- 1 ಒಬ್ಬನು ಹೆಂಡತಿಯನ್ನು ತಕ್ಕೊಂಡು ಅವಳಿಗೆ ಗಂಡನಾದ ಮೇಲೆ ಅವಳಲ್ಲಿ ಅಶುದ್ಧ ವಾದದ್ದನ್ನು ನೋಡುವದರಿಂದ ಅವಳಿಗೆ ಅವನಿಂದ ಕಟಾಕ್ಷವಾಗದಿದ್ದರೆ ಅವಳಿಗೆ ತ್ಯಾಗಪತ್ರವನ್ನು ಬರೆದು ಅವಳ ಕೈಯಲ್ಲಿ ಕೊಟ್ಟು ಅವಳನ್ನು ತನ್ನ ಮನೆಯಿಂದ ಕಳುಹಿಸಿಬಿಡಬೇಕು.
- 2 ಅವಳು ಅವನ ಮನೆಯನ್ನು ಬಿಟ್ಟು ಹೋದ ಮೇಲೆ ಮತ್ತೊಬ್ಬನಿಗೆ ಹೆಂಡತಿಯಾಗ ಬಹುದು.
- 3 ಆ ಮತ್ತೊಬ್ಬ ಗಂಡನು ಅವಳನ್ನು ಹಗೆ ಮಾಡಿ ತ್ಯಾಗಪತ್ರವನ್ನು ಬರೆದು ಅವಳ ಕೈಯಲ್ಲಿ ಕೊಟ್ಟು ತನ್ನ ಮನೆಯಿಂದ ಕಳುಹಿಸಿಬಿಟ್ಟರೆ ಇಲ್ಲವೆ ಅವಳನ್ನು ಹೆಂಡತಿಯಾಗಿ ತಕ್ಕೊಂಡ ಆ ಮತ್ತೊಬ್ಬ ಗಂಡನು ಸತ್ತರೆ
- 4 ಅವಳನ್ನು ಕಳುಹಿಸಿಬಿಟ್ಟ ಮೊದಲನೇ ಗಂಡನು ಅವಳು ಅಶುದ್ಧವಾದ ಮೇಲೆ ಅವಳನ್ನು ತಿರಿಗಿ ತನ್ನ ಹೆಂಡತಿಯಾಗಿ ತಕ್ಕೊಳ್ಳಬಾರದು; ಅದು ಕರ್ತನ ಮುಂದೆ ಅಸಹ್ಯವೇ. ನಿನ್ನ ದೇವರಾದ ಕರ್ತನು ನಿನಗೆ ಸ್ವಾಸ್ತ್ಯವಾಗಿ ಕೊಡುವ ದೇಶದ ಮೇಲೆ ಪಾಪವನ್ನು ತರಬಾರದು.
- 5 ಒಬ್ಬನು ಹೊಸದಾಗಿ ಹೆಂಡತಿಯನ್ನು ತಕ್ಕೊಂಡರೆ ಯುದ್ಧಕ್ಕೆ ಹೊರಡಬಾರದು; ಅವನಿಂದ ಯಾವ ದೊಂದೂ ಕೆಲಸವನ್ನು ಮಾಡಿಸಬಾರದು; ಅವನು ಒಂದು ವರುಷ ಬಿಡುಗಡೆಯಾಗಿ ತನ್ನ ಮನೆಯಲ್ಲಿದ್ದು ತಾನು ತಕ್ಕೊಂಡ ಹೆಂಡತಿಯನ್ನು ಸಂತೋಷ ಪಡಿಸಬೇಕು.
- 6 ಬೀಸುವ ಕಲ್ಲಿನಲ್ಲಿ ಅಡಿಕಲ್ಲಾದರೂ ಮೇಲ್ಕಲ್ಲಾ ದರೂ ಒತ್ತೆಯಾಗಿ ತಕ್ಕೊಳ್ಳಬಾರದು; ಹಾಗೆ ಮಾಡಿದರೆ ಪ್ರಾಣವನ್ನು ಒತ್ತೆಯಾಗಿ ತಕ್ಕೊಂಡ ಹಾಗಿರುವದು.
