- 1 ಚೀಯೋನಿನಲ್ಲಿ ನಿಶ್ಚಿಂತೆಯಿಂದಿರುವವ ರಿಗೂ ಸಮಾರ್ಯ ಬೆಟ್ಟದಲ್ಲಿ ನಂಬಿಕೆ ಯಿಡುವವರಿಗೂ ಇಸ್ರಾಯೇಲಿನ ಮನೆತನದವರ ಯಾರ ಬಳಿಗೆ ಬರುತ್ತಾರೋ ಆ ಪ್ರಮುಖ ಜನಾಂಗ ದಲ್ಲಿ ಹೆಸರುಗೊಂಡವರಿಗೂ ಅಯ್ಯೋ!
- 2 ಕಲ್ನೆಗೆ ಹಾದುಹೋಗಿ ನೋಡಿರಿ; ಅಲ್ಲಿಂದ ಮಹಾ ಹಮಾತಿಗೆ ಹೋಗಿರಿ; ಅಲ್ಲಿಂದ ಫಿಲಿಷ್ಟಿಯರ ಗಾತಿಗೆ ಇಳಿದು ಹೋಗಿರಿ; ಅವು ಈ ರಾಜ್ಯಗಳಿಗಿಂತ ಒಳ್ಳೆಯವು ಗಳೇನು? ಅವುಗಳ ಪ್ರಾಂತ್ಯವು ನಿಮ್ಮ ಪ್ರಾಂತ್ಯಕ್ಕಿಂತ ದೊಡ್ಡದೋ?
- 3 ನೀವು ಕೆಟ್ಟ ದಿನವನ್ನು ದೂರಮಾಡಿ ಕೊಂಡು ಬಲಾತ್ಕಾರದ ಪೀಠವನ್ನು ಹತ್ತಿರ ಮಾಡಿಕೊ ಳ್ಳುತ್ತೀರಿ.
- 4 ದಂತದ ಮಂಚಗಳ ಮೇಲೆ ಮಲಗಿಕೊಳ್ಳು ತ್ತಾರೆ; ತಮ್ಮ ಹಾಸಿಗೆಗಳ ಮೇಲೆ ಹಾಯಾಗಿ ಒರಗಿ ಕೊಳ್ಳುತ್ತಾರೆ; ಮಂದೆಯೊಳಗಿಂದ ಕುರಿಮರಿಗಳನ್ನು, ಹಟ್ಟಿಯ ಮಂದೆಯೊಳಗಿಂದ ಕರುಗಳನ್ನು ತಿನ್ನುತ್ತಾರೆ.
- 5 ವೀಣೆಯ ಸ್ವರಕ್ಕೆ ಹಾಡುತ್ತಾರೆ; ದಾವೀದನ ಹಾಗೆ ತಮಗೆ ತಾವೇ ಗಾನ ವಾದ್ಯಗಳನ್ನು ಕಲ್ಪಿಸಿಕೊಳ್ಳು ತ್ತಾರೆ.
- 6 ದ್ರಾಕ್ಷಾರಸದ ಪಾತ್ರೆಗಳಲ್ಲಿ ಕುಡಿಯುತ್ತಾರೆ. ಶ್ರೇಷ್ಠವಾದ ಎಣ್ಣೆಗಳಿಂದ ತಮ್ಮನ್ನು ಅಭಿಷೇಕಿಸಿ ಕೊಳ್ಳುತ್ತಾರೆ. ಆದರೆ ಯೋಸೇಫನ ನಷ್ಟಕ್ಕೆ ವ್ಯಸನಪಡು ವದಿಲ್ಲ.
- 7 ಅದರಿಂದ ಸೆರೆಗೆ ಒಯ್ಯಲ್ಪಡುವವರಿಗೆ ಮೊದಲು ತಾವೇ ಸೆರೆಗೆ ಹೋಗುವರು; ಭೋಗ ಮಾಡುವವರ ಹರ್ಷಧ್ವನಿಯು ಬಿಟ್ಟು ಹೋಗುವದು.
