wheel

AJC Publications and Media Portal

 

But the Comforter, which is the Holy Ghost, whom the Father will send in my name, he shall teach you all things,
and bring all things to your remembrance, whatsoever I have said unto you. John 14:26


ವಿಮೋಚನಕಾಂಡಅಧ್ಯಾಯ 9
  • 1 ಕರ್ತನು ಮೋಶೆಗೆ--ಫರೋಹನ ಬಳಿಗೆ ಹೋಗಿ ಅವನಿಗೆ--ಇಬ್ರಿಯರ ದೇವ ರಾದ ಕರ್ತನು ಹೀಗೆ ಹೇಳುತ್ತಾನೆ--ನನ್ನನ್ನು ಸೇವಿ ಸುವಂತೆ ನನ್ನ ಜನರನ್ನು ಕಳುಹಿಸು.
  • 2 ಅವರನ್ನು ಕಳುಹಿಸುವದಕ್ಕೆ ನಿರಾಕರಿಸಿ ಇನ್ನೂ ತಡೆದರೆ
  • 3 ಇಗೋ, ಕರ್ತನ ಕೈ ಹೊಲದಲ್ಲಿರುವ ನಿನ್ನ ಪಶುಗಳ ಮೇಲೆ ಇರುವದು. ಕುದುರೆ ಕತ್ತೆ ಒಂಟೆ ಎತ್ತು ಕುರಿ ಇವುಗಳ ಮೇಲೆ ಮಹಾ ಕಠಿಣವಾದ ರೋಗವು ಬರುವದು.
  • 4 ಇದಲ್ಲದೆ ಕರ್ತನು ಇಸ್ರಾಯೇಲ್ಯರ ಪಶುಗಳನ್ನು ವಿಂಗಡಿಸುವನು; ಇಸ್ರಾಯೇಲ್‌ ಮಕ್ಕಳಿಗಿರುವವು ಗಳಲ್ಲಿ ಒಂದೂ ಸಾಯುವದಿಲ್ಲ.
  • 5 ಇದಲ್ಲದೆ ಕರ್ತನು ಒಂದು ನಿರ್ದಿಷ್ಟವಾದ ಸಮಯವನ್ನು ನೇಮಿಸಿ--ಕರ್ತನು ಈ ಕಾರ್ಯವನ್ನು ನಾಳೆ ದೇಶದಲ್ಲಿ ಮಾಡು ವನು ಎಂದು ಹೇಳು ಅಂದನು.
  • 6 ಮರುದಿನ ಕರ್ತನು ಆ ಕಾರ್ಯವನ್ನು ಮಾಡಿ ದನು; ಐಗುಪ್ತ್ಯರ ಪಶುಗಳೆಲ್ಲಾ ಸತ್ತುಹೋದವು. ಇಸ್ರಾಯೇಲ್‌ ಮಕ್ಕಳ ಪಶುಗಳಲ್ಲಿ ಒಂದೂ ಸಾಯ ಲಿಲ್ಲ.
  • 7 ಫರೋಹನು ಕಳುಹಿಸಿ ನೋಡಿದಾಗ ಇಗೋ, ಇಸ್ರಾಯೇಲ್ಯರ ಪಶುಗಳಲ್ಲಿ ಒಂದೂ ಸತ್ತಿರಲಿಲ್ಲ. ಆದರೆ ಫರೋಹನ ಹೃದಯವು ಕಠಿಣವಾಗಿದ್ದದರಿಂದ ಅವನು ಜನರನ್ನು ಕಳುಹಿಸಲಿಲ್ಲ.
  • 8 ಆಗ ಕರ್ತನು ಮೋಶೆ ಆರೋನರಿಗೆ--ಕೈ ತುಂಬಾ ಒಲೆಯ ಬೂದಿಯನ್ನು ತೆಗೆದುಕೊಳ್ಳಿರಿ; ಅದನ್ನು ಮೋಶೆಯು ಫರೋಹನ ಕಣ್ಣುಗಳ ಮುಂದೆ ಆಕಾಶದ ಕಡೆಗೆ ತೂರಲಿ.
  • 9 ಆಗ ಅದು ಐಗುಪ್ತದೇಶದಲ್ಲೆಲ್ಲಾ ಸಣ್ಣ ಧೂಳಾಗಿ ಅದು ಐಗುಪ್ತದೇಶದಲ್ಲೆಲ್ಲಾ ಮನುಷ್ಯರ ಮೇಲೆಯೂ ಮೃಗಗಳ ಮೇಲೆಯೂ ಹುಣ್ಣುಗಳಾಗುವ ಬೊಕ್ಕೆಗಳು ಏಳುವಂತೆ ಮಾಡುವದು ಎಂದು ಹೇಳಿ ದನು.
