- 1 ಇದಲ್ಲದೆ ಮೋಶೆ ಇಸ್ರಾಯೇಲಿನ ಹಿರಿಯರ ಸಂಗಡ ಜನರಿಗೆ--ನಾನು ನಿಮಗೆ ಈ ಹೊತ್ತು ಆಜ್ಞಾಪಿಸುವ ಆಜ್ಞೆಗಳನ್ನೆಲ್ಲಾ ಕಾಪಾ ಡಬೇಕು.
- 2 ನೀವು ಯೊರ್ದನನ್ನು ದಾಟಿ ನಿನ್ನ ದೇವರಾದ ಕರ್ತನು ನಿನಗೆ ಕೊಡುವ ದೇಶಕ್ಕೆ ಬರುವ ದಿವಸದಲ್ಲಿ ದೊಡ್ಡ ಕಲ್ಲುಗಳನ್ನು ನಿಲ್ಲಿಸಿ ಅವುಗಳಿಗೆ ಗಿಲಾವು ಮಾಡಿಸಿ
- 3 ನೀನು ದಾಟಿಹೋದ ಮೇಲೆ ನಿನ್ನ ಪಿತೃಗಳ ದೇವರಾದ ಕರ್ತನು ನಿನಗೆ ಹೇಳಿದ ಪ್ರಕಾರ ನಿನ್ನ ದೇವರಾದ ಕರ್ತನು ನಿನಗೆ ಕೊಡುವಂಥ ಹಾಲೂ ಜೇನೂ ಹರಿಯುವಂಥ ದೇಶಕ್ಕೆ ನೀನು ಬರುವ ಹಾಗೆ ಅವುಗಳ ಮೇಲೆ ಈ ನ್ಯಾಯಪ್ರಮಾಣದ ಮಾತುಗಳನ್ನೆಲ್ಲಾ ಬರೆಯಬೇಕು.
- 4 ಆದದರಿಂದ ನೀವು ಯೊರ್ದನನ್ನು ದಾಟಿದ ಮೇಲೆ ನಾನು ಈಹೊತ್ತು ನಿಮಗೆ ಆಜ್ಞಾಪಿಸುವ ಕಲ್ಲುಗಳನ್ನು ಏಬಾಲ್ ಬೆಟ್ಟದಲ್ಲಿ ನಿಲ್ಲಿಸಿ ಅವುಗಳಿಗೆ ಗಿಲಾವು ಮಾಡಿಸಬೇಕು.
- 5 ಅಲ್ಲಿ ನಿನ್ನ ದೇವರಾದ ಕರ್ತನಿಗೆ ಬಲಿಪೀಠವನ್ನು ಕಟ್ಟಬೇಕು ಅಂದರೆ ಕಲ್ಲಿನ ಬಲಿಪೀಠವನ್ನು ಕಟ್ಟಬೇಕು. ಆ ಕಲ್ಲುಗಳಿಗೆ ಕಬ್ಬಿಣದ ಆಯುಧ ತಗಲಿಸಬಾರದು.
- 6 ನಿನ್ನ ದೇವರಾದ ಕರ್ತನ ಬಲಿಪೀಠವನ್ನು ಹುಟ್ಟು ಕಲ್ಲುಗಳಿಂದ ಕಟ್ಟಬೇಕು; ಅದರ ಮೇಲೆ ನಿನ್ನ ದೇವ ರಾದ ಕರ್ತನಿಗೆ ದಹನಬಲಿಗಳನ್ನು ಅರ್ಪಿಸಬೇಕು.
- 7 ಸಮಾಧಾನದ ಬಲಿಗಳನ್ನು ಅರ್ಪಿಸಿ ಅಲ್ಲಿ ತಿಂದು ನಿನ್ನ ದೇವರಾದ ಕರ್ತನ ಮುಂದೆ ಸಂತೋಷಪಡಬೇಕು.
