wheel

AJC Publications and Media Portal

 

But the Comforter, which is the Holy Ghost, whom the Father will send in my name, he shall teach you all things,
and bring all things to your remembrance, whatsoever I have said unto you. John 14:26


ಆದಿಕಾಂಡಅಧ್ಯಾಯ 23
  • 1 ಸಾರಳು ನೂರಿಪ್ಪತ್ತೇಳು ವರುಷದವಳಾ ಗಿದ್ದಳು; ಸಾರಳ ಜೀವನದ ವರುಷ ಗಳು ಇವೇ.
  • 2 ಸಾರಳು ಕಾನಾನ್‌ ದೇಶದಲ್ಲಿರುವ ಹೆಬ್ರೋನ್‌ ಎಂಬ ಕಿರ್ಯತರ್ಬದಲ್ಲಿ ಸತ್ತಳು. ಅಬ್ರಹಾಮನು ಸಾರಳಿಗೋಸ್ಕರ ಗೋಳಾಡುವದಕ್ಕೂ ಅಳುವದಕ್ಕೂ ಬಂದನು.
  • 3 ತರುವಾಯ ಅಬ್ರಹಾಮನು (ತನ್ನ ಹೆಂಡತಿಯ) ಶವದ ಬಳಿಯಿಂದ ಎದ್ದು ಹೇತನ ಮಕ್ಕಳ ಸಂಗಡ ಮಾತನಾಡಿದ್ದೇನಂದರೆ--
  • 4 ನಾನು ನಿಮ್ಮಲ್ಲಿ ಪರದೇಶಸ್ಥನೂ ಪರವಾಸಿಯೂ ಆಗಿದ್ದೇನೆ; ನನಗೆ ನಿಮ್ಮ ಬಳಿಯಲ್ಲಿ ಸಮಾಧಿಯ ಸ್ಥಳವನ್ನು ಕೊಡಿರಿ; ಆಗ ನನ್ನ ಹೆಂಡತಿಯ ಶವವನ್ನು ಕಣ್ಣೆದುರಿಗೆ ಇಡದೆ ಹೂಣಿಡುವೆನು ಅಂದನು.
  • 5 ಹೇತನ ಮಕ್ಕಳು ಅಬ್ರಹಾಮನಿಗೆ ಉತ್ತರಕೊಟ್ಟು ಹೇಳಿದ್ದೇನಂದರೆ--
  • 6 ಒಡೆಯನೇ, ನಮ್ಮ ಮಾತನ್ನು ಕೇಳು; ನೀನು ನಮ್ಮ ಮಧ್ಯದಲ್ಲಿ ಮಹಾಪ್ರಭುವಾಗಿದ್ದೀ; ನಮ್ಮ ಸಮಾಧಿಗಳೊಳಗೆ ಉತ್ತಮವಾದದ್ದರಲ್ಲಿ ನಿನ್ನ ಹೆಂಡತಿಯ ಶವವನ್ನು ಹೂಣಿಡು. ನೀನು ನಿನ್ನ ಹೆಂಡತಿಯ ಶವವನ್ನು ಹೂಣಿಡದ ಹಾಗೆ ನಮ್ಮಲ್ಲಿ ಒಬ್ಬನಾದರೂ ತನ್ನ ಸಮಾಧಿಯನ್ನು ಕೊಡುವದಿಲ್ಲ ವೆಂದು ಹೇಳಲಾರನು.
  • 7 ಆಗ ಅಬ್ರಹಾಮನು ಎದ್ದು ಹೇತನ ಮಕ್ಕಳಾದ ಆ ದೇಶದ ಜನರ ಮುಂದೆ ಬಾಗಿ
  • 8 ಅವರ ಸಂಗಡ ಮಾತನಾಡಿದ್ದೇ ನಂದರೆ--ನಾನು ನನ್ನ ಹೆಂಡತಿಯ ಶವವನ್ನು ನನ್ನೆದುರಿನಿಂದ ಹೂಣಿಡುವದು ನಿಮ್ಮ ಮನಸ್ಸಿಗೆ ಸರಿಬಿದ್ದರೆ ನನ್ನ ಮಾತು ಕೇಳಿ ಚೋಹರನ ಮಗನಾದ ಎಫ್ರೋನನನ್ನು ನನಗಾಗಿ ಬೇಡಿಕೊಳ್ಳಿರಿ.
  • 9 ಅವನು ತನ್ನ ಹೊಲದ ಅಂಚಿನಲ್ಲಿರುವ ಮಕ್ಪೇಲ ಗವಿಯನ್ನು ನನಗೆ ಕೊಡಲಿ; ಅವನು ಅದನ್ನು ತಕ್ಕ ಕ್ರಯಕ್ಕೆ ನಿಮ್ಮ ಎದುರಿನಲ್ಲಿ ನನಗೆ ಕೊಡಲಿ ಅಂದನು.