  • 10 ಆಗ ಅವರು ಒಲೆಯ ಬೂದಿಯನ್ನು ತೆಗೆದು ಕೊಂಡು ಫರೋಹನ ಮುಂದೆ ನಿಂತರು. ಮೋಶೆಯು ಅದನ್ನು ಆಕಾಶದ ಕಡೆಗೆ ತೂರಿದನು. ಅದು ಮನುಷ್ಯ ರಲ್ಲಿಯೂ ಪಶುಗಳಲ್ಲಿಯೂ ಹರಡಿ ಹುಣ್ಣುಗಳಾಗು ವಂಥ ಬೊಕ್ಕೆಗಳಾದವು.
  • 11 ಇದಲ್ಲದೆ ಮಂತ್ರಗಾರರು ಹುಣ್ಣಿನ ನಿಮಿತ್ತ ಮೋಶೆಯ ಮುಂದೆ ನಿಂತುಕೊಳ್ಳ ಲಾರದೆ ಹೋದರು. ಹುಣ್ಣುಗಳು ಮಂತ್ರಗಾರರ ಲ್ಲಿಯೂ ಐಗುಪ್ತ್ಯರ ಮೇಲೆಲ್ಲಾ ಇದ್ದವು.
  • 12 ಆದರೆ ಕರ್ತನು ಫರೋಹನ ಹೃದಯವನ್ನು ಕಠಿಣ ಮಾಡಿ ದನು. ಕರ್ತನು ಮೋಶೆಗೆ ಹೇಳಿದಂತೆಯೇ ಅವನು ಅವರ ಮಾತನ್ನು ಕೇಳಲಿಲ್ಲ.
  • 13 ಕರ್ತನು ಮೋಶೆಗೆ--ಬೆಳಿಗ್ಗೆ ಎದ್ದು ಫರೋಹನ ಮುಂದೆ ನಿಂತುಕೊಂಡು ಅವನಿಗೆ--ಇಬ್ರಿಯರ ದೇವ ರಾದ ಕರ್ತನು ಹೀಗೆ ಹೇಳುತ್ತಾನೆ--ನನ್ನನ್ನು ಸೇವಿಸುವ ಹಾಗೆ ನನ್ನ ಜನರನ್ನು ಕಳುಹಿಸು.
  • 14 ಭೂಲೋಕ ದಲ್ಲೆಲ್ಲಾ ನನ್ನ ಹಾಗೆ ಯಾರೂ ಇಲ್ಲವೆಂದು ನೀನು ತಿಳಿದುಕೊಳ್ಳುವ ಹಾಗೆ ಈ ಸಾರಿ ನಾನು ಎಲ್ಲಾ ಬಾಧೆಗಳನ್ನು ನಿನ್ನ ಮೇಲೆಯೂ ನಿನ್ನ ಸೇವಕರ ಮೇಲೆಯೂ ನಿನ್ನ ಜನರ ಮೇಲೆಯೂ ಬರಮಾಡು ವೆನು.
  • 15 ಈಗ ನನ್ನ ಕೈಚಾಚಿ ನಿನ್ನನ್ನೂ ನಿನ್ನ ಜನರನ್ನೂ ವ್ಯಾಧಿಯಿಂದ ಹೊಡೆಯುವೆನು; ನಿನ್ನನ್ನೂ ಭೂಮಿ ಯೊಳಗಿಂದ ನಿರ್ಮೂಲ ಮಾಡುವೆನು.
  • 16 ಆದರೆ ನಿಶ್ಚಯವಾಗಿ ನನ್ನ ಬಲವನ್ನು ನಿನಗೆ ತೋರಿಸುವ ಹಾಗೆಯೂ ನನ್ನ ಹೆಸರು ಭೂಲೋಕದಲ್ಲೆಲ್ಲಾ ತಿಳಿಸಲ್ಪಡುವಂತೆಯೂ ನಿನ್ನನ್ನು ಎಬ್ಬಿಸಿದ್ದೇನೆ.
  • 17 ನೀನು ಇನ್ನೂ ಅವರನ್ನು ಕಳುಹಿಸದೆ ನನ್ನ ಜನರಿಗೆ ವಿರೋಧ ವಾಗಿ ನಿನ್ನನ್ನು ನೀನೇ ಹೆಚ್ಚಿಸಿಕೊಳ್ಳುತ್ತೀಯೋ?
  • 18 ಇಗೋ, ನಾಳೆ ಇಷ್ಟು ಹೊತ್ತಿಗೆ ಮಹಾಕಠಿಣವಾದ ಆನೆಕಲ್ಲಿನ ಮಳೆಯನ್ನು ಬೀಳಮಾಡುತ್ತೇನೆ. ಇಂಥದ್ದು ಐಗುಪ್ತದಲ್ಲಿ ಅದಕ್ಕೆ ಅಸ್ತಿವಾರ ಹಾಕಿದಂದಿನಿಂದ ಇಲ್ಲಿಯವರೆಗೂ ಆಗಿರಲಿಲ್ಲ.
