- 1 ದೇವರು ಈ ಎಲ್ಲಾ ವಾಕ್ಯಗಳನ್ನು ಹೇಳಿದನು. ಅವು ಯಾವವಂದರೆ--
- 2 ನಿನ್ನನ್ನು ಐಗುಪ್ತದೇಶದಿಂದಲೂ ದಾಸತ್ವದ ಮನೆಯೊಳ ಗಿಂದಲೂ ಹೊರಗೆ ತಂದ ನಿನ್ನ ದೇವರಾದ ಕರ್ತನು ನಾನೇ.
- 3 ನನ್ನ ಮುಂದೆ ನಿನಗೆ ಬೇರೆ ದೇವರುಗಳು ಇರಬಾರದು.
- 4 ನಿನಗೆ ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ಭೂಮಿಯ ಕೆಳಗಿರುವ ನೀರುಗಳಲ್ಲಾಗಲಿ ಯಾವದರ ವಿಗ್ರಹವನ್ನಾಗಲಿ ರೂಪವನ್ನಾಗಲಿ ನೀನು ಮಾಡಿಕೊಳ್ಳ ಬಾರದು.
- 5 ನೀನು ಅವುಗಳಿಗೆ ಅಡ್ಡಬೀಳಬಾರದು, ಸೇವಿಸಲೂ ಬಾರದು. ನಿನ್ನ ದೇವರಾದ ಕರ್ತನಾಗಿರುವ ನಾನು ರೋಷವುಳ್ಳ ದೇವರಾಗಿದ್ದೇನೆ. ನನ್ನನ್ನು ಹಗೆ ಮಾಡುವ ತಂದೆಗಳ ಅಪರಾಧವನ್ನು ಮಕ್ಕಳ ಮೇಲೆ ಯೂ ಮೂರನೆಯ ನಾಲ್ಕನೆಯ ತಲೆಗಳ ವರೆಗೂ ಬರಮಾಡುವೆನು.
- 6 ನನ್ನನ್ನು ಪ್ರೀತಿಮಾಡಿ ನನ್ನ ಆಜ್ಞೆ ಗಳನ್ನು ಕೈಕೊಳ್ಳುವವರಿಗೆ ಸಾವಿರ ತಲೆಗಳ ವರೆಗೆ ದಯೆತೋರಿಸುವೆನು.
- 7 ನಿನ್ನ ದೇವರಾದ ಕರ್ತನ ಹೆಸರನ್ನು ವ್ಯರ್ಥವಾಗಿ ಎತ್ತಬಾರದು. ಕರ್ತನು ತನ್ನ ಹೆಸರನ್ನು ವ್ಯರ್ಥವಾಗಿ ಎತ್ತುವವನನ್ನು ನಿರ್ದೋಷಿ ಯೆಂದು ಎಣಿಸುವದಿಲ್ಲ.
- 8 ಸಬ್ಬತ್ ದಿನವನ್ನು ಪರಿಶುದ್ಧವಾಗಿ ಇರುವಂತೆ ಜ್ಞಾಪಕದಲ್ಲಿಟ್ಟುಕೋ.
- 9 ನೀನು ಆರು ದಿನಗಳು ದುಡಿದು ನಿನ್ನ ಕೆಲಸಗಳನ್ನೆಲ್ಲಾ ಮಾಡಿಕೋ.
- 10 ಆದರೆ ಏಳನೆಯ ದಿನವು ನಿನ್ನ ದೇವರಾದ ಕರ್ತನ ಸಬ್ಬತ್ ಆಗಿದೆ. ಅದರಲ್ಲಿ ನೀನಾಗಲಿ ನಿನ್ನ ಮಗನಾಗಲಿ ಮಗಳಾ ಗಲಿ ದಾಸನಾಗಲಿ ದಾಸಿಯಾಗಲಿ ಪಶುಗಳಾಗಲಿ ಬಾಗಿಲ ಬಳಿಯಲ್ಲಿರುವ ಪ್ರವಾಸಿಯಾಗಲಿ ಯಾವ ಕೆಲಸವನ್ನೂ ಮಾಡಬಾರದು.
- 11 ಆರು ದಿನಗಳಲ್ಲಿ ಕರ್ತನು ಆಕಾಶವನ್ನೂ ಭೂಮಿಯನ್ನೂ ಸಮುದ್ರ ವನ್ನೂ ಅವುಗಳಲ್ಲಿ ಇರುವವುಗಳೆಲ್ಲವನ್ನೂ ಉಂಟು ಮಾಡಿ ಏಳೆನೆಯ ದಿನದಲ್ಲಿ ವಿಶ್ರಮಿಸಿಕೊಂಡನು. ಆದದರಿಂದ ಕರ್ತನು ಸಬ್ಬತ್ ದಿನವನ್ನು ಆಶೀರ್ವದಿಸಿ ಅದನ್ನು ಪರಿಶುದ್ಧಮಾಡಿದನು.
- 12 ನಿನ್ನ ಕರ್ತನಾದ ದೇವರು ನಿನಗೆ ಕೊಡುವ ದೇಶದಲ್ಲಿ ನಿನ್ನ ದಿವಸಗಳು ಹೆಚ್ಚಾಗುವಂತೆ ನಿನ್ನ ತಂದೆ ತಾಯಿಗಳನ್ನು ಸನ್ಮಾನಿಸು.
- 13 ಕೊಲೆ ಮಾಡಬಾರದು.
- 14 ವ್ಯಭಿಚಾರ ಮಾಡಬಾರದು.
- 15 ಕದಿಯಬಾರದು.
