- 1 ಸತ್ತ ನೊಣಗಳು ವೈದ್ಯನ ತೈಲವನ್ನು ದುರ್ವಾಸನೆಗೊಳಿಸುತ್ತವೆ; ಹಾಗೆಯೇ ಸ್ವಲ್ಪ ಮೂಢತನವು ಜ್ಞಾನ ಮತ್ತು ಘನಗಳಿಗೆ ಪ್ರಿಯ ನಾದವನನ್ನು ಕೆಡಿಸುತ್ತದೆ.
- 2 ಒಬ್ಬ ಜ್ಞಾನಿಯಾದ ಮನು ಷ್ಯನ ಹೃದಯವು ಅವನ ಬಲಗೈಯಲ್ಲಿರುತ್ತದೆ; ಆದರೆ ಒಬ್ಬ ಮೂರ್ಖನ ಹೃದಯವು ಅವನ ಎಡಗಡೆಯಿ ರುತ್ತದೆ.
- 3 ಹೌದು, ಮೂರ್ಖನು ಮಾರ್ಗದಲ್ಲಿ ನಡೆ ಯುವಾಗಲೂ ಸಹ ಅವನ ಜ್ಞಾನವು ಅವನನ್ನು ತಪ್ಪಿಸುತ್ತದೆ; ಅವನು ತಾನು ಮೂರ್ಖನೆಂದು ಪ್ರತಿಯೊಬ್ಬನಿಗೂ ಹೇಳುತ್ತಾನೆ.
- 4 ಆಳುವವನ ಆತ್ಮವು ನಿನಗೆ ವಿರುದ್ಧವಾಗಿ ಎದ್ದರೆ ನಿನ್ನ ಸ್ಥಳವನ್ನು ಬಿಡಬೇಡ; ತಾಳ್ಮೆಯು ಅಭ್ಯಂತರಗಳನ್ನು ತಡೆಯುತ್ತದೆ.
- 5 ಆಳುವ ವನ ಸಮ್ಮುಖದಿಂದ ಹೊರಟು ಬರುವ ತಪ್ಪಿನ ಹಾಗಿ ರುವ ಒಂದು ಕೇಡನ್ನು ನಾನು ಸೂರ್ಯನ ಕೆಳಗೆ ನೋಡಿದ್ದೇನೆ.
- 6 ಮೂರ್ಖತನವು ಬಹಳ ಎತ್ತರವಾದ ಸ್ಥಳದಲ್ಲಿಡಲ್ಪಡುತ್ತದೆ. ಸಿರಿತನವು ಕೆಳಗಿನ ಸ್ಥಳದಲ್ಲಿ ಕೂತುಕೊಳ್ಳುವದು.
- 7 ನಾನು ಕುದುರೆಗಳ ಮೇಲೆ ಸೇವಕರನ್ನೂ ಮತ್ತು ಪ್ರಭುಗಳು ಸೇವಕರ ಹಾಗೆ ಭೂಮಿಯ ಮೇಲೆ ನಡೆಯುವದನ್ನೂ ನೋಡಿದ್ದೇನೆ.
- 8 ಯಾವನು ಕುಣಿಯನ್ನು ಅಗೆಯುವನೋ ಅದರಲ್ಲೇ ಅವನು ಬೀಳುವನು; ಯಾವನು ಬೇಲಿಯನ್ನು ಮುರಿ ಯುವನೋ ಅವನನ್ನು ಹಾವು ಕಚ್ಚುವದು.
- 9 ಯಾವನು ಕಲ್ಲುಗಳನ್ನು ಕೀಳುವನೋ ಅವುಗಳಿಂದ ಅವನು ನೋವುಪಡುವನು; ಯಾವನು ಕಟ್ಟಿಗೆ ಕಡಿಯುವನೋ ಅದರಿಂದ ಅವನು ಅಪಾಯಗೊಳ್ಳುವನು.
- 10 ಕಬ್ಬಿಣ ಮೊಂಡಾಗಿದ್ದು ಅದರ ಬಾಯಿಯನ್ನು ಮಸೆಯದಿ ದ್ದರೆ ಅವನು ತಪ್ಪದೆ ಹೆಚ್ಚು ಬಲವನ್ನು ಹಾಕಬೇಕು; ಜ್ಞಾನವು ಬದುಕಿಗೆ ಪ್ರಯೋಜನವಾಗಿದೆ.
