾರಳನ್ನು ಬಲವಂತ ಮಾಡಿದ್ದರಿಂದ ಅಬ್ಷಾಲೋಮನು ಅವನನ್ನು ಹಗೆ ಮಾಡಿದನು.
- 23 ಎರಡು ವರುಷ ಪೂರ್ಣಮುಗಿದ ತರುವಾಯ ಏನಾಯಿತಂದರೆ, ಅಬ್ಷಾಲೋಮನಿಗೆ ಎಫ್ರಾಯಾಮ್ ಬಳಿಯಲ್ಲಿರುವ ಬಾಳ್‌ಹಾಚೋರಿನಲ್ಲಿ ಕುರಿಗಳ ಉಣ್ಣೆ ಕತ್ತರಿಸುವವರಿದ್ದರು. ಆದದರಿಂದ ಅಬ್ಷಾಲೋಮನು ಅರಸನ ಮಕ್ಕಳನ್ನೆಲ್ಲಾ ಔತಣಕ್ಕೆ ಕರೆದನು.
- 24 ಇದಲ್ಲದೆ ಅಬ್ಷಾಲೋಮನು ಅರಸನ ಬಳಿಗೆ ಹೋಗಿ--ಇಗೋ, ಈಗ ನಿನ್ನ ಸೇವಕನಿಗೆ ಉಣ್ಣೆ ಕತ್ತರಿಸುವವರು ಇದ್ದಾರೆ; ಅರಸನೂ ತನ್ನ ಸೇವಕರೂ ನಿನ್ನ ಸೇವಕನ ಸಂಗಡ ಬರಲಿ ಅಂದನು.
- 25 ಅದಕ್ಕೆ ಅರಸನು ಅಬ್ಷಾಲೋಮ ನಿಗೆ--ಹಾಗಲ್ಲ; ನನ್ನ ಮಗನೇ, ನಾವು ನಿನಗೆ ಭಾರವಾಗಿರದ ಹಾಗೆ ನಾವೆಲ್ಲರು ಈಗ ಬರುವದಿಲ್ಲ ಅಂದನು. ಅವನು ರಾಜನನ್ನು ಬಲವಂತ ಮಾಡಿದನು; ಆದರೆ ಅವನು ಹೋಗಲೊಲ್ಲದೆ ಅವನನ್ನು ಆಶೀ ರ್ವದಿಸಿದನು.
- 26 ಆಗ ಅಬ್ಷಾಲೋಮನು--ಹಾಗಾ ದರೆ ನನ್ನ ಸಹೋದರನಾದ ಅಮ್ನೋನನು ನಮ್ಮ ಸಂಗಡ ಬರಲಿ ಅಂದನು.
- 27 ಅರಸನು ಅವನಿಗೆ--ಯಾಕೆ ಅವನು ನಿಮ್ಮ ಸಂಗಡ ಬರಬೇಕು ಅಂದನು. ಆದರೆ ಅಬ್ಷಾಲೋಮನು ಅವನನ್ನು ಬಲವಂತ ಮಾಡಿದ್ದರಿಂದ ಅವನು ಅಮ್ನೋನನನ್ನೂ ಅರಸನ ಎಲ್ಲಾ ಮಕ್ಕಳನ್ನೂ ಅವನ ಸಂಗಡ ಕಳುಹಿಸಿದನು.
- 28 ಆದರೆ ಅಬ್ಷಾಲೋಮನು ತನ್ನ ಸೇವಕರಿಗೆ--ನೀವು ನೋಡಿಕೊಳ್ಳಿರಿ; ಅಮ್ನೋನನ ಹೃದಯವು ದ್ರಾಕ್ಷಾರಸ ದಿಂದ ಸಂಭ್ರಮವಾಗಿರುವಾಗ ನಾನು ನಿಮಗೆ ಅಮ್ನೋನ ನನ್ನು ಹೊಡೆಯಿರಿ ಎಂದು ಹೇಳುತ್ತಲೇ ಅವನನ್ನು ಕೊಂದುಹಾಕಿರಿ; ಭಯಪಡಬೇಡಿರಿ ನಾನು ನಿಮಗೆ ಆಜ್ಞಾಪಿಸಿದ್ದೇನಲ್ಲಾ. ಬಲವಾಗಿರಿ; ಪರಾಕ್ರಮಿಗಳಾ ಗಿರ್ರಿ; ಎಂದು ಆಜ್ಞಾಪಿಸಿ ಹೇಳಿದನು.
- 29 ಅಬ್ಷಾಲೋ ಮನು ಆಜ್ಞಾಪಿಸಿದ ಹಾಗೆಯೇ ಅವನ ಸೇವಕರು ಅಮ್ನೋನನಿಗೆ ಮಾಡಿದರು. ಆಗ ಅರಸನ ಮಕ್ಕಳೆ ಲ್ಲರೂ ಎದ್ದು ತಮ್ಮ ತಮ್ಮ ಹೇಸರ ಕತ್ತೆಗಳನ್ನೇರಿ ಓಡಿಹೋದರು.
- 30 ಆದರೆ ಅವರು ದಾರಿಯಲ್ಲಿರುವಾಗ--ಅಬ್ಷಾ ಲೋಮನು ಅರಸನ ಮಕ್ಕಳನ್ನೆಲ್ಲಾ ಕೊಂದು ಹಾಕಿ ದ್ದಾನೆ, ಒಬ್ಬನಾದರೂ ಉಳಿಯಲಿಲ್ಲ ಎಂದು ದಾವೀ ದನಿಗೆ ವರ್ತಮಾನ ಬಂತು.
