- 1 ಓ ಇಸ್ರಾಯೇಲೇ, ಬೇರೆ ಜನರು ಉಲ್ಲಾ ಸಿಸುವ ಪ್ರಕಾರ ಸಂತೋಷಪಡಬೇಡ; ನಿನ್ನ ದೇವರನ್ನು ನೀನು ಬಿಟ್ಟು ವ್ಯಭಿಚಾರ ಮಾಡಿದ್ದೀ, ಎಲ್ಲಾ ಧಾನ್ಯದ ಕಣಗಳಲ್ಲಿ ಕೂಲಿಯನ್ನು ಪ್ರೀತಿ ಮಾಡಿದ್ದೀ.
- 2 ಕಣವು ಮತ್ತು ದ್ರಾಕ್ಷೆಯ ತೋಟವು ಅವರನ್ನು ಪೋಷಿಸುವದಿಲ್ಲ; ಹೊಸ ದ್ರಾಕ್ಷಾರಸವು ಅವಳಲ್ಲಿ ನಿಂತುಹೋಗುವದು.
- 3 ಅವರು ಕರ್ತನ ದೇಶದಲ್ಲಿ ನೆಲೆಸುವದಿಲ್ಲ; ಆದರೆ ಎಫ್ರಾಯಾಮು ಐಗುಪ್ತಕ್ಕೆ ತಿರುಗುವದು; ಅವರು ಅಶ್ಯೂರಿನಲ್ಲಿ ಅಶುದ್ಧ ವಾದವುಗಳನ್ನು ತಿನ್ನುವರು.
- 4 ಅವರು ದ್ರಾಕ್ಷಾರಸ ವನ್ನು ಕಾಣಿಕೆಯಾಗಿ ಕರ್ತನಿಗೆ ಅರ್ಪಿಸುವದಿಲ್ಲ, ಇಲ್ಲವೆ ಅವರು ಆತನಿಗೆ ಮೆಚ್ಚಿಕೆಯಾಗಿರುವದಿಲ್ಲ; ಅವರ ಬಲಿಗಳು ಅವರಿಗೆ ದುಃಖಿಸುವವರ ರೊಟ್ಟಿಯ ಹಾಗಿ ರುವವು; ಅದನ್ನು ತಿನ್ನುವವರೆಲ್ಲರೂ ಅಪವಿತ್ರ ರಾಗುವರು. ಅವರ ಪ್ರಾಣಕ್ಕಾಗಿರುವ ಅವರ ರೊಟ್ಟಿಯು ಕರ್ತನ ಆಲಯಕ್ಕೆ ಬರುವದಿಲ್ಲ.
- 5 ಪರಿಶುದ್ಧದಿನದ ಲ್ಲಿಯೂ ಕರ್ತನ ಹಬ್ಬದ ದಿನದಲ್ಲಿಯೂ ನೀವು ಏನು ಮಾಡುತ್ತೀರಿ?
- 6 ಅವರು ಹಾಳಾದ ದೇಶವನ್ನು ಬಿಟ್ಟು ಹೋಗುವರು; ಐಗುಪ್ತವು ಅವರನ್ನು ಕೂಡಿಸುವದು, ಮೋಫ್ ಪಟ್ಟಣವು ಅವರನ್ನು ಹೂಣುವದು; ಅಪೇಕ್ಷಿ ಸಲ್ಪಟ್ಟ ಅವರ ಬೆಳ್ಳಿಯ ಒಡವೆಗಳು ದಬ್ಬೆಗಳ್ಳಿಗಳ ಪಾಲಾಗುವವು. ತುರುಚಿಯ ಗಿಡಗಳು ಅವರನ್ನು ಆವರಿಸಿಕೊಂಡಿವೆ; ಮುಳ್ಳುಗಳು ಅವರ ಗುಡಾರಗಳಲ್ಲಿ ಇರುವವು.
- 7 ವಿಚಾರಣೆಯ ದಿನಗಳು ಬಂದಿವೆ, ಮುಯ್ಯಿ ತೀರಿಸುವ ದಿನಗಳೂ ಬಂದಿವೆ. ಇಸ್ರಾ ಯೇಲು ಅದನ್ನು ತಿಳಿದುಕೊಳ್ಳುವದು, ನಿನ್ನ ಅಕ್ರಮ ಗಳು ಬಹಳವಾಗಿರುವದರಿಂದಲೂ ಹಗೆತನವು ಹೆಚ್ಚಾ ಗಿರುವದರಿಂದಲೂ ಪ್ರವಾದಿ ಮೂರ್ಖನೂ ಆತ್ಮೀಯ ಮನುಷ್ಯನೂ ಹುಚ್ಚನೂ ಎಂದು ಇಸ್ರಾಯೇಲು ತಿಳಿದುಕೊಳ್ಳುತ್ತದೆ.
- 8 ಎಫ್ರಾಯಾಮಿನ ಕಾವಲುಗಾ ರನು ನನ್ನ ದೇವರೊಂದಿಗೆ ಇದ್ದನು; ಆದರೆ ಪ್ರವಾ ದಿಯು ತನ್ನ ಎಲ್ಲಾ ದಾರಿಗಳಲ್ಲಿ ಬೇಟೆಯ ಬಲೆಯಾಗಿ ದ್ದಾನೆ; ಅವನ ದೇವರ ಆಲಯದಲ್ಲಿ ಹಗೆತನವು ಉಂಟು.
