- 1 ಎದೋಮ್ ಎಂಬ ಏಸಾವನ ವಂಶಾವಳಿಗಳು ಇವೇ:
- 2 ಏಸಾವನು ಕಾನಾನ್ಯರ ಕುಮಾರ್ತೆಯರನ್ನು ಅಂದರೆ ಹಿತ್ತಿಯನಾದ ಏಲೋನನ ಮಗಳಾದ ಆದಾ, ಹಿವ್ವಿಯನಾದ ಸಿಬೆಯೋನನ ಮಗಳಾದ ಅನಾಹಳ ಮಗಳಾಗಿದ್ದ ಒಹೊಲೀಬಾಮ,
- 3 ಇಷ್ಮಾಯೇಲನ ಮಗಳೂ ನೆಬಾಯೋತನ ಸಹೋ ದರಿಯೂ ಆಗಿದ್ದ ಬಾಸೆಮತ್ ಇವರನ್ನು ತನ್ನ ಹೆಂಡತಿಯರನ್ನಾಗಿ ತಕ್ಕೊಂಡನು.
- 4 ಆದಾ ಎಂಬಾಕೆಯು ಏಸಾವನಿಗೆ ಎಲೀಫಜನನ್ನು ಹೆತ್ತಳು. ಬಾಸೆಮತಳು ರೆಗೂವೇಲನನ್ನು ಹೆತ್ತಳು.
- 5 ಒಹೊಲೀಬಾಮಳು ಯೆಗೂಷನನ್ನು ಯಳಾಮನನ್ನು ಕೋರಹನನ್ನು ಹೆತ್ತಳು. ಇವರು ಕಾನಾನ್ ದೇಶದಲ್ಲಿ ಏಸಾವನಿಗೆ ಹುಟ್ಟಿದ ಕುಮಾರರು.
- 6 ತರುವಾಯ ಏಸಾವನು ತನ್ನ ಹೆಂಡತಿಯರನ್ನೂ ಕುಮಾರ ಕುಮಾರ್ತೆಯರನ್ನೂ ತನ್ನ ಮನೆಯಲ್ಲಿದ್ದ ಎಲ್ಲಾ ಮನುಷ್ಯರನ್ನೂ ತನ್ನ ಹಿಂಡುಗಳನ್ನೂ ತನ್ನ ಎಲ್ಲಾ ದನಗಳನ್ನೂ ಕಾನಾನ್ ದೇಶದಲ್ಲಿ ತಾನು ಸಂಪಾದಿಸಿದ್ದ ಎಲ್ಲಾ ಸಂಪತ್ತನ್ನೂ ತೆಗೆದುಕೊಂಡು ತನ್ನ ಸಹೋದರನಾದ ಯಾಕೋಬನ ಎದುರಿನಿಂದ ಮತ್ತೊಂದು ದೇಶಕ್ಕೆ ಹೋದನು.
- 7 ಅವರು ಕೂಡಿ ಇರುವದಕ್ಕೆ ಆಗದಷ್ಟು ಅವರ ಸಂಪತ್ತು ಅಭಿವೃದ್ಧಿ ಯಾಗಿತ್ತು. ಅವರ ಹಿಂಡುಗಳಿಗೋಸ್ಕರ ಅವರು ಪ್ರವಾಸವಾಗಿದ್ದ ದೇಶವು ಅವರಿಗೆ ಸಾಲದೆ ಹೋಯಿತು.
- 8 ಹೀಗೆ ಏಸಾವನು ಸೇಯಾರ್ ಪರ್ವತದಲ್ಲಿ ವಾಸವಾಗಿದ್ದನು. ಏಸಾವನೇ ಎದೋಮನು.
- 9 ಸೇಯಾರ್ ಪರ್ವತದಲ್ಲಿರುವ ಎದೋಮ್ಯರ ತಂದೆಯಾದ ಏಸಾವನ ವಂಶಾವಳಿಗಳು ಇವೇ:
- 10 ಏಸಾವನ ಕುಮಾರರ ಹೆಸರುಗಳು ಯಾವವಂದರೆ: ಏಸಾವನ ಹೆಂಡತಿಯಾಗಿರುವ ಆದಾಳ ಮಗನಾಗಿರುವ ಎಲೀಫಜನು, ಏಸಾವನ ಹೆಂಡತಿಯಾದ ಬಾಸೆಮತಳ ಮಗನಾದ ರೆಗೂವೇಲನು.
