- 1 ದೇವರ ಆಲಯಕ್ಕೆ ನೀನು ಹೋಗುವಾಗ ನಿನ್ನ ಹೆಜ್ಜೆಯನ್ನು ಗಮನಿಸು; ಬುದ್ಧಿಹೀನರು ಅರ್ಪಿಸುವ ಯಜ್ಞಕ್ಕಿಂತ, ಹೆಚ್ಚಾಗಿ ಕಿವಿಗೊಡುವದಕ್ಕೆ ಸಿದ್ಧನಾಗಿರು. ಅವರು ತಿಳಿಯದೆ ಕೆಟ್ಟದ್ದನ್ನೇ ಮಾಡು ತ್ತಾರೆ.
- 2 ನಿನ್ನ ಬಾಯಿಂದ ಆತುರಪಡದಿರು ಮತ್ತು ದೇವರ ಮುಂದೆ ಯಾವದನ್ನು ಉಚ್ಚರಿಸುವದಕ್ಕೆ ನಿನ್ನ ಹೃದಯವು ದುಡುಕದೇ ಇರಲಿ; ದೇವರು ಪರಲೋಕ ದಲ್ಲಿದ್ದಾನೆ; ನೀನು ಭೂಮಿಯ ಮೇಲೆ ಇದ್ದೀ; ಆದ ಕಾರಣ ನಿನ್ನ ಮಾತುಗಳು ಕೊಂಚವಾಗಿರಲಿ.
- 3 ಬಹಳ ಕೆಲಸದ ಮೂಲಕ ಕನಸು ಉಂಟಾಗುತ್ತದೆ; ಬಹು ಮಾತುಗಳಿಂದ ಮೂಢನ ಧ್ವನಿಯು ಗೊತ್ತಾಗುತ್ತದೆ;
- 4 ದೇವರಿಗೆ ನೀನು ಪ್ರಮಾಣವನ್ನು ಮಾಡಿದರೆ ಅದನ್ನು ತೀರಿಸಲು ತಡಮಾಡಬೇಡ; ಮೂಢರಲ್ಲಿ ಆತನಿಗೆ ಸಂತೋಷವಿಲ್ಲ; ನೀನು ಪ್ರಮಾಣಮಾಡಿದ್ದನು ತೀರಿಸು.
- 5 ಪ್ರಮಾಣಮಾಡಿ ತೀರಿಸದೆ ಇರುವದಕ್ಕಿಂತ ಪ್ರಮಾಣಮಾಡದೆ ಇರುವದು ಒಳ್ಳೇದು.
- 6 ನಿನ್ನ ಬಾಯಿಯು ನಿನ್ನ ದೇಹವನ್ನು ಪಾಪಮಾಡಿಸುವಂತೆ ಬಿಡಬೇಡ; ಇಲ್ಲವೆ ಅದು ತಪ್ಪು ಎಂದು ದೂತನ ಮುಂದೆ ಹೇಳಬೇಡ; ಇದರಿಂದ ದೇವರು ಯಾಕೆ ನಿನ್ನ ಮಾತಿಗೆ ಕೋಪಗೊಂಡು ನಿನ್ನ ಕೈಗಳ ಕೆಲಸವನ್ನು ಹಾಳುಮಾಡಬೇಕು?
- 7 ಬಹು ಕನಸುಗಳಲ್ಲಿ ಬಹಳ ಮಾತುಗಳಲ್ಲಿ ವಿಧವಿಧವಾದ ವ್ಯರ್ಥವಾದವುಗಳು ಇವೆ; ನೀನು ದೇವರಿಗೆ ಭಯಪಡು.
- 8 ಬಡವರ ಹಿಂಸೆಯನ್ನೂ ಒಬ್ಬ ಅಧಿಪತಿಯಲ್ಲಿ ನೀತಿ ನ್ಯಾಯಗಳ ಬಲಾತ್ಕಾರದ ವಕ್ರತೆಯನ್ನೂ ನೀನು ನೋಡಿದರೆ ಆ ಸಂಗತಿಯಲ್ಲಿ ಆಶ್ಚರ್ಯಪಡಬೇಡ; ಉನ್ನತೋನ್ನತನು ಲಕ್ಷಿಸುತ್ತಾನೆ; ಅವರಿಗಿಂತ ಉನ್ನತವಾ ದವರು ಇದ್ದಾರೆ.
- 9 ಇದಲ್ಲದೆ ಭೂಮಿಯ ಲಾಭವು ಎಲ್ಲರಿಗೂ ಇದೆ; ಭೂಮಿಯಿಂದಲೇ ಅರಸನಿಗೆ ಸೇವೆ ಯಾಗುತ್ತದೆ.
- 10 ಬೆಳ್ಳಿಯನ್ನು ಪ್ರೀತಿಸುವವನು ಬೆಳ್ಳಿಯಿಂದ ತೃಪ್ತ ನಾಗನು; ಸಮೃದ್ಧಿಯನ್ನು ಪ್ರೀತಿಸುವವನು ಅಭಿವೃದ್ಧಿ ಯಿಂದ ತೃಪ್ತನಾಗಲಾರನು; ಇದೂ ಕೂಡ ವ್ಯರ್ಥವೇ.
- 11 ಸೊತ್ತುಗಳು ಹೆಚ್ಚಿದರೆ ಅದನ್ನು ತಿನ್ನುವವರು ಹೆಚ್ಚಾ ಗುವರು; ಅವುಗಳನ್ನು ತಮ್ಮ ಕಣ್ಣುಗಳಿಂದ ನೋಡು ವದೇ ಹೊರತು ಅವುಗಳ ಸ್ವಂತದವರಿಗೆ ಯಾವ ಪ್ರಯೋಜನವಿದೆ?
