- 1 ಅಬ್ರಹಾಮನ ದಿನಗಳಲ್ಲಿ ಬಂದ ಮೊದಲನೆಯ ಬರವಲ್ಲದೆ ದೇಶದಲ್ಲಿ ಮತ್ತೊಂದು ಬರ ಬಂದಿತು. ಆಗ ಇಸಾಕನು ಗೆರಾರಿನಲ್ಲಿದ್ದ ಫಿಲಿಷ್ಟಿಯರ ಅರಸನಾದ ಅಬೀಮೆಲೆಕನ ಬಳಿಗೆ ಹೋದನು.
- 2 ಆಗ ಕರ್ತನು ಅವನಿಗೆ ಕಾಣಿಸಿಕೊಂಡು--ಐಗುಪ್ತಕ್ಕೆ ಇಳಿದು ಹೋಗಬೇಡ. ನಾನು ನಿನಗೆ ಹೇಳುವ ದೇಶದಲ್ಲಿ ವಾಸವಾಗಿರು.
- 3 ನೀನು ಈ ದೇಶದಲ್ಲಿ ಪ್ರವಾಸಿಯಾಗಿರು; ನಾನು ನಿನ್ನ ಸಂಗಡ ಇದ್ದು ನಿನ್ನನ್ನು ಆಶೀರ್ವದಿಸುವೆನು. ನಿನಗೂ ನಿನ್ನ ಸಂತಾನಕ್ಕೂ ಈ ಪ್ರದೇಶಗಳನ್ನೆಲ್ಲಾ ಕೊಡುವೆನು. ನಿನ್ನ ತಂದೆಯಾದ ಅಬ್ರಹಾಮನಿಗೆ ನಾನು ಮಾಡಿದ ಪ್ರಮಾಣವನ್ನು ಈಡೇರಿಸುವೆನು.
- 4 ನಿನ್ನ ಸಂತತಿಯನ್ನು ಆಕಾಶದ ನಕ್ಷತ್ರಗಳಂತೆ ಹೆಚ್ಚಿಸುವೆನು. ನಿನ್ನ ಸಂತತಿಗೆ ಈ ಪ್ರದೇಶಗಳನ್ನೆಲ್ಲಾ ಕೊಡುವೆನು. ನಿನ್ನ ಸಂತತಿಯಲ್ಲಿ ಭೂಮಿಯ ಜನಾಂಗ ಗಳೆಲ್ಲಾ ಆಶೀರ್ವದಿಸಲ್ಪಡುವವು.
- 5 ಅಬ್ರಹಾಮನು ನನ್ನ ಮಾತಿಗೆ ವಿಧೇಯನಾಗಿ ನನ್ನ ನೇಮವಿಧಿ ಆಜ್ಞೆ ಕಟ್ಟಳೆಗಳನ್ನು ಕೈಕೊಂಡನು ಅಂದನು.
- 6 ಆಗ ಇಸಾಕನು ಗೆರಾರಿನಲ್ಲಿ ವಾಸವಾಗಿದ್ದನು.
- 7 ಆ ಸ್ಥಳದ ಮನುಷ್ಯರು ಅವನ ಹೆಂಡತಿಯ ವಿಷಯದಲ್ಲಿ ವಿಚಾರಿಸಿದಾಗ ಅವನು--ರೆಬೆಕ್ಕಳು ನೋಟಕ್ಕೆ ಸೌಂದರ್ಯಳಾಗಿದ್ದರಿಂದ ಈಕೆಯ ನಿಮಿತ್ತ ಆ ಸ್ಥಳದ ಜನರು ತನ್ನನ್ನು ಕೊಂದಾರೆಂದು ಆಕೆಯು ತನ್ನ ಹೆಂಡತಿಯೆಂದು ಹೇಳುವದಕ್ಕೆ ಅಂಜಿ ಅವನು--ಆಕೆಯು ನನ್ನ ತಂಗಿ ಅಂದನು.
- 8 ಅವನು ಅಲ್ಲಿ ಬಹಳ ದಿನಗಳಿದ್ದ ಮೇಲೆ ಆದದ್ದೇನಂದರೆ, ಫಿಲಿಷ್ಟಿಯರ ಅರಸನಾದ ಅಬೀಮೆಲೆ ಕನು ಕಿಟಕಿಯಿಂದ ನೋಡುತ್ತಿದಾಗ ಅಗೋ, ಇಸಾಕನು ತನ್ನ ಹೆಂಡತಿಯಾದ ರೆಬೆಕ್ಕಳ ಸಂಗಡ ಸರಸವಾಡುತ್ತಿದ್ದನು.
