- 1 ಯೆಹೂದದ ಅರಸನಾದ ಚಿದ್ಕೀಯನ ಒಂಭತ್ತನೇ ವರುಷದ ಹತ್ತನೇ ತಿಂಗಳಲ್ಲಿ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನೂ ಅವನ ಸೈನ್ಯವೆಲ್ಲವೂ ಯೆರೂಸಲೇಮಿಗೆ ವಿರೋಧವಾಗಿ ಬಂದು ಅದನ್ನು ಮುತ್ತಿಗೆ ಹಾಕಿದರು.
- 2 ಚಿದ್ಕೀಯನ ಹನ್ನೊಂದನೇ ವರುಷದಲ್ಲಿ ನಾಲ್ಕನೇ ತಿಂಗಳಿನ ಒಂಭ ತ್ತನೇ ದಿವಸದಲ್ಲಿ ಪಟ್ಟಣವು ಒಡೆಯಲ್ಪಟ್ಟಿತು.
- 3 ಆಗ ಬಾಬೆಲಿನ ಅರಸನ ಪ್ರಧಾನರೆಲ್ಲರೂ ನೇರ್ಗಲ್‌ಸ ರೇಚರನೂ ಸಮ್ಗರ್‌ನೆಬೋವನೂ ಸರ್ಸೆಕೀಮನೂ ನೇರ್ಗೆಲ್‌ಸರೆಚರನೂ ರಬ್‌ಶರೀಸ್ ಉಳಿದ ಬಾಬೆಲಿನ ಅರಸನ ಪ್ರಧಾನರೆಲ್ಲರೂ ಬಂದು ನಡುಬಾಗಲಲ್ಲಿ ಕೂತುಕೊಂಡರು.
- 4 ಆಗ ಆದದ್ದೇನಂದರೆ--ಯೆಹೂ ದದ ಅರಸನಾದ ಚಿದ್ಕೀಯನೂ ಯುದ್ಧಸ್ಥರೆಲ್ಲರೂ ಅವರನ್ನು ನೋಡಿದಾಗ ಓಡಿಹೋಗಿ ರಾತ್ರಿಯಲ್ಲಿ ಪಟ್ಟಣವನ್ನು ಅರಸನ ತೋಟದ ಮಾರ್ಗದಿಂದ ಬಿಟ್ಟು ಎರಡು ಗೋಡೆಗಳ ಮಧ್ಯದಲ್ಲಿರುವ ಬಾಗಲಿನಿಂದ ಹೊರಟರು;
- 5 ಅವನು ಬೈಲುಸೀಮೆಯ ಮಾರ್ಗ ವಾಗಿ ಹೊರಟನು. ಆದರೆ ಕಸ್ದೀಯರ ದಂಡು ಅವರನ್ನು ಹಿಂದಟ್ಟಿ ಚಿದ್ಕೀಯನನ್ನು ಯೆರಿಕೋವಿನ ಬೈಲಿನಲ್ಲಿ ಅವರು ಅವನನ್ನು ಹಿಡಿದು ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಬಳಿಗೆ ಹಮಾತ್ ದೇಶದಲ್ಲಿರುವ ರಿಬ್ಲಕ್ಕೆ ತಕ್ಕೊಂಡು ಹೋದರು. ಅಲ್ಲಿ ಅವನು ಅವನಿಗೆ ನ್ಯಾಯತೀರಿಸಿದನು.
- 6 ಬಾಬೆಲಿನ ಅರಸನು ಚಿದ್ಕೀಯನ ಕುಮಾರರನ್ನು ರಿಬ್ಲದಲ್ಲಿ ಅವನ ಕಣ್ಣುಗಳ ಮುಂದೆ ಕೊಂದುಹಾಕಿದನು; ಯೆಹೂದದ ಘನವುಳ್ಳವರೆಲ್ಲ ರನ್ನು ಸಹ ಬಾಬೆಲಿನ ಅರಸನು ಕೊಂದುಹಾಕಿದನು.
- 7 ಇದಲ್ಲದೆ ಚಿದ್ಕೀಯನ ಕಣ್ಣುಗಳನ್ನು ಅವನು ಕಿತ್ತುಹಾಕಿ ಬಾಬೆಲಿಗೆ ತಕ್ಕೊಂಡು ಹೋಗಬೇಕೆಂದು ಅವನನ್ನು ಸರಪಣಿಗಳಿಂದ ಕಟ್ಟಿಸಿದನು.
- 8 ಅರಸನ ಮನೆಯನ್ನೂ ಜನರ ಮನೆಗಳನ್ನೂ ಕಸ್ದೀಯರು ಬೆಂಕಿಯಿಂದ ಸುಟ್ಟರು; ಮತ್ತು ಯೆರೂಸಲೇಮಿನ ಗೋಡೆಗಳನ್ನು ಕೆಡವಿಬಿಟ್ಟರು.
- 9 ಆಗ ಪಟ್ಟಣದೊಳಗೆ ಉಳಿದ ಜನರಲ್ಲಿ ಮಿಕ್ಕಿದವರನ್ನೂ ಅವನ ಕಡೆಗೆ ಒಳಬಿದ್ದು ಮೊರೆ ಹೊಕ್ಕವರನ್ನೂ ಉಳಿದ ಜನರಲ್ಲಿ ಮಿಕ್ಕಿದವರನ್ನೂ ಕಾವಲಿನವರ ಅಧಿಪತಿ ಯಾದ ನೆಬೂಜರದಾನನು ಬಾಬೆಲಿಗೆ ಸೆರೆಯಾಗಿ ತಕ್ಕೊಂಡು ಹೋದನು.
