wheel

AJC Publications and Media Portal

 

But the Comforter, which is the Holy Ghost, whom the Father will send in my name, he shall teach you all things,
and bring all things to your remembrance, whatsoever I have said unto you. John 14:26


ಧರ್ಮೋಪದೇಶಕಾಂಡಅಧ್ಯಾಯ 8
  • 1 ನೀವು ಬದುಕಿ ಅಭಿವೃದ್ಧಿಯಾಗಿ ಕರ್ತನು ನಿಮ್ಮ ಪಿತೃಗಳಿಗೆ ಪ್ರಮಾಣಮಾಡಿದ ದೇಶಕ್ಕೆ ಹೋಗಿ ಅದನ್ನು ಸ್ವತಂತ್ರಿಸಿಕೊಳ್ಳುವ ಹಾಗೆ ನಾನು ಈಹೊತ್ತು ನಿನಗೆ ಆಜ್ಞಾಪಿಸುವ ಆಜ್ಞೆಗಳನ್ನೆಲ್ಲಾ ಲಕ್ಷ್ಯವಿಟ್ಟು ಕೈಕೊಳ್ಳಬೇಕು.
  • 2 ನೀನು ತಗ್ಗಿಸಿಕೊಳ್ಳುವ ನಿಮಿತ್ತವೂ ಹೃದಯದಲ್ಲಿ ಇರುವದನ್ನು ಅಂದರೆ ನೀನು ಆತನ ಆಜ್ಞೆಗಳನ್ನು ಕಾಪಾಡುವಿಯೋ ಇಲ್ಲವೋ ಎಂದು ತಿಳುಕೊಳ್ಳುವ ದಕ್ಕೂ ನಿನ್ನ ದೇವರಾದ ಕರ್ತನು ನಿನ್ನನ್ನು ಈ ನಾಲ್ವತ್ತು ವರುಷ ಅರಣ್ಯದಲ್ಲಿ ನಡಿಸಿದ ಮಾರ್ಗವನ್ನೆಲ್ಲಾ ಜ್ಞಾಪಕಮಾಡಿಕೊಳ್ಳಬೇಕು.
  • 3 ನಿನ್ನನ್ನು ಕುಂದಿಸಿ ಹಸಿ ಯುವಂತೆ ಆತನು ಮಾಡಿದನು. ರೊಟ್ಟಿ ಮಾತ್ರದಿಂದ ಮನುಷ್ಯನು ಬದುಕುವದಿಲ್ಲವೆಂದೂ ಕರ್ತನ ಬಾಯಿ ಯೊಳಗಿಂದ ಹೊರಡುವ ಪ್ರತಿಯೊಂದು ಮಾತಿ ನಿಂದಲೂ ಮನುಷ್ಯನು ಬದುಕುತ್ತಾನೆಂದು ನಿನಗೆ ತಿಳಿಸುವ ಹಾಗೆ ನೀನು ತಿಳಿಯದಂಥ ಮತ್ತು ನಿನ್ನ ಪಿತೃಗಳು ತಿಳಿಯದಂಥ ಮನ್ನವನ್ನು ನಿನಗೆ ಉಣ್ಣಲು ಕೊಟ್ಟನು.
  • 4 ಈ ನಾಲ್ವತ್ತು ವರುಷ ನಿನ್ನ ಮೇಲಿರುವ ವಸ್ತ್ರಗಳು ಹಳೆಯದಾಗಲಿಲ್ಲ; ಇಲ್ಲವೆ ನಿನ್ನ ಕಾಲುಗಳು ಬಾತುಹೋಗಲಿಲ್ಲ.
  • 5 ಇದಲ್ಲದೆ ಒಬ್ಬನು ತನ್ನ ಮಗ ನನ್ನು ಶಿಕ್ಷಿಸುವ ಪ್ರಕಾರ ನಿನ್ನ ದೇವರಾದ ಕರ್ತನು ನಿನ್ನನ್ನು ಶಿಕ್ಷಿಸುತ್ತಾನೆಂದು ನಿನ್ನ ಹೃದಯದಲ್ಲಿ ತಿಳು ಕೊಳ್ಳಬೇಕು.