- 12 ಪ್ರಯಾಸಪಡುವವನು ಸ್ವಲ್ಪ ತಿಂದರೂ ಹೆಚ್ಚಾಗಿ ತಿಂದರೂ ಅವನು ಹಾಯಾಗಿ ನಿದ್ರಿಸುತ್ತಾನೆ; ಐಶ್ವರ್ಯವಂತನ ಸಮೃದ್ಧಿಯು ಅವನನ್ನು ನಿದ್ರೆಮಾಡಗೊಡಿಸದು.
- 13 ಸೂರ್ಯನ ಕೆಳಗೆ ವ್ಯಥೆಯಿಂದ ಕೂಡಿದ ಒಂದು ಕೆಟ್ಟತನವನ್ನು ನಾನು ನೋಡಿದ್ದೇನೆ; ಅದು ಯಾವ ದಂದರೆ, ತಮ್ಮ ವ್ಯಥೆಗಾಗಿ ಅವುಗಳ ಯಜ ಮಾನರು ಇಟ್ಟುಕೊಂಡಿದ್ದ ಐಶ್ವರ್ಯವೇ.
- 14 ಆದರೆ ಕೆಟ್ಟ ಪ್ರಯಾ ಸದಿಂದ ಆ ಆಸ್ತಿಯು ನಾಶವಾಗುತ್ತದೆ; ಅವನು ಒಬ್ಬ ಮಗನನ್ನು ಪಡೆದಿದ್ದರೆ ಅವನ ಕೈಯಲ್ಲಿ ಏನೂ ಇರದು.
- 15 ತನ್ನ ತಾಯಿಯ ಗರ್ಭದಿಂದ ಅವನು ಹೇಗೆ ಬಂದನೋ ಅವನು ಬಂದ ಹಾಗೆ ಬೆತ್ತಲೆಯಾಗಿ ತಿರುಗಿ ಹೋಗುವನು; ತನ್ನ ಕೈಯಲ್ಲಿ ತಕ್ಕೊಂಡು ಹೋಗುವದಕ್ಕೆ ತನ್ನ ಪ್ರಯಾಸದಲ್ಲಿ ಯಾವದನ್ನು ತೆಗೆದುಕೊಂಡು ಹೋಗುವದಿಲ್ಲ.
- 16 ಇದೂ ಕೂಡ ವ್ಯಥೆಯಿಂದ ಕೂಡಿದ ಕೆಟ್ಟತನವೇ. ಅದು ಯಾವ ದಂದರೆ ಎಲ್ಲಾ ವಿಷಯಗಳಲ್ಲಿ ತಾನು ಹೇಗೆ ಬಂದನೋ ಹಾಗೆಯೇ ಹೋಗುವನು; ಗಾಳಿಗಾಗಿ ಪ್ರಯಾಸಪಟ್ಟ ವನಿಗೆ ಲಾಭವೇನಿದೆ?
- 17 ತನ್ನ ಜೀವಮಾನದಲ್ಲೆಲ್ಲಾ ಅವನು ಕತ್ತಲೆಯಲ್ಲಿ ತಿನ್ನುತ್ತಾನೆ; ತನ್ನ ವ್ಯಾಧಿಯೊಂದಿಗೆ ಅವನಿಗೆ ಬಹಳ ವ್ಯಥೆಯೂ ಕ್ರೋಧವೂ ಇರುತ್ತದೆ.
- 18 ನಾನು ಕಂಡದ್ದನ್ನು ನೋಡು; ದೇವರು ತನಗೆ ಕೊಟ್ಟದ್ದನ್ನು ಸೂರ್ಯನ ಕೆಳಗೆ ತಾನು ಕೈಕೊಂಡ ಪ್ರಯಾಸದ ಸುಖವನ್ನು ಅನುಭವಿಸಿ ತಿಂದು ಕುಡಿ ಯುವದು ಮನುಷ್ಯನಿಗೆ ಒಳ್ಳೆಯದೂ ಉಚಿತವಾದದ್ದೂ ಆಗಿದೆ; ಅದು ಅವನ ಪಾಲು.
- 19 ಪ್ರತಿ ಯೊಬ್ಬ ಮನುಷ್ಯನಿಗೆ ದೇವರು ಕೊಟ್ಟ ಆಸ್ತಿಪಾಸ್ತಿಗ ಳನ್ನೂ ಅವುಗಳನ್ನು ಅನುಭವಿಸುವದಕ್ಕೆ ಆತನು ಕೊಟ್ಟ ಸಾಮರ್ಥ್ಯವನ್ನೂ ಅವನು ತನ್ನ ಪಾಲನ್ನು ತೆಗೆದು ಕೊಂಡು ತನ್ನ ಪ್ರಯಾಸದಲ್ಲಿ ಆನಂದಿಸುವದೂ ದೇವರ ದಾನದಿಂದಲೇ.
- 20 ತನ್ನ ಜೀವಿತದ ದಿನಗಳನ್ನು ಅವನು ಹೆಚ್ಚಾಗಿ ಗಣನೆಗೆ ತಾರನು; ತನ್ನ ಹೃದಯದ ಸಂತೋಷ ದಲ್ಲಿ ದೇವರು ಅವನಿಗೆ ಉತ್ತರಕೊಡುತ್ತಾನೆ.
Ecclesiastes 05
- Details
- Parent Category: Old Testament
- Category: Ecclesiastes
ಪ್ರಸಂಗಿ ಅಧ್ಯಾಯ 5