- 1 ಆಕಾಶದ ಕೆಳಗೆ ಪ್ರತಿಯೊಂದು ಕಾರ್ಯಕ್ಕೂ ಒಂದು ಕಾಲವಿದೆ; ಪ್ರತಿಯೊಂದು ಉದ್ದೇಶಕ್ಕೂ ಒಂದು ಸಮಯವಿದೆ.
- 2 ಹುಟ್ಟುವದಕ್ಕೆ ಒಂದು ಸಮಯ, ಸಾಯುವದಕ್ಕೆ ಒಂದು ಸಮಯ; ನೆಡುವದಕ್ಕೆ ಒಂದು ಸಮಯ, ನೆಟ್ಟದ್ದನ್ನು ಕಿತ್ತು ಹಾಕು ವದಕ್ಕೆ ಒಂದು ಸಮಯ;
- 3 ಕೊಲ್ಲುವದಕ್ಕೆ ಒಂದು ಸಮಯ, ಸ್ವಸ್ಥಮಾಡುವದಕ್ಕೆ ಒಂದು ಸಮಯ ಕೆಡವಿ ಬಿಡುವದಕ್ಕೆ ಒಂದು ಸಮಯ, ಕಟ್ಟುವದಕ್ಕೆ ಒಂದು ಸಮಯ;
- 4 ಅಳುವದಕ್ಕೆ ಒಂದು ಸಮಯ, ನಗುವದಕ್ಕೆ ಒಂದು ಸಮಯ; ಗೋಳಾಡುವದಕ್ಕೆ ಒಂದು ಸಮಯ, ಕುಣಿದಾಡುವದಕ್ಕೆ ಒಂದು ಸಮಯ;
- 5 ಕಲ್ಲುಗಳನ್ನು ಎಸೆಯುವದಕ್ಕೆ ಒಂದು ಸಮಯ, ಕಲ್ಲುಗಳನ್ನು ಕೂಡಿಸು ವದಕ್ಕೆ ಒಂದು ಸಮಯ; ಅಪ್ಪಿಕೊಳ್ಳುವದಕ್ಕೆ ಒಂದು ಸಮಯ, ಅಪ್ಪಿಕೊಳ್ಳುವದರಿಂದ ನಿಗ್ರಹಿಸುವ ಸಮ ಯ;
- 6 ಗಳಿಸುವದಕ್ಕೆ ಒಂದು ಸಮಯ, ಕಳೆಯುವದಕ್ಕೆ ಒಂದು ಸಮಯ ಕಾಪಾಡುವದಕ್ಕೆ ಒಂದು ಸಮಯ, ಬಿಸಾಡುವದಕ್ಕೆ ಒಂದು ಸಮಯ;
- 7 ಹರಿಯುವದಕ್ಕೆ ಒಂದು ಸಮಯ, ಹೊಲಿಯುವದಕ್ಕೆ ಒಂದು ಸಮಯ ಸುಮ್ಮನೆ ಇರುವದಕ್ಕೆ ಒಂದು ಸಮಯ, ಮಾತಾಡು ವದಕ್ಕೆ ಒಂದು ಸಮಯ;
- 8 ಪ್ರೀತಿಸುವದಕ್ಕೆ ಒಂದು ಸಮಯ, ದ್ವೇಷಿಸುವದಕ್ಕೆ ಒಂದು ಸಮಯ; ಯುದ್ಧದ ಸಮಯ, ಸಮಾಧಾನದ ಸಮಯ.
- 9 ತಾನು ಪ್ರಯಾಸಪಡುವದರಲ್ಲಿ ದುಡಿಯುವವನಿಗೆ ಲಾಭವೇನಿದೆ?
- 10 ಅದರಲ್ಲಿ ಅಭ್ಯಾಸಿಸುವಂತೆ ಮನು ಷ್ಯರ ಪುತ್ರರಿಗೆ ದೇವರು ಕೊಟ್ಟ ಪ್ರಯಾಸವನ್ನು ನಾನು ಕಂಡಿದ್ದೇನೆ.
- 11 ತನ್ನ ಸಮಯದಲ್ಲಿ ಪ್ರತಿಯೊಂದನ್ನು ಆತನು ಸುಂದರವಾಗಿ ಮಾಡಿದ್ದಾನೆ. ಆದಿಯಿಂದ ಅಂತ್ಯದ ವರೆಗೂ ದೇವರು ನಡಿಸುವ ಕೆಲಸವನ್ನು ಯಾವ ಮನುಷ್ಯನೂ ಗ್ರಹಿಸಲಾರದಂತೆ ಅವರ ಹೃದಯದಲ್ಲಿ ಆತನು ಲೋಕವನ್ನು ಇಟ್ಟಿದ್ದಾನೆ.
- 12 ಒಬ್ಬನು ಸಂತೋಷಿಸಿ ತನ್ನ ಜೀವಮಾನದಲ್ಲಿ ಒಳ್ಳೇ ದನ್ನು ಮಾಡುವದೇ ಹೊರತು ಅವುಗಳಲ್ಲಿ ಯಾವ ಮೇಲೂ ಇಲ್ಲವೆಂದು ನಾನು ಬಲ್ಲೆನು.
- 13 ಪ್ರತಿ ಯೊಬ್ಬನು ತಿಂದು, ಕುಡಿದು, ತನ್ನ ಎಲ್ಲಾ ಪ್ರಯಾಸದ ಮೇಲನ್ನು ಅನುಭವಿಸುವದು ದೇವರ ದಾನದಿಂದಲೇ.
