- 1 ದಾವೀದನ ಕಡೇ ಮಾತುಗಳು ಇವೇ--ಇಷಯನ ಮಗನಾದ ದಾವೀದನು ನುಡಿ ದನು; ಉನ್ನತವಾಗಿ ಏರಿಸಲ್ಪಟ್ಟ ಪುರುಷನು, ಯಾಕೋಬನ ದೇವರ ಅಭಿಷಕ್ತನು, ಇಸ್ರಾಯೇಲಿನ ರಮ್ಯವಾದ ಕೀರ್ತನೆಗಾರನು ನುಡಿದದ್ದೇನಂದರೆ--
- 2 ಕರ್ತನ ಆತ್ಮನು ನನ್ನಿಂದ ಮಾತನಾಡಿದನು; ಆತನ ವಾಕ್ಯವು ನನ್ನ ಬಾಯಿಯಲ್ಲಿತ್ತು.
- 3 ಇಸ್ರಾಯೇಲಿನ ದೇವರು ಹೇಳಿದ್ದು; ಇಸ್ರಾಯೇಲಿನ ಬಂಡೆ ನನ್ನ ಸಂಗಡ ಮಾತನಾಡಿದ್ದು--ಮನುಷ್ಯರ ಮೇಲೆ ಆಳುವ ವನು ನೀತಿವಂತನಾಗಿರತಕ್ಕದ್ದು; ಅವನು ದೇವರ ಭಯ ದಲ್ಲಿ ಆಳುವನು.
- 4 ಸೂರ್ಯನು ಮೂಡಿರುವಂಥ, ಪ್ರಕಾಶದಿಂದ ಮೋಡಗಳಿಲ್ಲದೆ ಇರುವಂಥ, ಉದಯ ಕಾಲದ ಬೆಳಕಿನ ಹಾಗೆಯೂ ಮಳೆ ಬಂದ ಮೇಲೆ ಭೂಮಿಯಿಂದಾಗುವ ಹುಲ್ಲಿನ ಹಾಗೆಯೂ ಇರು ವನು.
- 5 ನನ್ನ ಮನೆ ದೇವರ ಸಮ್ಮುಖದಲ್ಲಿ ಹಾಗೆಯೇ ಅಲ್ಲದಿದ್ದರೂ ನನ್ನ ಸಂಗಡ ನಿತ್ಯವಾದ ಒಡಂಬಡಿಕೆ ಯನ್ನು ಮಾಡಿದ್ದಾನೆ; ಎಲ್ಲಾದರ ವಿಷಯ ಸಿದ್ಧವಾದ ದ್ದಾಗಿಯೂ ಸ್ಥಿರವಾದದ್ದಾಗಿಯೂ ಅದೆ. ಆತನು ಅದನ್ನು ಬೆಳೆಯದೆ ಇದ್ದರೂ ನನ್ನ ಎಲ್ಲಾ ರಕ್ಷಣೆಯೂ ನನ್ನ ಎಲ್ಲಾ ಅಭಿಲಾಷೆಯೂ ಅದೇ.
- 6 ಆದರೆ ಬೆಲಿಯಾಳನ ಮಕ್ಕಳೆಲ್ಲರೂ ತಳ್ಳಲ್ಪಡುವ ಮುಳ್ಳುಗಳ ಹಾಗೆ ಇರುವರು.
- 7 ಅವರು ಕೈಯಿಂದ ತೆಗೆಯಲ್ಪಡುವ ವರಲ್ಲ; ಅವರನ್ನು ಮುಟ್ಟುವ ಮನುಷ್ಯನು ಕಬ್ಬಿಣ ವನ್ನೂ ಈಟಿಯ ಕಟ್ಟಿಗೆಯನ್ನೂ ಧರಿಸಿಕೊಂಡಿರ ಬೇಕು. ಅದೇ ಸ್ಥಳದಲ್ಲಿ ಬೆಂಕಿಯಿಂದ ಸುಟ್ಟು ಬಿಡಲ್ಪಡುವರು.
- 8 ದಾವೀದನಿಗೆ ಇದ್ದ ಪರಾಕ್ರಮಶಾಲಿಗಳ ಹೆಸರು ಗಳು ಇವೇ; ಸೈನ್ಯಾಧಿಪತಿಗಳಲ್ಲಿ ಮುಖ್ಯನಾಗಿ ಆಸನದ ಮೇಲೆ ಕೂತವನಾದ ತಹ್ಕೆಮೋನ್ಯನು; ಇವನೇ ಎಚ್ನಿಯನಾದ ಅದೀನೊ. ಇವನು ಎಂಟು ನೂರು ಜನರ ಮೇಲೆ ಬಿದ್ದು ಅವರನ್ನು ಒಂದೇ ಸಾರಿ ಕೊಂದು ಹಾಕಿದನು.