- 8 ಇದಲ್ಲದೆ ಆ ಕಲ್ಲುಗಳಲ್ಲಿ ಈ ನ್ಯಾಯಪ್ರಮಾಣದ ಮಾತುಗಳನ್ನೆಲ್ಲಾ ಬಹಳ ಸರಳವಾಗಿ ಬರೆಯಬೇಕು.
- 9 ಆಗ ಮೋಶೆಯೂ ಲೇವಿಯರಾದ ಯಾಜಕರೂ ಸಮಸ್ತ ಇಸ್ರಾಯೇಲಿನ ಸಂಗಡ ಮಾತನಾಡಿ--ಓ ಇಸ್ರಾಯೇಲೇ, ಎಚ್ಚರಿಕೆ ತಕ್ಕೊಂಡು ಕೇಳು, ಈಹೊತ್ತು ನಿನ್ನ ದೇವರಾದ ಕರ್ತನಿಗೆ ನೀನು ಜನಾಂಗವಾಗಿದ್ದೀ.
- 10 ಹೀಗಿರುವದರಿಂದ ನಿನ್ನ ದೇವರಾದ ಕರ್ತನ ಮಾತಿಗೆ ವಿಧೇಯರಾಗಿ ನಾನು ಈಹೊತ್ತು ನಿನಗೆ ಆಜ್ಞಾಪಿಸುವ ಆತನ ಆಜ್ಞೆಗಳನ್ನೂ ನಿಯಮಗಳನ್ನೂ ಕೈಕೊಳ್ಳಬೇಕು ಎಂದು ಹೇಳಿದನು.
- 11 ಇದಲ್ಲದೆ ಮೋಶೆ ಅದೇ ದಿವಸದಲ್ಲಿ ಜನ ರಿಗೆ--
- 12 ನೀವು ಯೊರ್ದನನ್ನು ದಾಟಿದ ಮೇಲೆ ಜನ ರನ್ನು ಆಶೀರ್ವದಿಸುವದಕ್ಕೆ ಗೆರಿಜ್ಜೀಮ್ ಬೆಟ್ಟದಲ್ಲಿ ನಿಲ್ಲತಕ್ಕವರಾರಂದರೆ -- ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್, ಯೋಸೇಫ್, ಬೆನ್ಯಾವಿಾನ್.
- 13 ಶಪಿಸುವದಕ್ಕೆ ಏಬಾಲ್ ಬೆಟ್ಟದಲ್ಲಿ ನಿಲ್ಲತಕ್ಕವರ್ಯಾ ರೆಂದರೆ; ರೂಬೇನ್, ಗಾದ್, ಆಶೇರ್, ಜೆಬುಲೂನ್, ದಾನ್, ನಫ್ತಾಲಿ ಎಂದು ಆಜ್ಞಾಪಿಸಿ ಹೇಳಿದನು.
- 14 ಆಗ ಲೇವಿಯರು ಉತ್ತರ ಕೊಟ್ಟು ಇಸ್ರಾಯೇಲ್ ಜನರೆಲ್ಲರಿಗೆ ದೊಡ್ಡ ಶಬ್ದದಿಂದ--
- 15 ಕರ್ತನಿಗೆ ಅಸಹ್ಯ ವಾಗಿರುವ ವಿಗ್ರಹವನ್ನಾಗಲಿ ಎರಕ ಹೊಯಿದದ್ದ ನ್ನಾಗಲಿ ಮಾಡಿಕೊಂಡು ಶಿಲ್ಪಿಯ ಕೈಯಿಂದ ಮಾಡಿಸಿಗುಪ್ತವಾಗಿ ನಿಲ್ಲಿಸುವವನಿಗೆ ಶಾಪ. ಜನವೆಲ್ಲಾ ಉತ್ತರ ಕೊಟ್ಟು ಆಮೆನ್ ಎಂದು ಹೇಳಲಿ.
- 16 ತನ್ನ ತಂದೆ ತಾಯಿಗಳನ್ನು ತಾತ್ಸಾರಮಾಡುವ ವನಿಗೆ ಶಾಪ. ಜನವೆಲ್ಲಾ ಆಮೆನ್ ಎಂದು ಹೇಳಲಿ.