  • 19 ಹೀಗಿರುವದರಿಂದ (ಯಾವನನ್ನಾದರೂ) ಕಳುಹಿಸಿ ನಿನ್ನ ಪಶುಗಳನ್ನೂ ಹೊಲದಲ್ಲಿ ನಿನಗಿರುವವುಗಳನ್ನೂ ಕೂಡಿಸು. ಯಾಕಂ ದರೆ ಮನೆಗಳಿಗೆ ತಾರದೆ ಹೊಲದಲ್ಲಿ ಸಿಕ್ಕುವ ಮನುಷ್ಯರ ಮೇಲೂ ಪಶುಗಳಮೇಲೂ ಆನೆಕಲ್ಲಿನ ಮಳೆಯು ಸುರಿದು ಕೊಲ್ಲುವದು ಎಂದು ಹೇಳು ಅಂದನು.
  • 20 ಆಗ ಫರೋಹನ ಸೇವಕರಲ್ಲಿ ಕರ್ತನ ವಾಕ್ಯಕ್ಕೆ ಭಯಪಟ್ಟವರೆಲ್ಲರೂ ತಮ್ಮ ದಾಸರನ್ನೂ ಪಶುಗಳನ್ನೂ ಮನೆಗಳಿಗೆ ಓಡಿಬರುವಂತೆ ಮಾಡಿದರು.
  • 21 ಆದರೆ ಕರ್ತನ ವಾಕ್ಯಕ್ಕೆ ಮನಸ್ಸು ಕೊಡದವರು ತಮ್ಮ ದಾಸ ರನ್ನೂ ಪಶುಗಳನ್ನೂ ಹೊಲದಲ್ಲಿ ಬಿಟ್ಟರು.
  • 22 ಆಗ ಕರ್ತನು ಮೋಶೆಗೆ--ಆಕಾಶದ ಕಡೆಗೆ ನಿನ್ನ ಕೈ ಚಾಚು. ಆಗ ಐಗುಪ್ತದೇಶದಲ್ಲೆಲ್ಲಾ ಮನುಷ್ಯರ ಮೇಲೆಯೂ ಪಶುಗಳ ಮೇಲೆಯೂ ಮತ್ತು ಐಗುಪ್ತ ದೇಶದಲ್ಲಿ ಇರುವ ಎಲ್ಲಾ ಹೊಲ ಗಿಡಗಳ ಮೇಲೆಯೂ ಆನೆಕಲ್ಲಿನ ಮಳೆಯು ಸುರಿಯುವದು ಅಂದನು.
  • 23 ಮೋಶೆಯು ಆಕಾಶದ ಕಡೆಗೆ ಕೋಲನ್ನು ಚಾಚಿ ದನು. ಆಗ ಕರ್ತನು ಗುಡುಗುಗಳನ್ನು ಆನೆಕಲ್ಲಿನ ಮಳೆಯನ್ನು ಸುರಿಸಿದನು. ಅಗ್ನಿಯು ಭೂಮಿಗೆ ಇಳಿದು ಬಂತು. ಹೀಗೆ ಕರ್ತನು ಐಗುಪ್ತದೇಶದ ಮೇಲೆ ಆನೆಕಲ್ಲಿನ ಮಳೆಯನ್ನು ಸುರಿಸಿದನು.
  • 24 ಹೀಗೆ ಮಹಾ ಕಠಿಣವಾದ ಆನೆಕಲ್ಲಿನ ಮಳೆಯೂ ಅಗ್ನಿಯಿಂದೊಡ ಗೂಡಿದ ಆನೆಕಲ್ಲಿನ ಮಳೆಯೂ ಸುರಿಯಿತು. ಐಗುಪ್ತವು ಜನಾಂಗವಾದಂದಿನಿಂದ ಇಂಥದ್ದು ಆ ದೇಶದಲ್ಲಿ ಆಗಿರಲಿಲ್ಲ.
  • 25 ಆ ಆನೆಕಲ್ಲಿನ ಮಳೆಯು ಐಗುಪ್ತದೇಶದಲ್ಲೆಲ್ಲಾ ಮನುಷ್ಯರನ್ನೂ ಪಶುಗಳನ್ನೂ ಹೊಲದಲ್ಲಿದ್ದದ್ದನ್ನೆಲ್ಲಾ ಹಾಳುಮಾಡಿತು. ಹೊಲದ ಎಲ್ಲಾ ಸೊಪ್ಪನ್ನೂ ಹಾಳುಮಾಡಿ ಎಲ್ಲಾ ಮರಗಳನ್ನೂ ಮುರಿದು ಹಾಕಿತು.