- 9 ಇವನ ತರುವಾಯ ಅಹೋಹ್ಯನಾ ಗಿರುವ ದೋದೋನ ಮಗನಾಗಿರುವ ಎಲ್ಲಾಜಾರನು. ಇವನು ಇಸ್ರಾಯೇಲ್ ಜನರು ಓಡಿಹೋದ ತರುವಾಯ ಯುದ್ಧಕ್ಕೆ ಕೂಡಿ ಬಂದ ಫಿಲಿಷ್ಟಿಯರನ್ನು ನಿಂದಿಸಿದ ದಾವೀದನ ಸಂಗಡ ಇದ್ದ ಮೂವರು ಪರಾಕ್ರಮಶಾಲಿಗಳಲ್ಲಿ ಒಬ್ಬನಾಗಿದ್ದನು.
- 10 ಇವನು ಎದ್ದು ತನ್ನ ಕೈ ದಣಿದು ಕತ್ತಿಗೆ ಹತ್ತಿಕೊಳ್ಳುವ ವರೆಗೂ ಫಿಲಿಷ್ಟಿಯರನ್ನು ಹೊಡೆದುಬಿಟ್ಟನು. ಆ ದಿನ ಕರ್ತನು ದೊಡ್ಡ ರಕ್ಷಣೆಯನ್ನುಂಟು ಮಾಡಿದನು. ಜನರು ಸುಲು ಕೊಳ್ಳುವದಕ್ಕೆ ಮಾತ್ರ ಅವನ ಹಿಂದೆ ಹಿಂತಿರುಗಿದರು.
- 11 ಇವನ ತರುವಾಯ ಹರಾರ್ಯನಾಗಿರುವ ಆಗೇಯನ ಮಗನಾದ ಶಮ್ಮ. ಅಲಸಂದಿಯಿಂದ ತುಂಬಿದ ಹೊಲ ದಲ್ಲಿ ಫಿಲಿಷ್ಟಿಯರು ದಂಡಾಗಿ ಕೂಡಿ ಬಂದಾಗ ಜನರು ಫಿಲಿಷ್ಟಿಯರ ಮುಂದೆ ಓಡಿಹೋದರು.
- 12 ಆದರೆ ಅವನು ಆ ಹೊಲದಲ್ಲಿ ನಿಂತುಕೊಂಡು ಅದನ್ನು ಕಾಪಾಡಿ ಫಿಲಿಷ್ಟಿಯರನ್ನು ಕೊಂದುಬಿಟ್ಟನು. ಹೀಗೆ ಕರ್ತನು ದೊಡ್ಡರಕ್ಷಣೆಯನ್ನುಂಟು ಮಾಡಿದನು.
- 13 ಮೂವತ್ತು ಮಂದಿ ಮುಖ್ಯಸ್ಥರಲ್ಲಿ ಆ ಮೂರು ಮಂದಿ ಹೊರಟು ಸುಗ್ಗಿಯ ಕಾಲದಲ್ಲಿ ಅದುಲ್ಲಾಮ್ ಗವಿಯಲ್ಲಿರುವ ದಾವೀದನ ಬಳಿಗೆ ಬಂದರು; ಆಗ ಫಿಲಿಷ್ಟಿಯರ ದಂಡು ರೆಫಾಯಾಮ್ ತಗ್ಗಿನಲ್ಲಿ ಇಳಿ ದಿತ್ತು.
- 14 ದಾವೀದನು ಗಡಿ ಸ್ಥಳದಲ್ಲಿರುವಾಗ ಫಿಲಿಷ್ಟಿಯರ ದಂಡು ಬೇತ್ಲೆಹೇಮಿನಲ್ಲಿತ್ತು.
- 15 ಆಗ ದಾವೀದನು ಬೇತ್ಲೆಹೇಮಿನ ಬಾಗಲ ಬಳಿಯಲ್ಲಿರುವ ಬಾವಿಯ ನೀರನ್ನು ನನಗೆ ಕುಡಿಯಲು ಕೊಡುವ ವನಾರೆಂದು ಬಹು ಆಶೆಯಿಂದ ಹೇಳಿದನು.
- 16 ಆಗ ಆ ಮೂರು ಮಂದಿ ಪರಾಕ್ರಮಶಾಲಿಗಳು ಫಿಲಿಷ್ಟಿ ಯರ ದಂಡನ್ನು ಭೇದಿಸಿ ಹೊರಟು ಬೇತ್ಲೆಹೇಮಿನ ಬಾಗಲ ಬಳಿಯಲ್ಲಿರುವ ಬಾವಿಯ ನೀರನ್ನು ಸೇದಿ ದಾವೀದನಿಗೆ ತಕ್ಕೊಂಡು ಬಂದರು. ಆದರೆ ಅವನು ಅದನ್ನು ಕುಡಿಯಲ್ಲೊಲ್ಲದೆ ಕರ್ತನಿಗಾಗಿ ಹೊಯಿ ದನು.