- 17 ನೆರೆಯವನ ಮೇರೆ ತಪ್ಪಿಸುವವನಿಗೆ ಶಾಪ. ಜನವೆಲ್ಲಾ ಆಮೆನ್ ಎಂದು ಹೇಳಲಿ.
- 18 ಕುರುಡನನ್ನು ದಾರಿ ತಪ್ಪಿಸುವವನಿಗೆ ಶಾಪ. ಜನವೆಲ್ಲಾ ಆಮೆನ್ ಎಂದು ಹೇಳಲಿ.
- 19 ಪರವಾಸಿಗೂ ದಿಕ್ಕಿಲ್ಲದವನಿಗೂ ವಿಧವೆಗೂ ನ್ಯಾಯ ತಪ್ಪಿಸುವವನಿಗೆ ಶಾಪ. ಜನವೆಲ್ಲಾ ಆಮೆನ್ ಎಂದು ಹೇಳಲಿ.
- 20 ತನ್ನ ತಂದೆಯ ಹೆಂಡತಿಯ ಸಂಗಡ ಮಲಗಿ ತನ್ನ ತಂದೆಯ ವಸ್ತ್ರದ ಸೆರಗನ್ನು ತೆರೆದವನಿಗೆ ಶಾಪ. ಜನವೆಲ್ಲಾ ಆಮೆನ್ ಎಂದು ಹೇಳಲಿ.
- 21 ಯಾವದೊಂದು ಪಶುವಿನ ಸಂಗಡ ಮಲಗು ವವನಿಗೆ ಶಾಪ. ಜನವೆಲ್ಲಾ ಆಮೆನ್ ಎಂದು ಹೇಳಲಿ.
- 22 ತನ್ನ ತಂದೆಗಾಗಲಿ ತಾಯಿಗಾಗಲಿ ಮಗಳಾಗಿರುವ ಸಹೋದರಿಯ ಸಂಗಡ ಮಲಗುವವನಿಗೆ ಶಾಪ. ಜನವೆಲ್ಲಾ ಆಮೆನ್ ಎಂದು ಹೇಳಲಿ.
- 23 ತನ್ನ ಅತ್ತೆಯ ಸಂಗಡ ಮಲಗುವವನಿಗೆ ಶಾಪ. ಜನವೆಲ್ಲಾ ಆಮೆನ್ ಎಂದು ಹೇಳಲಿ.
- 24 ತನ್ನ ನೆರೆಯವನನ್ನು ರಹಸ್ಯವಾಗಿ ಹೊಡೆಯುವ ವನಿಗೆ ಶಾಪ. ಜನವೆಲ್ಲಾ ಆಮೆನ್ ಎಂದು ಹೇಳಲಿ.
- 25 ಅಪರಾಧವಿಲ್ಲದೆ ಮನುಷ್ಯನನ್ನು ಕೊಲ್ಲುವ ಹಾಗೆ ಲಂಚತೆಗೆದುಕೊಳ್ಳುವವನಿಗೆ ಶಾಪ. ಜನವೆಲ್ಲಾ ಆಮೆನ್ ಎಂದು ಹೇಳಲಿ.
- 26 ಈ ನ್ಯಾಯಪ್ರಮಾಣದ ಮಾತುಗಳನ್ನು ಸ್ಥಾಪಿ ಸದೆ, ಕೈಕೊಳ್ಳದೆ ಇರುವವನಿಗೆ ಶಾಪ. ಜನವೆಲ್ಲಾ ಆಮೆನ್ ಎಂದು ಹೇಳಲಿ ಎಂದು ಹೇಳಬೇಕು.
Deuteronomy 27
- Details
- Parent Category: Old Testament
- Category: Deuteronomy
ಧರ್ಮೋಪದೇಶಕಾಂಡ ಅಧ್ಯಾಯ 27