  • 6 ಹೀಗಿರುವದರಿಂದ ನಿನ್ನ ದೇವರಾದ ಕರ್ತನ ಆಜ್ಞೆಗಳನ್ನು ಕೈಕೊಂಡು ಆತನ ಮಾರ್ಗಗಳಲ್ಲಿ ನಡೆದುಕೊಂಡು ಆತನಿಗೆ ಭಯಪಡಬೇಕು.
  • 7 ನಿನ್ನ ದೇವರಾದ ಕರ್ತನು ನಿನ್ನನ್ನು ಉತ್ತಮ ದೇಶಕ್ಕೆ ಬರಮಾಡುತ್ತಾನೆ; ಅದು ನೀರಿನ ಹಳ್ಳಗಳೂ ತಗ್ಗಿನಲ್ಲಿಯೂ ಬೆಟ್ಟದಲ್ಲಿಯೂ ಉಕ್ಕುವ ಬುಗ್ಗೆಗಳುಳ್ಳ ದೇಶವೇ.
  • 8 ಗೋಧಿಯೂ ಜವೆಗೋಧಿಯೂ ದ್ರಾಕ್ಷೆಯೂ ಅಂಜೂರ ಮರಗಳೂ ದಾಳಿಂಬರಗಳೂ ಇರುವ ದೇಶವೇ; ಅದು ಹಿಪ್ಪೇ ಎಣ್ಣೆಯೂ ಜೇನೂ ಉಳ್ಳದೇಶವೇ.
  • 9 ನೀನು ಕೊರತೆಯಿಲ್ಲದೆ ರೊಟ್ಟಿ ತಿನ್ನುವ ಆ ದೇಶದಲ್ಲಿ ಯಾವದರ ಕೊರತೆ ನಿನಗೆ ಆಗದು; ಅದರ ಕಲ್ಲುಗಳು ಕಬ್ಬಿಣವಾಗಿಯೂ ಅದರ ಬೆಟ್ಟ ಗಳೊಳಗಿಂದ ತಾಮ್ರವನ್ನು ಅಗಿಯಬಹುದಾದದ್ದೂ ಆಗಿರುವ ದೇಶ.
  • 10 ನೀನು ತಿಂದು ತೃಪ್ತಿ ಹೊಂದಿದಾಗ ನಿನ್ನ ದೇವರಾದ ಕರ್ತನು ನಿನಗೆ ಕೊಟ್ಟ ಉತ್ತಮ ದೇಶದಲ್ಲಿ ಆತನನ್ನು ಸ್ತುತಿಸಬೇಕು.
  • 11 ನಾನು ಈಹೊತ್ತು ನಿನಗೆ ಆಜ್ಞಾಪಿಸುವ ಆತನ ಆಜ್ಞೆ ನ್ಯಾಯ ನಿಯಮಗಳನ್ನು ಕಾಪಾಡದವರೂ ನಿನ್ನ ದೇವರಾದ ಕರ್ತನನ್ನು ಮರೆಯದವರೂ ಆಗಬೇಡಿರಿ.