- 9 ಆಗ ಅಬೀಮೆಲೆಕನು ಇಸಾಕ ನನ್ನು ಕರೆದು--ಅಗೋ, ಆಕೆಯು ಖಂಡಿತ ನಿನ್ನ ಹೆಂಡತಿಯಾಗಿದ್ದಾಳೆ. ಆದರೆ ನೀನು--ಆಕೆಯು ನನ್ನ ತಂಗಿ ಎಂದು ಯಾಕೆ ಹೇಳಿದಿ ಅಂದನು. ಇಸಾಕನು ಅವನಿಗೆ--ನಾನು ಆಕೆಯ ನಿಮಿತ್ತ ಸಾಯಬಾರ ದೆಂದು ಹಾಗೆ ಹೇಳಿದೆನು ಅಂದನು.
- 10 ಆಗ ಅಬೀಮೆಲೆಕನು--ನೀನು ನಮಗೆ ಮಾಡಿದ್ದೇನು? ಜನರಲ್ಲಿ ಒಬ್ಬನು ನಿನ್ನ ಹೆಂಡತಿಯ ಸಂಗಡ ಮಲಗಿದ್ದರೆ ನೀನು ನಮ್ಮ ಮೇಲೆ ಅಪರಾಧವನ್ನು ಬರಮಾಡುತ್ತಿದ್ದೆಯಲ್ಲಾ ಅಂದನು.
- 11 ಅಬೀಮೆಲೆಕನು ತನ್ನ ಜನರಿಗೆಲ್ಲಾ--ಈ ಮನುಷ್ಯನನ್ನಾಗಲಿ ಅವನ ಹೆಂಡತಿಯನ್ನಾಗಲಿ ಮುಟ್ಟುವವನು ಖಂಡಿತವಾಗಿ ಸಾಯಬೇಕು ಎಂದು ಅಪ್ಪಣೆಕೊಟ್ಟನು.
- 12 ಇದಲ್ಲದೆ ಇಸಾಕನು ಆ ದೇಶದಲ್ಲಿ ಬಿತ್ತಿದ ವರುಷದಲ್ಲಿಯೇ ನೂರರಷ್ಟು ಫಲವನ್ನು ಹೊಂದಿ ದನು. ಕರ್ತನು ಅವನನ್ನು ಆಶೀರ್ವದಿಸಿದನು.
- 13 ಅವನು ಅತಿ ದೊಡ್ಡವನಾಗುವ ವರೆಗೆ ಕ್ರಮೇಣ ಅಭಿವೃದ್ಧಿಯಾಗುತ್ತಾ ಬಂದನು.
- 14 ಅವನಿಗೆ ಕುರಿ ಮಂದೆಗಳೂ ದನಗಳ ಹಿಂಡೂ ಬಹಳ ಮಂದಿ ಸೇವಕರೂ ಇದ್ದರು. ಆದದರಿಂದ ಫಿಲಿಷ್ಟಿಯರು ಅವನ ಮೇಲೆ ಹೊಟ್ಟೇಕಿಚ್ಚುಪಟ್ಟರು.
- 15 ಅವನ ತಂದೆಯಾದ ಅಬ್ರಹಾಮನ ದಿನಗಳಲ್ಲಿ ಅಬ್ರಹಾಮನ ಸೇವಕರು ಅಗಿದ ಬಾವಿಗಳನ್ನೆಲ್ಲಾ ಫಿಲಿಷ್ಟಿಯರು ಮಣ್ಣಿನಿಂದ ಮುಚ್ಚಿದರು.
- 16 ಆಗ ಅಬೀಮೆಲೆಕನು ಇಸಾಕನಿಗೆ--ನೀನು ನಮಗಿಂತ ಬಲಿಷ್ಟನಾದಿ ಆದುದ ರಿಂದ ನಮ್ಮ ಬಳಿಯಿಂದ ಹೋಗು, ಅಂದನು.
- 17 ಆಗ ಇಸಾಕನು ಅಲ್ಲಿಂದ ಹೋಗಿ ಗೆರಾರಿನ ತಗ್ಗಿನಲ್ಲಿ ಗುಡಾರ ಹಾಕಿ ಅಲ್ಲಿ ವಾಸಮಾಡಿದನು.
- 18 ಇದಲ್ಲದೆ ಇಸಾಕನು ತನ್ನ ತಂದೆಯಾದ ಅಬ್ರಹಾ ಮನ ದಿನಗಳಲ್ಲಿ ಅಗಿದಂಥ ಬಾವಿಗಳನ್ನು ತಿರಿಗಿ ಅಗಿದನು. ಯಾಕಂದರೆ ಅಬ್ರಹಾಮನು ಸತ್ತ ಮೇಲೆ ಫಿಲಿಷ್ಟಿಯರು ಅವುಗಳನ್ನು ಮುಚ್ಚಿದ್ದರು. ಅವುಗಳಿಗೆ ತನ್ನ ತಂದೆಯು ಕೊಟ್ಟ ಹೆಸರುಗಳ ಪ್ರಕಾರವೇ ಅವನು ಅವುಗಳಿಗೆ ಹೆಸರು ಕೊಟ್ಟನು.
