- 1 ಆಗ ಕರ್ತನು ನನಗೆ ಹೇಳಿದ್ದೇನಂದರೆ --ಮೋಶೆಯೂ ಸಮುವೇಲನೂ ನನ್ನ ಮುಂದೆ ನಿಂತರೂ ನನ್ನ ಮನಸ್ಸು ಈ ಜನರ ಮೇಲೆ ಇರುವದಿಲ್ಲ. ಅವರನ್ನು ನನ್ನ ಸನ್ನಿಧಿಯಿಂದ ಕಳುಹಿಸಿ ಬಿಡು; ಅವರು ಹೋಗಲಿ.
- 2 ಅವರು ನಿನಗೆ--ನಾವು ಎಲ್ಲಿ ಹೋಗಬೇಕು ಎಂದು ಹೇಳಿದರೆ, ನೀನು ಅವ ರಿಗೆ--ಕರ್ತನು ಹೀಗೆ ಹೇಳುತ್ತಾನೆ--ಮರಣಕ್ಕೆ ಇರುವವರು ಮರಣಕ್ಕೆ; ಕತ್ತಿಗೆ ಇರುವವರು ಕತ್ತಿಗೆ; ಕ್ಷಾಮಕ್ಕೆ ಇರುವವರು ಕ್ಷಾಮಕ್ಕೆ, ಸೆರೆಗೆ ಇರು ವವರು ಸೆರೆಗೆ ಎಂದು ಹೇಳಬೇಕು.
- 3 ಕರ್ತನು--ನಾನು ಅವರಿಗೆ ವಿರೋಧವಾಗಿ ನಾಲ್ಕು ತರವಾದವುಗಳನ್ನು ಅಂದರೆ ಕೊಲ್ಲುವದಕ್ಕೆ ಕತ್ತಿಯನ್ನೂ ಹರಿಯುವದಕ್ಕೆ ನಾಯಿಗಳನ್ನೂ ತಿನ್ನುವದಕ್ಕೂ ನಾಶ ಮಾಡುವದಕ್ಕೂ ಆಕಾಶದ ಪಕ್ಷಿಗಳನ್ನೂ ಭೂಮಿಯ ಮೃಗಗಳನ್ನೂ ನೇಮಿಸುತ್ತೇನೆ.
- 4 ಅವರನ್ನು ಹಿಜ್ಕೀಯನ ಮಗನಾದ ಯೆಹೂದದ ಅರಸನಾದ ಮನಸ್ಸೆಯ ನಿಮಿತ್ತವೂ ಇವನು ಯೆರೂಸಲೇಮಿನಲ್ಲಿ ಮಾಡಿದ್ದರ ನಿಮಿತ್ತವೂ ಭೂಮಿಯ ಎಲ್ಲಾ ರಾಜ್ಯಗಳಿಗೆ ಚದರಿಹೋಗುವಂತೆ ಮಾಡುವೆನು.
- 5 ಓ ಯೆರೂಸಲೇಮೇ, ನಿನ್ನ ಮೇಲೆ ಯಾರೂ ಕನಿಕರಪಡುವರು? ನಿನಗೋಸ್ಕರ ಯಾರು ದುಃಖಿಸುವರು? ನಿನ್ನ ಕ್ಷೇಮವನ್ನು ಕುರಿತು ಕೇಳುವದಕ್ಕೆ ಯಾರು ಸವಿಾಪ ಬರುವರು?
- 6 ನೀನು ನನ್ನನ್ನು ಬಿಟ್ಟು ಬಿಟ್ಟಿದ್ದೀ ಎಂದು ಕರ್ತನು ಅನ್ನುತ್ತಾನೆ; ನೀನು ಹಿಂಜರಿ ದಿದ್ದೀ, ಆದದರಿಂದ ನನ್ನ ಕೈಯನ್ನು ನಿನಗೆ ವಿರೋಧ ವಾಗಿ ಚಾಚಿ ನಿನ್ನನ್ನು ನಾಶಮಾಡುವೆನು. ಪಶ್ಚಾತ್ತಾಪ ಪಡುವದರಲ್ಲಿ ದಣಿದಿದ್ದೇನೆ.
- 7 ಅವರನ್ನು ಮೊರದಿಂದ ದೇಶದ ಬಾಗಿಲುಗಳಲ್ಲಿ ತೂರುವೆನು; ನನ್ನ ಜನರನ್ನು ಮಕ್ಕಳಿಲ್ಲದವರಾಗ ಮಾಡಿ ನಾಶಮಾಡುವೆನು. ಅವರು ತಮ್ಮ ಮಾರ್ಗಗಳನ್ನು ಬಿಟ್ಟು ಹಿಂತಿರುಗದೆ ಇದ್ದದರಿಂದ
- 8 ಅವರ ವಿಧವೆಗಳು ಸಮುದ್ರದ ಮರಳಿಗಿಂತ ನನಗೆ ಹೆಚ್ಚಾದರು. ನಾನು ಅವರ ಬಳಿಗೆ ಪ್ರಾಯದವರ ತಾಯಿಯ ಮೇಲೆ ಮಧ್ಯಾಹ್ನದಲ್ಲಿ ನಾಶನ ಮಾಡು ವವನನ್ನು ತರಿಸಿದ್ದೇನೆ; ಪಕ್ಕನೆ ಅವನು ಅವಳ ಮೇಲೆ ಬೀಳುವಂತೆ ಮಾಡುವೆನು, ಹೆದರಿಕೆಯನ್ನು ಪಟ್ಟಣದ ಮೇಲೆ ಬೀಳಮಾಡಿದ್ದೇನೆ.
