- 1 ಅರಸನಾದ ಚಿದ್ಕೀಯನು ಮಲ್ಕೀಯನ ಮಗನಾದ ಪಷ್ಹೂರನನ್ನೂ ಮಾಸೇಯನ ಮಗನೂ ಯಾಜಕನಾದ ಚೆಫನ್ಯನನ್ನೂ
- 2 ಅವನ ಬಳಿಗೆ ಕಳುಹಿಸಿ--ನಮಗೋಸ್ಕರ ಕರ್ತನನ್ನು ವಿಚಾರಿಸು; ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ನಮಗೆ ವಿರೋಧವಾಗಿ ಯುದ್ಧಮಾಡುತ್ತಾನೆ; ಒಂದು ವೇಳೆ ಅವನು ನಮ್ಮನ್ನು ಬಿಟ್ಟು ಹೊರಟುಹೋಗುವ ಹಾಗೆ ಕರ್ತನು ತನ್ನ ಎಲ್ಲಾ ಅದ್ಭುತಗಳ ಪ್ರಕಾರ ನಮಗೆ ಮಾಡುತ್ತಾನೆಂದು ಹೇಳಿಸಿದಾಗ ಯೆರೆವಿಾಯನಿಗೆ ಕರ್ತನ ವಾಕ್ಯವು ಬಂತು.
- 3 ಆಗ ಯೆರೆವಿಾಯನು ಅವರಿಗೆ ಹೇಳಿದ್ದೇನಂ ದರೆ--ಚಿದ್ಕೀಯನಿಗೆ ಹೀಗೆ ಹೇಳಿರಿ--
- 4 ಇಸ್ರಾಯೇ ಲಿನ ದೇವರಾದ ಯೆಹೋವನು ಹೇಳುವದೇನಂದರೆ, ಇಗೋ, ಗೋಡೆಯ ಹೊರಗೆ ನಿಮಗೆ ಮುತ್ತಿಗೆ ಹಾಕುವ ಬಾಬೆಲಿನ ಅರಸನಿಗೂ ಕಸ್ದೀಯರಿಗೂ ವಿರೋಧವಾಗಿ ನೀವು ಯುದ್ಧಮಾಡುವದಕ್ಕೆ ನಿಮ್ಮ ಕೈಗಳಲ್ಲಿರುವ ಯುದ್ಧದ ಆಯುಧಗಳನ್ನು ನಾನು ಹಿಂದಕ್ಕೆ ತಳ್ಳಿ ಅವರನ್ನು ಈ ಪಟ್ಟಣದ ಮಧ್ಯದಲ್ಲಿ ಕೂಡಿ ಬರುವಂತೆ ಮಾಡುತ್ತೇನೆ.
- 5 ನಾನೇ ಚಾಚಿದ ಕೈಯಿಂದಲೂ ಬಲವಾದ ತೋಳಿನಿಂದಲೂ ಕೋಪ ದಿಂದಲೂ ಉಗ್ರದಿಂದಲೂ ಮಹಾರೌದ್ರದಿಂದಲೂ ನಿಮಗೆ ವಿರೋಧವಾಗಿ ಯುದ್ಧಮಾಡುವೆನು.
- 6 ಈ ಪಟ್ಟಣದ ನಿವಾಸಿಗಳನ್ನೂ ಮನುಷ್ಯರನ್ನೂ ಮೃಗ ಗಳನ್ನೂ ಸಹಿತವಾಗಿ ಹೊಡೆಯುವೆನು; ಅವರು ದೊಡ್ಡ ಜಾಡ್ಯದಿಂದ ಸಾಯುವರು.
- 7 ಇದಲ್ಲದೆ ಕರ್ತನು ಅನ್ನುವದೇನಂದರೆ--ತರುವಾಯ ನಾನು ಯೆಹೂದದ ಅರಸನಾದ ಚಿದ್ಕೀಯನನ್ನೂ ಅವನ ಸೇವಕರನ್ನೂ ಜನರನ್ನೂ ಈ ಪಟ್ಟಣದಲ್ಲಿ ಜಾಡ್ಯದಿಂದಲೂ ಕತ್ತಿಯಿಂದಲೂ ಕ್ಷಾಮದಿಂದಲೂ ಉಳಿದವರನ್ನು ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಕೈಗೂ ಅವರ ಶತ್ರುಗಳ ಕೈಗೂ ಅವರ ಪ್ರಾಣವನ್ನು ಹುಡುಕುವವರಕೈಗೂ ಒಪ್ಪಿಸುವೆನು; ಅವನು ಅವರನ್ನು ಕತ್ತಿಯಿಂದ ಹೊಡೆಯುವನು. ಅವರ ಮೇಲೆ ಕರುಣೆ ಇಡುವದಿಲ್ಲ, ಕನಿಕರಿಸುವದಿಲ್ಲ ಅಂತಃಕರುಣೆ ಪಡುವದಿಲ್ಲ.