- 11 ನಿಶ್ಚಯ ವಾಗಿ ಮಂತ್ರವಿಲ್ಲದೆ ಹಾವು ಕಚ್ಚುವದು. ಹಾಗೆಯೇ ಹರಟೆಯವನಲ್ಲಿ ಪ್ರಯೋಜನವಿಲ್ಲ.
- 12 ಜ್ಞಾನಿಯ ಬಾಯಿಮಾತುಗಳು ಆನಂದಕರವಾಗಿವೆ; ಮೂರ್ಖನ ತುಟಿಗಳು ಅವನನ್ನೇ ನುಂಗಿಬಿಡುತ್ತವೆ.
- 13 ಅವನ ಬಾಯಿಯು ಮಾತುಗಳು ಆರಂಭದಲ್ಲಿ ಮೂಢತನ ದವುಗಳಾಗಿವೆ; ಅವನ ಮಾತಿನ ಅಂತ್ಯವು ಕೆಟ್ಟ ಮೂರ್ಖತನವಾಗಿದೆ.
- 14 ಮೂಢನು ಸಹ ಮಾತು ಗಳನ್ನು ಹೆಚ್ಚಿಸುತ್ತಾನೆ; ಆದರೂ ಅವನು ಏನೆಂದು ಹೇಳಲು ಸಾಧ್ಯವಿಲ್ಲ. ಅವನ ತರುವಾಯ ಆಗುವದನ್ನು ಅವನಿಗೆ ತಿಳಿಸುವವರು ಯಾರು?
- 15 ಮೂರ್ಖನ ಕಷ್ಟವು ಅವರಲ್ಲಿ ಪ್ರತಿಯೊಬ್ಬನನ್ನು ದಣಿಸುತ್ತದೆ; ನಗರಕ್ಕೆ ಹೇಗೆ ಹೋಗಬೇಕೆಂದು ಅವನಿಗೆ ತಿಳಿಯದು.
- 16 ಓ ದೇಶವೇ, ಹುಡುಗನು ನಿನ್ನ ಅರಸನಾಗಿದ್ದರೆ ಮತ್ತು ನಿನ್ನ ಪ್ರಧಾನರು ಬೆಳಿಗ್ಗೆ ಊಟಮಾಡಿದ್ದರೆ ನಿನಗೆ ಅಯ್ಯೋ!
- 17 ಓ ದೇಶವೇ, ಶ್ರೇಷ್ಠರ ಮಗನು ನಿನ್ನ ಅರಸನಾದರೆ ಮತ್ತು ನಿನ್ನ ಪ್ರಭುಗಳು ತಕ್ಕಕಾಲಕ್ಕೆ ಸರಿಯಾಗಿ ಅಮಲಿಗಾಗಿ ಅಲ್ಲದೆ ಶಕ್ತಿಗಾಗಿ ಊಟ ಮಾಡಿದರೆ ನಿನಗೆ ಆಶೀರ್ವಾದವಾಗಲಿ.
- 18 ಹೆಚ್ಚು ಸೋಮಾರಿತನದಿಂದ ತೊಲೆಗಳು ಜಗ್ಗುತ್ತವೆ ಮತ್ತು ಜೋಲುಗೈಯಿಂದ ಮನೆಗಳು ಸೋರುವವು.
- 19 ನಗೆಗಾಗಿ ಔತಣ ಮಾಡುತ್ತಾರೆ. ದ್ರಾಕ್ಷಾರಸವು ಸಂತೋಷ ಪಡಿಸುತ್ತದೆ. ಹಣವು ಸಮಸ್ತಕ್ಕೂ ಉತ್ತರಕೊಡುತ್ತದೆ.
- 20 ನಿಮ್ಮ ಊಹೆಯಲ್ಲೂ ಅರಸನನ್ನು ಶಪಿಸಬೇಡಿರಿ, ನೀವು ಮಲಗುವ ಕೋಣೆಯಲ್ಲಿ ಐಶ್ವರ್ಯವನ್ನು ಶಪಿಸಬೇಡಿರಿ. ಆಕಾಶದ ಪಕ್ಷಿಗಳು ಧ್ವನಿಯನ್ನು ಒಯ್ಯು ವವು; ರೆಕ್ಕೆಯುಳ್ಳವುಗಳು ವಿಷಯವನ್ನು ತಿಳಿಸುವವು.
Ecclesiastes 10
- Details
- Parent Category: Old Testament
- Category: Ecclesiastes
ಪ್ರಸಂಗಿ ಅಧ್ಯಾಯ 10