- 7 ಒಬ್ಬನು ತನ್ನ ಸಹೋದರರಾದ ಇಸ್ರಾಯೇಲ್ ಮಕ್ಕಳಲ್ಲಿ ಒಬ್ಬನನ್ನು ಕದ್ದು ವ್ಯಾಪಾರಮಾಡಿ ಮಾರಿದ ವನಾಗಿ ಸಿಕ್ಕಿದರೆ ಆ ಕಳ್ಳನು ಸಾಯಬೇಕು; ಹೀಗೆ ಕೆಟ್ಟದ್ದನ್ನು ನಿನ್ನ ಮಧ್ಯದಲ್ಲಿಂದ ತೆಗೆದುಹಾಕಬೇಕು.
- 8 ಕುಷ್ಠದ ಬಾಧೆಯಲ್ಲಿ ಲೇವಿಯರಾದ ಯಾಜಕರು ನಿಮಗೆ ಬೋಧಿಸುವದನ್ನೆಲ್ಲಾ ನೀನು ಜಾಗ್ರತೆಯಿಂದ ಕಾಪಾಡಿ ಕೈಕೊಳ್ಳುವ ಹಾಗೆ ನೋಡಿಕೋ; ನಾನು ಅವರಿಗೆ ಆಜ್ಞೆ ಕೊಟ್ಟಹಾಗೆ ನೀವು ಕಾಪಾಡಿ ಕೈಕೊಳ್ಳ ಬೇಕು;
- 9 ನೀವು ಐಗುಪ್ತದಿಂದ ಹೊರಗೆ ಬರುವಾಗ ನಿನ್ನ ದೇವರಾದ ಕರ್ತನು ಮಿರ್ಯಾಮಳಿಗೆ ಮಾರ್ಗದಲ್ಲಿ ಮಾಡಿದ್ದನ್ನು ಜ್ಞಾಪಕಮಾಡಿಕೋ.
- 10 ನೀನು ನಿನ್ನ ನೆರೆಯವನಿಗೆ ಯಾವದೊಂದು ಕೈಗಡ ಕೊಟ್ಟರೆ ಅವನ ಒತ್ತೆಯನ್ನು ಕೇಳುವ ಹಾಗೆ ಅವನ ಮನೆಯಲ್ಲಿ ಪ್ರವೇಶಿಸಬಾರದು.
- 11 ನೀನು ಹೊರಗೆ ನಿಂತಿರಬೇಕು; ನೀನು ಕೈಗಡ ಕೊಟ್ಟ ಮನುಷ್ಯನು ಒತ್ತೆಯನ್ನು ನಿನಗೆ ಹೊರಗೆ ತರಬೇಕು.
- 12 ಅವನು ಬಡವನಾದರೆ, ಅವನ ಒತ್ತೆ ಇಟ್ಟುಕೊಂಡು ಮಲಗ ಬೇಡ.
- 13 ಸೂರ್ಯನು ಮುಣುಗಿದಾಗ ಹೇಗಾದರೂ ಅವನಿಗೆ ಒತ್ತೆಯನ್ನು ಹಿಂದಕ್ಕೆ ಕೊಡಬೇಕು; ಆಗಲವನು ತನ್ನ ವಸ್ತ್ರದಲ್ಲಿ ಮಲಗಿಕೊಂಡು ನಿನ್ನನ್ನು ಆಶೀರ್ವದಿ ಸುವನು; ನಿನ್ನ ದೇವರಾದ ಕರ್ತನ ಮುಂದೆ ನೀತಿ ಉಂಟಾಗುವದು.
- 14 ನಿನ್ನ ಸಹೋದರರಲ್ಲಿಯಾಗಲಿ ನಿನ್ನ ದೇಶದಲ್ಲಿ ನಿನ್ನ ಬಾಗಲುಗಳಲ್ಲಿ ಇರುವ ಪರರಲ್ಲಿಯಾಗಲಿ ಕೊರತೆಯುಳ್ಳ ಬಡಕೂಲಿಯವನನ್ನು ಬಾಧಿಸಬಾರದು.
- 15 ದಿನದಿನಕ್ಕೆ ಅವನ ಕೂಲಿ ಕೊಡಬೇಕು; ಸೂರ್ಯನು ಮುಣುಗುವದಕ್ಕಿಂತ ಮುಂಚೆ ಅದನ್ನು ಕೊಡಬೇಕು. ಅವನು ಬಡವನಾಗಿದ್ದು ಅದರ ಮೇಲೆಯೇ ತನ್ನ ಮನಸ್ಸು ಇಟ್ಟಿದ್ದಾನೆ; ಕೊಡದಿದ್ದರೆ ಅವನು ನಿನಗೆ ವಿರೋಧವಾಗಿ ಕರ್ತನ ಕಡೆಗೆ ಕೂಗುವನು; ಆಗ ನಿನ್ನ ಮೇಲೆ ಪಾಪವಿರುವದು.