- 17 ಅವನು--ಕರ್ತನೇ, ಇದನ್ನು ಕುಡಿಯುವದು ನನಗೆ ದೂರವಾಗಿರಲಿ. ಇದು ತಮ್ಮ ಪ್ರಾಣದಾಶೆ ಬಿಟ್ಟು ಹೋದ ಮನುಷ್ಯರ ರಕ್ತವಲ್ಲವೇ ಎಂದು ಹೇಳಿ ಕುಡಿಯಲೊಲ್ಲದೆ ಇದ್ದನು. ಇವುಗಳನ್ನು ಆ ಮೂರು ಮಂದಿ ಪರಾಕ್ರಮಶಾಲಿಗಳು ಮಾಡಿದರು.
- 18 ಯೋವಾಬನ ಸಹೋದರನಾದ ಚೆರೂಯಳ ಮಗನಾಗಿರುವ ಅಬೀಷೈಯು ಮೂರು ಮಂದಿಯಲ್ಲಿ ಮುಖ್ಯಸ್ಥನು. ಅವನು ತನ್ನ ಈಟಿಯನ್ನು ಎತ್ತಿ ಮುನ್ನೂರು ಜನರನ್ನು ಸಂಹರಿಸಿದ್ದರಿಂದ ಮೂವ ರೊಳಗೆ ಹೆಸರುಗೊಂಡನು.
- 19 ಈ ಮೂರು ಮಂದಿ ಯಲ್ಲಿ ಅವನು ಬಹು ಘನವುಳ್ಳವನಾಗಿದ್ದದ್ದು ಇದ ರಿಂದಲೇ. ಆದದರಿಂದ ಅವನು ಅವರಲ್ಲಿ ಪ್ರಧಾನ ನಾದನು. ಹೇಗಿದ್ದರೂ ಆ ಮೊದಲಿನ ಮೂರು ಜನಕ್ಕೆ ಅವನು ಸಮಾನನಾಗಿರಲಿಲ್ಲ.
- 20 ಕಬ್ಜಯೇಲಿನಲ್ಲಿದ್ದ ಪರಾಕ್ರಮಶಾಲಿಯ ಮಗನಾದ ಯೆಹೋಯಾದಾ ವನ ಮಗನಾಗಿರುವ ಬೆನಾಯನು ಅನೇಕ ಶೂರ ಕೃತ್ಯಗಳನ್ನು ಮಾಡಿದ್ದನು. ಅವನು ಸಿಂಹದಹಾಗಿರುವ ಮೋವಾಬಿನ ಇಬ್ಬರು ಮನುಷ್ಯರನ್ನು ಕೊಂದುಬಿಟ್ಟನು. ಇದಲ್ಲದೆ ಹಿಮಕಾಲದಲ್ಲಿ ಕುಣಿಯೊಳಗೆ ಇಳಿದು ಒಂದು ಸಿಂಹವನ್ನು ಕೊಂದುಬಿಟ್ಟನು.
- 21 ಅವನು ರೂಪವುಳ್ಳ ಒಬ್ಬ ಐಗುಪ್ತದ ಮನುಷ್ಯನನ್ನು ಕೊಂದು ಬಿಟ್ಟನು. ಆ ಐಗುಪ್ತನ ಕೈಯಲ್ಲಿ ಒಂದು ಈಟಿಯು ಇತ್ತು. ಇವನು ಒಂದು ಕೋಲನ್ನು ತಕ್ಕೊಂಡು ಅವನ ಬಳಿಗೆ ಹೋಗಿ ಆ ಈಟಿಯನ್ನು ಐಗುಪ್ತನ ಕೈಯಿಂದ ಕಸಕೊಂಡು ಅವನನ್ನು ಅವನ ಈಟಿಯಿಂದಲೇ ಕೊಂದುಹಾಕಿದನು.
- 22 ಇವುಗಳನ್ನು ಯೆಹೋಯಾ ದಾವನ ಮಗನಾದ ಬೆನಾಯನು ಮಾಡಿದ್ದರಿಂದ ಮೂರು ಮಂದಿ ಪರಾಕ್ರಮಶಾಲಿಗಳಲ್ಲಿ ಹೆಸರು ಗೊಂಡವನಾಗಿದ್ದನು.