- 9 ಗಿಬ್ಯದ ದಿನಗಳಲ್ಲಿ ಆದ ಹಾಗೆ ತಮ್ಮನ್ನು ಬಹಳವಾಗಿ ಕೆಡಿಸಿಕೊಂಡಿದ್ದಾರೆ; ಆದದರಿಂದ ಅವರ ಅಕ್ರಮವನ್ನು ಆತನು ಜ್ಞಾಪಕಮಾಡಿಕೊಳ್ಳುವನು, ಅವರ ಪಾಪಗಳನ್ನು ವಿಚಾರಿಸುವನು.
- 10 ನಾನು ಅರಣ್ಯದಲ್ಲಿ ದ್ರಾಕ್ಷೆಯ ಫಲದ ಹಾಗೆ ಇಸ್ರಾಯೇಲನ್ನು ಕಂಡುಕೊಂಡೆನು. ಅಂಜೂರದ ಗಿಡ ದಲ್ಲಿ ಮೊದಲನೆಯ ಹಣ್ಣುಗಳ ಹಾಗೆ ನಿಮ್ಮ ಪಿತೃಗಳನ್ನು ನೋಡಿದೆನು; ಆದರೆ ಅವರು ಬಾಳ್ ಪೆಗೋರಿಗೆ ಹತ್ತಿರ ಬಂದು ನಾಚಿಕೆಯಾದದ್ದಕ್ಕೆ ತಮ್ಮನ್ನು ಪ್ರತ್ಯೇ ಕಿಸಿಕೊಂಡರು; ಅವರು ಪ್ರೀತಿಮಾಡಿದ್ದರ ಹಾಗೆ ಅಸಹ್ಯರಾದರು.
- 11 ಎಫ್ರಾಯಾಮ್ಯರ ಘನತೆಯು ಹಾರಿಹೋಗುವ ಪಕ್ಷಿಯ ಹಾಗೆ ಇದೆ. ಜನ್ಮವಾಗಲಿ, ಗರ್ಭಧರಿಸುವದಾಗಲಿ ಉತ್ಪತ್ತಿಯಾಗಲಿ ಅವರಿಗೆ ಇರು ವದಿಲ್ಲ.
- 12 ಅವರು ತಮ್ಮ ಮಕ್ಕಳನ್ನು ಬೆಳೆಸಿದಾಗ್ಯೂ ಒಬ್ಬ ಮನುಷ್ಯನು ಉಳಿಯದ ಹಾಗೆ ನಾನು ಅವರನ್ನು ಅನಾಥರನ್ನಾಗಿ ಮಾಡುವೆನು. ಹೌದು, ನಾನು ಅವ ರನ್ನು ಬಿಟ್ಟು ಹೋಗುವಾಗ ಅವರಿಗೆ ಅಯ್ಯೋ!
- 13 ನಾನು ತೂರನ್ನು ನೊಡಿದಂತೆ ಎಫ್ರಾಯಾಮು ರಮ್ಯ ಸ್ಥಳದಲ್ಲಿ ನೆಡಲ್ಪಟ್ಟಿದೆ; ಆದರೆ ಎಫ್ರಾಯಾಮು ಕೊಲ್ಲುವವನಿಗೆ ತನ್ನ ಮಕ್ಕಳನ್ನು ಹೊರಗೆ ತರುವದು.
- 14 ಓ ಕರ್ತನೇ, ಅವರಿಗೆ ಕೊಡು; ಅವರಿಗೆ ನೀನು ಏನು ಕೊಡುತ್ತೀ? ಗರ್ಭಸ್ರಾವವನ್ನು ಮಾಡು ಮತ್ತು ಬತ್ತಿದ ಸ್ತನಗಳನ್ನು ಅವರಿಗೆ ಕೊಡು.
- 15 ಅವರ ಕೆಟ್ಟತನ ವೆಲ್ಲಾ ಗಿಲ್ಗಾಲಿನಲ್ಲಿದೆ. ಅಲ್ಲಿ ನಾನು ಅವರನ್ನು ಹಗೆ ಮಾಡಿದ್ದೇನೆ. ಅವರ ಕೃತ್ಯಗಳ ಕೆಟ್ಟತನದ ನಿಮಿತ್ತ ಅವರನ್ನು ನನ್ನ ಆಲಯದೊಳಗಿಂದ ಹೊರಡಿಸಿ ಅವ ರನ್ನು ಇನ್ನು ಪ್ರೀತಿಮಾಡುವದೇ ಇಲ್ಲ; ಅವರ ಪ್ರಭು ಗಳೆಲ್ಲಾ ತಿರುಗಿ ಬೀಳುವವರೇ.
- 16 ಎಫ್ರಾಯಾಮ್ಯರು ಹೊಡೆಯಲ್ಪಟ್ಟಿದ್ದಾರೆ, ಅವರ ಬೇರು ಒಣಗಿ ಹೋಗಿದೆ, ಅವರು ಫಲವನ್ನು ಕೊಡುವದಿಲ್ಲ; ಹೌದು, ಅವರು ಹೆತ್ತರೂ ಅವರ ಗರ್ಭದ ಪ್ರಿಯಕರವಾದ ಫಲವನ್ನು ಸಹ ನಾನು ಕೊಲ್ಲುವೆನು.
- 17 ನನ್ನ ದೇವರು ಅವರನ್ನು ತಳ್ಳಿಬಿಡುವನು; ಅವರು ಆತನಿಗೆ ಕಿವಿಗೊಡಲಿಲ್ಲ; ಅವರು ಜನಾಂಗಗಳಲ್ಲಿ ಅಲೆದಾಡುವವರಾಗಿರುವರು.
Hosea 09
- Details
- Parent Category: Old Testament
- Category: Hosea
ಹೋಶೇ ಅಧ್ಯಾಯ 9