- 11 ಎಲೀಫಜನ ಮಕ್ಕಳು ಯಾರಂದರೆ: ತೇಮಾನ್ ಓಮಾರ್ ಚೆಫೋ ಗತಾಮ್ ಕೆನಜ್;
- 12 ತಿಮ್ನಳು ಏಸಾವನ ಮಗನಾದ ಎಲೀಫಜನಿಗೆ ಉಪಪತ್ನಿ ಯಾಗಿದ್ದು ಅಮಾಲೇಕನನ್ನು ಹೆತ್ತಳು. ಏಸಾವನ ಹೆಂಡತಿಯಾಗಿದ್ದ ಆದಾಳ ಕುಮಾರರು ಇವರೇ.
- 13 ರೆಗೂವೇಲನ ಮಕ್ಕಳು ಯಾರಂದರೆ: ನಹತ್ ಜೆರಹ ಶಮ್ಮಾ ಮಿಜ್ಜಾ; ಇವರು ಏಸಾವನ ಹೆಂಡತಿ ಯಾದ ಬಾಸೆಮತಳ ಕುಮಾರರು.
- 14 ಏಸಾವನ ಹೆಂಡತಿಯಾಗಿದ್ದ ಸಿಬೆಯೋನನ ಮಗಳಾಗಿರುವ ಅನಾಹಳ ಮಗಳಾದ ಒಹೊಲೀ ಬಾಮಳ ಕುಮಾರರು ಯಾರಂದರೆ: ಆಕೆಯು ಏಸಾವನಿಗೆ ಯೆಗೂಷನನ್ನು ಯಳಾಮನನ್ನು ಕೋರಹನನ್ನು ಹೆತ್ತಳು.
- 15 ಏಸಾವನ ಕುಮಾರರ ಮುಖಂಡರು ಯಾರಂದರೆ: ಏಸಾವನ ಚೊಚ್ಚಲ ಮಗನಾಗಿರುವ ಎಲೀಫಜನ ಮಕ್ಕಳಾದ ತೇಮಾನ್ ಓಮಾರ್ ಚೆಫೋ ಕೆನಜ್
- 16 ಕೋರಹ ಗತಾಮ್ ಅಮಾಲೇಕ್ ಎದೋಮ್ಯ ದೇಶದಲ್ಲಿದ್ದ ಎಲೀಫಜನಿಂದ ಬಂದ ಮುಖಂಡರು ಇವರೇ. ಇವರು ಆದಾಳ ಕುಮಾರರು.
- 17 ಏಸಾವನ ಮಗನಾದ ರೆಗೂವೇಲನ ಕುಮಾರರು ಯಾರಂದರೆ: ನಹತ್, ಜೆರಹ, ಶಮ್ಮಾ, ಮಿಜ್ಜಾ; ಎದೋಮ್ ದೇಶದಲ್ಲಿದ್ದ ರೆಗೂವೇಲನಿಂದ ಬಂದ ಮುಖಂಡರು ಇವರೇ. ಇವರು ಏಸಾವನ ಹೆಂಡತಿ ಯಾದ ಬಾಸೆಮತಳ ಕುಮಾರರು.
- 18 ಏಸಾವನ ಹೆಂಡತಿಯಾದ ಒಹೊಲೀಬಾಮಳ ಕುಮಾರರ ಮುಖಂಡರು ಯಾರಂದರೆ: ಯೆಗೂಷ ಯಳಾಮ ಕೋರಹ ಇವರೇ. ಏಸಾವನ ಹೆಂಡತಿ ಯಾದ ಅನಾಹಳ ಮಗಳಾದ ಒಹೊಲೀಬಾಮಳಿಂದ ಬಂದ ಮುಖಂಡರು.