  • 10 ಆಗ ಎಫ್ರೋನನು ಹೇತನ ಮಕ್ಕಳ ಮಧ್ಯದಲ್ಲಿ ವಾಸವಾಗಿದ್ದನು. ಹಿತ್ತೀಯನಾದ ಎಫ್ರೋನನು ಅಬ್ರಹಾಮನಿಗೆ ಪ್ರತ್ಯುತ್ತರವಾಗಿ ಅವನ ಪಟ್ಟಣದ ಹೆಬ್ಬಾಗಿಲಿನಲ್ಲಿ ಕೂಡಿಕೊಂಡು ಹೇತನ ಮಕ್ಕಳು ಕೇಳುವಂತೆ ಹೇಳಿದ್ದೇನಂದರೆ--
  • 11 ಒಡೆಯನೇ, ಹಾಗಲ್ಲ; ನನ್ನ ಮಾತನ್ನು ಕೇಳು; ಆ ಹೊಲವನ್ನು ಅದರಲ್ಲಿರುವ ಗವಿಯನ್ನೂ ನಿನಗೆ ಕೊಡುತ್ತೇನೆ; ಅದನ್ನು ನನ್ನ ಜನರ ಎದುರಿನಲ್ಲಿ ನಿನಗೆ ಕೊಡುತ್ತೇನೆ; ನಿನ್ನ ಹೆಂಡತಿಯ ಶವವನ್ನು ಹೂಣಿಡು ಅಂದನು.
  • 12 ಆಗ ಅಬ್ರಹಾಮನು ಆ ದೇಶದ ಜನರ ಮುಂದೆ ಬಾಗಿ ಕೊಂಡನು.
  • 13 ಅವನು ದೇಶದ ಜನರು ಕೇಳುವಂತೆ ಎಫ್ರೋನನಿಗೆ ಹೇಳಿದ್ದೇನಂದರೆ--ನೀನು ನನಗೆ ಕೊಡಬೇಕೆಂದಿದ್ದರೆ ನನ್ನ ಮಾತನ್ನು ಕೇಳು; ನಾನು ಹೊಲದ ಕ್ರಯವನ್ನು ಕೊಡುತ್ತೇನೆ; ಅದನ್ನು ನನ್ನಿಂದ ತಕ್ಕೋ, ಆಗ ನನ್ನ ಹೆಂಡತಿಯ ಶವವನ್ನು ಅಲ್ಲಿ ಹೂಣಿಡುವೆನು ಅಂದನು.
  • 14 ಆಗ ಎಫ್ರೋನನು ಅಬ್ರಹಾಮನಿಗೆ ಪ್ರತ್ಯುತ್ತರವಾಗಿ ಹೇಳಿದ್ದೇನಂದರೆ--
  • 15 ಒಡೆಯನೇ, ನನ್ನ ಮಾತನ್ನು ಕೇಳು, ಆ ಭೂಮಿಯು ನಾನೂರು ಬೆಳ್ಳಿಯ ಶೆಕೆಲ್‌ ಬೆಲೆಯುಳ್ಳದ್ದು; ಅದು ನನಗೂ ನಿನಗೂ ಏನು? ನಿನ್ನ ಹೆಂಡತಿಯ ಶವವನ್ನು ಹೂಣಿಡು ಅಂದನು.
  • 16 ಅಬ್ರಹಾಮನು ಎಫ್ರೋನನ ಮಾತನ್ನು ಕೇಳಿದನು. ಆದದರಿಂದ ಹೇತನ ಮಕ್ಕಳಿಗೆ ಕೇಳುವಂತೆ ಎಫ್ರೋನನು ಹೇಳಿದ ಬೆಲೆ ಅಂದರೆ ವರ್ತಕರಲ್ಲಿ ನಡಿಯುವ ನಾಲ್ಕುನೂರು ಶೆಕೆಲು (ಬೆಳ್ಳಿಯನ್ನು) ತೂಗಿ ಅವನಿಗೆ ಕೊಟ್ಟನು.
  • 17 ಹೀಗೆ ಮಮ್ರೆಗೆ ಎದುರಾಗಿರುವ ಮಕ್ಪೇಲದಲ್ಲಿರುವ ಎಫ್ರೋ ನನ ಹೊಲವೂ ಆ ಹೊಲದಲ್ಲಿರುವ ಗವಿಯೂ ಆ ಹೊಲದ ಸುತ್ತಲೂ ಇರುವ ಎಲ್ಲಾ ಮರಗಳೂ
  • 18 ಹೇತನ ಮಕ್ಕಳ ಮುಂದೆಯೂ ಅವನ ಪಟ್ಟಣದ ಹೆಬ್ಬಾಗಿಲಿನಲ್ಲಿ ಸೇರುವ ಎಲ್ಲರ ಮುಂದೆಯೂ ಅಬ್ರಹಾಮನ ಆಸ್ತಿಯೆಂದು ಸ್ಥಿರಮಾಡಲ್ಪಟ್ಟಿತು.
  • 19 ಇದಾದ ಮೇಲೆ ಅಬ್ರಹಾಮನು ತನ್ನ ಹೆಂಡತಿ ಯಾದ ಸಾರಳನ್ನು ಕಾನಾನ್‌ ದೇಶದಲ್ಲಿ ಹೆಬ್ರೋನ್‌ ಎಂಬ ಮಮ್ರೆಗೆ ಎದುರಾಗಿರುವ ಮಕ್ಪೇಲದ ಹೊಲದ ಗವಿಯಲ್ಲಿ ಹೂಣಿಟ್ಟನು.
  • 20 ಆ ಹೊಲವೂ ಅದರ ಲ್ಲಿರುವ ಗವಿಯೂ ಹೇತನ ಮಕ್ಕಳಿಂದ ಅಬ್ರಹಾಮನಿಗೆ ಸ್ವಂತ ಸಮಾಧಿಯ ಸ್ವಾಸ್ಥ್ಯವಾಗಿ ಸ್ಥಿರಮಾಡಲ್ಪಟ್ಟಿತು.