- 9 ಏಳು ಮಂದಿಯನ್ನು ಹೆತ್ತವಳು ಕುಂದುತ್ತಾಳೆ; ತನ್ನ ಪ್ರಾಣವನ್ನು ಬಿಡುತ್ತಾಳೆ; ಹಗಲಿರುವಾಗಲೇ ಅವಳ ಸೂರ್ಯನು ಅಸ್ತಮಿಸುತ್ತಾನೆ; ಅವಳು ನಾಚಿಕೆಪಡುತ್ತಾಳೆ; ಅವಮಾನ ಗೊಳ್ಳುತ್ತಾಳೆ; ಇದಲ್ಲದೆ ಅವರ ಶೇಷವನ್ನು ಅದರ ಶತ್ರುಗಳ ಮುಂದೆ ಕತ್ತಿಗೆ ಒಪ್ಪಿಸುವೆನು ಎಂದು ಕರ್ತನು ಅನ್ನುತ್ತಾನೆ.
- 10 ನನ್ನ ತಾಯಿಯೇ, ನನಗೆ ಅಯ್ಯೋ, ನೀನು ನನ್ನನ್ನು ಭೂಮಿಯ ಮೇಲೆಲ್ಲಾ ವ್ಯಾಜ್ಯಗಾರನಾಗಿಯೂ ತರ್ಕದವನಾಗಿಯೂ ಹೆತ್ತಿದ್ದೀಯಲ್ಲಾ? ನಾನು ಬಡ್ಡಿಗೆ ಸಾಲ ಕೊಡಲಿಲ್ಲ ಇಲ್ಲವೆ ಮನುಷ್ಯರು ಬಡ್ಡಿಗಾಗಿ ನನಗೆ ಸಾಲ ಕೊಡಲಿಲ್ಲ. ಆದಾಗ್ಯೂ ಅವರೆಲ್ಲರು ನನ್ನನ್ನು ಶಪಿಸುತ್ತಾರೆ.
- 11 ಕರ್ತನು ಹೇಳುವದೇನಂದರೆ --ನಿಶ್ಚಯವಾಗಿ ನಿನ್ನ ಶೇಷಕ್ಕೆ ಅದು ಒಳ್ಳೆಯ ದಾಗಿರುವದು; ಕೇಡಿನ ಕಾಲದಲ್ಲಿಯೂ ಇಕ್ಕಟ್ಟಿನ ಕಾಲದಲ್ಲಿಯೂ ನಿಶ್ಚಯವಾಗಿ ನಿನ್ನ ಶತ್ರುವನ್ನು ನಿನ ಗೋಸ್ಕರ ಬೇಡಿಕೊಳ್ಳುವಂತೆ ಮಾಡಲಿಲ್ಲವೇ?
- 12 ಕಬ್ಬಿ ಣವು ಉತ್ತರದ ಕಬ್ಬಿಣವನ್ನೂ ಉಕ್ಕನ್ನೂ ಮುರಿಯ ಬಲ್ಲದೇ?
- 13 ನಿನ್ನ ಆಸ್ತಿಯನ್ನೂ ಬೊಕ್ಕಸಗಳನ್ನೂ ಎಲ್ಲಾ ಪ್ರಾಂತ್ಯಗಳಲ್ಲಿ ನಿನ್ನ ಎಲ್ಲಾ ಪಾಪಗಳ ನಿಮಿತ್ತ ಕ್ರಯವಿಲ್ಲದೆ ಕೊಳ್ಳೆಯಾಗಿ ಕೊಟ್ಟುಬಿಡುವೆನು.
- 14 ನಿನ್ನನ್ನು ನಿನಗೆ ತಿಳಿಯದ ದೇಶದಲ್ಲಿ ನಿನ್ನ ಶತ್ರುಗ ಳೊಂದಿಗೆ ಹಾದುಹೋಗುವಂತೆ ಮಾಡುವೆನು. ಯಾಕಂದರೆ ನನ್ನ ಕೋಪದಲ್ಲಿ ಬೆಂಕಿ ಹತ್ತಿದೆ, ಅದು ನಿಮ್ಮ ಮೇಲೆ ಉರಿಯುವದು.
