wheel

AJC Publications and Media Portal

 

But the Comforter, which is the Holy Ghost, whom the Father will send in my name, he shall teach you all things,
and bring all things to your remembrance, whatsoever I have said unto you. John 14:26


ಪ್ರಸಂಗಿ ಅಧ್ಯಾಯ 1
  • 1 ದಾವೀದನ ಮಗನೂ ಯೆರೂಸಲೇಮಿನಲ್ಲಿ ಅರಸನೂ ಆಗಿದ್ದ ಪ್ರಸಂಗಿಯ ಮಾತುಗಳು.
  • 2 ವ್ಯರ್ಥಗಳಲ್ಲಿ ವ್ಯರ್ಥ, ವ್ಯರ್ಥಗಳಲ್ಲಿ ವ್ಯರ್ಥ ಎಂದು ಪ್ರಸಂಗಿ ಹೇಳುತ್ತಾನೆ; ಎಲ್ಲವೂ ವ್ಯರ್ಥ.
  • 3 ಸೂರ್ಯನ ಕೆಳಗೆ ಮನುಷ್ಯನು ಪಡುವ ಎಲ್ಲಾ ಪ್ರಯಾಸದಲ್ಲಿ ಅವನಿಗೆ ಲಾಭವೇನು?
  • 4 ಒಂದು ಸಂತಾನವು ಗತಿಸುತ್ತದೆ, ಮತ್ತೊಂದು ಸಂತಾನವು ಬರುತ್ತದೆ; ಆದರೆ ಭೂಮಿಯು ಎಂದಿಗೂ ನಿಲ್ಲುತ್ತದೆ.
  • 5 ಸೂರ್ಯನು ಏರುತ್ತಾನೆ, ಸೂರ್ಯನು ಇಳಿಯುತ್ತಾನೆ; ತಾನು ಏರಿದ ಸ್ಥಳಕ್ಕೆ ಆತುರಪಡುತ್ತಾನೆ.
  • 6 ಗಾಳಿಯು ದಕ್ಷಿಣದ ಕಡೆಗೆ ಬೀಸುತ್ತದೆ, ಉತ್ತರದ ಕಡೆಗೆ ತಿರುಗುತ್ತದೆ; ಅದು ಬಿಡದೆ ಗುಂಡಾಗಿ ಸುತ್ತುತ್ತದೆ; ಆ ಗಾಳಿಯು ತನ್ನ ಸುತ್ತಳತೆಗಳ ಪ್ರಕಾರ ಹಿಂದಿರು ಗುತ್ತದೆ.
  • 7 ನದಿಗಳೆಲ್ಲಾ ಹರಿದು ಸಮುದ್ರಕ್ಕೆ ಹೋಗುತ್ತವೆ, ಆದರೂ ಸಮುದ್ರವು ತುಂಬುವದಿಲ್ಲ; ನದಿ ಗಳು ಎಲ್ಲಿಂದ ಬಂದಿವೆಯೋ ಆ ಸ್ಥಳಕ್ಕೆ ಅವು ಹಿಂತಿರು ಗುತ್ತವೆ.
  • 8 ಎಲ್ಲಾ ಕಾರ್ಯಗಳು ಪ್ರಯಾಸದಿಂದ ತುಂಬಿ ಯವೆ; ಅದನ್ನು ಮನುಷ್ಯನು ವಿವರಿಸಲಾರನು; ನೋಡುವದರಿಂದ ಕಣ್ಣು ತೃಪ್ತಿಗೊಳ್ಳದು. ಇಲ್ಲವೆ ಕೇಳು ವದರಿಂದ ಕಿವಿಯು ದಣಿಯದು.
  • 9 ಇದ್ದದ್ದೇ ಇರು ವದು, ನಡೆದದ್ದೇ ನಡೆಯುವದು; ಸೂರ್ಯನ ಕೆಳಗೆ ಹೊಸದಾದದ್ದು ಯಾವದೂ ಇಲ್ಲ.