  • 12 ನೀನು ತಿಂದು ತೃಪ್ತಿಹೊಂದಿದಾಗಲೂ ಒಳ್ಳೇ ಮನೆಗಳನ್ನು ಕಟ್ಟಿ ಅವುಗಳಲ್ಲಿ ವಾಸಮಾಡುವಾಗಲೂ
  • 13 ನಿನ್ನ ಪಶು ಕುರಿಗಳು ಹೆಚ್ಚಿದಾಗಲೂ ಬೆಳ್ಳಿ ಬಂಗಾರ ನಿನಗೆ ಹೆಚ್ಚಿದಾಗಲೂ ನಿನಗಿರುವಂಥದ್ದೆಲ್ಲಾ ಹೆಚ್ಚಿದಾ ಗಲೂ
  • 14 ನಿನ್ನ ಹೃದಯವು ಉಬ್ಬಿಕೊಳ್ಳದ ಹಾಗೆಯೂ ನಿನ್ನನ್ನು ಐಗುಪ್ತದೇಶದ ದಾಸತ್ವದ ಮನೆಯೊಳಗಿಂದ ಹೊರಗೆ ಬರಮಾಡಿದಂಥ,
  • 15 ಅಗ್ನಿ ಸರ್ಪಗಳೂ ಚೇಳುಗಳೂ ಬರವೂ ಉಳ್ಳ ನೀರಿಲ್ಲದ ಆ ಮಹಾ ಭಯಂಕರವಾದ ಅರಣ್ಯದಲ್ಲಿ ನಿನ್ನನ್ನು ನಡಿಸಿದಂಥ, ಬಿಳೀಕಲ್ಲಿನ ಬಂಡೆಯೊಳಗಿಂದ ನಿನಗೆ ನೀರು ಬರ ಮಾಡಿದಂಥ,
  • 16 ನಿನ್ನನ್ನು ಕುಂದಿಸಿ ಶೋಧಿಸಿ ಕಡೆಯಲ್ಲಿ ನಿನಗೆ ಒಳ್ಳೇದನ್ನು ಮಾಡುವಂತೆ, ನಿನ್ನ ಪಿತೃಗಳು ಅರಿಯದ ಮನ್ನವನ್ನು ಅರಣ್ಯದಲ್ಲಿ ನಿನಗೆ ತಿನ್ನಿಸಿ ದಂಥ ನಿನ್ನ ದೇವರಾದ ಕರ್ತನನ್ನು ಮರೆತು--
  • 17 ನನ್ನ ಬಲವೇ ಮತ್ತು ನನ್ನ ಕೈಯ ಸಾಮರ್ಥ್ಯವೇ ನನಗೆ ಈ ಆಸ್ತಿಯನ್ನು ಸಂಪಾದಿಸಿತೆಂದು ನಿನ್ನ ಹೃದಯದಲ್ಲಿ ಹೇಳಿಕೊಳ್ಳದ ಹಾಗೆ ನೋಡಿಕೋ.
  • 18 ನಿನ್ನ ದೇವ ರಾದ ಕರ್ತನನ್ನು ಜ್ಞಾಪಕಮಾಡಿಕೊಳ್ಳಬೇಕು; ಈ ಹೊತ್ತು ಇರುವಂತೆ ನಿನ್ನ ಪಿತೃಗಳಿಗೆ ಪ್ರಮಾಣಮಾಡಿದ ತನ್ನ ಒಡಂಬಡಿಕೆಯನ್ನು ಸ್ಥಾಪಿಸುವ ಹಾಗೆ ಆಸ್ತಿಯನ್ನು ಸಂಪಾದಿಸುವ ಬಲವನ್ನು ನಿನಗೆ ಕೊಡುವಾತನು ಆತನೇ.
  • 19 ನೀನು ಹೇಗಾದರೂ ನಿನ್ನ ದೇವರಾದ ಕರ್ತನನ್ನು ಮರೆತು ಬೇರೆ ದೇವರುಗಳನ್ನು ಹಿಂಬಾಲಿಸಿ ಅವುಗಳನ್ನು ಸೇವಿಸಿ ಅವುಗಳಿಗೆ ಅಡ್ಡಬಿದ್ದರೆ ನೀವು ನಿಶ್ಚಯವಾಗಿ ನಾಶವಾಗುವಿರೆಂದು ನಿಮಗೆ ವಿರೋಧ ವಾಗಿ ಈಹೊತ್ತು ಸಾಕ್ಷಿ ಹೇಳುತ್ತೇನೆ.
  • 20 ನೀವು ನಿಮ್ಮ ದೇವರಾದ ಕರ್ತನ ಮಾತಿಗೆ ವಿಧೇಯರಾಗದ ಕಾರಣ ಕರ್ತನು ನಿಮ್ಮ ಮುಂದೆ ನಾಶಮಾಡುವ ಜನಾಂಗಗಳ ಹಾಗೆಯೇ ನೀವು ನಾಶವಾಗುವಿರಿ.