- 19 ಇಸಾಕನ ಸೇವಕರು ತಗ್ಗಿನಲ್ಲಿ ಅಗಿದಾಗ ಅಲ್ಲಿ ಅವರಿಗೆ ಒಂದು ಉಕ್ಕುವ ಒರತೆಯ ಬಾವಿಯು ಸಿಕ್ಕಿತು.
- 20 ಗೆರಾರಿನ ಮಂದೆಯನ್ನು ಮೇಯಿಸುವವರು --ಈ ನೀರು ನಮ್ಮದು ಎಂದು ಇಸಾಕನ ಮಂದೆಯನ್ನು ಮೇಯಿಸುವವರ ಸಂಗಡ ಜಗಳವಾಡಿದರು. ಅವರು ಅವನ ಸಂಗಡ ಜಗಳವಾಡಿದ ಕಾರಣ ಅವನು ಆ ಬಾವಿಗೆ ಏಸೆಕ್ ಎಂದು ಹೆಸರಿಟ್ಟನು.
- 21 ತರುವಾಯ ಅವರು ಇನ್ನೊಂದು ಬಾವಿಯನ್ನು ಅಗಿದಾಗ ಅದಕ್ಕಾಗಿಯೂ ಅವರು ಜಗಳವಾಡಿದಾಗ ಅವನು ಅದಕ್ಕೆ ಸಿಟ್ನಾ ಎಂದು ಹೆಸರಿಟ್ಟನು.
- 22 ಅಲ್ಲಿಂದ ಅವನು ಹೊರಟುಹೋಗಿ ಇನ್ನೊಂದು ಬಾವಿಯನ್ನು ಅಗಿದಾಗ ಅದಕ್ಕಾಗಿ ಅವರು ಜಗಳವಾಡಲಿಲ್ಲ. ಅದಕ್ಕೆ ಅವನು--ಈಗ ಕರ್ತನು ನಮಗೆ ಸ್ಥಳವನ್ನು ಮಾಡಿದ್ದಾನೆ; ನಾವು ಈ ದೇಶದಲ್ಲಿ ಅಭಿವೃದ್ಧಿ ಯಾಗುವೆವು ಎಂದು ಹೇಳಿ ಅದಕ್ಕೆ ರೆಹೋಬೋತ್ ಎಂದು ಹೆಸರಿಟ್ಟನು.
- 23 ಅಲ್ಲಿಂದ ಅವನು ಬೇರ್ಷೆಬಕ್ಕೆ ಏರಿಹೋದನು.
- 24 ಅದೇ ರಾತ್ರಿಯಲ್ಲಿ ಕರ್ತನು ಅವನಿಗೆ ಕಾಣಿಸಿ ಕೊಂಡು--ನಿನ್ನ ತಂದೆಯಾದ ಅಬ್ರಹಾಮನ ದೇವರು ನಾನೇ; ಭಯಪಡಬೇಡ; ನಾನು ನಿನ್ನ ಸಂಗಡ ಇದ್ದೇನೆ; ನನ್ನ ದಾಸನಾದ ಅಬ್ರಹಾಮನಿಗೋಸ್ಕರ ನಿನ್ನನ್ನು ಆಶೀರ್ವದಿಸಿ ನಿನ್ನ ಸಂತತಿಯನ್ನು ಹೆಚ್ಚಿಸುವೆನು ಅಂದನು.
- 25 ಆಗ ಅವನು ಬಲಿಪೀಠವನ್ನು ಕಟ್ಟಿ ಕರ್ತನ ಹೆಸರನ್ನು ಹೇಳಿಕೊಂಡು ಅಲ್ಲಿ ತನ್ನ ಗುಡಾರ ವನ್ನು ಹಾಕಿದನು. ಆಗ ಇಸಾಕನ ಸೇವಕರು ಅಲ್ಲಿ ಒಂದು ಬಾವಿಯನ್ನು ಅಗಿದರು.
- 26 ತರುವಾಯ ಅಬೀಮೆಲೆಕನೂ ಅವನ ಸ್ನೇಹಿತರಲ್ಲಿ ಒಬ್ಬನಾದ ಅಹುಜ್ಜತನೂ ಅವನ ಮುಖ್ಯ ಸೈನ್ಯಾಧಿಪತಿ ಯಾದ ಫೀಕೋಲನೂ ಗೆರಾರಿನಿಂದ ಅವನ ಬಳಿಗೆ ಬಂದರು.
