wheel

AJC Publications and Media Portal

 

But the Comforter, which is the Holy Ghost, whom the Father will send in my name, he shall teach you all things,
and bring all things to your remembrance, whatsoever I have said unto you. John 14:26


ಹೋಶೇಅಧ್ಯಾಯ 1
  • 1 ಯೆಹೂದದ ಅರಸುಗಳಾದ ಉಜ್ಜೀಯ, ಯೋಥಾಮ, ಆಹಾಜ, ಹಿಜ್ಕೀಯ, ಇವರ ದಿನಗಳಲ್ಲಿಯೂ ಇಸ್ರಾಯೇಲಿನ ಅರಸನೂ ಯೋವಾಷನ ಮಗನೂ ಆದ ಯಾರೊಬ್ಬಾಮನ ದಿನಗಳಲ್ಲಿಯೂ ಬೆಯೇರಿಯನ ಮಗನಾದ ಹೋಶೇ ಯನಿಗೆ ಕರ್ತನ ವಾಕ್ಯವು ಬಂತು.
  • 2 ಹೊಶೇಯನಿಂದಾದ ಕರ್ತನ ವಾಕ್ಯದ ಪ್ರಾರಂ ಭವು: ಕರ್ತನು ಹೊಶೇಯನಿಗೆ ಹೇಳಿದ್ದೇನಂದರೆ --ಹೋಗಿ ನಿನಗೆ ವ್ಯಭಿಚಾರಿಣಿಗಳ ಹೆಂಡತಿಯನ್ನೂ ವ್ಯಭಿಚಾರಿಣಿಗಳ ಮಕ್ಕಳನ್ನೂ ತೆಗೆದುಕೊ; ದೇಶವು ಕರ್ತನನ್ನು ಬಿಟ್ಟು ದೊಡ್ಡ ವ್ಯಭಿಚಾರತನವನ್ನು ಮಾಡಿಕೊಂಡಿದೆ.
  • 3 ಆಗ ಅವನು ಹೋಗಿ ದಿಬ್ಲಯಿ ಮನ ಮಗಳಾದ ಗೋಮೆರಳನ್ನು ಮದುವೆಯಾದನು; ಅವಳು ಗರ್ಭಿಣಿಯಾಗಿ ಅವನಿಗೆ ಮಗನನ್ನು ಹೆತ್ತಳು.
  • 4 ಆಗ ಕರ್ತನು ಅವನಿಗೆ--ಅವನನ್ನು ಇಜ್ರೇಲ್‌ ಎಂಬ ಹೆಸರಿನಿಂದ ಕರೆ. ಇನ್ನೂ ಸ್ವಲ್ಪಕಾಲದಲ್ಲಿಯೇ ನಾನು ಇಜ್ರೇಲಿನ ರಕ್ತವನ್ನು ಯೆಹೂವಿನ ಮನೆತನದವರ ಮೇಲೆ ಸೇಡು ತೀರಿಸಿಕೊಳ್ಳುವೆನು; ಇಸ್ರಾಯೇಲಿನ ಮನೆತನದ ರಾಜ್ಯವು ನಿಂತುಹೋಗುವಂತೆ ಮಾಡು ವೆನು.
  • 5 ಆ ದಿನದಲ್ಲಿ ಆಗುವದೇನಂದರೆ--ನಾನು ಇಸ್ರಾಯೇಲಿನ ಬಿಲ್ಲನ್ನು ಇಜ್ರೇಲಿನ ತಗ್ಗಿನಲ್ಲಿ ಮುರಿದು ಹಾಕುವೆನು ಅಂದನು.
  • 6 ಅವಳು ತಿರುಗಿ ಬಸುರಾಗಿ ಮಗಳನ್ನು ಹೆತ್ತಳು. ಆಗ ದೇವರು ಅವನಿಗೆ-- ಅವಳನ್ನು ಲೋರುಹಾಮ ಎಂಬ ಹೆಸರಿನಿಂದ ಕರೆ; ಯಾಕಂದರೆ ನಾನು ಇನ್ನು ಮೇಲೆ ಇಸ್ರಾಯೇಲಿನ ಮನೆತನ ದವರನ್ನು ಕರುಣಿಸುವದೇ ಇಲ್ಲ; ಆದರೆ ನಾನು ಅವರನ್ನು ಸಂಪೂರ್ಣವಾಗಿ ತೆಗೆದುಬಿಡುತ್ತೇನೆ.
  • 7 ನಾನು ಯೆಹೂದದ ಮನೆತನದವರನ್ನು ಕರುಣಿಸಿ ಅವರನ್ನು ಬಿಲ್ಲಿನಿಂದಲಾದರೂ ಕತ್ತಿಯಿಂದಲಾದರೂ ಯುದ್ಧದಿಂದಲಾದರೂ ಕುದುರೆಗಳಿಂದಲಾದರೂ ಇಲ್ಲವೆ ಕುದುರೆಯ ಸವಾರರಿಂದಲಾದರೂ ರಕ್ಷಿಸು ವದಿಲ್ಲ; ಆದರೆ ಅವರನ್ನು ಅವರ ದೇವರಾದ ಕರ್ತ ನಿಂದ ರಕ್ಷಿಸುವೆನು ಅಂದನು.
  • 8 ಆಕೆಯು ಲೊರು ಹಾಮಳನ್ನು ಮೊಲೆ ಬಿಡಿಸಿದ ಮೇಲೆ ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆತ್ತಳು.
  • 9 ಆಗ ದೇವರು--ಅವನ ಹೆಸರನ್ನು ಲೋ ಅಮ್ಮಿ ಎಂದು ಕರೆ, ಯಾಕಂದರೆ ನೀವು ನನ್ನ ಜನರಲ್ಲ, ನಾನು ನಿಮ್ಮ ದೇವರಾಗಿರುವದಿಲ್ಲ ಅಂದನು.
  • 10 ಆದಾಗ್ಯೂ ಇಸ್ರಾಯೇಲಿನ ಮಕ್ಕಳ ಸಂಖ್ಯೆ ಅಳೆಯಲೂ ಲೆಕ್ಕಿಸಲೂ ಆಗದ ಸಮುದ್ರದ ಮರಳಿನ ಹಾಗೆ ಇರುವದು; ಮುಂದೆ ಇದಾದ ಮೇಲೆ--ನನ್ನ ಜನರಲ್ಲವೆಂದು ಅವರಿಗೆ ಹೇಳಿದ ಸ್ಥಳದಲ್ಲಿಯೇ ಜೀವವುಳ್ಳ ದೇವರ ಕುಮಾರರೆಂದು ಅವರಿಗೆ ಹೇಳುವರು.
  • 11 ಆಗ ಯೆಹೂದದ ಮಕ್ಕಳು ಮತ್ತು ಇಸ್ರಾಯೇಲಿನ ಮಕ್ಕಳು ಒಟ್ಟುಗೂಡಿಕೊಂಡು ತಮಗೆ ಒಬ್ಬನನ್ನೇ ಶಿರಸ್ಸನ್ನಾಗಿ ನೇಮಕಮಾಡಿಕೊಳ್ಳುವರು; ದೇಶದೊಳಗಿಂದ ಹೊರಗೆ ಬರುವರು, ಯಾಕಂದರೆ ಇಜ್ರೇಲಿನ ಸುದಿನವು ಅತಿ ವಿಶೇಷವಾಗಿರುವದು ಅಂದನು.