- 19 ಇವರು ಎದೋಮ್ ಎಂಬ ಏಸಾವನ ಕುಮಾರರು; ಇವರೇ ಅವರ ಮುಖಂಡರು.
- 20 ಹೋರಿಯನಾದ ಸೇಯಾರನ ಕುಮಾರರೂ ದೇಶದ ನಿವಾಸಿಗಳೂ ಯಾರಂದರೆ: ಲೋಟಾನ್ ಶೋಬಾಲ್ ಸಿಬೆಯೋನ್ ಅನಾಹ
- 21 ದೀಶೋನ್ ಏಚೆರ್ ದೀಶಾನ್ ಇವರು ಎದೋಮ್ ದೇಶದಲ್ಲಿದ್ದ ಸೇಯಾರನ ಮಕ್ಕಳಾದ ಹೋರಿಯರ ಮುಖಂಡರು.
- 22 ಲೋಟಾನನ ಕುಮಾರರು ಯಾರಂದರೆ: ಹೋರಿ ಹೇಮಾಮ್ ಲೋಟಾನನ ಸಹೋದರಿ ಯಾದ ತಿಮ್ನಾ.
- 23 ಶೋಬಾಲನ ಮಕ್ಕಳು ಯಾರಂದರೆ: ಅಲ್ವಾನ್ ಮಾನಹತ್ ಗೇಬಾಲ್ ಶೆಫೋ ಮತ್ತು ಓನಾಮ್.
- 24 ಸಿಬೆಯೋನನ ಮಕ್ಕಳು ಯಾರಂದರೆ: ಅಯ್ಯಾ ಮತ್ತು ಅನಾಹ ಎಂಬವರು. ತನ್ನ ತಂದೆಯಾದ ಸಿಬೆಯೋನನ ಕತ್ತೆಗಳನ್ನು ಕಾಯುವಾಗ ಅರಣ್ಯದಲ್ಲಿ ಹೇಸರಕತ್ತೆಗಳನ್ನು ಕಂಡುಕೊಂಡವನು ಈ ಅನಾಹನೇ.
- 25 ಅನಾಹನ ಮಕ್ಕಳು ಯಾರಂದರೆ: ದೀಶೋನ್ ಮತ್ತು ಅನಾಹನ ಮಗಳಾದ ಒಹೊಲೀಬಾಮಳು.
- 26 ದೀಶೋನನ ಮಕ್ಕಳು ಯಾರಂದರೆ: ಹೆಮ್ದಾನ್ ಎಷ್ಬಾನ್ ಇತ್ರಾನ್ ಕೆರಾನ್.
- 27 ಏಚೆರನ ಮಕ್ಕಳು ಯಾರಂದರೆ: ಬಿಲ್ಹಾನ್ ಜಾವಾನ್ ಆಕಾನ್.
- 28 ದೀಶಾನನ ಮಕ್ಕಳು ಯಾರಂದರೆ: ಊಚ್ ಅರಾನ್.
- 29 ಹೋರಿಯರಿಂದ ಬಂದ ಮುಖಂಡರು ಯಾರಂದರೆ: ಲೋಟಾನ್ ಶೋಬಾಲ್ ಸಿಬೆಯೋನ್ ಅನಾಹ.
- 30 ದೀಶೋನ್ ಏಚೆರ್ ದೀಶಾನ್ ಇವರೇ. ಇವರು ಸೇಯಾರ್ ದೇಶದಲ್ಲಿ ಮುಖಂಡರಾಗಿದ್ದ ಹೋರಿಯರಿಂದ ಬಂದ ಮುಖಂಡರು.
- 31 ಇಸ್ರಾಯೇಲ್ ಮಕ್ಕಳನ್ನು ಯಾವ ಅರಸನೂ ಆಳುವದಕ್ಕಿಂತ ಮುಂಚೆ ಎದೋಮ್ ದೇಶದಲ್ಲಿ ಆಳಿದ ಅರಸರು ಇವರೇ.