- 10 ಆದರೆ ಜನರೊಳಗೆ ಏನೂ ಇಲ್ಲದವರಾದ ಬಡವರಲ್ಲಿ ಕೆಲವರನ್ನು ಕಾವಲಿನವರ ಅಧಿಪತಿಯಾದ ನೆಬೂಜರದಾನನು ಯೆಹೂದ ದೇಶ ದಲ್ಲಿ ಬಿಟ್ಟು ಅವರಿಗೆ ಆಗಲೇ ದ್ರಾಕ್ಷೇ ತೋಟಗಳನ್ನೂ ಹೊಲಗಳನ್ನೂ ಕೊಟ್ಟನು.
- 11 ಇದಲ್ಲದೆ ಯೆರೆವಿಾಯನ ವಿಷಯವಾಗಿ ಬಾಬೆ ಲಿನ ಅರಸನಾದ ನೆಬೂಕದ್ನೆಚ್ಚರನು ಕಾವಲು ದಂಡಿನ ಅಧಿಪತಿಯಾದ ನೆಬೂಜರದಾನನಿಗೆ ಆಜ್ಞಾಪಿಸಿದ್ದೇ ನಂದರೆ--
- 12 ಅವನನ್ನು ತಕ್ಕೋ; ಅವನನ್ನು ಚೆನ್ನಾಗಿ ನೋಡಿಕೋ, ಕೆಟ್ಟದ್ದೇನೂ ಮಾಡಬೇಡ; ಆದರೆ ಅವನು ನಿನಗೆ ಏನು ಹೇಳುವನೋ ಹಾಗೆಯೇ ಅವನಿಗೆ ಮಾಡು.
- 13 ಹೀಗೆ ಕಾವಲು ದಂಡಿನ ಅಧಿಪತಿ ಯಾದ ನೆಬೂಜರದಾನನನ್ನೂ ನೆಬೂಷಜ್ಬಾನನನ್ನೂ ರಬ್‌ಶೇರಿಸ್‌ನನ್ನೂ ನೇರ್ಗಲ್‌ಸರೇಚರನನ್ನೂ ರಬ್ಮಾಗ ನನ್ನೂ ಬಾಬೆಲಿನ ಅರಸನ ಪ್ರಧಾನರೆಲ್ಲರನ್ನೂ ಕಳುಹಿಸಿದನು.
- 14 ಅವರು ಕಳುಹಿಸಿ ಯೆರೆವಿಾಯನನ್ನು ಸೆರೆಮನೆಯ ಅಂಗಳದಿಂದ ತೆಗೆಸಿ ಶಾಫಾನನ ಮಗ ನಾದ ಅಹೀಕಾಮನ ಮಗನಾದ ಗೆದಲ್ಯನಿಗೆ ಒಪ್ಪಿಸಿ ಮನೆಗೆ ಕರಕೊಂಡು ಹೋಗಬೇಕೆಂದು ಅಪ್ಪಣೆ ಕೊಟ್ಟರು. ಹಾಗೆ ಅವನು ಜನರ ಮಧ್ಯದಲ್ಲಿ ವಾಸವಾಗಿದ್ದನು.
- 15 ಯೆರೆವಿಾಯನು ಸೆರೆಮನೆಯ ಅಂಗಳದಲ್ಲಿ ಹಾಕ ಲ್ಪಟ್ಟಿರುವಾಗ ಕರ್ತನ ವಾಕ್ಯವು ಅವನಿಗೆ ಉಂಟಾಗಿ ಹೇಳಿದ್ದೇನಂದರೆ--
- 16 ನೀನು ಹೋಗಿ ಕೂಷ್ಯನಾದ ಎಬೆದ್ಮೆಲೆಕನ ಸಂಗಡ ಮಾತನಾಡಿ ಹೇಳತಕ್ಕದ್ದೇನಂದರೆ --ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಒಳ್ಳೇದಕ್ಕಾಗಿ ಅಲ್ಲ, ಕೆಟ್ಟದ್ದಕ್ಕಾಗಿ ನನ್ನ ಮಾತುಗಳನ್ನು ಈ ಪಟ್ಟಣದ ಮೇಲೆ ಬರಮಾಡುತ್ತೇನೆ; ಅವು ಆ ದಿವಸದಲ್ಲಿ ನಿನ್ನ ಮುಂದೆಯೇ ಉಂಟಾಗುವವು.
- 17 ಆದರೆ ಆ ದಿನದಲ್ಲಿ ನಾನು ನಿನ್ನನ್ನು ಬಿಡುಗಡೆ ಮಾಡುವೆನೆಂದು ಕರ್ತನು ಅನ್ನುತ್ತಾನೆ; ನೀನು ಹೆದರಿಕೊಳ್ಳುವ ಮನುಷ್ಯರ ಕೈಯಲ್ಲಿ ಒಪ್ಪಿಸಲ್ಪಡುವದಿಲ್ಲ.
- 18 ನಾನು ನಿಶ್ಚಯವಾಗಿ ನಿನ್ನನ್ನು ಬಿಡಿಸುವೆನು; ನೀನು ಕತ್ತಿಯಿಂದ ಬೀಳುವದಿಲ್ಲ; ಆದರೆ ನೀನು ನನ್ನಲ್ಲಿ ನಂಬಿಕೆ ಇಟ್ಟದ್ದರಿಂದ ನಿನ್ನ ಪ್ರಾಣವು ನಿನಗೆ ಕೊಳ್ಳೆಯಾಗಿರುವದೆಂದು ಕರ್ತನು ಅನ್ನುತ್ತಾನೆ
Jeremiah 39
- Details
- Parent Category: Old Testament
- Category: Jeremiah
ಯೆರೆಮಿಯ ಅಧ್ಯಾಯ 39