- 8 ನೀನು ಈ ಜನಕ್ಕೆ ಹೇಳಬೇಕಾದದ್ದೇನಂದರೆ --ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಜೀವದ ಮಾರ್ಗವನ್ನೂ ಮರಣದ ಮಾರ್ಗವನ್ನೂ ನಿಮ್ಮ ಮುಂದೆ ಇಡುತ್ತೇನೆ.
- 9 ಈ ಪಟ್ಟಣದಲ್ಲಿ ನಿಲ್ಲು ವವನು ಕತ್ತಿಯಿಂದಲೂ ಕ್ಷಾಮದಿಂದಲೂ ಜಾಡ್ಯ ದಿಂದಲೂ ಸಾಯುವನು; ಆದರೆ ಹೊರಗೆ ಹೋಗಿ ನಿಮಗೆ ಮುತ್ತಿಗೆ ಹಾಕುವ ಕಸ್ದೀಯರ ಕಡೆಗೆ ಸೇರು ವವನು ಬದುಕುವನು;
- 10 ಅವನ ಪ್ರಾಣವು ಅವನಿಗೆ ಕೊಳ್ಳೆಯಾಗಿರುವದು. ನಾನು ಒಳ್ಳೇದಕ್ಕಲ್ಲ ಕೆಟ್ಟದ್ದಕ್ಕೆ ಈ ಪಟ್ಟಣದ ಮೇಲೆ ನನ್ನ ದೃಷ್ಟಿಯನ್ನಿಟ್ಟಿದ್ದೇನೆಂದು ಕರ್ತನು ಹೇಳುತ್ತಾನೆ; ಅದು ಬಾಬೆಲಿನ ಅರಸನ ಕೈಯಲ್ಲಿ ಒಪ್ಪಿಸಲ್ಪಡುವದು; ಅವನು ಅದನ್ನು ಬೆಂಕಿ ಯಿಂದ ಸುಟ್ಟುಬಿಡುವನು.
- 11 ಯೆಹೂದದ ಅರಸನ ಮನೆಯವರಿಗೆ ಹೀಗೆ ಹೇಳು--
- 12 ಕರ್ತನ ವಾಕ್ಯವನ್ನು ಕೇಳಿರಿ, ದಾವೀದನ ಮನೆಯವರೇ, ಕರ್ತನು ಹೇಳುವದೇನಂದರೆ--ಬೆಳಿಗ್ಗೆ ನ್ಯಾಯತೀರಿಸಿರಿ, ಸುಲಿಗೆಯಾದವನನ್ನು ಬಲಾತ್ಕಾರಿಯ ಕೈಯೊಳಗಿಂದ ತಪ್ಪಿಸಿರಿ; ಇಲ್ಲದಿದ್ದರೆ ನನ್ನ ಕೋಪವು ಬೆಂಕಿಯ ಹಾಗೆ ಹೊರಟು ನಿಮ್ಮ ಕ್ರಿಯೆಗಳ ಕೆಟ್ಟತನದ ನಿಮಿತ್ತ ಯಾರೂ ಆರಿಸಲಾರದ ಹಾಗೆ ಉರಿಯುವದು.
- 13 ಇಗೋ, ತಗ್ಗಿನಲ್ಲಿಯೂ ಬೈಲಿನ ಬಂಡೆಯಲ್ಲಿಯೂ ವಾಸಮಾಡುವವರೇ, ನಮ್ಮ ಮೇಲೆ ಯಾರು ಇಳಿದು ಬರುವರೆಂದು ನಮ್ಮ ನಿವಾಸಗಳಲ್ಲಿ ಯಾರು ಸೇರು ವರೆಂದು ಅನ್ನುವವರೇ, ಇಗೋ, ನಾನು ನಿನಗೆ ವಿರೋಧವಾಗಿದ್ದೇನೆಂದು ಕರ್ತನು ಅನ್ನುತ್ತಾನೆ.
- 14 ನಿಮ್ಮ ಕ್ರಿಯೆಗಳ ಫಲದ ಪ್ರಕಾರ ನಿಮ್ಮನ್ನು ಶಿಕ್ಷಿಸು ತ್ತೇನೆಂದು ಕರ್ತನು ಅನ್ನುತ್ತಾನೆ; ಅದರ ಅಡವಿಗೆ ಬೆಂಕಿಹಚ್ಚುತ್ತೇನೆ; ಅದರ ಸುತ್ತಲಿರುವದನ್ನೆಲ್ಲಾ ಅದು ತಿಂದುಬಿಡುವದು.
Jeremiah 21
- Details
- Parent Category: Old Testament
- Category: Jeremiah
ಯೆರೆಮಿಯ ಅಧ್ಯಾಯ 21