- 32 ಎದೋಮಿನಲ್ಲಿ ಬೆಯೋರನ ಮಗನಾದ ಬೆಲಗನು ಆಳಿದನು; ಅವನ ಪಟ್ಟಣದ ಹೆಸರು ದಿನ್ಹಾಬಾ.
- 33 ಬೆಲಗನು ಸತ್ತ ಮೇಲೆ ಅವನ ಬದಲಾಗಿ ಬೊಚ್ರದವನಾದ ಜೆರಹನ ಮಗನಾದ ಯೋಬಾಬನು ಆಳಿದನು.
- 34 ಯೋಬಾ ಬನು ಸತ್ತ ಮೇಲೆ ಅವನ ಬದಲಾಗಿ ತೇಮಾನೀಯ ದೇಶದ ಹುಷಾಮನು ಆಳಿದನು.
- 35 ಹುಷಾಮನು ಸತ್ತ ಮೇಲೆ ಅವನ ಬದಲಾಗಿ ಮೋವಾಬ್ಯರ ಹೊಲದಲ್ಲಿ ಮಿದ್ಯಾನರನ್ನು ಹೊಡೆದ ಬೆದದನ ಮಗನಾದ ಹದದನು ಆಳಿದನು. ಅವನ ಪಟ್ಟಣದ ಹೆಸರು ಅವೀತ್.
- 36 ಹದದನು ಸತ್ತಾಗ ಅವನ ಬದಲಾಗಿ ಮಸ್ರೇಕದವನಾದ ಸಮ್ಲಾಹನು ಆಳಿದನು.
- 37 ಸಮ್ಲಾಹನು ಸತ್ತ ಮೇಲೆ ಅವನ ಬದಲಾಗಿ ನದಿಯ ಬಳಿಯಲ್ಲಿದ್ದ ರೆಹೋಬೋತೂರಿನವನಾದ ಸೌಲನು ಆಳಿದನು.
- 38 ಸೌಲನು ಸತ್ತ ಮೇಲೆ ಅವನ ಬದಲಾಗಿ ಅಕ್ಬೋರನ ಮಗನಾದ ಬಾಳ್ಹಾನಾ ನನು ಆಳಿದನು.
- 39 ಅಕ್ಬೋರನ ಮಗನಾದ ಬಾಳ್ಹಾನಾ ನನು ಸತ್ತ ಮೇಲೆ ಅವನ ಬದಲಾಗಿ ಹದರನು ಆಳಿದನು. ಅವನ ಪಟ್ಟಣದ ಹೆಸರು ಪಾಗು. ಅವನ ಹೆಂಡತಿಯ ಹೆಸರು ಮಹೇಟಬೇಲ್; ಈಕೆಯು ಮೇಜಾಹಾಬನ ಮಗಳಾದ ಮಟ್ರೇದಳ ಮಗಳು.
- 40 ಕುಟುಂಬ ಸ್ಥಳ ಮತ್ತು ಹೆಸರುಗಳ ಪ್ರಕಾರವಾಗಿ ಏಸಾವನ ಮುಖಂಡರ ಹೆಸರುಗಳು ಯಾವವಂದರೆ: ತಿಮ್ನಾ ಅಲ್ವಾ ಯೆತೇತ.
- 41 ಒಹೋಲೀಬಾಮ ಏಲಾ ಪೀನೋನ್.
- 42 ಕೆನಜ್ ತೇಮಾನ್ ಮಿಪ್ಚಾರ
- 43 ಮಗ್ದೀಯೇಲ್ ಗೀರಾಮ್. ತಮ್ಮ ಸ್ವಾಸ್ಥ್ಯದ ದೇಶದಲ್ಲಿ ವಾಸವಾಗಿದ್ದ ಪ್ರಕಾರ ಎದೋಮ್ಯರ ಮುಖಂಡರು ಇವರೇ. ಎದೋಮ್ಯರ ತಂದೆಯಾದ ಏಸಾವನು ಇವನೇ.
Genesis 36
- Details
- Parent Category: Old Testament
- Category: Genesis
ಆದಿಕಾಂಡ ಅಧ್ಯಾಯ 36