- 1 ಇಗೋ, ನನ್ನ ಕಣ್ಣು ಎಲ್ಲಾ ನೋಡಿತು; ನನ್ನ ಕಿವಿ ಕೇಳಿ ಅದನ್ನು ಗ್ರಹಿಸಿಕೊಂಡಿತು.
- 2 ನೀವು ತಿಳಿದುಕೊಳ್ಳುವ ಪ್ರಕಾರ ನಾನೂ ತಿಳಿದು ಕೊಂಡಿದ್ದೇನೆ; ನಾನು ನಿಮಗಿಂತ ಕಡಿಮೆಯಾದವನಲ್ಲ.
- 3 ನಾನು ಸರ್ವಶಕ್ತನ ಸಂಗಡ ಖಂಡಿತವಾಗಿ ಮಾತ ನಾಡುವೆನು, ದೇವರ ಸಂಗಡ ವಾದಿಸಲು ನನಗೆ ಮನಸ್ಸುಂಟು.
- 4 ಆದರೆ ನೀವು ಸುಳ್ಳನ್ನು ಕಲ್ಪಿಸುವವರು; ನೀವೆಲ್ಲರೂ ವ್ಯರ್ಥ ವೈದ್ಯರೇ.
- 5 ನೀವು ಮೌನವಾಗಿಯೇ ಇದ್ದರೆ ಎಷ್ಟೋ ಒಳ್ಳೇದು! ಅದು ನಿಮಗೆ ಜ್ಞಾನವಾಗಿರತಕ್ಕದ್ದು.
- 6 ನನ್ನ ವಾದವನ್ನು ಕೇಳಿಸಿಕೊಳ್ಳಿರಿ; ನನ್ನ ತುಟಿಗಳ ತರ್ಕಗಳನ್ನು ಆಲೈಸಿರಿ.
- 7 ದೇವರಿಗೋಸ್ಕರ ನೀವು ದುಷ್ಟತನದಿಂದ ಮಾತನಾಡುವಿರೋ? ಆತನಿಗೋ ಸ್ಕರ ಮೋಸದ ನುಡಿಗಳನ್ನಾಡುವಿರೋ?
- 8 ಆತನ ಮುಖ ದಾಕ್ಷಿಣ್ಯವನ್ನು ನೀವು ಅಂಗೀಕರಿಸುವಿರೋ? ದೇವರಿಗೋಸ್ಕರ ತರ್ಕ ಮಾಡುವಿರೋ?
- 9 ಆತನು ನಿಮ್ಮನ್ನು ಶೋಧಿಸುವದು ಒಳ್ಳೇದೋ? ಅಥವಾ ಒಬ್ಬ ಮನುಷ್ಯನು ಇನ್ನೊಬ್ಬನನ್ನು ಗೇಲಿಮಾಡುವ ಪ್ರಕಾರ ನೀವೂ ಆತನನ್ನು ಗೇಲಿಮಾಡುವಿರೋ?
- 10 ನೀವು ಅಂತರಂಗದಲ್ಲಿ ಮುಖ ದಾಕ್ಷಿಣ್ಯಗಳನ್ನು ಅಂಗೀಕರಿ ಸಿದರೆ ಆತನು ನಿಮ್ಮನ್ನು ಖಂಡಿತವಾಗಿಯೂ ದೂಷಿ ಸುವನು.
- 11 ಆತನ ಘನತೆಯು ನಿಮ್ಮನ್ನು ಹೆದರಿಸು ವದಿಲ್ಲವೋ? ಆತನ ಭೀತಿಯು ನಿಮ್ಮ ಮೇಲೆ ಬೀಳುವ ದಿಲ್ಲವೋ?
- 12 ನಿಮ್ಮ ಜ್ಞಾಪಕಗಳು ಬೂದಿಯಂತಿವೆ; ನಿಮ್ಮ ಶರೀರಗಳು ಮಣ್ಣಿನ ಶರೀರಗಳಾಗಿವೆ.
- 13 ಮೌನ ವಾಗಿರ್ರಿ; ನಾನು ಮಾತನಾಡುವದಕ್ಕೆ ನನ್ನನ್ನು ಬಿಡಿರಿ, ನನ್ನ ಮೇಲೆ ಏನಾದರೂ ಬರಲಿ.
- 14 ನಾನು ನನ್ನ ಮಾಂಸವನ್ನು ನನ್ನ ಹಲ್ಲುಗಳಿಂದ ಯಾಕೆ ಹಿಡಿಯ ಬೇಕು? ನನ್ನ ಪ್ರಾಣವನ್ನು ನನ್ನ ಕೈಯಲ್ಲಿ ಯಾಕೆ ಹಾಕಬೇಕು?