  • 10 ನೋಡು, ಇದು ಹೊಸದು ಎಂದು ಯಾವ ವಿಷಯವಾಗಿ ಹೇಳ ಬಹುದೋ ಅದು ನಮಗಿಂತ ಮುಂಚೆ ಪುರಾತನ ಕಾಲದಿಂದ ಇದ್ದದ್ದೇ.
  • 11 ಮೊದಲಿನ ಸಂಗತಿಗಳ ಜ್ಞಾಪ ಕವು ಇಲ್ಲ; ಮುಂದಿನ ಸಂಗತಿಗಳ ಜ್ಞಾಪಕವು ಅವುಗಳ ಮುಂದಿನವರಿಗೆ ಇರುವದಿಲ್ಲ.
  • 12 ಪ್ರಸಂಗಿಯಾದ ನಾನು ಯೆರೂಸಲೇಮಿನಲ್ಲಿ ಇಸ್ರಾಯೇಲ್ಯರ ಮೇಲೆ ಅರಸನಾಗಿದ್ದೆನು.
  • 13 ಆಕಾಶದ ಕೆಳಗೆ ನಡೆಯುವ ಎಲ್ಲವುಗಳ ವಿಷಯವಾಗಿ ಜ್ಞಾನ ದಿಂದ ವಿಚಾರಿಸಿ ವಿಮರ್ಶಿಸುವದಕ್ಕೆ ನಾನು ನನ್ನ ಮನಸ್ಸು ಇಟ್ಟೆನು; ಇದರ ವಿಷಯವಾದ ಪ್ರಯಾಸವು ಮನಸ್ಸಿನಲ್ಲಿ ಯೋಚಿಸುವಂತೆ ದೇವರು ಮನುಷ್ಯ ಮಕ್ಕಳಿಗೆ ಈ ಕಷ್ಟಕರವಾದ ಪ್ರಯಾಸವನ್ನು ಕೊಟ್ಟಿ ದ್ದಾನೆ.
  • 14 ಸೂರ್ಯನ ಕೆಳಗೆ ನಡೆಯುವ ಎಲ್ಲಾ ಕೆಲಸಗಳನ್ನು ನಾನು ನೋಡಿದ್ದೇನೆ; ಇಗೋ, ಎಲ್ಲವು ವ್ಯರ್ಥವೂ ಮನಸ್ಸಿಗೆ ಆಯಾಸವೂ ಆಗಿವೆ.
  • 15 ವಕ್ರ ವಾದದ್ದು ಸರಿಮಾಡುವದಕ್ಕೆ ಆಗುವದಿಲ್ಲ; ಇಲ್ಲದ್ದನ್ನು ಲೆಕ್ಕಿಸುವದು ಅಸಾಧ್ಯ.
  • 16 ನಾನು ನನ್ನ ಮನಸ್ಸಿನಲ್ಲಿ ಯೋಚಿಸುತ್ತಾ--ಇಗೋ, ನಾನು ದೊಡ್ಡ ಸ್ಥಾನಕ್ಕೆ ಬಂದಿದ್ದೇನೆ ಯೆರೂಸಲೇಮಿನಲ್ಲಿ ನನಗಿಂತ ಮುಂಚೆ ಇದ್ದವರೆಲ್ಲರಿಗಿಂತ ನಾನು ಜ್ಞಾನವನ್ನು ಸಂಪಾದಿಸಿದ್ದೇನೆ. ಹೌದು, ಜ್ಞಾನದ ತಿಳುವಳಿಕೆಯ ದೊಡ್ಡ ಅನುಭವವು ನನ್ನ ಹೃದಯಕ್ಕೆ ಆಯಿತು ಎಂದು ಹೇಳಿದೆನು.
  • 17 ಜ್ಞಾನ ವನ್ನೂ ಹುಚ್ಚುತನವನ್ನೂ ಬುದ್ಧಿಹೀನತೆಯನ್ನೂ ತಿಳು ಕೊಳ್ಳುವಂತೆ ನಾನು ಮನಸ್ಸಿಟ್ಟೆನು; ಇದು ಸಹ ಮನಸ್ಸಿಗೆ ಆಯಾಸವೆಂದು ನಾನು ಅರಿತುಕೊಂಡೆನು.
  • 18 ಬಹು ಜ್ಞಾನವಿದ್ದಲ್ಲಿ ದುಃಖ; ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳು ವವನು ತನ್ನ ವ್ಯಥೆಯನ್ನು ಹೆಚ್ಚಿಸಿಕೊಳ್ಳುತ್ತಾನೆ.