- 27 ಇಸಾಕನು ಅವರಿಗೆ--ನನ್ನ ಬಳಿಗೆ ನೀವು ಯಾಕೆ ಬಂದಿದ್ದೀರಿ? ನೀವು ನನ್ನನ್ನು ಹಗೆಮಾಡಿ ನಿಮ್ಮ ಬಳಿಯಿಂದ ನನ್ನನ್ನು ಕಳುಹಿಸಿ ಬಿಟ್ಟಿರಲ್ಲಾ ಅಂದನು.
- 28 ಅದಕ್ಕೆ ಅವರು--ನಿಶ್ಚಯವಾಗಿ ಕರ್ತನು ನಿನ್ನ ಸಂಗಡ ಇದ್ದಾನೆಂದು ತಿಳಿದು ನಮಗೂ ನಿನಗೂ ಮಧ್ಯದಲ್ಲಿ ಒಂದು ಪ್ರಮಾಣ ವಿರುವ ಹಾಗೆ ನಿನ್ನ ಸಂಗಡ ಒಡಂಬಡಿಕೆ ಮಾಡಿ ಕೊಳ್ಳೋಣವೆಂದು ನಾವು ಅಂದುಕೊಂಡೆವು;
- 29 ಅದೇನಂದರೆ--ನಾವು ನಿನ್ನನ್ನು ಮುಟ್ಟದೆ ನಿನಗೆ ಒಳ್ಳೇದನ್ನೇ ಮಾಡಿ ನಿನ್ನನ್ನು ಸಮಾಧಾನದಿಂದ ಕಳುಹಿಸಿದ ಹಾಗೆ ನೀನು ನಮಗೂ ಕೇಡು ಮಾಡಬಾರದು; ನೀನು ಈಗ ಕರ್ತನಿಂದ ಆಶೀರ್ವದಿ ಸಲ್ಪಟ್ಟವನಾಗಿದ್ದೀ ಅಂದರು.
- 30 ಆಗ ಅವನು ಅವರಿಗೆ ಔತಣವನ್ನು ಮಾಡಿಸಿದನು. ಅವರು ತಿಂದು ಕುಡಿದರು;
- 31 ಬೆಳಿಗ್ಗೆ ಎದ್ದು ಒಬ್ಬರಿಗೊಬ್ಬರು ಪ್ರಮಾಣಮಾಡಿಕೊಂಡರು. ಆಗ ಇಸಾಕನು ಅವರನ್ನು ಕಳುಹಿಸಿಕೊಟ್ಟನು. ಅವರು ಸಮಾಧಾನದೊಡನೆ ಅವನ ಬಳಿಯಿಂದ ಹೊರಟುಹೋದರು.
- 32 ಅದೇ ದಿನದಲ್ಲಿ ಆದದ್ದೇನಂದರೆ, ಇಸಾಕನ ಸೇವಕರು ಬಂದು ತಾವು ಅಗಿದ ಬಾವಿಯಲ್ಲಿ ನೀರು ಸಿಕ್ಕಿತೆಂದು ಅವನಿಗೆ ಹೇಳಿದರು.
- 33 ಅದಕ್ಕೆ ಅವನು ಷಿಬಾ ಎಂದು ಹೆಸರಿಟ್ಟನು. ಆದದರಿಂದ ಇಂದಿನ ವರೆಗೂ ಬೇರ್ಷೆಬ ಎಂದು ಆ ಪಟ್ಟಣಕ್ಕೆ ಹೆಸರಾಯಿತು.
- 34 ಏಸಾವನು ನಾಲ್ವತ್ತು ವರುಷದವನಾಗಿದ್ದಾಗ ಹಿತ್ತಿಯನಾದ ಬೇರಿಯನ ಮಗಳಾದ ಯೆಹೂದೀತ ಳನ್ನೂ ಹಿತ್ತಿಯನಾದ ಏಲೋನನ ಮಗಳಾದ ಬಾಸೆಮತಳನ್ನೂ ಹೆಂಡತಿಯರನ್ನಾಗಿ ತಕ್ಕೊಂಡನು.
- 35 ಇವರು ಇಸಾಕನಿಗೂ ರೆಬೆಕ್ಕಳಿಗೂ ಮನೋವ್ಯಥೆ ಯಾಗಿದ್ದರು.
Genesis 26
- Details
- Parent Category: Old Testament
- Category: Genesis
ಆದಿಕಾಂಡ ಅಧ್ಯಾಯ 26