- 14 ದೇವರು ಮಾಡುವದೆಲ್ಲವು ಶಾಶ್ವತವಾಗಿರುವದೆಂದು ನಾನು ಬಲ್ಲೆನು; ಅದಕ್ಕೆ ಯಾವದನ್ನೂ ಸೇರಿಸಬಾರದು, ಇಲ್ಲವೆ ಅದರಿಂದ ಯಾವದನ್ನೂ ತೆಗೆಯಬಾರದು; ಮನುಷ್ಯರು ಆತನ ಎದುರಿನಲ್ಲಿ ಭಯಪಡುವಂತೆ ದೇವರು ಅದನ್ನು ಮಾಡುತ್ತಾನೆ.
- 15 ಇದ್ದದ್ದು ಈಗ ಇದೆ, ಇರುವದು ಆಗಲೇ ಇತ್ತು; ಗತಿಸಿಹೋದದ್ದನ್ನು ದೇವರು ಕೇಳುತ್ತಾನೆ.
- 16 ಕೆಟ್ಟದ್ದು ಇತ್ತೆಂದು ಸೂರ್ಯನ ಕೆಳಗೆ ನ್ಯಾಯ ತೀರ್ಪಿನ ಸ್ಥಳವನ್ನು ಮತ್ತು ದುಷ್ಕೃತ್ಯ ಇದೆಯೆಂದು ನೀತಿಯ ಸ್ಥಾನವನ್ನು ನಾನು ಕಂಡೆನು.
- 17 ನಾನು ನನ್ನ ಹೃದಯದಲ್ಲಿ -- ನೀತಿವಂತರನ್ನೂ ದುಷ್ಟರನ್ನೂ ದೇವರು ತೀರ್ಪುಮಾಡುವನು; ಪ್ರತಿಯೊಂದು ಉದ್ದೇ ಶಕ್ಕೂ ಪ್ರತಿಯೊಂದು ಕೆಲಸಕ್ಕೂ ಸಮಯವಿದೆ ಎಂದು ಅಂದುಕೊಂಡೆನು.
- 18 ಮನುಷ್ಯ ಪುತ್ರರ ಸ್ಥಿತಿಯ ವಿಷ ಯವಾಗಿ ದೇವರು ಅವರನ್ನು ಪ್ರತ್ಯಕ್ಷಪಡಿಸುವನೆಂದೂ ಅವರು ತಾವೇ ಮೃಗಗಳೆಂದು ತಾವು ಕಂಡುಕೊಳ್ಳ ಬೇಕೆಂದು ನನ್ನ ಹೃದಯದಲ್ಲಿ ಅಂದುಕೊಂಡೆನು.
- 19 ಮೃಗಗಳಿಗೆ ಸಂಭವಿಸುವದು ಮನುಷ್ಯರ ಪುತ್ರರಿಗೂ ಸಂಭವಿಸುತ್ತದೆ; ಅವರಿಗೆ ಒಂದೇ ಸಂಗತಿ ಸಂಭವಿಸು ತ್ತದೆ; ಒಂದು ಸಾಯುವ ಹಾಗೆ ಮತ್ತೊಂದು ಸಾಯು ತ್ತದೆ; ಹೌದು, ಅವರೆಲ್ಲರಿಗೂ ಒಂದೇ ಒಂದು ಉಸಿ ರಾಟ ಇದೆ; ಆದಕಾರಣ ಮೃಗಕ್ಕಿಂತ ಮನುಷ್ಯನಿಗೆ ಯಾವ ಶ್ರೇಷ್ಠತೆಯೂ ಇಲ್ಲ; ಎಲ್ಲವೂ ವ್ಯರ್ಥ.
- 20 ಎಲ್ಲವೂ ಒಂದೇ ಸ್ಥಳಕ್ಕೆ ಹೋಗುತ್ತವೆ; ಎಲ್ಲವು ಗಳೂ ಮಣ್ಣಿನವುಗಳೇ ಮತ್ತು ಎಲ್ಲವೂ ಮಣ್ಣಿಗೆ ಸೇರುತ್ತವೆ.
- 21 ಮನುಷ್ಯನ ಪ್ರಾಣವು ಮೇಲಕ್ಕೆ ಹೋಗುತ್ತದೆ ಎಂದೂ ಮೃಗದ ಪ್ರಾಣವು ಭೂಮಿಯ ಕೆಳಕ್ಕೆ ಹೋಗುತ್ತದೆ ಎಂದೂ ಯಾವನು ತಿಳಿದಾನು?
- 22 ಆದಕಾರಣ ಮನುಷ್ಯನು ತನ್ನ ಸ್ವಂತ ಕೆಲಸಗಳಲ್ಲಿ ಆನಂದಿಸುವದಕ್ಕಿಂತ ಒಳ್ಳೆಯದು ಯಾವದೂ ಇಲ್ಲ ವೆಂದು ನಾನು ಗ್ರಹಿಸುತ್ತೇನೆ; ಅದೇ ಅವನ ಪಾಲು; ಅದರಿಂದ ತನ್ನ ಜೀವಮಾನದ ನಂತರ ಸಂಭವಿಸುವದನ್ನು ನೋಡುವಂತೆ ಯಾವನು ಅವನನ್ನು ಪುನಃ ಬರಮಾಡುತ್ತಾನೆ.?
Ecclesiastes 03
- Details
- Parent Category: Old Testament
- Category: Ecclesiastes
ಪ್ರಸಂಗಿ ಅಧ್ಯಾಯ 3