- 31 ಆಗ ಅರಸನು ಎದ್ದು ತನ್ನ ವಸ್ತ್ರಗಳನ್ನು ಹರಿದುಕೊಂಡು ನೆಲದ ಮೇಲೆ ಬಿದ್ದನು; ಅವನ ಸೇವಕರೆಲ್ಲರೂ ತಮ್ಮ ವಸ್ತ್ರಗಳನ್ನು ಹರಿದುಕೊಂಡು ಅವನ ಸುತ್ತಲೂ ನಿಂತರು.
- 32 ಆದರೆ ದಾವೀದನ ಸಹೋದರನಾದ ಶಿಮ್ಮನ ಮಗನಾಗಿ ರುವ ಯೋನಾದಾಬನು ದಾವೀದನಿಗೆ--ಒಡೆಯನೇ, ನನ್ನ ಅರಸನ ಮಕ್ಕಳಾದ ಯೌವನಸ್ಥರೆಲ್ಲರನ್ನು ಕೊಂದುಹಾಕಿದರೆಂದು ನೆನಸಬೇಡ; ಅಮ್ನೋನನು ಮಾತ್ರವೇ ಸತ್ತನು; ಅಬ್ಷಾಲೋಮನು ತನ್ನ ಸಹೋ ದರಿಯಾದ ತಾಮಾರಳನ್ನು ಅಮ್ನೋನನು ಬಲವಂತ ಮಾಡಿದ ದಿನ ಮೊದಲುಗೊಂಡು ಈ ಕಾರ್ಯವನ್ನು ಮಾಡುವದಕ್ಕೆ ತನ್ನ ಮನಸ್ಸಿನಲ್ಲಿ ಸ್ಥಿರಮಾಡಿದ್ದನು;
- 33 ಆದದರಿಂದ ಅರಸನಾದ ನನ್ನ ಒಡೆಯನೇ ಅರಸನ ಮಕ್ಕಳೆಲ್ಲರು ಸತ್ತರೆಂಬುವ ಮಾತನ್ನು ನಿನ್ನ ಮನಸ್ಸಿನ ಲ್ಲಿಡಬೇಡ; ಯಾಕಂದರೆ ಅಮ್ನೋನನು ಒಬ್ಬನೇ ಸತ್ತನು ಅಂದನು.
- 34 ಆದರೆ ಅಬ್ಷಾಲೋಮನು ಓಡಿ ಹೋದನು; ಆಗ ಕಾವಲುಗಾರನು ತನ್ನ ಕಣ್ಣುಗಳ ನ್ನೆತ್ತಿ ನೋಡುವಾಗ ಇಗೋ, ಅವನ ಹಿಂಭಾಗದಲ್ಲಿ ಬೆಟ್ಟದ ಪಾರ್ಶ್ವದ ಮಾರ್ಗವಾಗಿ ಅನೇಕ ಜನರು ಬರುತ್ತಿದ್ದರು.
- 35 ಆಗ ಯೋನಾದಾಬನು ಅರಸನಿಗೆಇಗೋ, ಅರಸನ ಮಕ್ಕಳು ಬರುತ್ತಿದ್ದಾರೆ; ನಿನ್ನ ಸೇವ ಕನು ಹೇಳಿದ ಹಾಗೆಯೇ ಆಯಿತು ಅಂದನು.
- 36 ಅವನು ಮಾತನಾಡಿ ತೀರಿಸಿದಾಗ ಇಗೋ, ಅರಸನ ಮಕ್ಕಳು ಬಂದು ಗಟ್ಟಿಯಾಗಿ ಅತ್ತರು. ಅರಸನೂ ಅವನ ಎಲ್ಲಾ ಸೇವಕರೂ ಬಹಳವಾಗಿ ಅತ್ತರು.
- 37 ಆದರೆ ಅಬ್ಷಾ ಲೋಮನು ಓಡಿಹೋಗಿ ಗೆಷೂರಿನ ಅರಸನಾಗಿರುವ ಅವ್ಮೆಾಹೂದನ ಮಗನಾದ ತಲ್ಮೈಯನ ಬಳಿಗೆ ಹೋದನು. ದಾವೀದನು ದಿನಂಪ್ರತಿ ತನ್ನ ಮಗನಿಗಾಗಿ ದುಃಖಪಡುತ್ತಿದ್ದನು.
- 38 ಹೀಗೆಯೇ ಅಬ್ಷಾಲೋಮನು ಗೆಷೂರಿಗೆ ಓಡಿ ಹೋಗಿ ಅಲ್ಲಿ ಮೂರು ವರುಷ ಇದ್ದನು.
- 39 ಆದರೆ ದಾವೀದನು ಅಬ್ಷಾಲೋಮನ ಬಳಿಗೆ ಹೋಗುವ ದಕ್ಕೆ ಆಸೆಪಡುತ್ತಿದ್ದನು. ಯಾಕಂದರೆ ಅಮ್ನೋನನು ಸತ್ತುಹೋದದರಿಂದ ಅರಸನಾದ ದಾವೀದನು ಅವನಿ ಗೋಸ್ಕರ ಆದರಣೆಹೊಂದಿದನು.
2 Samuel 13
- Details
- Parent Category: Old Testament
- Category: 2 Samuel
2 ಸಮುವೇಲನು ಅಧ್ಯಾಯ 13