- 16 ನಿನ್ನ ನೆರೆಯವನಿಗೆ ವಿರೋಧವಾಗಿ ಸುಳ್ಳು ಸಾಕ್ಷಿ ಹೇಳಬಾರದು.
- 17 ನೀನು ನಿನ್ನ ನೆರೆಯವನ ಮನೆಯನ್ನು ಆಶಿಸ ಬಾರದು, ನಿನ್ನ ನೆರೆಯವನ ಹೆಂಡತಿಯನ್ನೂ ಆಶಿಸ ಬಾರದು; ಅವನ ದಾಸನನ್ನಾಗಲಿ ದಾಸಿಯನ್ನಾಗಲಿ ಎತ್ತನ್ನಾಗಲಿ ಕತ್ತೆಯನ್ನಾಗಲಿ ನಿನ್ನ ನೆರೆಯವನಿಗೆ ಇರುವ ಯಾವದನ್ನೂ ಆಶಿಸಬಾರದು ಎಂದು ಹೇಳಿದನು.
- 18 ಜನರೆಲ್ಲಾ ಗುಡುಗುಗಳನ್ನೂ ಮಿಂಚುಗಳನ್ನೂ ತುತೂರಿಯ ಶಬ್ದವನ್ನೂ ಬೆಟ್ಟವು ಹೊಗೆ ಹಾಯು ವದನ್ನೂ ನೋಡಿದರು; ಜನರು ಅದನ್ನು ನೋಡಿ ದೂರ ಹೋಗಿ ನಿಂತುಕೊಂಡರು.
- 19 ಅವರು ಮೋಶೆಗೆ--ನೀನೇ ನಮ್ಮ ಸಂಗಡ ಮಾತನಾಡು, ಆಗ ನಾವು ಕೇಳುವೆವು. ನಾವು ಸಾಯದ ಹಾಗೆ ದೇವರು ನಮ್ಮ ಸಂಗಡ ಮಾತನಾಡದಿರಲಿ ಅಂದರು.
- 20 ಆಗ ಮೋಶೆಯು ಜನರಿಗೆ--ನೀವು ಭಯಪಡ ಬೇಡಿರಿ, ನಿಮ್ಮನ್ನು ಪರೀಕ್ಷಿಸುವದಕ್ಕೂ ನೀವು ಪಾಪ ಮಾಡದಂತೆ ಆತನ ಭಯವು ನಿಮಗಿರುವದಕ್ಕೂ ದೇವರು ಬಂದಿದ್ದಾನೆ ಅಂದನು.
- 21 ಆಗ ಜನರು ದೂರದಲ್ಲಿ ನಿಂತರು. ಮೋಶೆಯು ದೇವರಿದ್ದ ಕಾರ್ಗತ್ತಲೆಯ ಹತ್ತಿರ ಬಂದನು.
- 22 ಕರ್ತನು ಮೋಶೆಗೆ--ನೀನು ಇಸ್ರಾಯೇಲ್ ಮಕ್ಕಳಿಗೆ ಹೀಗೆ ಹೇಳಬೇಕು--ನಾನು ಆಕಾಶದಿಂದ ನಿಮ್ಮ ಸಂಗಡ ಮಾತನಾಡಿದ್ದನ್ನು ನೀವು ನೋಡಿದ್ದೀರಿ.
- 23 ನನ್ನ ಹೊರತಾಗಿ ಬೆಳ್ಳಿ ಬಂಗಾರದ ದೇವರುಗಳನ್ನೂ ನೀವು ಮಾಡಿಕೊಳ್ಳಬಾರದು.
- 24 ನನ್ನ ಯಜ್ಞವೇದಿಯನ್ನು ಮಣ್ಣಿನಿಂದ ಮಾಡ ಬೇಕು. ಅದರ ಮೇಲೆ ನಿನ್ನ ದಹನಬಲಿಗಳನ್ನೂ ಸಮಾಧಾನದ ಬಲಿಗಳನ್ನೂ ಕುರಿಗಳನ್ನೂ ಎತ್ತುಗಳನ್ನೂ ಅರ್ಪಿಸಬೇಕು; ನನ್ನ ಹೆಸರನ್ನು ಜ್ಞಾಪಕಮಾಡುವ ಎಲ್ಲಾ ಸ್ಥಳಗಳಲ್ಲಿ ನಾನು ನಿಮ್ಮ ಬಳಿಗೆ ಬಂದು ನಿಮ್ಮನ್ನು ಆಶೀರ್ವದಿಸುವೆನು.
- 25 ನೀನು ನನಗೆ ಯಜ್ಞವೇದಿ ಯನ್ನು ಕಲ್ಲಿನಿಂದ ಮಾಡಿದರೆ ಅದನ್ನು ಕೆತ್ತಿದ ಕಲ್ಲಿನಿಂದ ಕಟ್ಟಬಾರದು. ಉಳಿಯನ್ನು ಅದರ ಮೇಲೆ ಎತ್ತಿದರೆ ನೀನು ಅದನ್ನು ಅಪವಿತ್ರ ಮಾಡಿದವನಾಗಿದ್ದೀ.
- 26 ಇಲ್ಲವೆ ನೀನು ನನ್ನ ಯಜ್ಞವೇದಿಯ ಮೇಲೆ ನಿನ್ನ ಬೆತ್ತಲೆಯು ಕಾಣುವಂತೆ ಅದರ ಮೆಟ್ಟಲುಗಳನ್ನು ಹತ್ತಬಾರದು ಎಂದು ಹೇಳಿದನು.
Exodus 20
- Details
- Parent Category: Old Testament
- Category: Exodus
ವಿಮೋಚನಕಾಂಡ ಅಧ್ಯಾಯ 20