- 8 ಸೈನ್ಯಗಳ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ದೇವರಾದ ಕರ್ತನು ತನ್ನ ಮೇಲೆ ಆಣೆಯಿಟ್ಟುಕೊಂಡಿ ದ್ದಾನೆ; ಅದೇನಂದರೆ--ನಾನು ಯಾಕೋಬಿನ ಹೆಚ್ಚಳ ವನ್ನು ಅಸಹ್ಯಿಸಿಕೊಂಡು ಅವನ ಅರಮನೆಗಳನ್ನು ಹಗೆ ಮಾಡುತ್ತೇನೆ; ಅದಕಾರಣ ಪಟ್ಟಣವನ್ನೂ ಅದರಲ್ಲಿ ರುವ ಸಮಸ್ತವನ್ನೂ ನಾನು ಒಪ್ಪಿಸಿಬಿಡುತ್ತೇನೆ.
- 9 ಆಗುವದೇನಂದರೆ, ಒಂದು ಮನೆಯಲ್ಲಿ ಹತ್ತು ಜನರು ಉಳಿದರೆ ಅವರು ಸಾಯುವರು.
- 10 ಒಬ್ಬ ನೆಂಟನೂ ಅವನನ್ನು ಸುಡುವವನೂ ಮನೆಯೊಳಗಿಂದ ಅವನ ಎಲುಬುಗಳನ್ನು ತೆಗೆದುಕೊಂಡು ಹೋಗುವದಕ್ಕೆ ಅವ ನನ್ನು ಎತ್ತಿಕೊಳ್ಳುವಾಗ ಮನೆಯ ಒಳಭಾಗದಲ್ಲಿ ಇರುವ ವರಿಗೆ--ಇನ್ನೂ ಯಾರಾದರೂ ನಿನ್ನ ಬಳಿಯಲ್ಲಿ ಇದ್ದಾರೆಯೇ? ಎಂದು ಹೇಳುವನು; ಆಗ ಅವನು--ಯಾರೂ ಇಲ್ಲವೆಂದರೆ ಇವನು--ಸುಮ್ಮನಿರು, ನಾವು ಕರ್ತನ ಹೆಸರನ್ನು ಜ್ಞಾಪಕ ಮಾಡಿಕೊಳ್ಳಬಾರದೆಂದು ಹೇಳುವನು.
- 11 ಇಗೋ, ಕರ್ತನು ಆಜ್ಞಾಪಿಸುತ್ತಾನೆ; ಆತನು ದೊಡ್ಡ ಮನೆಯನ್ನು ಸೀಳುಗಳಿಂದಲೂ ಚಿಕ್ಕ ಮನೆಯನ್ನು ಬಿರುಕುಗಳಿಂದಲೂ ಹೊಡೆಯುವನು.
- 12 ಕುದುರೆಗಳು ಬಂಡೆಯ ಮೇಲೆ ಓಡುವದುಂಟೇ? ಎತ್ತುಗಳಿಂದ ಅಲ್ಲಿ ಉಳುವನೋ? ನಿಮ್ಮ ನ್ಯಾಯವನ್ನು ವಿಷಕ್ಕೂ ನೀತಿ ಫಲವನ್ನು ಮಾಚಿಪತ್ರೆಗೂ ಬದಲಾಯಿ ಸಿದ್ದೀರಿ.
- 13 ಏನೂ ಇಲ್ಲದ್ದರಲ್ಲಿ ಸಂತೋಷಪಡುವ ವರೇ, ನೀವು ಹೆಚ್ಚಳ ಪಡುವದು ಶೂನ್ಯವಾಗಿರುವ ಲ್ಲಿಯೇ? ಸ್ವಬಲದಿಂದ ಕೊಂಬುಗಳನ್ನು ತೆಗೆದುಕೊಂಡಿ ಲ್ಲವೇ ಎಂದು ಹೇಳುತ್ತೀರಿ.
- 14 ಇಗೋ, ಜನಾಂಗವನ್ನು ನಿಮಗೆ ವಿರೋಧವಾಗಿ ಎಬ್ಬಿಸುತ್ತೇನೆ; ಇಸ್ರಾಯೇಲಿನ ಮನೆತನದವರೇ, ಹಮಾತಿನ ಪ್ರದೇಶದಿಂದ ಹಿಡಿದು ಅರಣ್ಯದ ನದಿಯ ವರೆಗೂ ನಿಮ್ಮನ್ನು ಹಿಂಸಿಸುತ್ತೇನೆ ಎಂದು ಸೈನ್ಯಗಳ ದೇವರಾದ ಕರ್ತನು ಹೇಳುತ್ತಾನೆ.
Amos 06
- Details
- Parent Category: Old Testament
- Category: Amos
ಆಮೋಸ ಅಧ್ಯಾಯ 6