- 23 ಇವನು ಮೂವತ್ತು ಜನರಿ ಗಿಂತ ಹೆಚ್ಚು ಘನವುಳ್ಳವನಾಗಿದ್ದನು; ಆದರೆ ಆ ಮೊದಲಿನ ಮೂರು ಮಂದಿಗೆ ಅವನು ಸಮಾನ ನಾಗಿರಲಿಲ್ಲ; ದಾವೀದನು ಅವನನ್ನು ತನ್ನ ಮೈಗಾವಲಿ ನವರ ಮೇಲೆ ಯಜಮಾನನನ್ನಾಗಿಟ್ಟನು.
- 24 ಯೋವಾಬನ ಸಹೋದರನಾದ ಅಸಾಹೇಲನು ಮೂವತ್ತು ಮಂದಿಯಲ್ಲಿ ಒಬ್ಬನಾಗಿದ್ದನು. ಈ ಮೂವತ್ತು ಮಂದಿ ಯಾರಂದರೆ; ಬೇತ್ಲೆಹೇಮ್ ಊರಿನ ದೋದೋವಿನ ಮಗನಾದ ಎಲ್ಹಾನಾನು;
- 25 ಹರೋದಿನವನಾದ ಶಮ್ಮನು, ಎಲೀಕನು, ಪೆಲೆಟ ನಾದ ಹೆಲೆಚ್,
- 26 ತೆಕೋವಿಯನಾದ ಇಕ್ಕೇಷನ ಮಗನಾದ ಈರಾ.
- 27 ಅಣತೋತಿನವನಾದ ಅಬೀ ಯೆಜರ್, ಹುಷಾ ಊರಿನವನಾದ ಮೆಬುನೈ, ಅಹೋಹಿನವನಾದ ಚಲ್ಮೋನ್,
- 28 ನೆಟೋಫದ ವನಾದ ಮಹರೈ,
- 29 ನೆಟೋಫದವನಾದ ಬಾಣನ ಮಗ ಹೆಲೇಬ್,
- 30 ಬೆನ್ಯಾವಿಾನನ ಮಕ್ಕಳ ಗಿಬೆ ಊರಿನವನಾದ ರೀಬೈ ಮಗನಾದ ಇತೈ,
- 31 ಪಿತೋನ್ಯ ನಾದ ಬೆನಾಯನು, ನಹಲೇ ಗಾಷ್ ಊರಿನವನಾದ ಹಿದೈ ಅರಾಬಾದ ಅಬೀಅಲ್ಬೋನ್, ಬರ್ಹುಮ್ಯನಾದ ಅಜ್ಮಾವೇತನು, ಶಾಲ್ಬೋನ್ಯನಾದ ಎಲೆಯಖ್ಬಾ
- 32 ಯಾಷೇನನ ಕುಮಾರರಲ್ಲಿ ಒಬ್ಬನಾದ ಯೋನಾತಾ ನನು,
- 33 ಹರಾರ್ಯನಾದ ಶಮ್ಮನು,
- 34 ಅರಾರ್ಯನಾದ ಶಾರಾರನ ಮಗನಾದ ಅಹೀಯಾಮ್, ಮಾಕಾತ್ಯರಲ್ಲಿ ಒಬ್ಬನ ಮಗನಾಗಿರುವ ಅಹಸ್ಬೈ ಮಗನಾದ ಎಲೀಫೆ ಲೆಟನು, ಗಿಲೋವಿಯನಾಗಿರುವ ಅಹೀತೋಫೆಲನ ಮಗನಾದ ಎಲೀಯಾಮನು,
- 35 ಕರ್ಮೇಲ್ಯನಾದ ಹೆಚ್ರೊ, ಅರ್ಬಿಯನಾದ ಪಾರೈ, ಚೋಬದವನಾದ ನಾತಾನ್ ಮಗನಾಗಿರುವ ಇಗಾಲ್,
- 36 ಗಾದ್ಯನಾದ ಬಾನಿ, ಅಮ್ಮೋನ್ಯನಾದ ಚೇಲೆಕ್,
- 37 ಚೆರೂಯಳ ಮಗನಾದ ಯೋವಾಬನ ಆಯುಧಗಳನ್ನು ಹಿಡಿಯುವ ಬೇರೋತ್ಯನಾದ ನಹರೈ,
- 38 ಇತ್ರಿಯರಾದ ಈರಾ ಗಾರೇಬನು,
- 39 ಹಿತ್ತಿಯನಾದ ಊರೀಯನು ಇವ ರೆಲ್ಲಾ ಮೂವತ್ತೇಳು ಮಂದಿಯು.
2 Samuel 23
- Details
- Parent Category: Old Testament
- Category: 2 Samuel
2 ಸಮುವೇಲನು ಅಧ್ಯಾಯ 23