- 15 ಓ ಕರ್ತನೇ, ನೀನೇ ಬಲ್ಲೆ, ನನ್ನನ್ನು ಜ್ಞಾಪಕ ಮಾಡಿ ವಿಚಾರಿಸಿ ನನ್ನನ್ನು ಹಿಂಸಿಸುವವರಿಗೆ ನನಗೋ ಸ್ಕರ ಮುಯ್ಯಿಗೆ ಮುಯ್ಯಿ ತೀರಿಸು; ನಿನ್ನ ದೀರ್ಘ ಶಾಂತಿಯಲ್ಲಿ ನನ್ನನ್ನು ತೆಗೆದುಬಿಡಬೇಡ; ನಿನ್ನ ನಿಮಿತ್ತ ನಾನು ಗದರಿಸಲ್ಪಡುವೆನೆಂದು ತಿಳಿದುಕೋ.
- 16 ನಿನ್ನ ವಾಕ್ಯಗಳು ಸಿಕ್ಕಿದವು, ಅವುಗಳನ್ನು ತಿಂದೆನು. ನಿನ್ನ ವಾಕ್ಯವು ನನ್ನ ಹೃದಯಕ್ಕೆ ಉಲ್ಲಾಸವೂ ಸಂತೋಷವೂ ಆಗಿತ್ತು; ಓ ಸೈನ್ಯಗಳ ದೇವರಾದ ಕರ್ತನೇ, ನಿನ್ನ ಹೆಸರಿನಿಂದ ಕರೆಯಲ್ಪಟ್ಟಿದ್ದೇನೆ.
- 17 ನಾನು ಹಾಸ್ಯಗಾರರ ಕೂಟದಲ್ಲಿ ಕೂತುಕೊಂಡು ಉತ್ಸಾಹಪಡಲಿಲ್ಲ, ನಿನ್ನ ಕೈ ನಿಮಿತ್ತ ಒಂಟಿಯಾಗಿ ಕೂತುಕೊಂಡಿದ್ದೇನೆ; ನನ್ನನ್ನು ಉಗ್ರತೆಯಿಂದ ತುಂಬಿಸಿದ್ದೀ.
- 18 ಏಕೆ ನನ್ನ ನೋವು ನಿತ್ಯವಾಗಿಯೂ ನನ್ನ ಗಾಯವು ವಾಸಿಯಾಗಲೊ ಲ್ಲದೆಯೂ ಸ್ವಸ್ಥವಾಗದೆಯೂ ಇದೆ? ನೀನು ನನಗೆ ಒಟ್ಟಾರೆ ನೀರು ಬತ್ತುವ ಕಳ್ಳ ತೊರೆಯಂತೆಯೂ ಸ್ಥಿರ ವಿಲ್ಲದ ನೀರಿನಂತೆಯೂ ಇರಬೇಕೋ.
- 19 ಆದದರಿಂದ ಕರ್ತನು -- ನೀನು ಹಿಂತಿರುಗಿ ಕೊಂಡರೆ ನಾನು ನಿನ್ನನ್ನು ತಿರುಗಿ ತರುವೆನು; ಆಗ ನೀನು ನನ್ನ ಮುಂದೆ ನಿಲ್ಲುವಿ; ನೀನು ಅಮೂಲ್ಯವಾದ ದ್ದನ್ನು ನೀಚವಾದದರೊಳಗಿಂದ ಹೊರಗೆ ತಂದರೆ ನನ್ನ ಬಾಯಿಯ ಹಾಗಿರುವಿ; ಅವರು ನಿನ್ನ ಕಡೆಗೆ ತಿರುಗಲಿ, ಆದರೆ ನೀನು ಅವರ ಕಡೆಗೆ ಹಿಂತಿರುಗಬೇಡ.
- 20 ಇದಲ್ಲದೆ ನಾನು ನಿನ್ನನ್ನು ಈ ಜನಕ್ಕೆ ಬಲವಾದ ತಾಮ್ರದ ಗೋಡೆಯಾಗಮಾಡುತ್ತೇನೆ; ನಿನಗೆ ವಿರೋಧವಾಗಿ ಯುದ್ಧಮಾಡುವರು, ಆದರೆ ನಿನ್ನನ್ನು ಜಯಿಸಲಾರರು; ನಾನೇ ನಿನ್ನನ್ನು ರಕ್ಷಿಸುವದಕ್ಕೂ ತಪ್ಪಿಸು ವದಕ್ಕೂ ನಿನ್ನ ಸಂಗಡ ಇದ್ದೇನೆ ಎಂದು ಕರ್ತನು ಅನ್ನುತ್ತಾನೆ.
- 21 ಕೆಟ್ಟವರ ಕೈಯೊಳಗಿಂದ ನಿನ್ನನ್ನು ತಪ್ಪಿಸುತ್ತೇನೆ, ಭಯಂಕರವಾದ ಕೈಯೊಳಗಿಂದ ನಿನ್ನನ್ನು ವಿಮೋಚಿಸುತ್ತೇನೆ.
Jeremiah 15
- Details
- Parent Category: Old Testament
- Category: Jeremiah
ಯೆರೆಮಿಯ ಅಧ್ಯಾಯ 15