  • 26 ಇಸ್ರಾಯೇಲ್‌ ಮಕ್ಕಳು ಇದ್ದ ಗೋಷೆನ್‌ ಸೀಮೆಯಲ್ಲಿ ಆನೆಕಲ್ಲಿನ ಮಳೆಯು ಬೀಳಲಿಲ್ಲ.
  • 27 ಆಗ ಫರೋಹನು ಮೋಶೆ ಆರೋನರನ್ನು ಕರೇ ಕಳುಹಿಸಿ ಅವರಿಗೆ--ಈ ಸಾರಿ ನಾನು ಪಾಪಮಾಡಿ ದ್ದೇನೆ. ಕರ್ತನು ನೀತಿವಂತನು, ನಾನೂ ನನ್ನ ಜನರೂ ದುಷ್ಟರಾಗಿದ್ದೇವೆ.
  • 28 ಆದದರಿಂದ (ಈಗ ಇದು ಸಾಕು.) ಇನ್ನು ಬಲವಾದ ಗುಡುಗುಗಳೂ ಆನೆಕಲ್ಲಿನ ಮಳೆಯೂ ನಿಂತುಹೋಗುವಂತೆ ಕರ್ತನನ್ನು ಬೇಡಿ ಕೊಳ್ಳಿರಿ, ನೀವು ಇಲ್ಲಿ ಇನ್ನು ಇರದಂತೆ ನಾನು ನಿಮ್ಮನ್ನು ಕಳುಹಿಸಿಬಿಡುವೆನು ಅಂದನು.
  • 29 ಆಗ ಮೋಶೆಯು ಅವನಿಗೆ--ನಾನು ಪಟ್ಟಣವನ್ನು ಬಿಟ್ಟುಹೋದ ಕೂಡಲೆ ಕರ್ತನ ಕಡೆಗೆ ನನ್ನ ಕೈಗಳನ್ನು ಚಾಚುವೆನು; ಭೂಮಿಯು ಕರ್ತನದೇ ಎಂದು ನೀನು ತಿಳುಕೊಳ್ಳು ವಂತೆ ಗುಡುಗುಗಳು ನಿಂತುಹೋಗುವವು. ಆನೆಕಲ್ಲಿನ ಮಳೆಯು ಇನ್ನು ಬಾರದು.
  • 30 ಆದಾಗ್ಯೂ ನೀನೂ ನಿನ್ನ ಸೇವಕರೂ ದೇವರಾದ ಕರ್ತನಿಗೆ ಭಯಪಡು ವದಿಲ್ಲವೆಂದು ನಾನು ಬಲ್ಲೆನು.
  • 31 ಈ ಮೇರೆಗೆ ಜವೆಗೋದಿಗೆ ತೆನೆಗಳೂ ಸೆಣಬಿಗೆ ಮೊಗ್ಗೆಗಳೂ ಇದ್ದದರಿಂದ ಸೆಣಬೂ ಜವೆಗೋದಿಯೂ ಹಾಳಾದವು.
  • 32 ಆದರೆ ಗೋದಿಯೂ ಸಾಮೆಯೂ ಬೆಳೆದಿರಲಿಲ್ಲವಾದದ್ದರಿಂದ ಹಾಳಾಗಲಿಲ್ಲ.
  • 33 ಮೋಶೆಯು ಫರೋಹನನ್ನು ಬಿಟ್ಟು ಪಟ್ಟಣದ ಹೊರಗೆ ಬಂದು ತನ್ನ ಕೈಗಳನ್ನು ಕರ್ತನ ಕಡೆಗೆ ಚಾಚಿದನು. ಆಗ ಗುಡುಗುಗಳೂ ಆನೆಕಲ್ಲಿನ ಮಳೆಯೂ ನಿಂತುಹೋದವು. ಇನ್ನು ಮಳೆಯು ಭೂಮಿಯ ಮೇಲೆ ಬೀಳಲಿಲ್ಲ.
  • 34 ಆನೆಕಲ್ಲಿನ ಮಳೆಯೂ ಗುಡುಗುಗಳೂ ನಿಂತುಹೋದದ್ದನ್ನು ಫರೋಹನು ನೋಡಿ ಅವನು ಇನ್ನೂ ಪಾಪಮಾಡಿ ತನ್ನ ಸೇವಕರ ಸಹಿತವಾಗಿ ತನ್ನ ಹೃದಯವನ್ನು ಕಠಿಣ ಮಾಡಿಕೊಂಡನು.
  • 35 ಫರೋಹನ ಹೃದಯವು ಕಠಿಣ ವಾಯಿತು; ಕರ್ತನು ಮೋಶೆಗೆ ಹೇಳಿದಂತೆ ಅವನು ಇಸ್ರಾಯೇಲ್‌ ಮಕ್ಕಳನ್ನು ಕಳುಹಿಸಲೇ ಇಲ್ಲ.