- 16 ತಂದೆಗಳು ಮಕ್ಕಳ ನಿಮಿತ್ತವೂ ಮಕ್ಕಳು ತಂದೆಗಳ ನಿಮಿತ್ತವೂ ಕೊಲ್ಲಲ್ಪಡಬಾರದು; ಒಬ್ಬೊಬ್ಬನು ತನ್ನ ಪಾಪದ ನಿಮಿತ್ತ ಕೊಲ್ಲಲ್ಪಡಬೇಕು.
- 17 ಪರನಿಗೂ ದಿಕ್ಕಿಲ್ಲದವನಿಗೂ ನ್ಯಾಯವನ್ನು ತಪ್ಪಿಸ ಬೇಡ; ವಿಧವೆಯ ವಸ್ತ್ರವನ್ನು ಒತ್ತೆಯಾಗಿ ತಕ್ಕೊಳ್ಳಬೇಡ.
- 18 ನೀನು ಐಗುಪ್ತದಲ್ಲಿ ದಾಸನಾಗಿದ್ದಿ ಎಂದೂ ನಿನ್ನ ದೇವರಾದ ಕರ್ತನು ನಿನ್ನನ್ನು ಅಲ್ಲಿಂದ ವಿಮೋಚಿಸಿದ ನೆಂದೂ ಜ್ಞಾಪಕಮಾಡಿಕೊಳ್ಳಬೇಕು; ಆದದರಿಂದ ಈ ಕಾರ್ಯವನ್ನು ಮಾಡಬೇಕೆಂದು ನಾನು ನಿನಗೆ ಆಜ್ಞಾಪಿಸುತ್ತೇನೆ.
- 19 ಹೊಲದಲ್ಲಿ ನಿನ್ನ ಪೈರನ್ನು ಕೊಯ್ಯುವಾಗ ಅಲ್ಲಿ ಸಿವುಡನ್ನು ಮರೆತುಬಿಟ್ಟರೆ ಅದನ್ನು ತಕ್ಕೊಳ್ಳುವದಕ್ಕೆ ತಿರುಗಿಕೊಳ್ಳಬಾರದು; ನಿನ್ನ ದೇವರಾದ ಕರ್ತನು ನಿನ್ನ ಎಲ್ಲಾ ಕೈಕೆಲಸದಲ್ಲಿ ನಿನ್ನನ್ನು ಆಶೀರ್ವದಿಸುವ ಹಾಗೆ ಅದು ಪರನಿಗೂ ದಿಕ್ಕಿಲ್ಲದವನಿಗೂ ವಿಧವೆಗೂ ಇರಲಿ.
- 20 ನಿನ್ನ ಇಪ್ಪೆಗಳನ್ನು ಬಡಿದರೆ ಮಿಕ್ಕಿದ್ದನ್ನು ಆರಿಸ ಬಾರದು. ಅದು ಪರನಿಗೂ ದಿಕ್ಕಿಲ್ಲದವನಿಗೂ ವಿಧ ವೆಗೂ ಇರಲಿ.
- 21 ನಿನ್ನ ದ್ರಾಕ್ಷೇತೋಟದಲ್ಲಿ ಕೂಡಿ ಸಿದರೆ ಮಿಕ್ಕಿದ್ದನ್ನು ಆರಿಸಬೇಡ; ಅದು ಪರನಿಗೂ ದಿಕ್ಕಿಲ್ಲದವನಿಗೂ ವಿಧವೆಗೂ ಇರಲಿ.
- 22 ನೀನು ಐಗುಪ್ತದೇಶದಲ್ಲಿ ದಾಸನಾಗಿದ್ದಿ ಎಂದು ಜ್ಞಾಪಕ ಮಾಡಿಕೊಳ್ಳಬೇಕು; ಆದದರಿಂದ ಈ ಕಾರ್ಯವನ್ನು ಮಾಡಬೇಕೆಂದು ನಾನು ನಿನಗೆ ಆಜ್ಞಾಪಿಸುತ್ತೇನೆ.
Deuteronomy 24
- Details
- Parent Category: Old Testament
- Category: Deuteronomy
ಧರ್ಮೋಪದೇಶಕಾಂಡ ಅಧ್ಯಾಯ 24