- 15 ಆತನು ನನ್ನನ್ನು ಕೊಂದರೂ ನಾನು ಆತನಲ್ಲಿ ಭರವಸೆ ಇಡುವೆನು, ಆದರೆ ನನ್ನ ಮಾರ್ಗ ಗಳನ್ನು ಉಳಿಸಿಕೊಳ್ಳುವೆನು.
- 16 ಆತನು ನನಗೆ ರಕ್ಷಣೆ ಯಾಗುವನು; ಆತನ ಮುಂದೆ ಭ್ರಷ್ಟನು ಬರುವದಿಲ್ಲ.
- 17 ನನ್ನ ನುಡಿಗಳನ್ನು ಲಕ್ಷ್ಯವಿಟ್ಟು ಕೇಳಿರಿ; ನನ್ನ ದೃಢ ವಚನವು ನಿಮ್ಮ ಕಿವಿಗೆ ಬೀಳಲಿ.
- 18 ಇಗೋ, ನ್ಯಾಯ ವನ್ನು ಕ್ರಮಪಡಿಸಿದೆನು; ನಾನು ನೀತಿವಂತನೆಂದು ನಿರ್ಣಯಿಸಲ್ಪಡುವದಾಗಿ ನನಗೆ ತಿಳಿದದೆ.
- 19 ನನ್ನ ಸಂಗಡ ವಾದಿಸುವವನು ಯಾರು? ಈಗ ನಾನು ನನ್ನ ನಾಲಿಗೆಯನ್ನು ತಡೆದದ್ದೆಯಾದರೆ ನಾನು ಸಾಯುವೆನು.
- 20 ಎರಡು ಸಂಗತಿಗಳನ್ನು ಮಾತ್ರ ನನಗೆ ಮಾಡಬೇಡ; ಆಗ ನಿನ್ನಿಂದ ನಾನು ಅಡಗಿಕೊಳ್ಳು ವದಿಲ್ಲ.
- 21 ನಿನ್ನ ಕೈಯನ್ನು ನನ್ನಿಂದ ದೂರಮಾಡು; ನಿನ್ನ ಭೀತಿಯು ನನ್ನನ್ನು ಹೆದರಿಸದಿರಲಿ.
- 22 ಆಗ ನೀನು ಕರೆಯುವಿ, ನಾನು ಉತ್ತರಿಸುವೆನು; ಅಥವಾ ನಾನು ಮಾತನಾಡುತ್ತೇನೆ, ನೀನು ನನಗೆ ಉತ್ತರ ಕೊಡು.
- 23 ನನ್ನ ಅಕ್ರಮಗಳೂ ಪಾಪಗಳೂ ಎಷ್ಟಿವೆ? ನನ್ನ ಅಪರಾಧವನ್ನೂ ಪಾಪವನ್ನೂ ನನಗೆ ತಿಳಿಯಪಡಿಸು.
- 24 ಯಾಕೆ ನಿನ್ನ ಮುಖವನ್ನು ಮರೆಮಾಡುತ್ತೀ; ನನ್ನನ್ನು ನಿನ್ನ ಶತ್ರು ಎಂದು ಯಾಕೆ ಎಣಿಸುತ್ತೀ?
- 25 ಬಡಿಯಲ್ಪಟ್ಟ ಎಲೆಯನ್ನು ನಲಿಗಿಸುವಿಯೋ? ಒಣಗಿದ ಕೊಳೆಯನ್ನು ಬೆನ್ನಟ್ಟುವಿಯೋ?
- 26 ನನಗೆ ವಿರೋಧವಾಗಿ ಕಹಿಯಾದ ವುಗಳನ್ನು ಬರೆದುಕೊಂಡಿದ್ದೀ; ನನ್ನ ಯೌವನದ ಅಕ್ರಮಗಳನ್ನು ನನಗೆ ಬಾಧ್ಯವಾಗಿ ಕೊಡುತ್ತೀ.
- 27 ನನ್ನ ಪಾದಗಳನ್ನು ಕೊಳದಲ್ಲಿಟ್ಟು ನನ್ನ ಹಾದಿಗಳನ್ನೆಲ್ಲಾ ಲಕ್ಷ್ಯವಿಟ್ಟು ನೋಡಿಕೊಳ್ಳುತ್ತೀ; ನನ್ನ ಪಾದಗಳ ಹಿಮ್ಮಡಿಗಳ ಮೇಲೆ ಗುರುತು ಹಾಕುತ್ತೀ.
- 28 ಅವನು ಕೊಳೆತ ವಸ್ತುವಿನ ಹಾಗೆ, ಹುಳು ತಿಂದ ಬಟ್ಟೆಯ ಹಾಗೆ ಇಲ್ಲದಾಗುವನು.
Job 13
- Details
- Parent Category: Old Testament
- Category: Job
ಯೋಬನು ಅಧ್ಯಾಯ 13